ಹೆಚ್ಚುತ್ತಿರುವ ಶಿಕ್ಷಣ ವೆಚ್ಚದ ಕಾರಣ, ಎಲ್ಲಾ ಕುಟುಂಬಗಳು ತಮ್ಮ ಉನ್ನತ ಶಿಕ್ಷಣಕ್ಕೆ ಕಳುಹಿಸಲು ಸಾಧ್ಯವಾಗುವುದಿಲ್ಲ. ಅದಕ್ಕೆ ಹಲವಾರು ಸಂಘ ಸಂಸ್ಥೆ ಗಳು ಬ್ಯಾಂಕ್ ಗಳು ಉನ್ನತ ಶಿಕ್ಷಣಕ್ಕೆ ಎಂದೇ ಲೋನ್ ನೀಡುತ್ತವೆ. ಇದರಿಂದ ಹಲವಾರು ಯುವಕರು ತಮ್ಮ ಕನಸಿನ ಶಿಕ್ಷಣ ಪಡೆಯಲು ಸಾಧ್ಯ ಆಗುತ್ತದೆ. ಆದರೆ ಎಜುಕೇಷನ್ ಲೋನ್(Education Loan) ತೆಗೆದುಕೊಳ್ಳುವ ಮುನ್ನ ಪ್ರತಿಯೊಬ್ಬರೂ ಕೆಲವೊಂದು ವಿಷಯಗಳ ಬಗ್ಗೆ ಅರಿತಿರಬೇಕು. ನೀವು ಎಜುಕೇಷನ್ loan ಪಡೆಯುವ ಮುನ್ನ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕೆಲವು ಮಾಹಿತಿಗಳನ್ನು ಇಲ್ಲಿ ನಾವು ತಿಳಿಸಿದ್ದೇವೆ.
Education loan ಪಡೆಯುವ ಮುನ್ನ ನೀವು ಗಮನಿಸಲೇಬೇಕಾದ ಅಂಶಗಳು :-
1) ನಿಮ್ಮ ಎಜುಕೇಷನ್ ಗೆ ತಗಲುವ ಎಲ್ಲಾ ವೆಚ್ಚಗಳ ಬಗ್ಗೆ ಲೆಕ್ಕ ಹಾಕಬೇಕು:- ಶಿಕ್ಷಣ ಸಾಲ ತೆಗೆದುಕೊಳ್ಳುವ ಮೊದಲು ಎಲ್ಲಾ ವೆಚ್ಚಗಳನ್ನು ಸಂಪೂರ್ಣವಾಗಿ ಲೆಕ್ಕ ಹಾಕಬೇಕು. ಕೇವಲ ಕಾಲೇಜು ಶುಲ್ಕವಿಲ್ಲದೇ, ವಸತಿ, ಆಹಾರ, ಪುಸ್ತಕಗಳು, ಪ್ರಯಾಣ ಮತ್ತು ಇತರ ದೈನಂದಿನ ವೆಚ್ಚಗಳನ್ನು ಲೆಕ್ಕಹಾಕಬೇಕು. ಒಟ್ಟು ವೆಚ್ಚವನ್ನು ಲೆಕ್ಕ ಹಾಕುವುದು ಅತ್ಯಂತ ಮುಖ್ಯ ಆಗಿರುತ್ತದೆ. ನೀವು ನಿಮ್ಮ ಎಜುಕೇಷನ್ ಗೆ ಸಂಪೂರ್ಣವಾಗಿ ಎಷ್ಟು ವೆಚ್ಚ ಆಗುತ್ತದೆ ಎಂಬುದನ್ನು ಮೊದಲು ನೀವು ಲೆಕ್ಕಹಾಕಬೇಕು.
2) ಸಲ ಮರುಪಾವತಿ ಸಾಧ್ಯವೇ ಎಂಬುದನ್ನು ಗಮನಿಸಿ :- ವಿದ್ಯಾರ್ಥಿ ಸಾಲ ತೆಗೆದುಕೊಳ್ಳುವುದು ಬಹಳ ಜವಾಬ್ದಾರಿಯುತ ನಿರ್ಧಾರ. ಈ ನಿರ್ಧಾರ ತೆಗೆದುಕೊಳ್ಳುವ ಮೊದಲು ಕಾಲೇಜು, ಪ್ಲೇಸ್ಮೆಂಟ್ ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ನಂತರ ಉದ್ಯೋಗ ಸಿಗುವುದಕ್ಕೆ ಖಾತರಿ ಓದಿದರೆ ಸಾಲದ ಹಣವನ್ನು ಮರುಪಾವತಿ ಮಾಡಲು ಕಷ್ಟವಾಗುತ್ತದೆ. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಬೀರಿ, ಭವಿಷ್ಯದಲ್ಲಿ ನಿಮಗೆ ಸಾಲ ಸಿಗುವುದು ಕಷ್ಟ. ಅಷ್ಟೇ ಅಲ್ಲ, ಪ್ರತಿ ತಿಂಗಳು ಬರುವ EMI ಪಾವತಿಯಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಕಷ್ಟಕ್ಕೆ ಸಿಲುಕಬಹುದು. ಇಲ್ಲ, ನಿಮಗೆ ನಿಜವಾಗಿಯೂ ಅಗತ್ಯವಿರುವಷ್ಟು ಮೊತ್ತದ ಸಾಲವನ್ನು ಮಾತ್ರ ತೆಗೆದುಕೊಳ್ಳುವುದು ಒಳ್ಳೆಯದು. ಹೆಚ್ಚಿನ ಮೊತ್ತದ ಸಾಲ ತೆಗೆದುಕೊಂಡರೆ, ಹೆಚ್ಚಿನ ಬಡ್ಡಿ ಕಟ್ಟಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
3) ವಿವಿಧ ಬ್ಯಾಂಕ್ ನಲ್ಲಿ ಸಾಲದ ಮೊತ್ತ ಹಾಗೂ ಬಡ್ಡಿದರಗಳ ಮಾಹಿತಿ ತಿಳಿಯಿರಿ :- ವಿವಿಧ ಬ್ಯಾಂಕ್‌ಗಳ ಬಡ್ಡಿ ದರಗಳನ್ನು ಹೋಲಿಸಿ ನೋಡಿ. ಸರ್ಕಾರಿ ಬ್ಯಾಂಕ್‌ಗಳು ಸಾಮಾನ್ಯವಾಗಿ ಕಡಿಮೆ ಬಡ್ಡಿ ದರಗಳನ್ನು ನೀಡುತ್ತವೆ. ವಿದ್ಯಾಲಕ್ಷ್ಮಿ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡು ನಿಮಗೆ ಸೂಕ್ತವಾದ ಸಾಲವನ್ನು ಆಯ್ಕೆ ಮಾಡಿಕೊಳ್ಳಿ.
4) ಹೆಚ್ಚಿನ ಅವಧಿಯ ಎಜುಕೇಷನ್ ಲೋನ್ ಪಡೆಯಿರಿ :- ಹೆಚ್ಚಿನ ಅವಧಿಯ ಎಜುಕೇಷನ್ ಲೋನ್(Education Loan) ತೆಗೆದುಕೊಳ್ಳುವುದು ನಿಮ್ಮ ವೈಯಕ್ತಿಕ ಆರ್ಥಿಕ ಪರಿಸ್ಥಿತಿ ಮತ್ತು ಭವಿಷ್ಯದ ಯೋಜನೆಗಳನ್ನು ಅವಲಂಬಿಸಿದೆ. ನೀವು ದೀರ್ಘಾವಧಿಯ ಸಾಲವನ್ನು ಪಡೆದರೆ ನಿಮ್ಮ ಶಿಕ್ಷಣದ ಬಳಿಕ ನಿಮಗೆ ಯಾವ ಹುದ್ದೆ ಹಾಗೂ ಎಷ್ಟು ಸಂಬಳ ಸಿಗುತ್ತದೆ ಎಂದು ತಿಳಿದು ನೀವು ಲೋನ್ ತೀರಿಸಬಹುದಾಗಿದೆ. ನಿಮಗೆ ಕಡಿಮೆ ಸಂಬಳ ಬಂದರು ಸಹ ನೀವು ಯಾವುದೇ ತಲೆಬಿಸಿ ಇಲ್ಲದೆ ನೀವು ಲೋನ್ ಏನು ಪೂರ್ಣವಾಗಿ ತೀರಿಸಲು ಸಾಧ್ಯ ಆಗುತ್ತದೆ ಎಂಬುದನ್ನು ಅರಿಯಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಸಾಲದ ಬೆಲೆ ಹೆಚ್ಚಾಗಿದೆ :-
ಕೋವಿಡ್ ಸಾಂಕ್ರಾಮಿಕ ರೋಗದ ನಂತರ, ಶಿಕ್ಷಣ ಸಾಲಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ರಿಸರ್ವ್ ಬ್ಯಾಂಕಿನ ಅಂಕಿಅಂಶಗಳ ಪ್ರಕಾರ, ಈ ಸಾಲಗಳಲ್ಲಿ ವಾರ್ಷಿಕ ಶೇ. 20.6ರಷ್ಟು ಬೆಳವಣಿಗೆ ಕಂಡುಬಂದಿದೆ. ಇದು ಕಳೆದ ಐದು ವರ್ಷಗಳಲ್ಲಿ ಅತಿ ಹೆಚ್ಚು ಬೆಳವಣಿಗೆಯಾಗಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರದ PM ಉಷಾ ಸ್ಕಾಲರ್ ಶಿಪ್ ಗೆ ಅಪ್ಲೈ ಮಾಡಿ 20,000 ಹಣ ಪಡೆಯಿರಿ.