ಗೃಹಲಕ್ಷ್ಮಿ ಯೋಜನೆಯ ಜೂನ್-ಜುಲೈ ತಿಂಗಳ ಹಣ ಬಿಡುಗಡೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಡಿ.ಕೆ. ಶಿವಕುಮಾರ್.

ಆರ್ಥಿಕ ಸ್ವಾವಲಂಬನೆಯ ಮೂಲಕ ಮಹಿಳೆಯರು ಸಮಾಜದಲ್ಲಿ ಸಮಾನ ಸ್ಥಾನ ಪಡೆಯಲು ಸಹಾಯ ಆಗಲಿದೆ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರವು ಗೃಹ ಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿತು. ಚುನಾವಣೆಯ ಮುನ್ನ ನೀಡಿದ ಭರವಸೆಯಂತೆ ಕಳೆದ ಮೇ ತಿಂಗಳ ವರೆಗೆ ಸರಿಯಾಗಿ ಗೃಹ ಲಕ್ಷ್ಮಿ ಹಣವನ್ನು ಮಹಿಳೆಯರ ಖಾತೆಗೆ ಜಮಾ ಮಾಡಲಾಗಿತ್ತು. ಆದರೆ ಈಗ ಜೂನ್ ತಿಂಗಳಿಂದ ಗೃಹ ಲಕ್ಷ್ಮಿ ಹಣ ಬಾರದೆ ಇರುವುದು ಮಹಿಳೆಯರಿಗೆ ಬೇಸರ ತಂದಿದೆ. ಈಗ ಈ ಬಗ್ಗೆ ಒಂದು ಕಾರ್ಯಕ್ರಮದಲ್ಲಿ d.k. ಶಿವಕುಮಾರ್ ಅವರಿಗೆ ಮಹಿಳೆ ಪ್ರಶ್ನೆ ಕೇಳಿದ್ದು ಯೋಜನೆಯ ಹಣ ಯಾವಾಗ ಬರಲಿದೆ ಎಂಬ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.

WhatsApp Group Join Now
Telegram Group Join Now

ಅನುದಾನ ಬಿಡುಗಡೆ ಆಗಿರುವ ಬಗ್ಗೆ ಖಚಿತ ಮಾಹಿತಿ ನೀಡಿದ ಉಪ ಮುಖ್ಯಮಂತ್ರಿ:- ಮಂಡ್ಯ ದ ಮದ್ದೂರಿನಲ್ಲಿ ನಡೆದ ಜನಸಭೆಯಲ್ಲಿ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಗೃಹಲಕ್ಷ್ಮೀ ಯೋಜನೆಯನ್ನು ಪ್ರತಿಪಾದಿಸಿದ 2000 ರೂಪಾಯಿಗಳ ಮಹಿಳೆಯರ ಖಾತೆಗೆ ಜಮಾ ಆಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಜನರನ್ನು ಕೇಳಿದಾಗ, ಹಲವಾರು ಮಹಿಳೆಯರು ಒಂದೇ ಸ್ವರದಲ್ಲಿ “ಬರ್ತಿಲ್ಲ, ಬರ್ತಿಲ್ಲ” ಎಂದು ಘೋಷಿಸಿದರು. ಅನಿರೀಕ್ಷಿತ ಪ್ರತಿಕ್ರಿಯೆಯಿಂದ ಸ್ವಲ್ಪ ಮಟ್ಟಿಗೆ ಮುಜುಗರಕ್ಕೊಳಗಾದ ಉಪಮುಖ್ಯಮಂತ್ರಿಗಳು, ಈ ವಿಳಂಬದ ಕಾರಣವನ್ನು ವಿವರಿಸುತ್ತಾ, ಅನುದಾನ ಬಿಡುಗಡೆಯಾಗಿದ್ದು ಶೀಘ್ರದಲ್ಲೇ ನಿಮ್ಮ ಖಾತೆಗೆ ಜಮಾ ಆಗಿರುವ ಭರವಸೆಯನ್ನು ನೀಡಿದರು.

ಗೃಹಲಕ್ಷ್ಮಿ ಯೋಜನೆ ವಿಳಂಬಕ್ಕೆ ಜನಗಳ ಬೇಸರ :-

ಎರಡು ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆ ಹಣ ಬಾರದಿರುವುದು ಜನರಲ್ಲಿ ಆತಂಕ ಮತ್ತು ಬೇಸರವನ್ನು ಹುಟ್ಟುಹಾಕಿರುವುದು ಸಹಜ. ಈ ಯೋಜನೆಯು ಅನೇಕ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಹಣದ ವಿಳಂಬದಿಂದಾಗಿ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಎರಡು ತಿಂಗಳ ಬಾಕಿ ಇರುವ ಗೃಹ ಲಕ್ಷ್ಮಿ ಹಣವನ್ನು ಈ ತಿಂಗಳ ಜಮಾ ಮಾಡುವ ನಿರೀಕ್ಷೆ ಇದೆ :- ಈಗ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಹೇಳಿರುವ ಹೇಳಿಕೆಯಿಂದ ನಾವು ಮೂರು ತಿಂಗಳ ಹಣವು ಒಮ್ಮೆಲೇ ಬರಬಹುದು ಎಂದು ನಿರೀಕ್ಷೆ ಮಾಡಬಹುದು. ಏಕೆಂದರೆ ಈ ಹಿಂದೆ ಗೃಹ ಲಕ್ಷ್ಮಿ ಯೋಜನೆ ಹಣ ಬಾರದೆ ಇರುವವೆರಿಗೆ ಒಮ್ಮೆಲೇ ಹಣವನ್ನು ಜಮಾ ಮಾಡಿದ್ದರು. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಹ ಗೃಹ ಲಕ್ಷ್ಮಿ ಯೋಜನೆ ನಿಲ್ಲುವುದಿಲ್ಲ. ನಿಮಗೆ ಹಣ ಬರಲಿದೆ ಎಂದು ಸ್ಪಷ್ಟನೆ ನೀಡಿದ್ದರು.

ಇದನ್ನೂ ಓದಿ: ಕರ್ನಾಟಕದ ಮಹಿಳೆಯರಿಗೆ ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆಯಡಿ 50,000 ರೂಪಾಯಿ ಸಾಲ ಸಿಗಲಿದೆ 25000 ರೂಪಾಯಿ ಮರುಪಾವತಿ ಮಾಡಿದರೆ ಸಾಕು.

ಗೃಹಲಕ್ಷ್ಮಿ ಯೋಜನೆಯಿಂದಾಗುವ ಪ್ರಯೋಜನ ಏನು?

  • ಮಹಿಳೆಯರ ಸಬಲೀಕರಣ: ಆರ್ಥಿಕ ಸ್ವಾವಲಂಬನೆಯ ಮೂಲಕ ಮಹಿಳೆಯರು ಸಮಾಜದಲ್ಲಿ ಸಮಾನ ಸ್ಥಾನ ಪಡೆಯಲು ಸಹಾಯವಾಗುತ್ತದೆ.
  • ಕುಟುಂಬದ ಆರ್ಥಿಕ ಸ್ಥಿತಿ ಸುಧಾರಣೆ: ಮಹಿಳೆಯರು ಗಳಿಸಿದ ಹಣ ಕುಟುಂಬದ ಇತರ ಅಗತ್ಯಗಳಿಗೆ ಹೇಗೆ ಬಳಕೆಯಾಗುತ್ತದೆ. ಆರ್ಥಿಕವಾಗಿ ಮಹಿಳೆಯರು ಸ್ವಾವಲಂಬಿ ಆಗುವ ಜೊತೆಗೆ ಮನೆಯ ಆರ್ಥಿಕ ಸ್ಥಿತಿಯು ಸುಧಾರಣೆ ಆಗಲಿದೆ.
  • ಮಕ್ಕಳ ಶಿಕ್ಷಣ: ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಸಹಾಯ ಮಾಡುತ್ತದೆ. ಹಲವಾರು ಒಂಟಿ ಮಹಿಳೆಯರಿಗೆ ತಮ್ಮ ಮಕ್ಕಳ ಶಿಕ್ಷಣದ ಖರ್ಚು ಭರಿಸಲು ಸಾಧ್ಯ ಆಗುತ್ತದೆ.
  • ಆರೋಗ್ಯ ರಕ್ಷಣೆ: ಕುಟುಂಬದ ಆರೋಗ್ಯ ರಕ್ಷಣೆಗೆ ಹೆಚ್ಚಿನ ಹಣ ಖರ್ಚು ಮಾಡಲು ಸಾಧ್ಯ. ಮಹಿಳೆಯರಿಗೆ ಇದರಿಂದ ಆರೋಗ್ಯ ಸಂಬಂಧಿ ಮಾತ್ರೆ ಅಥವಾ ಇನ್ನಿತರ ಖರ್ಚುಗಳಿಗೆ ಸಹಾಯಕ ಆಗಿದೆ.

ಇದನ್ನೂ ಓದಿ: ಕೇಂದ್ರದಿಂದ ಪಿಂಚಣಿದಾರರಿಗೆ ಗುಡ್ ನ್ಯೂಸ್! ಇಲ್ಲಿದೆ ಸಂಪೂರ್ಣ ಮಾಹಿತಿ

Sharing Is Caring:

Leave a Comment