ಯುಐಡಿಎ 14 ಸೆಪ್ಟೆಂಬರ್ 2024 ವರೆಗೆ ಆಧಾರ್ ನವೀಕರಣ ಗಡುವನ್ನು ವಿಸ್ತರಿಸಿದೆ. 10 ವರ್ಷಕ್ಕಿಂತ ಹಳೆಯ ಆಧಾರ್‌ಗಳನ್ನು ಮನೆಯಲ್ಲಿ ಕುಳಿತು ಸುಲಭವಾಗಿ ನವೀಕರಿಸಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಆಧಾರ್ ಕಾರ್ಡ್ ವಿಳಾಸವನ್ನು ಮನೆಯಿಂದಲೇ ಹೇಗೆ ಬದಲಾಯಿಸುವುದು?: ಇಂದು ಇರುವ ಆಧಾರ್ ಕಾರ್ಡ್ ಎಷ್ಟು ಮುಖ್ಯ ಎಂದು ನಮಗೆಲ್ಲರಿಗೂ ಗೊತ್ತು. ಬ್ಯಾಂಕ್ ಖಾತೆ ತೆರೆಯುವುದರಿಂದ ಸರ್ಕಾರಿ ಸೌಲಭ್ಯಗಳನ್ನು ಪಡೆಯುವವರೆಗೂ ಆಧಾರ್ ಕಾರ್ಡ್ ಅನಿವಾರ್ಯವಾಗಿದೆ. ಆದರೆ ನೀವು ಒಂದು ನಗರದಿಂದ ಇನ್ನೊಂದು ನಗರಕ್ಕೆ ಹೋದಾಗ, ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ವಿಳಾಸವನ್ನು ನವೀಕರಿಸುವುದು ಬಹಳ ಮುಖ್ಯ. ಹಾಗೆಯೇ ಹಳೆಯ ಆಧಾರ್ ಕಾರ್ಡ್ ಅನ್ನು ನವೀಕರಣ ಮಾಡಿಸಿಕೊಳ್ಳುವುದು ಸಹ ಬಹಳ ಮುಖ್ಯ. ನೀವು ಆಧಾರ್ ಕಾರ್ಡ್ ಅನ್ನು ಈಗ ನೋವು ಮನೆಯಿಂದಲೇ ಕುಳಿತು ಆಧಾರ್ ನವೀಕರಣ ಮಾಡುವ ಅವಕಾಶ ಇದೆ.
ಈ ಸಮಯದ ಒಳಗೆ ಆಧಾರ್ ಕಾರ್ಡ್ ಬದಲಾವಣೆಗೆ ಅವಕಾಶ :-
ಆಧಾರ್ ಸಂಸ್ಥೆ ನೀಡುವ UIDAI, ಆಧಾರ್ ನವೀಕರಣಕ್ಕೆ ಗಡುವನ್ನು ವಿಸ್ತರಿಸಿದೆ. ಈಗ ನೀವು 14 ಸೆಪ್ಟೆಂಬರ್ 2024 ರವರೆಗೆ ನಿಮ್ಮ ಆಧಾರ್ ಅನ್ನು ನವೀಕರಿಸಬಹುದು. ನಿಮ್ಮ ಆಧಾರ್ 10 ವರ್ಷಕ್ಕಿಂತ ಹಳೆಯದಾಗಿದ್ದರೆ ಅಥವಾ ನಿಮ್ಮ ವಿಳಾಸ ಬದಲಾಗಿದ್ದರೆ, 14 ಸೆಪ್ಟೆಂಬರ್ 2024 ರ ಒಳಗೆ ನವೀಕರಿಸಿ. ಆಧಾರ್ ನವೀಕರಣದ ಬಗ್ಗೆ ನೀವು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆಧಾರ್ ನವೀಕರಣ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಆಧಾರ್ ಕಾರ್ಡ್ ವಿಳಾಸವನ್ನು ಆನ್‌ಲೈನ್‌ನಲ್ಲಿ ನವೀಕರಿಸುವ ಸರಿಯಾದ ಹಂತಗಳು:
- UIDAI ವೆಬ್‌ಸೈಟ್‌ಗೆ ಭೇಟಿ ನೀಡಿ: https://myaadhaar.uidai.gov.in/ ಗೆ ಹೋಗಿ.
- ಲಾಗಿನ್ ಮಾಡಿ: ನಿಮ್ಮ ಆಧಾರ್ ನಂಬರ್ ಮತ್ತು ಕ್ಯಾಪ್ಚಾರಿ ಲಾಗಿನ್ ಮಾಡಿ ನಮೂದಿಸಿ.
- ವಿಳಾಸವನ್ನು ಆಯ್ಕೆ ಮಾಡಿ: ಲಾಗಿನ್ ಮಾಡಿದ ನಂತರ, ವಿಳಾಸವನ್ನು ಆಯ್ಕೆಯನ್ನು ಆರಿಸಿ.
- ಹೊಸ ವಿಳಾಸವನ್ನು ನಮೂದಿಸಿ: ನಿಮ್ಮ ಹೊಸ ವಿಳಾಸವನ್ನು ಎಲ್ಲಾ ವಿವರಗಳೊಂದಿಗೆ ಸರಿಯಾಗಿ ನಮೂದಿಸಿ.
- ಸಪೋರ್ಟಿಂಗ್ ದಾಖಲೆಯನ್ನು ಅಪ್‌ಲೋಡ್ ಮಾಡಿ: ನಿಮ್ಮ ಹೊಸ ವಿಳಾಸವನ್ನು ಸಾಬೀತುಪಡಿಸುವ ದಾಖಲೆಯನ್ನು (ಉದಾಹರಣೆಗೆ, ರೇಷನ್ ಕಾರ್ಡ್, ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ) ಅಪ್‌ಲೋಡ್ ಮಾಡಿ.
- OTP ಪರಿಶೀಲನೆ: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ OTP ಅನ್ನು ನಮೂದಿಸಿ.
- ಸಬ್ಮಿಟ್ ಮಾಡಿ: ಎಲ್ಲಾ ಮಾಹಿತಿಯನ್ನು ಸರಿಯಾಗಿ ನಮೂದಿಸಿದ ನಂತರ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ.
- ಕುಟುಂಬದ ಮುಖ್ಯಸ್ಥರ ಆಯ್ಕೆ: ಅಲ್ಲಿ ಕುಟುಂಬದ ಮುಖ್ಯಸ್ಥರ ಆಧಾರದ ಮೇಲೆ ಅಪ್ಡೇಟ್ ಮಾಡುವ ಆಯ್ಕೆಯನ್ನು ಕ್ಲಿಕ್ ಮಾಡಿ.
- ಆಧಾರ್ ಸಂಖ್ಯೆ ನಮೂದಿಸಿ: ನಿಮ್ಮ ಮನೆಯ ಮುಖ್ಯಸ್ಥರ ಆಧಾರ್ ಕಾರ್ಡ್ ಸಂಖ್ಯೆಯನ್ನು ಸರಿಯಾಗಿ ನಮೂದಿಸಿ.
- ಶುಲ್ಕ ವಿಧಿಸಿ: ಈ ಸೇವೆಗೆ 50 ರೂಪಾಯಿ ಶುಲ್ಕ ಪಾವತಿ ಮಾಡಬೇಕು
- ವಿನಂತಿಯನ್ನು ಕಳುಹಿಸುವುದು: ನಿಮ್ಮ ಮಾಹಿತಿಯನ್ನು ನೀವು ನಮೂದಿಸಿದಾಗ, ನಿಮ್ಮ ಮುಖ್ಯಸ್ಥರಿಗೆ ಒಂದು ವಿನಂತಿ ಹೋಗುತ್ತೆ.
- ಅನುಮತಿ: ನಿಮ್ಮ ಮುಖ್ಯಸ್ಥರು ತಮ್ಮ ಮೊಬೈಲ್‌ನಲ್ಲಿ ಬಂದ ವಿನಂತಿಯನ್ನು ಅನುಮತಿಸಬೇಕು.
- ಅಪ್‌ಡೇಟ್: ಅವರು ಅನುಮತಿಸಿದ ತಕ್ಷಣ ನಿಮ್ಮ ಆಧಾರ್ ಕಾರ್ಡ್ ಅಪ್‌ಡೇಟ್ ಆಗುವ ಪ್ರಕ್ರಿಯೆ ಶುರುವಾಗುತ್ತೆ.
ನೀವು ಆನ್‌ಲೈನ್‌ನಲ್ಲಿ ನವೀಕರಿಸಲು ಆಸಕ್ತಿ ಕೇಂದ್ರವಿಲ್ಲದಿದ್ದರೆ, ನೀವು ಹತ್ತಿರದ ಆಧಾರ್ ಸೇವೆಗೆ ಭೇಟಿ ನೀಡಿ ನವೀಕರಿಸಬಹುದು. ಅಲ್ಲಿ ನೀವು ದಾಖಲೆಗಳೊಂದಿಗೆ ಹೋಗಿ, ಅಧಿಕಾರಿಗಳ ಸಹಾಯದಿಂದ ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಬಹುದು.
ಇದನ್ನೂ ಓದಿ: ಕೇವಲ 147 ರೂಪಾಯಿಗೆ ಒಂದು ತಿಂಗಳ ಉಚಿತ ಕರೆ ಮಾಡುವ ಸೌಲಭ್ಯವನ್ನು BSNL ನೀಡುತ್ತಿದೆ.