ಭಾರತ ಸರ್ಕಾರವು ನೀಡುವ 12 ಅಂಕಗಳ ಏಕೈಕ ಗುರುತಿನ ಸಂಖ್ಯೆ ಆಧಾರ್ ಕಾರ್ಡ್ ಆಗಿದೆ. ಇದು ನಮ್ಮ ಗುರುತಿನ ಪುರಾವೆ ಮತ್ತು ಜೀವನದ ಹಲವು ಕ್ಷೇತ್ರಗಳಲ್ಲಿ ಮಾನ್ಯತೆ ಪಡೆದಿದೆ ಎಂದು ಹೇಳಬಹುದು. ಈಗಾಗಲೇ ಎಲ್ಲ ಕ್ಷೇತ್ರದಲ್ಲೂ ಕಡ್ಡಾಯವಾಗಿ ಆಧಾರ್ ಕಾರ್ಡ್ ಬೇಕು ಎಂಬ ನಿಯಮ ರೂಪಿತವಾಗಿದೆ. ಈಗ ಸರ್ಕಾರವು ಹಲವು ವರ್ಷಗಳಿಂದ ಅಪ್ಡೇಟ್ ಆಗದೆ ಉಳಿದ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಸಮಯ ನಿಗದಿ ಗೊಳಿಸಿದ್ದು ಉಚಿತವಾಗಿ ನೀವು ಆಧಾರ್ ಅಪ್ಡೇಟ್ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ.
ಆಧಾರ್ ಕಾರ್ಡ್ ಏಕೆ ಅಗತ್ಯ :- ಆಧಾರ್ ಕಾರ್ಡ್ ನಮ್ಮ ಗುರುತಿನ ಸಾಕ್ಷಿಯಾಗಿದೆ. ನಾವು ಯಾವುದೇ ಖಾಸಗಿ ಅಥವಾ ಸರ್ಕಾರಕ್ಕೆ ಸಂಭಂದ ಪಟ್ಟ ಯಾವುದೇ ಕೆಲಸ ಮಾಡಲು ಬಯಸಿದರೂ ಸಹ, ಆಧಾರ್ ಕಾರ್ಡ್ ಅನ್ನು ಮುಖ್ಯ ಗುರುತಿನ ಚೀಟಿಗಾಗಿ ಪರಿಗಣಿಸುತ್ತಾರೆ. ಈ ಕೆಳಗಿನ ಕೆಲಸಗಳಿಗೆ ಆಧಾರ್ ಕಾರ್ಡ್ ಅತ್ಯಗತ್ಯ.
- ಶಿಕ್ಷಣ: ಶಾಲೆಗೆ ಪ್ರವೇಶ ಪಡೆಯುವುದರಿಂದ ಕಾಲೇಜಿಗೆ ಅಡ್ಮಿಷನ್ ಪಡೆಯುವವರೆಗೆ ಆಧಾರ್ ಕಾರ್ಡ್ ಅಗತ್ಯವಿದೆ ಎಂದು ಹೇಳಬಹುದು.
- ಉದ್ಯೋಗ: ಯಾವುದೇ ಕಂಪನಿಯಲ್ಲಿ ಕೆಲಸ ಮಾಡಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಹಾಗೂ ಯುವುದೇ ಸರಕಾರಿ ಹುದ್ದೆಗೆ ಆಗಿದ್ದರು ಆಧಾರ್ ಕಾರ್ಡ್ ಕೇಳುತ್ತಾರೆ.
- ಬ್ಯಾಂಕಿಂಗ್: ಬ್ಯಾಂಕ್ ಖಾತೆ ತೆರೆಯುವುದು, ಹಣ ಪಡೆಯುವುದು ಮುಂತಾದ ಎಲ್ಲಾ ಬ್ಯಾಂಕಿಂಗ್ ವಹಿವಾಟುಗಳಿಗೆ ಆಧಾರ್ ಕಾರ್ಡ್ ಅಗತ್ಯವಿದೆ.
- ಸರ್ಕಾರಿ ಯೋಜನೆಗಳು: ಸರ್ಕಾರದಿಂದ ಸಿಗುವ ಯಾವುದೇ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಅಗತ್ಯವಿದೆ.
ಉಚಿತ ನವೀಕರಣಕ್ಕೆ ಇರುವ ಸಮಯ :-
UIDAI ಹೊರಡಿಸಿದ ಅಧಿಸೂಚನೆಯ ಪ್ರಕಾರ, ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 14, 2024. ಈ ದಿನಾಂಕದ ನಂತರ, ಆಧಾರ್ ನವೀಕರಣಕ್ಕೆ ರೂ 50 ಶುಲ್ಕವನ್ನು ನೀಡಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಧಾರ್ ಕಾರ್ಡ್ 10 ವರ್ಷಕ್ಕಿಂತ ಹಳೆಯದಾಗಿದ್ದರೆ ಈಗಲೇ ನವೀಕರಿಸಿ :- ಸರ್ಕಾರದಿಂದ ಮಹತ್ವದ ಸೂಚನೆ ಇದಾಗಿದೆ. ನಿಮ್ಮ ಆಧಾರ್ ಕಾರ್ಡ್ 10 ವರ್ಷಕ್ಕಿಂತ ಹಳೆಯದಾಗಿದ್ದರೆ, ಅದನ್ನು ತಕ್ಷಣ ನವೀಕರಿಸುವುದು ಅತ್ಯಂತ ಮುಖ್ಯ. ಇದು ನಿಮ್ಮ ಗುರುತಿನ ಸಾಕ್ಷಿಯಾಗಿರುವುದರಿಂದ, ಅದರ ಮಾಹಿತಿಯನ್ನು ನವೀಕೃತವಾಗಿ ಇಟ್ಟುಕೊಳ್ಳುವುದು ಅನಿವಾರ್ಯ.
ಇದನ್ನೂ ಓದಿ: ರೈತರಿಗೆ ತಿಂಗಳಿಗೆ ಮೂರು ಸಾವಿರ ಪಿಂಚಣಿ ನೀಡುವ ಸರ್ಕಾರಿ ಯೋಜನೆಯ ಬಗ್ಗೆ ಮಾಹಿತಿ ಇಲ್ಲಿದೆ.
ಆನ್ಲೈನ್ ಮೂಲಕ ಆಧಾರ್ ಅಪ್ಡೇಟ್ ಮಾಡುವ ವಿಧಾನ:-
- UIDAI ವೆಬ್‌ಸೈಟ್‌ಗೆ ಭೇಟಿ ನೀಡಿ: ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲಿ uidai. gov. ಗೆ ಹೋಗಿ.
- ನನ್ನ ಆಧಾರ್ ವಿಭಾಗವನ್ನು ಆಯ್ಕೆ ಮಾಡಿ: ಮುಖಪುಟದಲ್ಲಿ ನೀವು ‘ನನ್ನ ಆಧಾರ್’ ಅಥವಾ ‘ನನ್ನ ಆಧಾರ್’ ಎಂಬ ಆಯ್ಕೆಯನ್ನು ನೋಡುತ್ತೀರಿ. ಅದನ್ನು ಕ್ಲಿಕ್ ಮಾಡಿ.
- ಆಯ್ಕೆಯನ್ನು ಆರಿಸಿ: ನೀವು ನವೀಕರಿಸಲು ಬಯಸುವ ಮಾಹಿತಿಯನ್ನು ಆಯ್ಕೆ ಮಾಡಿ. ಉದಾಹರಣೆಗೆ, ವಿಳಾಸ, ಹೆಸರು ಇತ್ಯಾದಿ.
- ವಿವರಗಳನ್ನು ಸಲ್ಲಿಸಿ: ನಿಮ್ಮ ಆಧಾರ್ ಸಂಖ್ಯೆ, ಕ್ಯಾಪ್ಚಾ ಕೋಡ್ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
- OTP ನಮೂದಿಸಿ : ನಿಮ್ಮ ಮೊಬೈಲ್‌ಗೆ ಬಂದ OTP ಅನ್ನು ನಮೂದಿಸಿ.
- ವಿವರಗಳನ್ನು ಬದಲಾಯಿಸಿ: ನಿಮ್ಮ ವೈಯಕ್ತಿಕ ಮಾಹಿತಿಯನ್ನು ತಿದ್ದುಪಡಿ ಮಾಡಬೇಕು ಎಂದರೆ ನೀವು ತಿದ್ದುಪಡಿ ಮಾಡಬಹುದು.
- ದಾಖಲೆಗಳನ್ನು ಅಪ್ಲೋಡ್ ಮಾಡಿ: ಬದಲಾವಣೆಗೆ ಸಂಬಂಧಿಸಿದ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಸಲ್ಲಿಸು ಬಟನ್ ಕ್ಲಿಕ್ ಮಾಡಿ: ಎಲ್ಲಾ ಮಾಹಿತಿಯನ್ನು ಒಮ್ಮೆ ಪರಿಶೀಲಿಸಿ ನಂತರ ಸಲ್ಲಿಸು ಬಟನ್ ಕ್ಲಿಕ್ ಮಾಡಿ.
- ಅಪ್‌ಡೇಟ್ ವಿನಂತಿ ಐಡಿ ಪಡೆಯಿರಿ: ನಿಮ್ಮ ಮೊಬೈಲ್‌ಗೆ ಒಂದು ಅನನ್ಯ ಐಡಿ ಸಿಗುತ್ತದೆ. ಈ ಐಡಿ ಬಳಸಿ ನೀವು ನವೀಕರಿಸಿದ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.
ಇದನ್ನೂ ಓದಿ: ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ವಾ? ಯಾಕೆ ಹಣ ಬಂದಿಲ್ಲ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ