ಆಧಾರ್ ಅಪ್ಡೇಟ್ ಮಾಡುವಲ್ಲಿ ಹೊಸ ಬದಲಾವಣೆ; ವಿಳಾಸ ನವೀಕರಣಕ್ಕೂ ಈ ದಾಖಲೆ ಇರಲೇಬೇಕು.

ಬಹುತೇಕ ಕೆಲಸಗಳಿಗೆ ದಾಖಲೆಯಾಗಿ ಬಳಸಲ್ಪಡುವ ಭಾರತೀಯ ನಾಗರಿಕರ ಗುರುತಿನ ಪುರಾವೆಯಾಗಿರುವ ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾವಣೆಗೆ ಇನ್ನು ಮುಂದೆ ವಿದ್ಯುತ್, ನೀರು, ದೂರವಾಣಿ ಬಿಲ್ ಗಳನ್ನು ಬಳಸಬಹುದು. ಆದರೆ ಇದಕ್ಕೆ ಕೆಲವು ನಿಯಮಗಳಿವೆ. ಅದು ಏನು, ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಆಧಾರ್ ಕಾರ್ಡ್ ನಲ್ಲಿ ನೀಡಲಾದ ಮಾಹಿತಿಯು ಹಳೆಯದಾಗಿರಬಾರದು, ಏಕೆಂದರೆ ಇದನ್ನು ಹೆಚ್ಚಾಗಿ ಗುರುತಿನ ಪುರಾವೆಯಾಗಿ ಬಳಸಲಾಗುತ್ತದೆ. ಆಧಾರ್ ಕಾರ್ಡ್ ನಲ್ಲಿರುವ ಹೆಸರು ಮತ್ತು ವಿಳಾಸದ ಮಾಹಿತಿ ಸರಿಯಾಗಿರಬೇಕು. ಯಾರಾದರೂ ಆಧಾರ್ ಕಾರ್ಡ್ನಲ್ಲಿ ವಿಳಾಸವನ್ನು ನವೀಕರಿಸಲು ಯೋಚಿಸುತ್ತಿದ್ದರೆ, ಅದಕ್ಕಾಗಿ ಯಾವ ದಾಖಲೆಗಳನ್ನು ಬಳಸಬೇಕೆಂದು ತಿಳಿದುಕೊಳ್ಳುವುದು ಮುಖ್ಯ.

WhatsApp Group Join Now
Telegram Group Join Now

ಹೌದು ಆಧಾರ್ ಕಾರ್ಡ್ ಭಾರತೀಯ ನಾಗರಿಕರ ಗುರುತಿನ ದಾಖಲೆಯಾಗಿದೆ. ಈ ಸರ್ಕಾರಿ ದಾಖಲೆಯನ್ನು ಅನೇಕ ವಿಷಯಗಳಿಗೆ ಬಳಸಲಾಗುತ್ತದೆ. ಆಧಾರ್ ಕಾರ್ಡ್ನಲ್ಲಿ ಯಾವುದೇ ಮಾಹಿತಿ ಅಂದ್ರೆ ಹೆಸರು ಮತ್ತು ವಿಳಾಸ ಹಳೆಯದಾಗಿದ್ದರೆ, ಅದನ್ನು ಕಾಲಕಾಲಕ್ಕೆ ನವೀಕರಿಸುವುದು ಮುಖ್ಯ. ಈ ಮಾಹಿತಿಯನ್ನು ನವೀಕರಿಸಲು ಕೆಲವು ಪೂರಕ ದಾಖಲೆಗಳನ್ನು ಒದಗಿಸಬೇಕು. ಹೌದು ಆಧಾರ್ ಕಾರ್ಡ್ ಹೊಂದಿರುವವರು ಇನ್ನು ಮುಂದೆ ಹೆಸರು ಮತ್ತು ವಿಳಾಸ ನವೀಕರಣಕ್ಕಾಗಿ ಈ ಕೆಲವು ದಾಖಲೆಗಳನ್ನು ಬಳಸಬಹುದು ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಸ್ಪಷ್ಟಪಡಿಸಿದೆ.

ಭಾರತೀಯ ನಿವಾಸಿಗಳಿಗೆ ನೀಡಲಾದ 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ. ಸರ್ಕಾರಿ ಸೇವೆಗಳನ್ನು ಪ್ರವೇಶಿಸಲು ಮತ್ತು ಹಣಕಾಸು ವಹಿವಾಟುಗಳನ್ನು ಸುರಕ್ಷಿತವಾಗಿ ನಡೆಸಲು ಇದು ಅತ್ಯಗತ್ಯ. ಬಯೋಮೆಟ್ರಿಕ್ಸ್‌ನೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವ ಮೂಲಕ, ಸಿಸ್ಟಮ್ ನಕಲು ಮಾಡುವುದನ್ನು ತಡೆಯುತ್ತದೆ ಮತ್ತು ಮೋಸದ ಚಟುವಟಿಕೆಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ದುರುಪಯೋಗವನ್ನು ತಡೆಗಟ್ಟಲು ಅದನ್ನು ನವೀಕರಿಸುವುದು ಬಹಳ ಮುಖ್ಯ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಮೊಬೈಲ್ ಬಳಕೆದಾರರಿಗೆ ಭರ್ಜರಿ ಸಿಹಿ ಸುದ್ದಿ; ಭಾರೀ ಪ್ರಮಾಣದಲ್ಲಿ ಇಳಿಕೆಯಾಗಲಿದೆ ರಿಚಾರ್ಜ್ ಬೆಲೆಗಳು!

ನಿಯಮ ಮಿರುದ್ರೆ ಆಗಲ್ಲ ಆಧಾರ್ ಅಪ್ಡೇಟ್

ಇನ್ನು ವಿಶಿಷ್ಟ ಗುರುತಿನ ಪ್ರಾಧಿಕಾರ ಇತ್ತೀಚೆಗೆ ಭಾರತದ ಆಧಾರ್ ಕಾರ್ಡ್‌ಗಳನ್ನು ನವೀಕರಿಸಲು ಹೊಸ ಮಾರ್ಗ ಸೂಚಿ ಹಾಗೂ ನಿಯಮಗಳನ್ನ ತಂದಿದೆ. ಅದರಲ್ಲೂ ಆಧಾರ್ ಕಾರ್ಡ್ ನವೀಕಾರಣಕ್ಕೆ ಅಂದ್ರೆ ವಿಳಾಸ ಬದಲಾವಣೆ ಮಾಡಬೇಕು ಅನ್ಕೊಂದಿದ್ರೆ ಅದಕ್ಕೆ ಪೂರಕ ದಾಖಲೆಗಳಾದ ವಿದ್ಯುತ್ ಬಿಲ್, ವಾಟರ್ ಬಿಲ್, ದೂರವಾಣಿ ಬಿಲ್ ಗಳನ್ನ ನೀಡೋದು ಕಡ್ಡಾಯವಾಗಿದೆ. ಹೌದು ಆಧಾರ್ ಕಾರ್ಡ್ನಲ್ಲಿ ಹೆಸರು ಮತ್ತು ವಿಳಾಸವನ್ನು ನವೀಕರಿಸಲು ಮಾನ್ಯ ಭಾರತೀಯ ಪಾಸ್ಪೋರ್ಟ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಅನ್ನು ಪುರಾವೆಯಾಗಿ ಬಳಸಬಹುದು. ಆದರೆ ಎಲ್ಲರಿಗೂ ಪಾಸ್ಪೋರ್ಟ್, ಪ್ಯಾನ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್ ಇರುವುದಿಲ್ಲ. ಪ್ಯಾನ್ ಕಾರ್ಡ್ ಮತ್ತು ಚಾಲನಾ ಪರವಾನಗಿಯನ್ನು ವಿಳಾಸದ ಪುರಾವೆಯಾಗಿ ಪರಿಗಣಿಸಲಾಗುವುದಿಲ್ಲ. ಆದರೆ ಪಡಿತರ ಮತ್ತು ಇ-ಪಡಿತರ ಚೀಟಿಯನ್ನು ವಿಳಾಸ ಪುರಾವೆಯಾಗಿ ಪರಿಗಣಿಸಲಾಗುತ್ತದೆ. ಇವುಗಳ ಹೊರತಾಗಿಯೂ ಇದೀಗ ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾಯಿಸಬೇಕು ಅಂದ್ರೆ ಇನ್ಮುಂದೆ ಈ ದಾಖಲೆಗಳು ಕಡ್ಡಾಯವಾಗಿ ಇರಲೇಬೇಕು.

ಮೊದಲಿಗೆ ನೀರು ಮತ್ತು ವಿದ್ಯುತ್ ಬಿಲ್ ಅತ್ಯಗತ್ಯವಾಗಿ ವಿಳಾಸ ಬದಲಾವಣೆಗೆ ಬೇಕಾಗಿರುವ ದಾಖಲೆಯಾಗಿದೆ. ಈಗ ವಿದ್ಯುತ್, ನೀರು ಮತ್ತು ದೂರವಾಣಿ ಬಿಲ್ಗಳನ್ನು ವಿಳಾಸ ಪುರಾವೆಯಾಗಿ ಬಳಸಬಹುದು. ಯಾರ ಹೆಸರಿನಲ್ಲಿಯಾದರೂ ವಿದ್ಯುತ್ ಬಿಲ್, ಟೆಲಿಫೋನ್ ಬಿಲ್ ಅಥವಾ ನೀರಿನ ಬಿಲ್ ಇದ್ದರೆ, ಆಧಾರ್ ಕಾರ್ಡ್ನಲ್ಲಿರುವ ವಿಳಾಸವನ್ನು ನವೀಕರಿಸಬಹುದು. ಆದರೆ ಕನಿಷ್ಠ 3 ತಿಂಗಳ ವಯಸ್ಸಾಗಿರಬೇಕು. ಇದರ ಜೊತೆಗೆ ಪೋಸ್ಟ್ ಪೇಯ್ಡ್ ಮೊಬೈಲ್ ಬಿಲ್ ಕೂಡ ದಾಖಲೆಯಾಗಿ ಬಳಸಬಹುದು. ಹೌದು ಪೋಸ್ಟ್ಪೇಯ್ಡ್ ಮೊಬೈಲ್ ಬಿಲ್ ಅನ್ನು ಸಹ ಬಳಸಬಹುದು. ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಜೀವ ಮತ್ತು ವೈದ್ಯಕೀಯ ವಿಮಾ ಪಾಲಿಸಿಗಳನ್ನು ಪಡೆಯಬಹುದು ಎಂದು ವಿಶಿಷ್ಟ ಗುರುತಿನ ಪ್ರಾಧಿಕಾರ ಹೇಳಿದೆ. ಆದರೆ ಈ ಪಾಲಿಸಿಯು ಬಿಲ್ ಬಿಡುಗಡೆಯಾದ ದಿನಾಂಕದಿಂದ 1 ವರ್ಷದವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಆಗಾಗ ನವೀಕರಿಸುವುದು ಮುಖ್ಯವಾಗಿರುತ್ತೆ. ಹೀಗಾಗಿ ಕಾಲ ಕಾಲಕ್ಕೆ ತಕ್ಕಂತೆ ಆಧಾರ್ ತಿದ್ದುಪಡಿಯ ಜೊತೆಗೆ ನವೀಕರಣ ಮಾಡುವುದು ಅತಿಮುಖ್ಯವಾಗಿರುತ್ತದೆ.

ಇದನ್ನೂ ಓದಿ: ಆಯುಷ್ಮಾನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದಿಯಾ ಅಂತ ಹೀಗೆ ಚೆಕ್ ಮಾಡಿ; 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ!

Sharing Is Caring:

Leave a Comment