ಆಧಾರ್ ಕಾರ್ಡ್ ಮೂಲಕ 10 ಲಕ್ಷ ರೂಪಾಯಿ ಸಾಲ ಪಡೆಯುವ ಯೋಜನೆ, ಸರ್ಕಾರವು 35% ಸಬ್ಸಿಡಿ ನೀಡುತ್ತದೆ.

ಈಗ ಆಧಾರ್ ಕಾರ್ಡ್ ಎಂಬುದು ಎಲ್ಲದಕ್ಕೂ ಬೇಕೆ ಬೇಕು. ಯಾವುದೇ ಸರಕಾರಿ ಯೋಜನೆ ಇರಲಿ ಅಥವಾ ಬ್ಯಾಂಕಿಂಗ್ ಸೇವೆ ಇರಲಿ ಆಧಾರ್ ಕಾರ್ಡ್ ಬಹಳ ಮುಖ್ಯ ಆಗುತ್ತದೆ. ದಿನನಿತ್ಯ ಒಂದಲ್ಲ ಒಂದು ಕೆಲಸಕ್ಕೆ ನಾವು ಆಧಾರ್ ಕಾರ್ಡ್ ಬಳಸುತ್ತೇವೆ. ಈಗ ಅದೇ ಆಧಾರ್ ಕಾರ್ಡ್ ಬಳಸಿ ನೀವು ಬರೋಬ್ಬರಿ 10 ಲಕ್ಷ ರೂಪಾಯಿ ಸಾಲವನ್ನು ಪಡೆಯಬಹುದು. ಅದು ಹೇಗೆ ಎಂಬುದನ್ನು ನೋಡೋಣ.

WhatsApp Group Join Now
Telegram Group Join Now

ಸರಕಾರದ ಹೊಸ ಯೋಜನೆ :- ಇದು ಸರ್ಕಾರದ ಹೊಸ ಯೋಜನೆ ಆಗಿದ್ದು. ಇದರಲ್ಲಿ ನೀವು ಆಧಾರ್ ಕಾರ್ಡ್ ಮೂಲಕ ಸಾಲವನ್ನು ಪಡೆಯಬಹುದು. ಯುವಕರಿಗಾಗಿ ಸರ್ಕಾರ ಈ ಯೋಜನೆ ಆರಂಭ ಮಾಡಿದೆ. ಉದ್ಯಮವನ್ನು ಪ್ರಾರಂಭಿಸಲು ಸಾಲ ನೀಡುತ್ತವೆ. PMEGP ಸಾಲ ಪಡೆಯಲು ನಿಮ್ಮ ಆಧಾರ್ ಕಾರ್ಡ್ ಅನ್ನು ಬಳಸಿ ಸಾಲವನ್ನು ಪಡೆಯಬಹುದು.

ಪಿಎಂಇಜಿಪಿ(PMEGP) ಯೋಜನೆಯ ಬಗ್ಗೆ ಮಾಹಿತಿ :-

ಈ ಯೋಜನೆಯನ್ನು ಸ್ವಂತ ಉದ್ಯಮ ಆರಂಭಿಸುವ ಯೋಜನೆ ಇದಾಗಿದೆ. ಉದ್ಯಮ ಆರಂಭಿಸುವ ಯುವಕರಿಗಾಗಿ ಸರ್ಕಾರವು ಕಡಿಮೆ ಮೊತ್ತದಲ್ಲಿ ಬಡ್ಡಿದರ ಸಾಲವನ್ನು ನೀಡುತ್ತಿದೆ. ಸಾಲ ಪಡೆದ ಗ್ರಾಮೀಣ ಪ್ರದೇಶದ ಯುವಕರಿಗೆ ಶೇಕಡಾ 35% ವರೆಗೆ ಹಾಗೂ ನಗರ ಪ್ರದೇಶಗಳಲ್ಲಿ ವಾಸಿಸುವ ಯುವಕರಿಗೆ 25% ವರೆಗೆ ಸಹಾಯಧನವನ್ನು ಮನ್ನಾ ಮಾಡಲಾಗುತ್ತದೆ. MEGP ಸಾಲಕ್ಕೆ ಅರ್ಜಿ ಸಲ್ಲಿಸುವ ಯುವಕರಿಗೆ ಈ ಯೋಜನೆಯ ಅಡಿಯಲ್ಲಿ ತರಬೇತಿ ನೀಡಲಾಗುತ್ತದೆ. ತದನಂತರ ಸಾಲವನ್ನು ನೀಡಲಾಗುತ್ತದೆ.

PMEGP ಸಾಲದ ಉದ್ದೇಶವೇನು?: ದೇಶದ ಎಲ್ಲ ವರ್ಗದ ಜನರಿಗೆ ಉದ್ಯೋಗ ಸಿಗಬೇಕು ಹಾಗೂ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸಬೇಕು ಎಂಬುದಾಗಿದೆ. ಇದೆ ಕಾರಣಕ್ಕೆ ಉದ್ಯೋಗ ಆರಂಭಿಸುವ ಯುವಕರಿಗಾಗಿ PMEGP ಸಾಲ ಸೌಲಭ್ಯ ನೀಡುವ ಯೋಜನೆಯನ್ನು ಆರಂಭ ಮಾಡಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: SBI ಬ್ಯಾಂಕ್ ಶಿಶು ಮುದ್ರಾ ಯೋಜನೆ ಅಡಿಯಲ್ಲಿ 50,000 ರೂಪಾಯಿ ಸಾಲ ನೀಡುತ್ತಿದೆ; ಈ ರೀತಿ ಅರ್ಜಿ ಸಲ್ಲಿಸಿ.

PMEGP ಸಾಲದ ಪ್ರಯೋಜನಗಳು ಏನೇನು?

ನಿಮಗೆ ಈ ಯೋಜನೆಯಿಂದ ಹಲವು ಪ್ರಯೋಜನಗಳು ಇವೆ. ಅವು ಯಾವುದೆಂದರೆ :-

  1. ಸಣ್ಣ ಹಾಗೂ ಅತಿಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ಸುಲಭವಾಗಿ ಸಾಲ ದೊರೆಯಲಿದೆ.
  2. ಈ ಯೋಜನೆಯಲ್ಲಿ ಬರೋಬ್ಬರಿ 10 ಲಕ್ಷ ರೂಪಾಯಿಗಳ ವರೆಗೆ ಸಾಲ ಪಡೆಯ ಬಹುದಾಗಿದೆ.
  3. ಯೋಜನೆಯ ನಿಯಮದ ಪ್ರಕಾರವಾಗಿ ಸಾಲದ ಮೇಲೆ ಸಬ್ಸಿಡಿ ಇರುತ್ತದೆ.
  4. ಇದರ ಜೊತೆಗೆ ಗ್ರಾಮೀಣ ಪ್ರದೇಶಕ್ಕೆ ಶೇಕಡಾ 35% ಹಾಗೂ ನಗರ ಪ್ರದೇಶಕ್ಕೆ ಶೇಕಡಾ 25% ಸಹಾಯಧನ ಪಡೆಯುವ ಅವಕಾಶ ಇರುತ್ತದೆ.

PMEGP ಸಾಲ ಪಡೆಯಲು ಅರ್ಹತಾ ಪಟ್ಟಿ ಏನಿರಬೇಕು?

  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ಆಗಿರಬೇಕು.
  • ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕನಿಷ್ಠ 10 ನೇ ತರಗತಿ ಅಥವಾ 12 ನೇ ತರಗತಿ ಪಾಸ್ ಆಗಿರಬೇಕು.
  • ಅಭ್ಯರ್ಥಿಯು ವ್ಯಾಪಾರ ಕ್ಷೇತ್ರದಲ್ಲಿ ಕೆಲವು ಅರ್ಹತೆಗಳನ್ನು ಹೊಂದಿರಬೇಕು.
  • ಅರ್ಜಿ ಸಲ್ಲಿಸಲು ಕೇವಲ ಭಾರತದ ಪ್ರಜೆಗಳಿಗೆ ಮಾತ್ರ ಅರ್ಹತೆ ಇರುತ್ತದೆ.

PMEGP ಸಾಲದ ಆನ್‌ಲೈನ್ ನೋಂದಣಿಯನ್ನು ಪ್ರಕ್ರಿಯೆ ಹೀಗಿದೆ:

ಅಭ್ಯರ್ಥಿಗಳು PMEGP ವೆಬ್ಸೈಟ್ ಗೆ ತೆರಳಿ ನೋಂದಣಿ ಫಾರ್ಮ್‌ನಲ್ಲಿ ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಬೇಕು ನಂತರ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಬೇಕು. ಅರ್ಜಿ ಫಾರ್ಮ್ ಪರಿಶೀಲನೆಯ ನಂತರ ನಿಮ್ಮ ಸಾಲದ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.

ಇದನ್ನೂ ಓದಿ: ಹಿರಿಯ ನಾಗರಿಕರಿಗೆ ಉತ್ತಮ ಯೋಜನೆಯನ್ನು ಪೋಸ್ಟ್ ಆಫೀಸ್ ನೀಡುತ್ತಿದೆ. ಇದರಿಂದ ತಿಂಗಳಿಗೆ 20,000 ರೂಪಾಯಿ ಪೆನ್ಷನ್ ಪಡೆಯಿರಿ

Sharing Is Caring:

Leave a Comment