ಇಂಗ್ಲಿಷ್ ಕಲಿಯಲು ಸುಲಭ ಟಿಪ್ಸ್ ಹೇಳಿದ ಎಸಿಪಿ ಚಂದನ್.

ಈಗ ಯಾವುದೇ ಸರ್ಕಾರಿ ಮತ್ತು ಖಾಸಗಿ ಇಲಾಖೆ ಹಾಸ್ಪಿಟಲ್ ಗಳಲ್ಲಿ ಹೆಚ್ಚಿನ ವ್ಯವಹಾರಗಳು ಇಂಗ್ಲಿಷ್ ನಲ್ಲಿ ಆಗುತ್ತದೆ. ವ್ಯಾವಹಾರಿಕ ಭಾಷೆ ಕನ್ನಡವೇ ಆದರೂ ಪಾತ್ರಗಳು ಮುಖ್ಯವಾದ ಡಾಕ್ಯುಮೆಂಟ್ಸ್ ಎಲ್ಲವೂ ಈಗ ಇರುವುದು ಇಂಗ್ಲಿಷ್ ನಲ್ಲಿ. ಕನ್ನಡ ಮಾಧ್ಯಮದಲ್ಲಿ ಶಾಲೆ ಕಲಿತವರಿಗೆ ಉನ್ನತ ಶಿಕ್ಷಣಕ್ಕೆ ಹೋದಾಗ ಮೊದಲು ಇಂಗ್ಲಿಷ್ ಭಾಷೆಯನ್ನು ಬಳಸುವುದು ಬಹಳ ಕಷ್ಟ ಆಗುತ್ತದೆ ಹಾಗೆಯೇ ಇಂಗ್ಲಿಷ್ ಭಾಷೆಯಲ್ಲಿ ಪಾಠವನ್ನು ಕಲಿಯುವುದು ಕಷ್ಟ ಆಗುತ್ತದೆ. ಹೀಗೆ ಕನ್ನಡ ಶಾಲೆಯಲ್ಲಿ ಕಲಿತು ಕಾಲೇಜ್ ನಲ್ಲಿ ಇಂಗ್ಲಿಷ್ ಬಾರದೆ ಒದ್ದಾಡಿದ ಎಸಿಪಿ ಚಂದನ್ ಅವರು ಇಂಗ್ಲಿಷ್ ಭಾಷೆ ಕಲಿತ ಸ್ಫೂರ್ತಿದಾಯಕ ಕಥೆ ತಿಳಿಯೋಣ.

WhatsApp Group Join Now
Telegram Group Join Now

ಭಾಷೆ ಗೊತ್ತಿಲ್ಲದೆ ಕೀಳರಿಮೆ ಅನುಭವದ ಬಗ್ಗೆ ಮಾತನಾಡಿದ ಎಸಿಪಿ ಚಂದನ್ :- ಯಾವುದೇ ಒಂದು ಭಾಷೆ ಹೆಚ್ಚಾಗಿ ಬಳಕೆ ಆಗುವ ಸ್ಥಳದಲ್ಲಿ ನಮಗೆ ಆ ಭಾಷೆ ಅರಿವು ಇಲ್ಲದೆ ಇದ್ದರೆ ಮುಜುಗರ ಹಾಗು ಕೀಳರಿಮೆ ಉಂಟಾಗುವುದು ಸಹಜ. ಅದರಂತೆಯೇ ಕನ್ನಡ ಭಾಷೆಯಲ್ಲಿ ಕಲಿತು ಕಾಲೇಜ್ ಗೆ ಹೋದಾಗ ಎಲ್ಲಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ಓದಿ ಬಂದುವರು ಆಗಿದ್ದರು. ಅವರ ಮಧ್ಯೆ ಇಂಗ್ಲಿಷ್ ಮಾತನಾಡಲು ಬಾರದೆ ಬಹಳ ಮುಜುಗರ ಅನುಭವ ಆಗಿತ್ತು. ಈ ಬಗ್ಗೆ ಸ್ವತಃ ಚಂದನ್ ಅವರು ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಹೇಳಿಕೊಂಡಿದ್ದಾರೆ.

ಇಂಜಿನಿಯರ್ ಕಾಲೇಜಿನ ಘಟನೆ ಹೇಳಿದ ಎಸಿಪಿ ಚಂದನ್(ACP Chandan) :- ಚಂದನ್ ಅವರು ಮೂರು ವರ್ಷ ಡಿಪ್ಲೋಮಾ ಕೋರ್ಸ್ ಮುಗಿಸಿ ನಂತರ 3ನೇ ಸೆಮಿಸ್ಟರ್‌ಗೆ ಇಂಜಿನಿಯರಿಂಗ್ ಸೇರಿಕೊಂಡಾಗ ಅಲ್ಲಿ ಎಲ್ಲರೂ ಇಂಗ್ಲಿಷ್‌ ಭಾಷೆಯಲ್ಲಿ ಮಾತನಾಡಿದರೆ ಮಾತ್ರ ಮಾತನಾಡಿಸುತ್ತಿದ್ದರಂತೆ. ಕ್ಲಾಸ್ ನಲ್ಲಿ ಇಂಗ್ಲಿಷ್ ಬರಲ್ಲ ಎಂಬ ಕಾರಣಕ್ಕೆ ಲೆಕ್ಚರ್‌ ಮುಂದೆ ಕುಳಿತುಕೊಳ್ಳಲು ಹೇಳುತ್ತಿದ್ದರು. ಏನಾದರೂ ಒಂದು ಶಬ್ದ ಕನ್ನಡದ ಪದ ಬಳಸಿದರು ಅಲ್ಲಿ ಎಲ್ಲರೂ ನಗುತಿದ್ದರು ಎಂದು ಹೇಳಿಕೊಂಡಿದ್ದಾರೆ. 

ಎಸಿಪಿ ಚಂದನ್ ಅವರು ಇಂಗ್ಲಿಷ್ ಭಾಷೆಯನ್ನು ಕಲಿತಿದ್ದು ಹೇಗೆ?

ಇಂಗ್ಲಿಷ್ ಭಾಷೆಯನ್ನು ಕಲಿಯಲೇಬೇಕು ಎಂಬ ಹಠ ತೊಟ್ಟ ಚಂದನ್ ಅವರಿಗೆ ಕೆಲವು ಸ್ನೇಹಿತರು ಇಂಗ್ಲಿಷ್ ಪುಸ್ತಕ ಹಾಗೂ ಲೇಖನಗಳನ್ನು ಓದಲು ಸಲಹೆ ನೀಡಿದರು. ಸ್ನೇಹಿತರ ಸಲಹೆಯಂತೆ ಇಂಗ್ಲಿಷ್ ಪುಸ್ತಕ ಓದಿದಾಗ ಇವರಿಗೆ ಅನೇಕ ಶಬ್ದಗಳ ಅರ್ಥಗಳು ತಿಳಿಯುತ್ತಿರಲಿಲ್ಲ. ಅದು ಅವರಿಗೆ ಬಹಳ ಕಿರಿ ಕಿರಿ ಉಂಟು ಮಾಡಿತ್ತು ಹಾಗೂ ಓದಿರುವುದು ಅವರಿಗೆ ಅರ್ಥ ಆಗುತ್ತಿರಲಿಲ್ಲ. ಆಗ ಅವರಿಗೆ ಅವರ ಸೀನಿಯರ್ ಒಬ್ಬರು ಇಂಗ್ಲಿಷ್ ಭಾಷೆಯನ್ನು ಕಲಿಯಬೇಕಾದರೆ ಸಬ್ ಟೈಟಲ್ ಇರುವ ಇಂಗ್ಲಿಷ್ ಸಿನಿಮಾ ನೋಡಬೇಕು ಅವಗ ಸುಲಭವಾಗಿ ಇಂಗ್ಲಿಷ್ ಕಲಿಯಬಹುದು ಎಂದು ಹೇಳಿದರು. ಹಾಗೆಯೇ ಅವರು ಹಾರ್ಡ್ ಡಿಸ್ಕ್ ತೆಗೆದುಕೊಂಡರು ಬರಲು ಹೇಳಿ ಅದರಲ್ಲಿ 100 ಸಬ್ ಟೈಟಲ್ ಇರುವ ಇಂಗ್ಲಿಷ್ ಸಿನಿಮಾಗಳನ್ನು ಶೇರ್ ಮಾಡಿ ಕೊಟ್ಟರು. ಎಲ್ಲ ಫಿಲ್ಮ್ ನೋಡುವಾಗ ಕೆಳಗಿನ ಸಬ್ ಟೈಟಲ್ ಓದಿ ಇಂಗ್ಲಿಷ್ ಮಾತನಾಡುವುದು ಹೇಗೆ ಎಂಬುದನ್ನು ನಿಧಾನವಾಗಿ ಕಲಿತರು. ಮೊದ ಮೊದಲು ಒಂದು ಸಿನಿಮಾದಲ್ಲಿ 10 -20 ಪದ ಅರ್ಥ ಆಗುತ್ತಿತ್ತು. ಆಮೇಲೆ ಸಿನಿಮಾ ಪೂರ್ತಿ ಅರ್ಥ ಆಗುತ್ತಿತ್ತು. ಆದರೆ ಈಗಲೂ ನನಗೆ ಗ್ರಾಮರ್ ಬಳಸಿ ಪೂರ್ಣ ವಾಕ್ಯ ಮಾಡುವುದು ಕಷ್ಟ ಆಗುತ್ತದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಚಂದನ್ :- ACP ಚಂದನ್(ACP Chandan) ಅವರು ತಾವು ಇಂಗ್ಲಿಷ್ ಕಲಿತ ಬಗ್ಗೆ ಹೇಳುತ್ತಾ ಯಾವತ್ತೂ ಇಂಗ್ಲಿಷ್ ಭಾಷೆ ಬರುವುದಿಲ್ಲ ಎಂದು ಬೇಸರ ಪಟ್ಟುಕೊಳ್ಳಬೇಡಿ. ನೀವು ಇಂಗ್ಲಿಷ್‌ನಲ್ಲಿ ಎಕ್ಸಾಮ್ ಬರೆದರೆ ನೀವು ಬರೆದ ಇಂಗ್ಲಿಷ್ ಚೆನ್ನಾಗಿಲ್ಲ ಎಂದರು ನಿಮಗೆ ಮಾರ್ಕ್ ಬರುತ್ತದೆ. ಯಾಕೆ ಎಂದರೆ ಅಲ್ಲಿ ನಿಮ್ಮ ಇಂಗ್ಲಿಷ್ ನೋಡಿ ಮಾರ್ಕ್ ನೀಡುವುದಿಲ್ಲ. ನೀವು ಬರೆದಿರುವ ವಾಕ್ಯದ ಅರ್ಥ ಹೀಗಿದೆ ಎಂಬುದರ ಮೇಲೆ ನಿಮಗೆ ಅಂಕಗಳನ್ನು ನೀಡುತ್ತಾರೆ ಎಂದು ಹೇಳಿದರು.

ವಿದೇಶಿಗರು ನಮ್ಮ ನೋಡಿ ನಗುವುದಿಲ್ಲ :- ಯಾವೊಬ್ಬ ವಿದೇಶಿ ಪ್ರಜೆಯೂ ಸಹ ನಮಗೆ ಇಂಗ್ಲಿಷ್ ಬರುವುದಿಲ್ಲ ಎಂದು ನಗುವುದಿಲ್ಲ. ಆದರೆ ಸ್ವಲ್ಪ ಇಂಗ್ಲಿಷ್ ಬರುವ ಭಾರತೀಯರೇ ನಮ್ಮನ್ನು ನೋಡಿ ನಗುತ್ತಾರೆ ಎಂದು ಬೇಸರದಿಂದ ಹೇಳಿದರು.

ಸ್ಯಾಂಡಲ್‌ವುಡ್ ನಟ ದರ್ಶನ್ ಅವರನ್ನು ಕೊಲೆ ಪ್ರಕರಣದಲ್ಲಿ ಬಂಧಿಸಿದ ಎಸಿಪಿ ಚಂದನ್ :- ರಾಜ್ಯದಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿರುವ ಸುದ್ದಿ ಎಂದರೆ ದರ್ಶನ್ ಅವರು ರೇಣುಕಸ್ವಾಮಿ ಎನ್ನುವಾರರನ್ನು ಕೊಲೆ ಮಾಡಿದ್ದಾರೆ ಎಂಬುದು. ಹಲವು ಒತ್ತಡಗಳು ಇರುವಾಗ ರಾಜಕೀಯ ಮತ್ತು ಗಣ್ಯರುಗಳ ಬೆದರಿಕೆಗಳು ಆಮಿಷಗಳು ಇರುವ ಸಂದರ್ಭದಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ನಟ ದರ್ಶನ್ ಅವರನ್ನು ಸೆರೆ ಹಿಡಿದು ತಮ್ಮ ವೃತ್ತಿ ಧರ್ಮವನ್ನು ಪಾಲಿಸಿದ್ದಾರೆ.

ಇದನ್ನೂ ಓದಿ: ಮದುವೆಗೆ 60 ಲಕ್ಷ ಖರ್ಚು ಮಾಡಿ ದೊಡ್ಡ ತಪ್ಪು ಮಾಡಿಬಿಟ್ಟೆ; ಜೀವನ ಪಾಠ ಕಲಿಸಿತು ಎಂದ ಚಂದನ್ ಶೆಟ್ಟಿ!

ಈಗ ಮಕ್ಕಳನ್ನು ಇಂಗ್ಲಿಷ್ ಮೀಡಿಯಂ ನಲ್ಲಿ ಕಲಿಸುವುದು ಹೆಚ್ಚಾಗಿದೆ :-

ಎಲ್ಲ ಕಡೆ ಇಂಗ್ಲಿಷ್ ಭಾಷೆಯ ಬಳಕೆ ಹೆಚ್ಚಾಗಿರುವ ಕಾರಣದಿಂದ ಇಂಗ್ಲಿಷ್ ಭಾಷೆಯನ್ನು ಕಲಿಯುವವರ ಸಂಖ್ಯೆ ಹೆಚ್ಚಾಗಿದೆ. ನಮಗೆ ಇಂಗ್ಲಿಷ್ ಭಾಷೆಯಲ್ಲಿ ಕಲಿತು ದೊಡ್ಡ ಹುದ್ದೆಗೆ ಅಥವಾ ಇಂಗ್ಲಿಷ್ ಭಾಷೆ ಬಾರದೆ ಅನುಭವಿಸದ ಕಷ್ಟಗಳು ಅವಮಾನಗಳು ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ಆಗದೆ ಇರಲಿ ಎಂಬ ಆಸೆಯಲ್ಲಿ ಈಗ ಲಕ್ಷ ಲಕ್ಷ ಕೊಟ್ಟು Lkg ಇಂದಲೇ ಇಂಗ್ಲಿಷ್ ಮೀಡಿಯಂ ಗೆ ಮಕ್ಕಳನ್ನು ಸೇರಿಸುತ್ತಾರೆ. ಕಡು ಬಡವರು ಸಹಿತ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿ ಎಂಬ ದೃಷ್ಟಿಯಿಂದ ಸಾಲ ಮಾಡಿ ಆದರೂ ಈಗ ಇಂಗ್ಲಿಷ್ ಮಿಡಿಯಂ ಶಾಲೆಗೆ ಮಕ್ಕಳನ್ನು ಸೇರಿಸುವುದು ಸಾಮಾನ್ಯವಾಗಿದೆ.

ಇಂಗ್ಲಿಷ್ ಪೂರ್ಣ ಬರುವುದಿಲ್ಲ ಎಂದು ಮಾತನಾಡಿ ಇರುವ ಜನರು:- ನಮ್ಮಲ್ಲಿ ಹಲವರಿಗೆ ಇಂಗ್ಲಿಷ್ ಭಾಷೆ ಬರುತ್ತದೆ. ಅಂದರೆ ಪೂರ್ಣವಾಗಿ ಅಲ್ಲದೆ ಇದ್ದರೂ ತಮಗೆ ತಿಳಿದಂತೆ ಅರ್ಥ ಬದ್ಧವಾಗಿ ಒಂದು ವಾಕ್ಯವನ್ನು ಹೇಳಲು ಬರುತ್ತದೆ. ಆದರೆ ಎಲ್ಲಿ ನಾವು ಆಡುವ ಮಾತು ತಪ್ಪಾಗುತ್ತದೆಯೋ. ಎಲ್ಲರೂ ನಮ್ಮನ್ನು ನೋಡಿ ಗೇಲಿ ಮಾಡಿ ನಕ್ಕುಬಿಡುತತ್ತಾರೆ ಎಂಬ ಹಿಂಜರಿಕೆ ಅಲ್ಲಿಯೇ ಇಂಗ್ಲಿಷ್ ಭಾಷೆಯನ್ನು ಎಲ್ಲರ ಎದುರಿಗೆ ಮಾತನಾಡುವುದಿಲ್ಲ. ಎಲ್ಲರೂ ಮಾತನಾಡುವ ತಪ್ಪಿಸಿಕೊಳ್ಳುವುದು ಅಥವಾ ಏನು ಮಾತನಾಡದೆ ಇರುವುದು ಮಾಡುತ್ತಾರೆ. ಆದರೆ ತಪ್ಪು ಆಗಲಿ ಸರಿ ಆಗಲಿ ನಾವು ಹೆಚ್ಚು ಮಾತನಾಡಿದರೆ ಮಾತ್ರವೇ ನಮಗೆ ಇಂದು ಭಾಷೆಯನ್ನು ಕಲಿಯಲಿ ಸಹಾಯವಾಗುತ್ತದೆ. ನಾವು ಮಾತನಾಡುವುದನ್ನು ನೋಡು ಈಗ ಜನರು ಗೇಲಿ ಮಾಡಬಹುದು ಆದರೆ ನಕ್ಕರೆ ನಗಲಿ ಎಂದು ನಾವು ಪ್ರಯತ್ನ ಮಾಡಿದರೆ ನಮಗೆ ಯಾವ ಭಾಷೆಯೂ ಸುಲಭವಾಗಿ ಮಾತನಾಡಲು ಸಾಧ್ಯವಾಗುತ್ತದೆ. ಅದಕ್ಕೇ ನೀವು ನಿಮಗೆ ಹೇಗೆ ಬರುತ್ತದೋ ಹಾಗೆ ಮಾತನಾಡಲು ಆರಂಭಿಸಿ ಹಾಗೂ ಹೆಚ್ಚು ಹೆಚ್ಚು ಪದಗಳ ಜ್ಞಾನ ಬೆಳೆಸಿಕೊಳ್ಳಿ.

ಇದನ್ನೂ ಓದಿ: ಯಾವ ಬಣ್ಣದ ನಂದಿನಿ ಪ್ಯಾಕೇಟ್‌ ಹಾಲು ಬಳಕೆಗೆ ಉತ್ತಮ ಎಂಬುದನ್ನು ತಿಳಿಯಿರಿ.

Sharing Is Caring:

Leave a Comment