ವಿದ್ಯಾರ್ಥಿ ಜೀವನದಲ್ಲಿ ಲ್ಯಾಪ್ಟಾಪ್ ಬಹಳ ಮುಖ್ಯ. ಸ್ಥಿತಿವಂತರಿಗೆ ಲ್ಯಾಪ್ಟಾಪ್ ಕೊಂಡಿಕೊಳ್ಳುವುದು ಬಹಳ ಸುಲಭ ಆದ್ರೆ ಬಡವರು ಮಕ್ಕಳನ್ನು ಕಾಲೇಜ್ ಗೆ ಕಳುಹಿಸುವುದು ಬಹಳ ಕಷ್ಟ ಆಗಿರುತ್ತದೆ. ಹಾಗಿದ್ದಾಗ ಸಾವಿರಾರು ರೂಪಾಯಿಗಳ ಲ್ಯಾಪ್ಟಾಪ್ ಕೊಡಿಸುವುದು ಸಾಧ್ಯವಿಲ್ಲ. ಅದಕ್ಕೇ ಈಗ ಬಡವರಿಗೆ ಉಚಿತ ಲ್ಯಾಪ್ಟಾಪ್ ಸಿಗುತ್ತಿದೆ. ಉಚಿತ ಲ್ಯಾಪ್ಟಾಪ್ ಪಡೆಯುವುದು ಹೇಗೆ ಎಂಬುದನ್ನು ತಿಳಿಯಿರಿ.
ಏನಿದು ಉಚಿತ ಲ್ಯಾಪ್ಟಾಪ್ ಯೋಜನೆ :- ರಾಜ್ಯದಲ್ಲಿ ಬಡವರ ಏಳಿಗೆಗೆ ಸರ್ಕಾರ ಮತ್ತು ಹಲವು ಸಂಘ ಸಂಸ್ಥೆಗಳು ಸಹಾಯಧನ ನೀಡುತ್ತವೆ. ಅದರಲ್ಲಿಯೂ ಬಡ ವಿದ್ಯಾರ್ಥಿಗಳ ಕಲಿಕೆಗೆ ಸಹಾಯ ಆಗಲಿ ಎಂದು ಈಗಾಗಲೇ ಹಲವಾರು ಸ್ಕೀಮ್ ಗಳು ಇವೆ. ಈಗ AICTE ಅನುಮೋದಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಾಗೂ ಇಂಜಿನಿಯರಿಂಗ್ ಪದವೀಧರ ವಿದ್ಯಾರ್ಥಿಗಳಿಗೆ ಎಂದೇ ಉಚಿತ ಲ್ಯಾಪ್ಟಾಪ್ ಯೋಜನೆಯನ್ನು ಆಲ್ ಇಂಡಿಯಾ ಟೆಕ್ನಿಕಲ್ ಇಂಡಿಯನ್ ಕೌನ್ಸಿಲ್ ಜಾರಿಗೆ ತರುತ್ತಿದೆ.
ಉಚಿತ ಲ್ಯಾಪ್ಟಾಪ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?: ಅರ್ಜಿ ಸಲ್ಲಿಸಲು ಇಲಾಖೆಯ ಅಧಿಕೃತ ಜಾಲತಾಣ www.aicte-india.org ಗೆ ತೆರಳಿ ಅರ್ಜಿ ನಮೂನೆಯಲ್ಲಿ ಕೇಳಿರುವ ಎಲ್ಲಾ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಉಚಿತ ಲ್ಯಾಪ್ಟಾಪ್ ಯಾರಿಗೆ ಸಿಗಲಿದೆ?
ಉಚಿತ ಲ್ಯಾಪ್ಟಾಪ್ ಪಡೆಯಲು ಕೆಲವು ಮಾನದಂಡಗಳು ಇವೆ. ಅವು ಏನೆಂದರೆ
- ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಕಡ್ಡಾಯವಾಗಿ ಭಾರತೀಯ ಪ್ರಜೆ ಆಗಿರಬೇಕು.
- ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಡಿಯಲ್ಲಿ ಬರುವ ಕಾಲೇಜು / ಸಂಸ್ಥೆಯಲ್ಲಿ ಕಲಿತಿರಬೇಕು.
- ಈ ಯೋಜನೆಯಲ್ಲಿ ಎಂಜಿನಿಯರಿಂಗ್ ಅಥವಾ ಕಂಪ್ಯೂಟರ್ ಕೋರ್ಸ್ ಹಾಗೂ ಬಿ.ಟೆಕ್ ಕೋರ್ಸ್ ಗಳಲ್ಲಿ ಅಭ್ಯಾಸ ಮಾಡುತ್ತಾ ಇರುವ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಮೊದಲ ಆದ್ಯತೆ ನೀಡಲಾಗಿದೆ.
- ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವು 1,20,000 ಯೂಪಾಯಿಗಳಿಗಿಂತ ಕಡಿಮೆ ಇರಬೇಕು.
- ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಪೋಷಕರು ಯಾವುದೇ ಸರ್ಕಾರಿ ಕೆಲಸದಲ್ಲಿ ಇರಬಾರದು.
ಅರ್ಜಿ ಸಲ್ಲಿಸುವಾಗ ನೀಡಲೇಬೇಕಾಗಿರುವ ದಾಖಲೆಗಳು ಏನೇನು?
ಯಾವುದೇ ಯೋಜನೆಗೆ ಅರ್ಜಿ ಸಲ್ಲಿಸಬೇಕು ಎಂದಾದರೆ ಕೆಲವು ಅಗತ್ಯ ಮಾಹಿತಿಗಳನ್ನು ನೀಡುವುದು ಬಹಳ ಮುಖ್ಯ. ನೀವು ನೀಡಿದ ದಾಖಲೆಗಳ ಆಧಾರದ ಮೇಲೆ ನಿಮಗೆ ಯೋಜನೆಯ ಪ್ರಯೋಜನಗಳು ಸಿಗುತ್ತವೆ. ಹಾಗಾದರೆ ನೀವು ನೀಡಬೇಕಾದ ದಾಖಲೆಗಳು ಏನೇನು ಎಂಬುದನ್ನು ನೋಡೋಣ.
- ಆಧಾರ್ ಕಾರ್ಡ್ :- ಈಗ ಸಾಮಾನ್ಯವಾಗಿ ಯಾವುದೇ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದರು ನೀವು ಆಧಾರ್ ಕಾರ್ಡ್ ಮಾಹಿತಿಯನ್ನು ನೀಡಲೇಬೇಕು.
- ವಿಳಾಸದ ಪುರಾವೆ:- ನಿಮ್ಮ ವಿಳಾಸದ ಪುರಾವೆ ಹೊಂದಿರುವ ಸರ್ಕಾರ ನೀಡುವ ID ಪ್ರೂಫ್ ನೀಡಬೇಕು.
- ವಯಸ್ಸಿನ ಪುರಾವೆ :- ನಿಮ್ಮ ವಯಸ್ಸಿನ ಬಗ್ಗೆ ದಾಖಲೆ ನೀಡಬೇಕು.
- ಮೊಬೈಲ್ ಸಂಖ್ಯೆ ಮತ್ತು ಮೇಲ್ :- ನಿಮ್ಮ ಮೊಬೈಲ್ ನಂಬರ್ ಜೊತೆಗೆ ಮೇಲ್ ಅಡ್ರೆಸ್ ಸಹ ನೀಡಬೇಕು.
- ಫೋಟೋ :- ಪಾಸ್ಪೋರ್ಟ್ ಸೈಜ್ ಫೋಟೋ ದಾಖಲೆಗೆ ನೀಡಬೇಕು.
ಉಚಿತ ಲ್ಯಾಪ್ಟಾಪ್ ಯೋಜನೆಯಿಂದ ಹಲವಾರು ಬಡ ವರ್ಗದ ಜನರ ಉನ್ನತ ಶಿಕ್ಷಣದ ಕಲಿಕೆಗೆ ಸಹಾಯ ಆಗಲಿದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು.
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್; ಕೇಂದ್ರ ಸರ್ಕಾರದಿಂದ 3 ಲಕ್ಷದವರೆಗೆ ಸಿಗಲಿದೆ ಸಾಲ ಸೌಲಭ್ಯ.
ಇದನ್ನೂ ಓದಿ: ITI, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್; ಈಗ ವಿದೇಶದಲ್ಲೂ ಸಿಗಲಿದೆ ನಿಮಗೆ ಕೆಲಸ!