ಅನ್ನಭಾಗ್ಯ ಯೋಜನೆಯ ಎರಡು ತಿಂಗಳ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ.

ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯು ಬಡವರ ಪಾಲಿನ ಆಶದೀಪ ಎಂದೇ ಹೇಳಲಾಗುತ್ತಿತ್ತು. ಕೇಂದ್ರ ನೀಡುವ 5 ಕೆಜಿ ಉಚಿತ ಅಕ್ಕಿಯ ಜೊತೆಗೆ ಇನ್ನೂ 5 ಕೆಜಿ ಅಕ್ಕಿಯನ್ನು ರಾಜ್ಯ ಸರ್ಕಾರ ನೀಡುತ್ತದೆ ಎಂದು ರಾಜ್ಯಸಭಾ ಚುನಾವಣೆಗೂ ಮೊದಲು ಹೇಳಲಾಗಿತ್ತು. ಆದರೆ ಅಕ್ಕಿಯ ಕೊರತೆ ಉಂಟಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಅಕ್ಕಿಯ ಬದಲು 5 ಕೆಜಿ ಅಕ್ಕಿಯ ಹಣವನ್ನು ನೀಡುತ್ತೇವೆ ಎಂದು ವಿಶ್ವಾಸನೆ ನೀಡಿತ್ತು. ಅದರಂತೆಯೇ ಕಳೆದ ಏಪ್ರಿಲ್ ತಿಂಗಳ ವರೆಗೆ ರಾಜ್ಯದ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಉಚಿತ ಅಕ್ಕಿಯ ಹಣವನ್ನು ಜಮಾ ಮಾಡಿತ್ತು. ಆದರೆ ಮೇ ಮತ್ತು ಜೂನ್ ತಿಂಗಳ ಅನ್ನಭಾಗ್ಯದ ಹಣ ಇನ್ನು ಸಹ ಫಲಾನುಭವಿಗಳ ಖಾತೆಗೆ ಜಮಾ ಆಗಲಿಲ್ಲ. ಸರ್ಕಾರದ ಈ ನಡೆಯಿಂದ ಅನ್ನಭಾಗ್ಯ ಯೋಜನೆ ಮುಕ್ತಾಯ ಆಗಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. 15 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳನ್ನು ಹೊಂದಿರುವ ವಿಜಯಪುರ ಜಿಲ್ಲೆಯ ಜನರಿಗೆ ಅಕ್ಕಿಯ ಹಣ ಬಾರದೆ ಇರುವುದು ಸಂಕಷ್ಟ ಎದುರಾಗಿದೆ.

WhatsApp Group Join Now
Telegram Group Join Now

ಒಂದು ಕುಟುಂಬಕ್ಕೆ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಸಿಗುತ್ತಿದ್ದ ಹಣ ಎಷ್ಟು?: ಅನ್ನಭಾಗ್ಯ ಯೋಜನೆ ಜಾರಿಗೆ ಬಂದ ದಿನದಿಂದ ರಾಜ್ಯದ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಕ್ಕೆ ಪ್ರತಿ ತಿಂಗಳು ಒಂದು ಕೆ ಜಿ ಅಕ್ಕಿಗೆ 34 ರೂಪಾಯಿಯಂತೆ 5 ಕೆ ಜಿ ಅಕ್ಕಿಗೆ 170 ರೂಪಾಯಿ ಹಣವನ್ನು ರಾಜ್ಯ ಸರ್ಕಾರ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತಿತ್ತು.

ಬಡವರಿಗೆ ಸಂಕಷ್ಟ ತಂದಿದೆ :- ಇಷ್ಟು ತಿಂಗಳು ಸಮನಾಗಿ ಹಣ ಜಮಾ ಆಗಿತ್ತು ಆದರೆ ಮೇ ತಿಂಗಳಿಂದ ಅನ್ನಭಾಗ್ಯ ಯೋಜನೆಯ ಹಣವು ಬರುತಿತ್ತು. ಇದರಿಂದ ಬಡವರಿಗೆ ಅನುಕೂಲ ಆಗಿತ್ತು .ಈಗ ಬೆಲೆ ಏರಿರುವ ಕಾರಣದಿಂದ ಅನ್ನಭಾಗ್ಯ ಯೋಜನೆಯ ಹಣ ಬಾರದೆ ಇರುವುದು ಜನರಿಗೆ ಕಷ್ಟ ಆಗಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಹೆಚ್ಚಿನ ಆರ್ಥಿಕ ಹೊರೆ ಆಗಲಿದೆ. ಈಗ ಮತ್ತೆ ಪೆಟ್ರೋಲ್ ದರ ಏರಿಕೆ ಆಗಿರುವ ಕಾರಣ ಅಕ್ಕಿ ದರವು ಸಹ ಮುಂದಿನ ದಿನಗಳಲ್ಲಿ ಹೆಚ್ಚಾಗಲಿದ್ದು ಜನಸಾಮಾನ್ಯರು ಜೀವನ ಮಾಡುವುದು ಕಷ್ಟ ಆಗುತ್ತಿದೆ. 

ಅನ್ನಭಾಗ್ಯ ಯೋಜನೆಯ ವೈಫಲ್ಯ :-

ಅನ್ನಭಾಗ್ಯ ಯೋಜನೆಗೆ 10 ಕೆಜಿ ಅಕ್ಕಿಯನ್ನು ನೀಡುತ್ತೇವೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರಕ್ಕೆ ಅಕ್ಕಿಯನ್ನು ನೀಡಲು ಸಾಧ್ಯವಾಗದೆ ಇದ್ದದು ಈ ಯೋಜನೆಯ ವೈಫಲ್ಯಕ್ಕೆ ಕಾರಣ ಆಗಿತ್ತು. ಆದರೆ ಇದಕ್ಕೆ ಪರ್ಯಾಯವಾಗಿ ಹಣ ನೀಡುತ್ತೇವೆ ಎಂದು ಭರವಸೆ ನೀಡಿದ ಸರ್ಕಾರದ ಕ್ರಮಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿತ್ತು. ಆದರೆ ಈಗ ಎರಡು ತಿಂಗಳ ಹಣ ಬಾರದೆ ಇರುವ ಹಿನ್ನೆಲೆಯಲ್ಲಿ ಈ ಯೋಜನೆ ವೈಫಲ್ಯ ಕಂಡಿದೆ ಎಂಬ ಅನುಮಾನಗಳು ಬಲವಾಗಿ ಕಾಡುತ್ತಿದೆ.

ವಿಜಯಪುರ ಜಿಲ್ಲೆಯ ಜನರ ಆತಂಕ :- ವಿಜಯಪುರ ಜಿಲ್ಲೆ ಒಂದರಲಿಯೇ 15,75,126 ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳು ಇವೆ. ಇದೊಂದು ಜಿಲ್ಲೆಗೆ ರಾಜ್ಯ ಸರ್ಕಾರವು 26.04 ಕೋಟಿ ರೂಪಾಯಿಗಳನ್ನು ನೀಡಬೇಕಾಗಿತ್ತು. ಆದರೆ ಈಗ ಹಣವನ್ನು ಜಮಾ ಮಾಡದೆ ಇರುವ ಕಾರಣದಿಂದ ವಿಜಯಪುರ ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇದು ದಿನಗೂಲಿ ನೌಕರರು ಹಾಗೂ ಬಡತನ ರೇಖೆಗಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಕ್ಕೆ ಕಷ್ಟಕ್ಕೆ ನೂಕಿದಂತೆ ಆಗಿದೆ. ಅನ್ನಭಾಗ್ಯ ಯೋಜನೆಯ ಹಣವನ್ನು ನಂಬಿ ಬದುಕುತ್ತಿರುವ ಕುಟುಂಬಕ್ಕೆ ಇದು ಆಘಾತಕಾರಿ ವಿಷಯ ಆಗಿದೆ. ರಾಜ್ಯ ಸರ್ಕಾರವು ಈಗಲೇ ಹಣ ಬಿಡುಗಡೆ ಮಾಡಬೇಕು ಎಂಬ ಆಶಯ ವ್ಯಕ್ತವಾಗಿದೆ.

ಇದನ್ನೂ ಓದಿ: ಕಾರ್ ಲೋನ್ ತೆಗೆದುಕೊಳ್ಳುವ ಮೊದಲು ಈ ವಿಚಾರಗಳನ್ನು ನೆನಪಿಡಿ 

ಚುನಾವಣೆಯ ಫಲಿತಾಂಶ ಕಾರಣ ಆಗಿದೆಯೇ ಎಂಬ ಸಂಶಯ:-

ಲೋಕಸಭಾ ಚುನಾವಣೆಯಲ್ಲಿ ಗ್ಯಾರೆಂಟಿ ಯೋಜನೆಗಳನ್ನು ನೀಡಿರುವ ಕಾರಣದಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನ ಬರಲಿದೆ ಎಂಬ ವಿಶ್ವಾಸ ಕಾಂಗ್ರೆಸ್ ಸರ್ಕಾರಕ್ಕೆ ಇತ್ತು. ಆದರೆ ಲೋಕಸಭಾ ಚುನಾವಣೆಯಲ್ಲಿ ಕೇವಲ 9 ಸ್ಥಾನಗಳನ್ನು ಗಳಿಸಿತು. ಇದು ಕಾಂಗ್ರೆಸ್ ಗೆ ಬಹಳ ಮುಜುಗರ ಉಂಟುಮಾಡಿತ್ತು. ಅದರಿಂದ ಗ್ಯಾರೆಂಟಿ ಯೋಜನೆಗಳನ್ನು ನಿಲ್ಲಿಸಲಿದ್ದಾರೆ ಎಂಬ ಮಾತುಗಳನ್ನು ಕೇಳಿ ಬಂದಿತ್ತು. ಆದರೆ ಚುನಾವಣೆಗೂ ಮೊದಲು ಈ ರೀತಿಯ ಮಾತುಗಳು ಬಂದಾಗ ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ನಿಲ್ಲಿಸುವ ಪ್ರಶ್ನೆ ಇಲ್ಲ. ಚುನಾವಣೆಯ ಫಲಿತಾಂಶಕ್ಕೂ ನಮ್ಮ ಗ್ಯಾರೆಂಟಿ ಯೋಜನೆಗಳಿಗೆ ಯಾವುದೇ ರೀತಿಯ ಸಂಬಂಧ ಇಲ್ಲ ಎಂಬುದಾಗಿ ಸರ್ಕಾರವು ಸ್ಪಷ್ಟವಾಗಿ ಹೇಳಿತ್ತು. ಆದರೆ ಈಗ ಸಿದ್ದರಾಮಯ್ಯ ಅವರ ಅನ್ನಭಾಗ್ಯ ಯೋಜನೆಯ ಹಣವು ಸಕಾಲಕ್ಕೆ ಬಾರದೆ ಇರುವುದು ಈಗ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಚುನಾವಣೆಯ ಫಲಿತಾಂಶವು ಅನ್ನಭಾಗ್ಯ ಯೋಜನೆಗೆ ತೊಡಕಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ.

ಅನ್ನಭಾಗ್ಯದ ಹಣಕ್ಕೆ ಕಾಯುತ್ತಿರುವ ವಿಜಯಪುರ ಜಿಲ್ಲೆಯ ಜನರು :- ಜೂನ್ 20 ಕಳೆದರೂ ಜಿಲ್ಲೆಯ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯ 5 ಕೆ ಜಿ ಅಕ್ಕಿಯ ಹಣವು ಅಕೌಂಟ್ ಗೆ ಜಮಾ ಆಗಲಿಲ್ಲ. ದಿನವೂ ಜಿಲ್ಲೆಯ ಬಡ ವರ್ಗದ ಜನರು ಯಾವಾಗ ಯೋಜನೆ ಹಣವು ನಮ್ಮ ಬ್ಯಾಂಕ್ ಖಾತೆಗೆ ಬರುತ್ತದೆ ಎಂಬುದನ್ನು ಕಾಯುತ್ತಾ ಇದ್ದರೆ. ಈ ತಿಂಗಳ ಕೊನೆಯ ಒಳಗೆ ಆದರೂ ಹಣ ಬರಲಿದೆ ಎಂಬ ಆಶಯದಲ್ಲಿ ಜಿಲ್ಲೆಯ ಜನರು ಇದ್ದಾರೆ. ಎರಡು ಕಂತಿನ ಹಣ ಒಮ್ಮೆಲೇ ಬರಬಹುದು ಎಂಬ ಪುಟ್ಟ ಆಸೆಯಲ್ಲಿ ಬಿಪಿಎಲ್ ಕಾರ್ಡ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳು ಕಾಯುತ್ತಿವೆ.

ಇತ್ತ ಅಕ್ಕಿಯು ಇಲ್ಲ ಈಗ ದುಡ್ಡು ಇಲ್ಲ :- 10 ಕೆ ಜಿ ಅಕ್ಕಿ ನೀಡುತ್ತಾರೆ ಎಂಬ ಆಸೆಯಲ್ಲಿ ಬಡವರು ಈ ಬಾರಿ ಕಾಂಗ್ರೆಸ್ ಸರ್ಕಾರಕ್ಕೆ ಬಹುಮತ ನೀಡಿ ಗೆಲ್ಲಿಸಿದ್ದರು. ನುಡಿದಂತೆ ನಡೆಯುತ್ತೇವೆ ಎಂದು ಹೇಳಿತ್ತು. ಆದರೆ ಅಕ್ಕಿ ನೀಡದೆ ಜನರಿಗೆ ಬೇಸರ ತಂದಿತ್ತು .ಆದರೆ ಅಕ್ಕಿ ಹಣವನ್ನು ನೀಡುವ ಮೂಲಕ ಜನರಿಗೆ ಸ್ವಲ್ಪ ಸಹಾಯ ಆಗುತ್ತಿತ್ತು. ಆದರೆ ಈಗ ಅಕ್ಕಿಯು ಇಲ್ಲ ಹಣವು ಇಲ್ಲ ಎಂಬಂತೆ ಆಗಿದೆ ಜಿಲ್ಲೆಯ ಜನರ ಪರಿಸ್ಥಿತಿ.

ಇದನ್ನೂ ಓದಿ: PPF ಹಾಗೂ SSY ಯೋಜನೆಗಳಲ್ಲಿ ಯಾವ ಯೋಜನೆಯಲ್ಲಿ ಹೆಚ್ಚು ಲಾಭವನ್ನು ಗಳಿಸಬಹುದು.

Sharing Is Caring:

Leave a Comment