ಕ್ಯಾಶ್ಲೇಟ್ ಭಾರತ ದೇಶದಲ್ಲಿ ಇದೀಗ ನಾವೆಲ್ಲರೂ ಕೂಡ ಜೀವನ ಮಾಡ್ತಿದ್ದೀವಿ ಈಗೇನಿದ್ರೂ ಎಲ್ಲಿ ಹೋದರೂ ಗೂಗಲ್ ಪೇ ಫೋನ್ ಈ ರೀತಿಯ ಆನ್ಲೈನ್ ಪೇಮೆಂಟ್ ಗಳ್ದೆ ಕಾರು ಬಾರು ಅಂತ ಹೇಳಿದ್ರೆ ತಪ್ಪಾಗಲಿಕ್ಕಿಲ್ಲ. ಹೈ ಫೈ ಮಾಲ್ ಗಳಿಂದ ಹಿಡಿದು ಸಣ್ಣಪುಟ್ಟ ಬೀದಿ ಬದಿ ವ್ಯಾಪಾರ ಮಾಡುವ ಬಳಿಯೂ ಕೂಡ ಇದೀಗ ಸ್ಕ್ಯಾನರ್ ಇದ್ದೇ ಇರುತ್ತೆ. ಎಲ್ಲಿ ಹೋದರು ಬಂದರೂ ಸ್ಕ್ಯಾನರ್ ಗಳದು ಜೊತೆಗೆ ಆನ್ಲೈನ್ ಪೇಮೆಂಟ್ ಇದ್ರೂ ಕೂಡ ಕೆಲವೊಂದು ಅನಿವಾರ್ಯ ಸಂದರ್ಭದಲ್ಲಿ ಹಣವನ್ನ ವಿತ್ ಡ್ರಾ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿ ಬಿಡುತ್ತೆ. ಇಂತಹ ಸಂದರ್ಭದಲ್ಲಿ ನಮ್ಮ ಕಣ್ಣಿಗೆ ಬಹುಬೇಗನೆ ಬೀಳೋದು ಎಟಿಎಂಗಳು.
ಬ್ಯಾಂಕ್ ಗೆ ಹೋಗಿ ಗಂಟೆಗಟ್ಟಲೆ ಕಾದು ಕುಳಿತುಕೊಳ್ಳುವ ಬದಲು ಎಟಿಎಂ ನಲ್ಲಿ ಹಣ ಡ್ರಾ ಮಾಡೋಣ ಅಂದುಕೊಳ್ಳುವವರು ಹೆಚ್ಚು. ಇಂಥವರಿಗೆ ಇದೀಗ ಬಹುದೊಡ್ಡ ಶಾಕ್ ಎದುರಾಗಿದೆ ಅಂತ ಹೇಳಬಹುದು. ಮೊದ್ಲಿಲ್ಲ ಎಷ್ಟು ಹಣ ಬೇಕಾದರೂ ಕೂಡ ತೆಗೆದುಕೊಳ್ಳ ಬಹುದಾಗಿತ್ತು ಅಂದ್ರೆ ಡ್ರಾ ಮಾಡಿಕೊಳ್ಳುವುದಾಗಿತ್ತು ಆದರೆ ಇದೀಗ ವಿಥ್ ಡ್ರಾ ಮಾಡಿಕೊಳ್ಳಬೇಕು ಅಂತ ಅಂದ್ರೆ ಹೆಚ್ಚಿನ ವಿಥ್ ಡ್ರಾ ಶುಲ್ಕವನ್ನು ಪಾವತಿ ಮಾಡೋದು ಅನಿವಾರ್ಯವಾಗ್ಬಿಟ್ಟಿದೆ. ಈ ಹಿಂದೆ ಕಡಿಮೆ ಮೊತ್ತದ ವಿಥ್ ಡ್ರಾ ಶುಲ್ಕವನ್ನು ಪಾವತಿ ಮಾಡ್ತಿದ್ವಿ ಆದರೆ ಇನ್ನು ಮುಂದೆ ಇದು ನಡೆಯುವುದಿಲ್ಲ. ಪಾವತಿ ಶುಲ್ಕವನ್ನು ಹೆಚ್ಚಿಗೆ ಮಾಡಲಾಗಿದೆ ಹಾಗಾದ್ರೆ ಇದಕ್ಕೆ ಕಾರಣ ಏನು? ಯಾವಾಗಿಂದ ಜಾರಿ ಆಗುತ್ತೆ ಎಷ್ಟು ಪಟ್ಟು ಹಣವನ್ನ ಹೆಚ್ಚುವರಿಯಾಗಿ ನಾವು ಪಾವತಿಸಬೇಕು ಇದೆಲ್ಲದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒಂದೊಂದಾಗಿ ತಿಳ್ಕೊಳೋಣ ಬನ್ನಿ.
ಹೌದು ನಮಗೆ ಬೇಕಾದಾಗ ಹೇಗೆ ಬೇಕೋ ಆಗೇ ಹಣ ಡ್ರಾ ಮಾಡಿದರೆ ಆಯ್ತು ಬಿಡು ಅಂತ ಬೇಕಾಬಿಟ್ಟಿ ಹಣ ಡ್ರಾ ಮಾಡುದ್ರೆ ಹೆಚ್ಚುವರಿ ಶುಲ್ಕ ಪಾವತಿ ಮಾಡೋದು ಈಗ ಅನಿವಾರ್ಯವಾಗಿದೆ. ಏಕೆಂದ್ರೆ ದೇಶದ ಎಟಿಎಂ ನಿರ್ವಾಹಕರು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಅನ್ನು ಸಂಪರ್ಕಿಸಿದ್ದು, ಎಟಿಎಂ ಆಪರೇಟರ್‌ಗಳು ಇಂಟರ್‌ಚೇಂಜ್ ಶುಲ್ಕವನ್ನು ಹೆಚ್ಚಿಸುವಂತೆ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಎಟಿಎಂನಿಂದ ಹಣ ಬಿಡಿಸಿಕೊಳ್ಳುವಾಗ ಎಚ್ಚರಿಕೆ ವಹಿಸೋದು ಇನ್ಮುಂದೆ ಅಗತ್ಯವಾಗಿರುತ್ತೆ. ಅಲ್ದೇ ಎಟಿಎಂ ಇಂಡಸ್ಟ್ರಿ ಒಕ್ಕೂಟ ಪ್ರತಿ ವಹಿವಾಟಿಗೆ ಗರಿಷ್ಠ 23 ರೂಪಾಯಿಗಳಿಗೆ ಇಂಟರ್ ಚೇಂಜ್ ಶುಲ್ಕವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸುತ್ತದೆ. ಇದು ವ್ಯಾಪಾರಕ್ಕಾಗಿ ಹೆಚ್ಚಿನ ಹಣವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಎಟಿಎಂ ತಯಾರಕ ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸ್ಟಾನ್ಲಿ ಜಾನ್ಸನ್ ಹೇಳಿದ್ದಾರೆ.
ಇದನ್ನೂ ಓದಿ: ಗ್ರಾಮೀಣ ಭಾಗದ ಮಕ್ಕಳಿಗೆ ಸಿಗಲಿದೆ ಗುಣಾತ್ಮಕ ಶಿಕ್ಷಣ; ಸರ್ಕಾರಿ ಶಾಲೆಯಲ್ಲಿ ಇನ್ಮುಂದೆ ಶುರುವಾಗಲಿದೆ ಎಲ್ ಕೆ ಜಿ, ಯುಕೆಜಿ
ಜುಲೈ ನಿಂದ ಹೆಚ್ಚಾಗುತ್ತೆ ವಿತ್ ಡ್ರಾ ಶುಲ್ಕ
ಇನ್ನು, ಎರಡು ವರ್ಷಗಳ ಹಿಂದೆಯಷ್ಟೇ ವಿನಿಮಯ ದರವನ್ನು ಹೆಚ್ಚಿಸಲಾಗಿದೆ. ಹೀಗಾಗಿ ನಾವು ಆರ್‌ಬಿಐ ಅನ್ನು ಸಂಪರ್ಕಿಸುತ್ತಿದ್ದೇವೆ. ಅವರು ಎಟಿಎಂ ಮಿತಿಯ ಬಳಿಕ ಹೆಚ್ಚಳವನ್ನು ಬೆಂಬಲಿಸುತ್ತಾರೆ ಎಂಬ ನಂಬಿಕೆಯಿದೆ. ಎಟಿಎಂ ಇಂಡಸ್ಟ್ರಿ ಒಕ್ಕೂಟ ಶುಲ್ಕವನ್ನು 21 ರೂಪಾಯಿಗೆ ಹೆಚ್ಚಿಸಲು ಮನವಿ ಮಾಡಿದ್ದೇವೆ. ಅದೇ ಸಮಯದಲ್ಲಿ, ಇತರ ಕೆಲವು ಎಟಿಎಂ ತಯಾರಕರು ಅದನ್ನು 23 ರೂಪಾಯಿಗೆ ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಆದರೆ, ಈ ಬಗ್ಗೆ ಆರ್‌ಬಿಐ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಎಟಿಎಂ ತಯಾರಕರ ಪ್ರಕಾರ, ಇಂಟರ್‌ಚೇಂಜ್ ಚಾರ್ಜ್ ಹೆಚ್ಚಳವು ಎನ್‌ಪಿಸಿಐ ತೆಗೆದುಕೊಂಡ ನಿರ್ಧಾರವಾಗಿದ್ದು, ದರವನ್ನು ಅವರೇ ನಿಗದಿಪಡಿಸಿದ್ದಾರಂತೆ.
ಇನ್ನು ಭಾರತದ ಪ್ರತಿ ಬ್ಯಾಂಕ್‌ಗೆ ಗರಿಷ್ಠ ನಗದು ಹಿಂಪಡೆಯುವಿಕೆಯ ಮಿತಿ ವಿಭಿನ್ನವಾಗಿರುತ್ತದೆ. ಕೆಲವು ಬ್ಯಾಂಕ್‌ಗಳಿಗೆ ಗರಿಷ್ಠ ದೈನಂದಿನ ನಿರ್ಬಂಧವು 10,000 ರಿಂದ ಪ್ರಾರಂಭವಾಗುತ್ತದೆ. ಪ್ರೀಮಿಯಂ ಗ್ರಾಹಕರಿಗೆ ಈ ಮಿತಿ 50,000 ಕ್ಕೆ ಏರುತ್ತದೆ. ಬ್ಯಾಂಕ್‌ಗಳು ಈಗ ಉಳಿತಾಯ ಖಾತೆ ಬಳಕೆದಾರರಿಗೆ ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ಮುಂಬೈ ಮತ್ತು ನವದೆಹಲಿಯಲ್ಲಿ ಪ್ರತಿ ತಿಂಗಳು ಕನಿಷ್ಠ ಐದು ಉಚಿತ ವಹಿವಾಟುಗಳನ್ನು ಒದಗಿಸುತ್ತವೆ. ಉಳಿತಾಯ ಖಾತೆದಾರರಿಗೆ ಒಂದು ತಿಂಗಳಲ್ಲಿ ಕನಿಷ್ಠ ಐದು ವಹಿವಾಟುಗಳು ಉಚಿತವಾಗಿದೆ. ಅದೇ ಸಮಯದಲ್ಲಿ, ಎಟಿಎಂಗಳಲ್ಲಿ ಮೂರು ವಹಿವಾಟುಗಳು ಉಚಿತವಾಗಿರುವ ಕೆಲವು ಬ್ಯಾಂಕುಗಳಿವೆ.
ಇದರ ನಂತರ, ವಿವಿಧ ಬ್ಯಾಂಕ್ ಎಟಿಎಂಗಳಿಂದ ವಿವಿಧ ರೀತಿಯ ಶುಲ್ಕಗಳನ್ನು ಸಹ ವಿಧಿಸಲಾಗುತ್ತದೆ. ಇನ್ನು ಈ ಮೊದಲು ಅಂದ್ರೆ 2021ರಲ್ಲಿ ಎಟಿಎಂನಿಂದ ಹಣ ವಿತ್ ಡ್ರಾ ಮಾಡುವ ಶುಲ್ಕವನ್ನು 15ರೂಪಾಯಿಂದ 17 ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಹೆಚ್ಚುವರಿ ಟ್ರಾನ್ಸಾಕ್ಷನ್ ಗೆ 20ರಿಂದ 21ರೂಪಾಯಿಗೆ ಏರಿಕೆ ಮಾಡಲಾಗಿತ್ತು ಎಂದು ಜಾನ್ಸನ್ ತಿಳಿಸಿದ್ದಾರೆ. ಇದೀಗ ಸಿಎಟಿಎಂಐ ಆರ್ ಬಿಐಗೆ ಶುಲ್ಕ ಹೆಚ್ಚಳಕ್ಕಾಗಿ ಮನವಿ ಸಲ್ಲಿಸಿದ್ದು ಅದನ್ನ 21 ರೂಪಾಯಿಗೆ ಏರಿಕೆ ಮಾಡಲು ನಿರ್ಧರಿಸಲಾಗಿತ್ತು, ಆದರೆ ಇತರ ಎಟಿಎಂ ತಯಾರಿಕಾ ಸಂಸ್ಥೆಗಳು 23 ರೂಪಾಯಿಗೆ ಏರಿಕೆ ಮಾಡಲು ಒತ್ತಾಯಿಸಿದ್ದು, ಮುಂದಿನ ದಿನಗಳಲ್ಲಿ ಈ ಕುರಿತು ಆರ್ ಬಿ ಐ ಯಾವ ನಿಲುವನ್ನ ತಾಳುತ್ತೊ ಎಷ್ಟು ಹಣವನ್ನ ಅಂದ್ರೆ ಶುಲ್ಕವನ್ನ ಹೆಚ್ಚುವರಿ ಮಾಡುತ್ತೋ ಕಾದು ನೋಡಬೇಕಿದೆ.
ಇದನ್ನೂ ಓದಿ: ನಿಮ್ಮ FD ಗೆ ಭರ್ಜರಿ ಬಡ್ಡಿ! ಅದ್ಭುತ ಬಡ್ಡಿ ದರಗಳನ್ನು ನೀಡುವ ಕೆಲವು ಬ್ಯಾಂಕುಗಳು ಇಲ್ಲಿವೆ!