ಟ್ರ್ಯಾಕ್ಟರ್ಗಳು ಕೃಷಿ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದೆ. ಇದು ಕೃಷಿ ಜೀವನವನ್ನು ಸುಲಭಗೊಳಿಸಿದೆ ಮತ್ತು ಕೃಷಿ ಉತ್ಪಾದನೆಯನ್ನು ಹೆಚ್ಚಿಸಿದೆ. ಈಗ ಕೃಷಿ ಕ್ಷೇತ್ರದ ಕೆಲಸವನ್ನು ಸುಲಭ ಗೊಳಿಸಲು ಆಟೋಎನ್ಎಕ್ಸ್ಟಿ ಎಕ್ಸ್ 45 ಎಂಬ ಹೊಸ ಟ್ರ್ಯಾಕ್ಟರ್ ಮಾರುಕಟ್ಟೆಗೆ ಬಂದಿದೆ. ಈ ಟ್ರ್ಯಾಕ್ಟರ್ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.
8 ಗಂಟೆಗಳ ಕೆಲಸ ಕೇವಲ 3 ಗಂಟೆಗಳಲ್ಲಿ ಮುಗಿಯುತ್ತದೆ. :- ಆಟೋಎನ್ಎಕ್ಸ್ಟಿ ಎಕ್ಸ್45 ಎಂಬ ಹೊಸ ಎಲೆಕ್ಟ್ರಿಕ್ ಟ್ರಾಕ್ಟರ್ ಭಾರತದಲ್ಲಿ ಬಿಡುಗಡೆಯಾಗಿದೆ. ಭಾರತದ ಕೃಷಿ ಕ್ಷೇತ್ರಕ್ಕೆ ಹೊಸ ಆಯಾಮವನ್ನು ತಂದಿದೆ ಆಟೋಎನ್ಎಕ್ಸ್ಟಿ ಎಕ್ಸ್45 ಎಂಬ ಎಲೆಕ್ಟ್ರಿಕ್ ಟ್ರಾಕ್ಟರ್. ಇದು ಸಾಂಪ್ರದಾಯಿಕ ಟ್ರಾಕ್ಟರ್ನಂತೆಯೇ ಕಾಣುತ್ತದೆ ಆದರೆ ನಿರ್ವಹಣಾ ತುಂಬಾ ಕಡಿಮೆ. ಒಂದು ಬಾರಿ ಚಾರ್ಜ್ ಮಾಡಿದರೆ 8 ಗಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡುವ ಸಾಮರ್ಥ್ಯ ಮತ್ತು ಕೇವಲ 3 ಗಂಟೆಗಳಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಈ ಎಲೆಕ್ಟ್ರಿಕ್ ಟ್ರಾಕ್ಟರ್ ಯಾವುದೇ ಡೀಸೆಲ್ ಟ್ರಾಕ್ಟರ್ಗಿಂತ ಸುಮಾರು 5 ಪಟ್ಟು ಹೆಚ್ಚು ಆರ್ಥಿಕವಾಗಿದೆ ಎಂದು ಕಂಪನಿ ಹೇಳಿದೆ.
ಭಾರತದ ಕೃಷಿ ಕ್ಷೇತ್ರಕ್ಕೆ ಹೊಸ ಆಯಾಮ: ಭಾರತದಲ್ಲಿ ವಾಹನಗಳ ವಿದ್ಯುದೀಕರಣದ ಪ್ರವೃತ್ತಿ ಈಗ ಕೃಷಿ ಕ್ಷೇತ್ರಕ್ಕೂ ಬಂದಿದೆ. AutoNxt ಕಂಪನಿಯು ಭಾರತದ ಮೊದಲ ಎಲೆಕ್ಟ್ರಿಕ್ ಟ್ರಾಕ್ಟರ್, AutoNxt X45 ಅನ್ನು ಬಿಡುಗಡೆ ಮಾಡುವ ಮೂಲಕ ಈ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಈ ಘಟನೆಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕೂಡ ಭಾಗಿ ಆಗಿದ್ದರು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: BSNL ನ ಹೊಸ ಆಫರ್; ಪ್ರತಿದಿನ ಕೇವಲ 6 ರೂಪಾಯಿ ಖರ್ಚು ಮಾಡುವ ಮೂಲಕ ನೀವು 2GB ಡೇಟಾವನ್ನು ಪಡೆಯುತ್ತೀರಿ.
ಟ್ರ್ಯಾಕ್ಟರ್ ನಾ ಮುಖ್ಯ ವೈಶಿಷ್ಟ್ಯಗಳು ಮತ್ತು ಬೆಲೆ:
- ಬೆಲೆ: ಈ ಎಲೆಕ್ಟ್ರಿಕ್ ಟ್ರಾಕ್ಟರ್ನ ಆರಂಭಿಕ ಬೆಲೆ 15 ಲಕ್ಷ ರೂಪಾಯಿ ಆಗಿದೆ. ಆದರೆ, ಇದು ಸರ್ಕಾರದಿಂದ ನೀಡುವ ವಿದ್ಯುತ್ ವಾಹನಗಳ ಸಬ್ಸಿಡಿಯನ್ನು ಒಳಗೊಂಡಿದೆ. ವಿವಿಧ ರಾಜ್ಯಗಳಲ್ಲಿ ಸಬ್ಸಿಡಿ ದರಗಳು ಭಿನ್ನವಾಗಿರುವುದರಿಂದ ಅಂತಿಮ ಬೆಲೆ ಕಡಿಮೆಯಾಗುವ ಸಾಧ್ಯತೆಯಿದೆ.
- ಪರಿಸರ ಸ್ನೇಹಿ: ಈ ಟ್ರಾಕ್ಟರ್ಗಳು ಡೀಸೆಲ್ ಟ್ರಾಕ್ಟರ್ ಹೆಚ್ಚು ಪರಿಸರ ಸ್ನೇಹಿಯಾಗಿರುವುದರಿಂದ ಇವುಗಳು ಯಾವುದೇ ಹಾನಿಕಾರಕ ಹೊಗೆಯನ್ನು ಹೊರಸೂಸುವುದಿಲ್ಲ.
- ಕಡಿಮೆ ನಿರ್ವಹಣಾ ವೆಚ್ಚ: ಎಲೆಕ್ಟ್ರಿಕ್ ಟ್ರಾಕ್ಟರ್ಗಳ ನಿರ್ವಹಣಾ ವೆಚ್ಚವು ಡೀಸೆಲ್ ಟ್ರಾಕ್ಟರ್ಗೆ ಕಡಿಮೆ ಇರುತ್ತದೆ.
- ಕಡಿಮೆ ಶಬ್ದ: ಎಲಿಕ್ಟಿಕ್ ಟ್ರಾಕ್ಟರ್ಗಳು ಡೀಸೆಲ್ ಟ್ರಾಕ್ಟರ್ ಕಡಿಮೆ ಶಬ್ದ ಮಾಡುತ್ತವೆ.
ಎಂಜಿನ್ ಮತ್ತು ಬ್ಯಾಟರಿ ಸಾಮರ್ಥ್ಯ :- ಆಟೋಎನ್ಎಕ್ಸ್ಟಿ ಎಕ್ಸ್45 ಎಂಬ ಹೊಸ ಎಲೆಕ್ಟ್ರಿಕ್ ಟ್ರಾಕ್ಟರ್ ವಿನ್ಯಾಸ ಸಾಂಪ್ರದಾಯಿಕ ಟ್ರಾಕ್ಟರ್ಗಳಂತೆಯೇ ಇದೆ. ಇದು 32 kW ಸಾಮರ್ಥ್ಯದ ಎಂಜಿನ್ ಮತ್ತು 35 kWh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಒಂದೇ ಚಾರ್ಜ್ನಲ್ಲಿ 8 ಗಂಟೆಗಳ ಕಾಲ 8 ಜಾಗದಲ್ಲಿ ಕೆಲಸ ಮಾಡಬಹುದು.
ತೂಕ ಸಾಮರ್ಥ್ಯ :- ಆಟೋಎನ್ಎಕ್ಸ್ಟಿ ಎಕ್ಸ್45 ಎಂಬ ಈ ಎಲೆಕ್ಟ್ರಿಕ್ ಟ್ರಾಕ್ಟರ್ 10 ರಿಂದ 15 ಟನ್ ತೂಕವನ್ನು ಹೊರುವ ಸಾಮರ್ಥ್ಯ ಹೊಂದಿದೆ.
ಒಂದು ಬಾರಿ ಚಾರ್ಜ್ ಮಾಡಿದರೆ ಎಷ್ಟು ಗಂಟೆಗಳ ಕಾಲ ಕೆಲಸ ಮಾಡಬಹುದು?: ಹೆವಿ ಡ್ಯೂಟಿ ಕೆಲಸದ ಸಮಯದಲ್ಲಿ ಅದರ ಬ್ಯಾಟರಿ ಬೇಗ ಖಾಲಿಯಾಗಬಹುದು ಎಂದು ಕಂಪನಿ ಹೇಳುತ್ತದೆ. ಆದರೂ, ಒಂದು ಬಾರಿ ಚಾರ್ಜ್ ಮಾಡಿದರೆ ಕನಿಷ್ಠ 6 ಗಂಟೆಗಳ ಕಾಲ ಕೆಲಸ ಮಾಡಬಹುದು. ಈ ಟ್ರಾಕ್ಟರ್ನೊಂದಿಗೆ ಎರಡು ವಿಧದ ಚಾರ್ಜರ್ಗಳು ಬರುತ್ತವೆ. ಸಾಮಾನ್ಯ ವಿದ್ಯುತ್ ಸಾಕೆಟ್ನಲ್ಲಿಯೂ ಇದನ್ನು ಚಾರ್ಜ್ ಮಾಡಬಹುದು. ಫಾಸ್ಟ್ ಚಾರ್ಜರ್ ಬಳಸಿದರೆ 3 ಗಂಟೆಗಳಲ್ಲಿ ಬ್ಯಾಟರಿಫುಲ್ ಆಗುತ್ತದೆ.
ಇದನ್ನೂ ಓದಿ: ಹೊಸದಾಗಿ ಮದುವೆಯಾದ ದಂಪತಿಗೆ ಬಂಪರ್ ಸುದ್ದಿ, ಸರ್ಕಾರದ ಈ ಯೋಜನೆ ಅಡಿಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್.