ದೇಶದ ನಾಗರಿಕರ ಆರೋಗ್ಯ ರಕ್ಷಣೆಗೆ ಎಂದೇ ಕೇಂದ್ರ ಸರಕಾರವು ಆರಂಭಿಸಿರುವ ಯೋಜನೆ ಎಂದರೆ ಅದು ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತಂದಿದೆ. ಈಗ ಈ ಯೋಜನೆಯಲ್ಲಿ ಮಹತ್ವದ ಬದಲಾವಣೆಯು ಆಗುವ ಎಲ್ಲಾ ಸಾಧ್ಯತೆಗಳೂ ಕಂಡು ಬಂದಿವೆ. ಹಾಗಾದರೆ ಏನು ಈ ಬದಲಾವಣೆ ಎಂಬುದನ್ನು ತಿಳಿಯೋಣ.
ಮಹತ್ತರವಾದ ಬದಲಾವಣೆ ಏನು?: ಭಾರತದ ಕೇಂದ್ರ ಸರ್ಕಾರವು ಮುಂದಿನ ಮೂರು ವರ್ಷಗಳಲ್ಲಿ ತನ್ನ ಪ್ರಮುಖ ಆಯುಷ್ಮಾನ್ ಭಾರತ್ ಪ್ರಧಾನ ಜನ ಆರೋಗ್ಯ ಯೋಜನೆ (AB-PMJAY) ಫಲಾನುಭವಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲು ಯೋಜನೆಗಳನ್ನು ಹೊಂದಿದೆ. ಈ ಉದ್ದೇಶವನ್ನು ಸಾಧಿಸಲು, ಕೆಲವು ಬದಲಾವಣೆಗಳನ್ನು ತರುತ್ತಿದೆ. ಅವು ಏನೆಂದರೆ :-
- ವಯಸ್ಸಿನ ಮಿತಿಯನ್ನು ಹೆಚ್ಚಿಸುವುದು: ಈ ಯೋಜನೆಯ ಅಡಿಯಲ್ಲಿ 70 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಎಲ್ಲಾ ನಾಗರಿಕರಿಗೆ ಯೋಜನೆಯಡಿ ರಕ್ಷಣೆ ನೀಡಲಾಗುವುದು. ಇದನ್ನು 65 ವರ್ಷಗಳಿಂದ ಅಥವಾ ಅದಕ್ಕೂ ಕಡಿಮೆ ವಯಸ್ಸಿನವರಿಗೆ ಸಹ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ.
- ವಿಮಾ ರಕ್ಷಣೆಯ ಮೊತ್ತವನ್ನು ಹೆಚ್ಚಿಸುವುದು: ಈಗ ಈ ಯೋಜನೆಯ ಅಡಿಯಲ್ಲಿ ವಾರ್ಷಿಕವಾಗಿ 5 ಲಕ್ಷ ರೂಪಾಯಿಗಳವರೆಗೆ ವೈದ್ಯಕೀಯ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಸರ್ಕಾರವು ಈ ಮೊತ್ತವನ್ನು 10 ಲಕ್ಷ ರೂಪಾಯಿಗಳಿಗೆ ಹೆಚ್ಚಿಸುವ ಚಿಂತನೆ ನಡೆಸಿದೆ. ಇದರಿಂದ ಜನರಿಗೆ ಇನ್ನಷ್ಟು ಹೆಚ್ಚಿನ ಆರ್ಥಿಕ ರಕ್ಷಣೆಯನ್ನು ನೀಡುತ್ತದೆ.
- ಹೆಚ್ಚಿನ ಆಸ್ಪತ್ರೆಗಳನ್ನು ಸೇರಿಸುವುದು: ಈಗಾಗಲೇ ಈ ಯೋಜನೆಯ ಅಡಿಯಲ್ಲಿ ಕೆಲವು ಆಸ್ಪತ್ರೆಗಳು ಇವೆ. ಆದರೆ ಜೊತೆಗೆ ಇನ್ನಷ್ಟು ಆಸ್ಪತ್ರೆಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಉತ್ತಮ ಸೇವೆಯನ್ನು ಒದಗಿಸಲು ಸರ್ಕಾರವು ಚಿಂತನೆ ನಡೆಸಿದೆ. ಇದು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ವಿಶೇಷ ಪ್ರಯೋಜನ ಆಗಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಸರಕಾರಕ್ಕೆ ಹೆಚ್ಚು ವೆಚ್ಚ ಆಗಲಿದೆ :-
ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಅಂದಾಜಿನ ಪ್ರಕಾರ, ಪ್ರಸ್ತಾವಿತ ಬದಲಾವಣೆಗಳನ್ನು ಅನುಮೋದಿಸಿದರೆ, ಪ್ರತಿ ವರ್ಷ ಸರ್ಕಾರಕ್ಕೆ ಹೆಚ್ಚುವರಿ 12,076 ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಅಧಿಕೃತ ಮೂಲಗಳು ಪಿಟಿಐಗೆ ತಿಳಿಸಿವೆ.
5 ಲಕ್ಷ ದಿಂದ 10ಲಕ್ಷಕ್ಕೆ ಏರಿಸುವ ಹಿಂದಿನ ಉದ್ದೇಶ ಏನು?: ಈ ಯೋಜನೆಯ ಪ್ರಮುಖ ಉದ್ದೇಶಗಳಲ್ಲಿ ಒಂದು, ವೈದ್ಯಕೀಯ ವೆಚ್ಚಗಳು ಕುಟುಂಬಗಳನ್ನು ಸಾಲಕ್ಕೆ ತಳ್ಳುವುದನ್ನು ತಡೆಯುವುದು ಆಗಿದೆ. ಅದರಿಂದ ಈಗ ಕೇಂದ್ರ ಸರಕಾರವು ಈ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ 5 ಲಕ್ಷ ರೂಪಾಯಿಗಳಿಂದ 10 ಲಕ್ಷ ರೂಪಾಯಿಗಳವರೆಗೆ ವಾರ್ಷಿಕ ವಿಮಾನವನ್ನು ದ್ವಿಗುಣಗೊಳಿಸುತ್ತಿದೆ.
ಬಜೆಟ್ ನಲ್ಲಿ ಪ್ರಸ್ತಾಪ ಆಗುವ ಸಾಧ್ಯತೆ :- ಈ ಬದಲಾವಣೆಯನ್ನು ಈ ತಿಂಗಳ ಕೊನೆಯಲ್ಲಿ ಮಂಡಿಸಲಾಗುವ ಕೇಂದ್ರ ಬಜೆಟ್ ನಲ್ಲಿ ಜಾರಿಗೆ ತರುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: SBI VS ಪೋಸ್ಟ್ ಆಫೀಸ್ FD ಯಲ್ಲಿ ಹೆಚ್ಚು ರಿಟರ್ನ್ಸ್ ಕೊಡುವುದು ಯಾವುದು?
ಮಧ್ಯಂತರ ಬಜೆಟ್ ನಲ್ಲಿ ಹೆಚ್ಚಳ ಮಾಡಲಾಗಿತ್ತು :-
2024 ರ ಮಧ್ಯಂತರ ಬಜೆಟ್‌ನಲ್ಲಿ, ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB-PMJAY) ಗಾಗಿ ಹಂಚಿಕೆಯನ್ನು 7,200 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿತ್ತು. ಇದು ಬರೋಬ್ಬರಿ 12 ಕೋಟಿ ಕುಟುಂಬಗಳಿಗೆ ವಾರ್ಷಿಕ ₹5 ಲಕ್ಷ ಆರೋಗ್ಯ ವಿಮಾ ರಕ್ಷಣೆಯನ್ನು ಒದಗಿಸಲು ಸಹಾಯ ಮಾಡುತ್ತದ. ಇದು ದೇಶದಾದ್ಯಂತ ಆರೋಗ್ಯ ಸೇವೆಗಳ ಮೂಲಸೌಕರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: LIC ಜೀವನ್ ಪ್ರಗತಿ ಯೋಜನೆ ಯಲ್ಲಿ ನೀವು 200 ರೂಪಾಯಿಗಳನ್ನು ಠೇವಣಿ ಮಾಡಿ 28 ಲಕ್ಷ ರೂಪಾಯಿಗಳನ್ನು ಪಡೆಯಬಹುದು.