ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಆಯುಷ್ಮಾನ್ ಯೋಜನೆಯಲ್ಲಿ 70 ವರ್ಷದ ಮೇಲಿನ ಹಿರಿಯ ನಾಗರಿಕರಿಗೆ 5 ಲಕ್ಷ ರೂಪಾಯಿ ಆರೋಗ್ಯ ವಿಮೆ ನೀಡುತ್ತೇವೆ ಎಂದು ಹೇಳಿತ್ತು. ಈಗ ಚುನಾವಣೆಯಲ್ಲಿ ಭರ್ಜರಿ ಜಯಶಾಲಿ ಆಗಿರುವ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಹಿರಿಯ ನಾಗರಿಕರಿಗೆ ಈ ಯೋಜನೆಯನ್ನು ನೀಡಲಾಗುತ್ತಿದೆ.
ದ್ರೌಪದಿ ಮೂರ್ಮು ಅವರು ಹೇಳಿದ್ದಾರೆ :- ಆಯುಷ್ಮಾನ್ ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ ಆರೋಗ್ಯ ವಿಮೆ ನೀಡುವ ಈ ಯೋಜನೆಯಲ್ಲಿ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 5 ಲಕ್ಷ ರೂಪಾಯಿ ನೀಡಲಾಗುವುದು ಎಂದು ಸಂಸತ್ತಿನಲ್ಲಿ ತಿಳಿಸಿದ್ದಾರೆ.
ವೃದ್ಧರಿಗೆ ಉತ್ತಮ ಚಿಕಿತ್ಸೆ :- ದ್ರೌಪದಿ ಮೂರ್ಮು ಅವರು ಬಿಜೆಪಿ ಯ ಪ್ರಣಾಳಿಕೆಯಲ್ಲಿ ಹೇಳಿರುವಂತೆ ವೃದ್ಧರಿಗೆ ಉತ್ತಮ ಚಿಕಿತ್ಸಾ ಸೌಲಭ್ಯ ನೀಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ವೃದ್ಧರಿಗೆ ಅವರ ಆರೋಗ್ಯ ಸುಧಾರಣೆಗೆ ಈ ಸೌಲಭ್ಯ ಸಿಗಲಿದೆ.
ರೈತ ಸ್ವಾವಲಂಬಿ ಜೀವನಕ್ಕೇ ಮೋದಿ ಸರ್ಕಾರದ ಕೊಡುಗೆ ಅಪಾರ :- ದ್ರೌಪದಿ ಮೂರ್ಮು ಅವರು ಸಂಸತ್ತಿನಲ್ಲಿ ಪಿಎಂ ಕಿಸಾನ್ ಸಮ್ಮಾನ ಯೋಜನೆಯ ಬಗ್ಗೆ ಮಾತನಾಡಿದ ಅವರು ನರೇಂದ್ರ ಮೋದಿ ಸರ್ಕಾರವು ಭಾರತದ ರೈತರನ್ನು ಸ್ವಾವಲಂಬಿಯಾಗಿ ಮಾಡಲು 2,000 ರೂಪಾಯಿ ಪ್ರತಿ ಕಂತಿನಲ್ಲಿ ನೀಡುತ್ತಿದ್ದಾರೆ. ಇದು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಇದು ಹೆಚ್ಚಿನ ಸಹಾಯ ಆಗಲಿದೆ. ಇದರಿಂದ ದೇಶದಲ್ಲಿ ಕೃಷಿ ಚಟುವಟಿಕೆಗೆ ಇನ್ನಷ್ಟು ಹುರುಪು ಮೂಡಿದೆ. ಯುವಜನತೆ ಇದರಿಂದ ಕೃಷಿಯಲ್ಲಿ ಹೆಚ್ಚು ಆಸಕ್ತಿ ಹೊಂದುತ್ತಿದ್ದಾರೆ. ರೈತರಿಗೆ ಸಿಗುವ ಈ ಸಹಾಯಧನ ಅವರು ಸಾಲ ಮಾಡುವ ಪ್ರಮಾಣವನ್ನು ಕಡಿಮೆ ಮಾಡಲಿದೆ ಎಂದು ಹೇಳಿದರು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಪ್ರಣಾಳಿಕೆಯಲ್ಲಿ ಪ್ರಕಟಿಸಿದ ಹಾಗೆ ನಡೆದುಕೊಂಡ ಮೋದಿ ಸರ್ಕಾರ :- ನರೇಂದ್ರ ಮೋದಿ ಸರ್ಕಾರವು ಮೂರನೇ ಬಾರಿಗೆ ಅಧಿಕಾರ ಸ್ವೀಕಾರ ಮಾಡುವ ಮುನ್ನ ಅಂದರೆ ಚುನಾವಣಾ ಪ್ರಣಾಳಿಕೆಯಲ್ಲಿ 70 ವರ್ಷಕ್ಕೂ ಮೇಲಿನ ವೃದ್ಧರ ಆರೋಗ್ಯಕ್ಕೆ ಎಂದೇ ಆಯುಷ್ಮಾನ್ ಯೋಜನೆ ಜಾರಿಗೆ ತಂದಿದೆ. ಇದರಿಂದ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದಂತೆ ಆಗಿದೆ. ಈ ಹಿಂದೆ 2019 ರಲ್ಲಿ ಆರೋಗ್ಯ ರಕ್ಷಣೆ ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರು.
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್; ವಿವಿಧ ಯೋಜನೆಗಳ ಅಡಿಯಲ್ಲಿ ಸಾಲ ಮತ್ತು ಸಬ್ಸಿಡಿಗೆ ಅರ್ಜಿ ಆಹ್ವಾನಿಸಲಾಗಿದೆ.
ಮೇರಾ ಭಾರತ್ ಬಗ್ಗೆ ಹೇಳಿದ ರಾಷ್ಟ್ರಪತಿ :-
ರಾಷ್ಟ್ರದಲ್ಲಿ ರಾಷ್ಟ್ರ ನಿರ್ಮಾಣಕ್ಕೆ ಯುವಜನಗೆ ಹೆಚ್ಚಾಗಿ ಸೇರಬೇಕು ಎಂಬ ಉದ್ದೇಶದಿಂದ ನರೇಂದ್ರ ಮೋದಿ ಸರ್ಕಾರವು ಮೇರಾ ಯುವ ಭಾರತ್ – ಮೇರಾ ಭಾರತ್ ಎಂಬ ಹೊಸ ಯೋಜನೆಯನ್ನು ಆರಂಭಿಸಿದೆ. ಈಗಾಗಲೇ ಇದರಲ್ಲಿ ದೇಶದ 1.5 ಕೋಟಿ ಜನರು ಈಗಾಗಲೇ ಇದರಲ್ಲಿ ಸೇರಿದ್ದಾರೆ. ಇನ್ನು ಹೆಚ್ಚಿನ ಯುವಕರಲು ಇದರಲ್ಲಿ ಸೇರಿ ರಾಷ್ಟ್ರ ನಿರ್ಮಾಣಕ್ಕೆ ಅವರು ಸೇರುವ ನಿರೀಕ್ಷೆ ಇದೆ. ಇದು ನಮ್ಮ ದೇಶಕ್ಕೆ ಉತ್ತಮ ಆಗಿರುವುದಾಗಿದೆ ಎಂದು ರಾಷ್ಟ್ರಪತಿ ಅವರು ತಿಳಿಸಿದರು. ಇದರ ಜೊತೆಗೆ ಶಿಕ್ಷಣಕ್ಕೆ ಒತ್ತು ನೀಡುವ ಸರ್ಕಾರ ಡಿಜಿಟಲ್ ವಿಶ್ವ ವಿದ್ಯಾಲಯವನ್ನು ಆರಂಭ ಮಾಡುವ ಮೂಲಕ ರಾಷ್ಟ್ರದ ಪ್ರಗತಿಗೆ ಇದು ಉತ್ತಮ ಹೆಜ್ಜೆ ಆಗಿದೆ.
ಮೋದಿ ಸರ್ಕಾರದ ಎಲ್ಲ ಯೋಜನೆಯು ರಾಷ್ಟ್ರದ ಪ್ರಗತಿಗೆ ಪೂರಕವಾಗಿ ಇದೆ ಎಂಬುದು ರಾಷ್ಟ್ರಪತಿ ದ್ರೌಪದಿ ಮೂರ್ಮು ಅವರು ಸಂಸತ್ತಿನಲ್ಲಿ ಹೇಳಿದರು ಜೊತೆಗೆ ನಮ್ಮ ರಾಷ್ಟ್ರದ ಪ್ರಗತಿಯ ಬಗ್ಗೆಯೂ ಉತ್ತಮ ಮಾತುಗಳನ್ನು ಹೇಳಿದರು.
ಇದನ್ನೂ ಓದಿ: ತಿಂಗಳಿಗೆ 1,000 ರೂಪಾಯಿ ಹೂಡಿಕೆ ಮಾಡಿ 8,24,641 ರೂಪಾಯಿ ಗಳಿಸುವ ಪೋಸ್ಟ್ ಆಫೀಸ್ ಯೋಜನೆಯ ಬಗ್ಗೆ ತಿಳಿಯಿರಿ.