ಉತ್ತಮ ಬೈಕ್ ನೋಡಿದಾಗ ನಮಗೆ ತೆಗೆದುಕೊಳ್ಳಬೇಕು ಎಂಬ ಹಂಬಲ ಸಹಜ. ಆದರೆ ಕೆಲವು ಬಾರಿ ನಮಗೆ ಅಷ್ಟೊಂದು ಹಣವನ್ನು ಇನ್ವೆಸ್ಟ್ಮೆಂಟ್ ಮಾಡಿ ಬೈಕ್ ತೆಗೆದುಕೊಳ್ಳಲು ಆಗುವುದಿಲ್ಲ. ಆಗ ನಾವು ಸಾಲ ಮಾಡಿ ಆದರೂ ಬೈಕ್ ತೆಗೆದುಕೊಳ್ಳುತ್ತೇವೆ. ಆದರೆ ಈಗ ಹಳೆಯ ಕಾಲದ ಹಾಗೆ ಇಲ್ಲ. ನಾವು ಕಡಿಮೆ ಸಂಬಳ ಬಂದರು ಸಹ ಉತ್ತಮ ಬೈಕ್ ತೆಗೆದುಕೊಳ್ಳಬಹುದು. ಈಗ EMI option ಇರುವುದರಿಂದ ತಿಂಗಳಿಗೆ ನಿಗದಿತ ಹಣವನ್ನು payment ಮಾಡಿ ನಿಮ್ಮ ಆಸೆಗಳನ್ನು ಪೂರೈಸಿ ಕೊಳ್ಳುವ ಅವಕಾಶ ಇದೆ. ಈಗ ಭಾರತದಲ್ಲಿ ಬಜಾಜ್ ಫ್ರೀಡಮ್ 125 CNG(Bajaj Freedom 125 CNG) ಬೈಕ್ ಗೆ ಹೆಚ್ಚು ಬೇಡಿಕೆ ಇದ್ದು. ನೀವು ಸಹ ಈ ಬೈಕ್ ತೆಗೆದುಕೊಳ್ಳಲೇಬೇಕು ಎಂದಾದರೆ ನೀವು ಕೇವಲ 1000 ರೂಪಾಯಿ ಡೌನ್ ಪೇಮೆಂಟ್ ಮಾಡಿ ನೀವು ಬೈಕ್ ತೆಗೆದುಕೊಳ್ಳಬಹುದು. ಹೀಗೆ ಬೈಕ್ ತೆಗೆದುಕೊಂಡರೆ ನಿಮಗೆ ತಿಂಗಳಿಗೆ ಎಷ್ಟು EMI ಕಟ್ಟಬೇಕಾಗಿ ಬರಬಹುದು ಎಂಬುದನ್ನು ತಿಳಿಯೋಣ.
ತಿಂಗಳಿಗೆ ನೀವು ಏಷ್ಟು EMI ಹಣವನ್ನು ನೀಡಬೇಕು? ಈ ಅದ್ಭುತ ಬೈಕ್‌ನ ಆರಂಭಿಕ ಎಕ್ಸ್-ಶೋ ರೂಂ ಬೆಲೆ ರೂಪಾಯಿ 95,000 ರಿಂದ ರೂಪಾಯಿ 1.10 ಲಕ್ಷ ವರೆಗೆ ಇದೆ. ಕೇವಲ 10,000 ರೂಪಾಯಿ ಡೌನ್ ಪೇಮೆಂಟ್‌ನೊಂದಿಗೆ, ನೀವು 99,167 ರೂಪಾಯಿಗಳ ಸಾಲ ಪಡೆಯಬಹುದು. 2 ವರ್ಷಗಳ ಅವಧಿಗೆ ಶೇಕಡಾ 9% ರ ಬಡ್ಡಿ ದರದಲ್ಲಿ ಈ ಸಾಲವನ್ನು ಮರುಪಾವತಿಸಿದರೆ, ನಿಮ್ಮ ಮಾಸಿಕ EMI ಕೇವಲ 5,910 ರೂಪಾಯಿ ಆಗಿರುತ್ತದೆ. ಒಟ್ಟು ಬಡ್ಡಿ ರೂಪಾಯಿ 7,213 ಇರುತ್ತದೆ.
ನೀವು 20,000 ರೂಪಾಯಿ Down Payment ಮಾಡಿದಾರೆ EMI ಹಾಗೂ ಬಡ್ಡಿಯ ಲೆಕ್ಕಾಚಾರ ಹೀಗಿದೆ :-
- ಡೌನ್ ಪೇಮೆಂಟ್: 20,000 ರೂಪಾಯಿ.
- ಸಾಲದ ಮೊತ್ತ: 89,167 ರೂಪಾಯಿ.
- ಸಾಲದ ಅವಧಿ: 18 ತಿಂಗಳು.
- ಬಡ್ಡಿದರ: ಶೇಕಡಾ 9%.
- ಮಾಸಿಕ EMI: 5,314 ರೂಪಾಯಿ.
- ಒಟ್ಟು ಬಡ್ಡಿದರ: 6,485 ರೂಪಾಯಿ.
ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್‌ನ ವಿಶೇಷತೆಗಳು ಹೀಗಿದೆ :-
125cc ಸಿಂಗಲ್-ಸಿಲಿಂಡರ್ ಎಂಜಿನ್ ಇರುವ ಈ ಬೈಕ್ ಇದು ಪೆಟ್ರೋಲ್ ಮತ್ತು CNG ಎರಡರಲ್ಲೂ ಚಾಲನೆ ಮಾಡಲು ಸಾಧ್ಯವಿದೆ.. ಈ ಬೈಕ್ ನಾ ಎಂಜಿನ್ 9.5 PS ಪವರ್ ಹೊಂದಿದೆ. ಜೊತೆಗೆ 9.7 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದನಾ ಸಾಮರ್ಥ್ಯ ಇದೆ. ಇದರ ಜೊತೆಗೆ ಇದಕ್ಕೆ ಸೀಟಿನ ಕೆಳಗೆ ಸಿಎನ್‌ಜಿ ಸಿಲಿಂಡರ್ ಅಳವಡಿಕೆ ಮಾಡಲಾಗಿದೆ. ಇನ್ನು 125 ಸಿಸಿ ಬೈಕ್ ಅತಿ ದೊಡ್ಡ ಸೀಟ್ ಇದೆ. ದೂರದ ಪ್ರಯಾಣವನ್ನು ಸಹ ಇಬ್ಬರು ಆರಾಮವಾಗಿ ಮಾಡಬಹುದು. ಬೈಕ್ ಎಲ್ ಇಡಿ ಹೆಡ್ ಲ್ಯಾಂಪ್ ಮತ್ತು ಡ್ಯುಯಲ್ ಕಲರ್ ಗ್ರಾಫಿಕ್ಸ್ ಹೊಂದಿದೆ. ಈಗ ಸಧ್ಯಕ್ಕೆ ಭಾರತದಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿದೆ. ಜೊತೆಗೆ ಬೈಕ್ 7 ಬಣ್ಣಗಳ ಆಯ್ಕೆಗಳಲ್ಲಿ ಇದೆ. ಇನ್ನು ಇದರ ಜೊತೆಗೆ ಇನ್ನೊಂದು ವಿಶೇಷ ಏನೆಂದರೆ ಈ ಬೈಕ್ NG04 ಡಿಸ್ಕ್ LED, NG04 ಡ್ರಮ್ LED ಹಾಗೂ NG04 ಡ್ರಮ್ ಬ್ರೇಕ್ ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಾಜ್ಯದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಸುವ ವಿಧಾನ.
ಇದನ್ನೂ ಓದಿ: ನಿಮ್ಮ ಕಾರಿನ ಮೇಲೆ ನೀವು ಸಾಲ ತೆಗೆದುಕೊಳ್ಳುವುದು ಹೇಗೆ? ವಿಧಾನವನ್ನು ತಿಳಿಯಿರಿ.