ಬೆಂಗಳೂರು ಮೆಟ್ರೋ ದಲ್ಲಿ ಉದ್ಯೋಗ ಅವಕಾಶ ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.

ಬೆಂಗಳೂರಿನ ಮೆಟ್ರೋ ನಲ್ಲಿ ಒಟ್ಟು 11 ಮುಖ್ಯ ಇಂಜಿನಿಯರ್ (ಸಲಹೆಗಾರ) ಹಾಗೂ ಡೆಪ್ಯುಟಿ ಮುಖ್ಯ ಇಂಜಿನಿಯರ್ ಹಾಗೂ ಸೆಕ್ಷನ್ ಇಂಜಿನಿಯರ್ ಹುದ್ದೆಗಳು ಖಾಲಿ ಇವೆ. ಆಸಕ್ತರು Online ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಇಲಾಖೆ ತಿಳಿಸಿದೆ. ಹುದ್ದೆಗಳ ಬಗ್ಗೆ ಪೂರ್ಣ ವಿವರಗಳನ್ನು ಪಡೆಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ.

WhatsApp Group Join Now
Telegram Group Join Now

ಹುದ್ದೆಗಳ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ :- ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ (BMRCL), ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೆಟ್ರೋ ನೆಟ್‌ವರ್ಕ್‌ಗಳಲ್ಲಿ ಒಂದಾಗಿದೆ. ಈಗ ಖಾಲೀ ಇರುವ ಹುದ್ದೆಗಳ ನೇಮಕಾತಿಗೆ ಮುಂದಾಗಿದ್ದು ಆಯಾ ಹುದ್ದೆಗೆ ಬೇರೆ ಬೇರೆ ರೀತಿಯ ನಿಯಮಗಳು ಹಾಗೂ ಶೈಕ್ಷಣಿಕ ಅರ್ಹತೆಗಳ ಬಗ್ಗೆ ಇಲಾಖೆ ಮಾಹಿತಿ ನೀಡಿದೆ. ಒಟ್ಟು ಮೂರು ಮುಖ್ಯ ಇಂಜಿನಿಯರ್ (ಸಲಹೆಗಾರ) ಹುದ್ದೆಗಳು ಹಾಗೂ ಮೂರು ಡೆಪ್ಯುಟಿ ಮುಖ್ಯ ಇಂಜಿನಿಯರ್ ಹುದ್ದೆಗಳು ಹಾಗೂ ಐದು ಸೆಕ್ಷನ್ ಇಂಜಿನಿಯರ್ ಹುದ್ದೆಗಳು ಖಾಲಿ ಇವೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಹತೆಯ ಮಾಹಿತಿ :-

  • ಅಭ್ಯರ್ಥಿಯು ಯಾವುದೇ ಎಂಜಿನಿಯರಿಂಗ್ ವಿಶ್ವವಿದ್ಯಾಲಯದಿಂದ ಸಿವಿಲ್ ಅಥವಾ ಎಲೆಕ್ಟ್ರಿಕಲ್ ಅಥವಾ ಬಿ. ಆರ್ಕ್ ಬಿಇ/ಬಿಟೆಕ್ ಪದವಿ ಪಡೆಯಬೇಕು.
  • MBA (ಮಾರ್ಕೆಟಿಂಗ್) ಹೊಂದಿರುವುದು ಒಂದು ಅದ್ಯತೆಯಾಗಿದೆ.

ವಯಸ್ಸಿನ ಅರ್ಹತೆ: ಅಭ್ಯರ್ಥಿಯು ನಿಗದಿತ ಅರ್ಜಿ ಸಲ್ಲಿಸುವ ದಿನಾಂಕದಂದು ನಿಗದಿತ ವಯಸ್ಸಿನ ಮಿತಿಯನ್ನು ಮೀರಿರಬಾರದು.

  • ಕಾರ್ಯನಿರ್ವಾಹಕ ಇಂಜಿನಿಯರ್: 45 ವರ್ಷ.
  • ಸಹಾಯಕ ಇಂಜಿನಿಯರ್ ಮತ್ತು ಸಹಾಯಕ ವ್ಯವಸ್ಥಾಪಕರು: 40 ವರ್ಷ.

ಒಪ್ಪಂದದ ಷರತ್ತುಗಳು ಏನೇನು?

  • ಆಯ್ಕೆಯಾದ ಅಭ್ಯರ್ಥಿಗಳಿಗೆ 3 ವರ್ಷಗಳ ಒಪ್ಪಂದದ ಅವಧಿಗೆ ಆಯ್ಕೆ ಮಾಡಿಕೊಳ್ಳಲಿದೆ. ನೇಮಕಗೊಂಡ ನಂತರ ಅಭ್ಯರ್ಥಿಯು ಕಡ್ಡಾಯವಾಗಿ 3 ವರ್ಷಗಳ ಕಾಲ ಕಡ್ಡಾಯವಾಗಿ ಕೆಲಸ ಮಾಡಬೇಕು.

ಇದನ್ನೂ ಓದಿ: ಹಾವೇರಿ ನ್ಯಾಯಾಂಗ ಘಟಕದಲ್ಲಿ SSLC ಪಾಸಾದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ. 

ಅರ್ಜಿ ಸಲ್ಲಿಸುವ ವಿಧಾನ :

  • ಹಂತ 1:- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಹಂತ 2:- ಲಾಗಿನ್ ಮಾಡಿ: ಮುಖ್ಯಪುಟದಲ್ಲಿ ನೇಮಕಾತಿ ಟ್ಯಾಬ್ ಕ್ಲಿಕ್ ಮಾಡಿ ಮತ್ತು ನಂತರ ಅರ್ಜಿ ಸಲ್ಲಿಸಿ ಲಿಂಕ್ ಕ್ಲಿಕ್ ಮಾಡಿ. ನಿಮ್ಮ ಲಾಗಿನ್ ವಿವರಗಳನ್ನು ನಮೂದಿಸಿ ಮತ್ತು ಲಾಗಿನ್ ಮಾಡಿ.
  • ನೇಮಕಾತಿ ದಾಖಲೆ ಹೋಗಿ: ಲಾಗಿನ್ ಆದ ನಂತರ, ನೇಮಕಾತಿಗಳು ಟ್ಯಾಬ್ ಕ್ಲಿಕ್ ಮಾಡಿ ಮತ್ತು ನಂತರ ನೀವು ಅರ್ಜಿ ಸಲ್ಲಿಸಲು ಬಯಸುವ ನಿರ್ದಿಷ್ಟ ಹುದ್ದೆಯನ್ನು ಆಯ್ಕೆ ಮಾಡಿ.
  • ನಮೂನೆಯನ್ನು ಡೌನ್‌ಲೋಡ್ ಮಾಡಿ: ಆಯ್ಕೆ ಮಾಡಿದ ಹುದ್ದೆಗೆ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ.
  • ಅರ್ಜಿ ನಮೂನೆಯನ್ನು ಭರ್ತಿ ಮಾಡಿ: ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಎಲ್ಲಾ ವಿವರಗಳನ್ನು ಸರಿಯಾಗಿ ಮತ್ತು ಸ್ಪಷ್ಟವಾಗಿ ಭರ್ತಿ ಮಾಡಿ. ಆನ್ಲೈನ್ ಮೂಲಕ ಭರ್ತಿ ಮಾಡಿರುವ ಅರ್ಜಿ ನಮೂನೆಯನ್ನು ಮೇಲ್ ಮಾಡಬೇಕು.

ಅರ್ಜಿಯ ಹಾರ್ಡ್ ಕಾಪಿ ಕಳುಹಿಸುವುದಾದರೆ ಹೀಗೆ ಮಾಡಿ :- ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಹಾರ್ಡ್ ಕಾಪಿಯನ್ನು General Manager (HR), Bangalore Metro Rail Corporation Limited, III Floor, BMTC Complex, K.H. ರಸ್ತೆ, ಶಾಂತಿನಗರ, ಬೆಂಗಳೂರು 560 027.

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ :- 31 /07/2024 ಆಗಿರುತ್ತದೆ. ಈ ದಿನಾಂಕದ ಒಳಗೆ ಅರ್ಜಿ ನಮೂನೆಯನ್ನು ಕಳುಹಿಸಬೇಕು.

ಇದನ್ನೂ ಓದಿ: SSLC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ 30,000 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.

Sharing Is Caring:

Leave a Comment