ಮನೆ ಕಟ್ಟುವುದು ಪ್ರತಿ ಒಬ್ಬರ ಕನಸು ಮನೆ ಕಟ್ಟುವಾಗ ನಮ್ಮ ಬಳಿ ಇರುವ ಹಣ ಸಲುವುದಿಲ್ಲ ಆಗ ನಾವು ಸಾಲವನ್ನು ಮಾಡಲೇ ಬೇಕು. ಆದರೆ ಯಾವ ಬ್ಯಾಂಕ್ ಅಥವಾ ಎಲ್ಲಿ ಸಾಲವನ್ನು ಮಾಡಿದರೆ ನಮಗೆ ಕಡಿಮೆ ಬಡ್ಡಿಯಲ್ಲಿ ಸಾಲವನ್ನೂ ಯಾವ ಬ್ಯಾಂಕ್ ನೀಡುತ್ತದೆ ಎಂಬುದನ್ನು ನಾವು ನೋಡುತ್ತೇವೆ. ಹಾಗಾದರೆ ಈಗ ಯಾವ ಬ್ಯಾಂಕ್ ನಲ್ಲಿ ಏಷ್ಟು ಬಡ್ಡಿದರ ಇದೆ ಗೃಹ ಸಾಲಕ್ಕೆ ಎಂಬ ಮಾಹಿತಿಯನ್ನು ತಿಳಿಯೋಣ.
ಕೆಲವು ಬ್ಯಾಂಕ್ ಗಳ ಗೃಹ ಸಾಲದ ಬಡ್ಡಿದರಗಳು ಮಾಹಿತಿ :-
1) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) :- ಭಾರತದ ಪ್ರತಿಷ್ಠಿತ ಬ್ಯಾಂಕ್ ಇದು. ಭಾರತದಾದ್ಯಂತ ಈ ಬ್ಯಾಂಕ್ ತನ್ನ ಶಾಖೆಯನ್ನು ಹೊಂದಿದೆ.
ಬಡ್ಡಿ ದರಗಳ ಮಾಹಿತಿ :- SBI ಪ್ರಸ್ತುತವಾಗಿ ಗೃಹ ಸಾಲಗಳ ಪಡೆದರೆ ಸಾಲದ ಮೊತ್ತಕ್ಕೆ ಶೇಕಡಾ 9.15% ಬಡ್ಡಿದರವನ್ನು ನೀಡಬೇಕು. ಉದಾಹರಣೆಗೆ ನೀವು 75 ಲಕ್ಷ ರೂಪಾಯಿ ಸಾಲವನ್ನು 20 ವರ್ಷಗಳ ಅವಧಿಗೆ ತೆಗೆದುಕೊಂಡರೆ ನೀವು ತಿಂಗಳ EMI 67,725 ರೂಪಾಯಿ ಪಾವತಿಸಬೇಕಾಗುತ್ತದೆ.
2) ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (UBI) :- ಇದು ಭಾರತದ ಹಲವು ರಾಜ್ಯಗಳಲ್ಲಿ ತನ್ನ ಶಾಖೆಯನ್ನ ಹೊಂದಿದೆ. ಇದು ಕಡಿಮೆ ಬಡ್ಡಿ ದರ ನೀಡುವ ಬ್ಯಾಂಕ್ ಆಗಿದೆ.
ಬಡ್ಡಿ ದರಗಳ ಮಾಹಿತಿ :- ಈ ಬ್ಯಾಂಕ್ ಪ್ರಸ್ತುತವಾಗಿ ಶೇಕಡಾ 8.35% ಬಡ್ಡಿದರದಲ್ಲಿ ಗೃಹ ಸಾಲಗಳನ್ನು ಕೊಡುತ್ತದೆ. ಉದಾಹರಣೆಗೆ 75 ಲಕ್ಷ ರೂಪಾಯಿಗೆ 20 ವರ್ಷಗಳ ಅವಧಿಗೆ ಗೃಹ ಸಾಲ ಪಡೆದರೆ ನೀವು ತಿಂಗಳಿಗೆ EMI ₹63,900 ರೂಪಾಯಿ ಕಟ್ಟಬೇಕು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
3) ಕೆನರಾ ಬ್ಯಾಂಕ್ :- ಕೆನರಾ ಬ್ಯಾಂಕ್ ನಲ್ಲಿ ಸಹ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲಕ್ಕೆ ಬಡ್ಡಿಯನ್ನು ನೀಡುತ್ತಿದೆ.
ಬಡ್ಡಿದರ ಮಾಹಿತಿ:- ಕೆನರಾ ಬ್ಯಾಂಕ್ ನಲ್ಲಿ ಪ್ರಸ್ತುತವಾಗಿ ಶೇಕಡಾ 8.5% ಬಡ್ಡಿದರ ಇದೆ. 75 ಲಕ್ಷ ರೂಪಾಯಿ ಸಾಲವನ್ನು 20 ವರ್ಷಗಳ ಅವಧಿಗೆ ನೀವು ಪಡೆದರೆ ತಿಂಗಳಿಗೆ EMI 64,650 ರೂಪಾಯಿ ಕಟ್ಟಬೇಕು.
4) ಬ್ಯಾಂಕ್ ಆಫ್ ಬರೋಡಾ :- ಬ್ಯಾಂಕ್ ಆಫ್ ಬರೋಡಾ ಜೊತೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಾಗೂ ಇಂಡಿಯನ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಡಿಯಾ ಹಾಗೂ ಇಂಡಸ್‌ಇಂಡ್ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್‌ಗಳಿಂದ ಗೃಹ ಸಾಲ ತೆಗೆದುಕೊಂಡರೆ ಶೇಕಡಾ 8.4% ಬಡ್ಡಿ ಸಿಗುತ್ತದೆ. ₹75 ಲಕ್ಷ ರೂಪಾಯಿ ಸಾಲವನ್ನು 20 ವರ್ಷಗಳ ಅವಧಿಗೆ ತೆಗೆದುಕೊಂಡರೆ, ತಿಂಗಳ EMI ಮೊತ್ತ 64,200 ರೂಪಾಯಿ.
5) ಕೋಟಕ್ ಮಹೀಂದ್ರಾ ಬ್ಯಾಂಕ್ :-
ಇಲ್ಲಿ ಗೃಹ ಸಾಲಕ್ಕೆ ಪ್ರಸ್ತುತವಾಗಿ 8.7% ಬಡ್ಡಿ ಇದೆ. ನೀವು 75 ಲಕ್ಷ ರೂಪಾಯಿ 20 ವರ್ಷಗಳ ಅವಧಿಗೆ ಗೃಹ ಸಾಲ ತೆಗೆದುಕೊಂಡರೆ ತಿಂಗಳಿಗೆ 64,550 ರೂಪಾಯಿ ಇಎಂಐ ಕಟ್ಟಬೇಕು.
6) ಆಕ್ಸಿಸ್ ಬ್ಯಾಂಕ್:- ಆಕ್ಸಿಸ್ ಬ್ಯಾಂಕ್ ನಲ್ಲಿ ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತದೆ. ಇದು ಖಾಸಗಿ ವಲಯದ ಬ್ಯಾಂಕುಗಳಲ್ಲಿ ಅತ್ಯಂತ ಕಡಿಮೆಯಾಗಿದೆ ನೀವು 75 ಲಕ್ಷ ರೂಪಾಯಿ ಸಾಲವನ್ನು 20 ವರ್ಷಗಳ ಅವಧಿಗೆ ತೆಗೆದುಕೊಂಡರೆ ತಿಂಗಳಿಗೆ EMI ಮೊತ್ತ 65,775 ರೂಪಾಯಿ ಆಗಿರುತ್ತದೆ.
7) ಐಸಿಐಸಿಐ ಬ್ಯಾಂಕ್ :- ಐಸಿಐಸಿಐ ಬ್ಯಾಂಕ್ ಪ್ರಸ್ತುತವಾಗಿ ಶೇಕಡಾ 9% ಬಡ್ಡಿಯನ್ನು ವಿಧಿಸುತ್ತದೆ. 75 ಲಕ್ಷ ಸಾಲವನ್ನು 20 ವರ್ಷಗಳ ಅವಧಿಗೆ ಪಡೆದರೆ ತಿಂಗಳಿಗೆ ಕಟ್ಟಬೇಕಾದ EMI ಮೊತ್ತ 66,975 ರೂಪಾಯಿ.
8) ಯೆಸ್ ಬ್ಯಾಂಕ್ :- ಇಲ್ಲಿ ಪ್ರಸ್ತುತವಾಗಿ ಶೇಕಡಾ 9.4% ಬಡ್ಡಿ ವಿಧಿಸಲಾಗುತ್ತದೆ. 75 ಲಕ್ಷ ರೂಪಾಯಿ ಸಾಲವನ್ನು 20 ವರ್ಷಗಳ ಅವಧಿಯ ಪಡೆದರೆ ತಿಂಗಳಿಗೆ ಕಟ್ಟಬೇಕಾದ EMI ಮೊತ್ತವು 68,850 ರೂಪಾಯಿ ಆಗಿರುತ್ತದೆ.
ಇದನ್ನೂ ಓದಿ: LIC ಜೀವನ್ ಪ್ರಗತಿ ಯೋಜನೆ ಯಲ್ಲಿ ನೀವು 200 ರೂಪಾಯಿಗಳನ್ನು ಠೇವಣಿ ಮಾಡಿ 28 ಲಕ್ಷ ರೂಪಾಯಿಗಳನ್ನು ಪಡೆಯಬಹುದು.