ಕನಿಷ್ಠ ಬ್ಯಾಲೆನ್ಸ್ ಇಲ್ಲದ ಸರ್ಕಾರಿ ಬ್ಯಾಂಕುಗಳು ಗ್ರಾಹಕರಿಂದ ವಿಧಿಸಿರುವ ದಂಡದ ಬಗ್ಗೆ ಇತ್ತೀಚೆಗೆ ದೊಡ್ಡ ಸುದ್ದಿಯಾಗಿದೆ. ಸುಮಾರು 8,495 ಕೋಟಿ ರೂ. ಹಣವನ್ನು ಗ್ರಾಹಕರಿಂದ ವಸೂಲಿ ಮಾಡಲಾಗಿದೆ ಪಂಜಾಬ್ ಬ್ಯಾಂಕ್ ಒಂದರಲ್ಲಿ ಕಳೆದ ಐದು ವರ್ಷಗಳಲ್ಲಿ 1,538 ಕೋಟಿ ರೂ. ಗಳನ್ನು ವಸೂಲಿ ಮಾಡಿದೆ. ಆದರೆ, ದೇಶದ ಅತಿದೊಡ್ಡ ಬ್ಯಾಂಕಾದ ಸ್ಟೇಟ್ ಬ್ಯಾಂಕ್ ಮಾತ್ರ ಈ ರೀತಿಯ ಶುಲ್ಕವನ್ನು ವಿಧಿಸುತ್ತಿಲ್ಲ.ಹಾಗಾದರೆ ಯಾವ ಬ್ಯಾಂಕ್ ನಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲದೆ ಇದ್ದರೆ ಏಷ್ಟು ಹಣ ನೀಡಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.
ಯಾವ ಬ್ಯಾಂಕ್ ನಲ್ಲಿ ಏಷ್ಟು ದಂಡ ನೀಡಬೇಕು :-
ಪಂಜಾಬ್ ಬ್ಯಾಂಕ್ನಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದಿದ್ದರೆ ಗ್ರಾಹಕರು ದಂಡವನ್ನು ನೀಡಬೇಕಾಗುತ್ತದೆ. ಈ ದಂಡದ ಗ್ರಾಹಕರು ವಾಸಿಸುವ ಪ್ರದೇಶವನ್ನು ಅನುಸರಿಸಿ ಬದಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ 400 ರೂ., ಅರೆ-ನಗರದಲ್ಲಿ 500 ರೂ. ಮತ್ತು ನಗರ ಅಥವಾ ಮೆಟ್ರೋ ಪ್ರದೇಶಗಳಲ್ಲಿ 600 ರೂ. ದಂಡ ನೀಡಬೇಕು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2020 ರಿಂದ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸದಿದ್ದಕ್ಕಾಗಿ ಯಾವುದೇ ಶುಲ್ಕವನ್ನು ವಿಧಿಸುವುದನ್ನು ನಿಲ್ಲಿಸಲಾಗಿದೆ.
ಐಸಿಐಸಿಐ ಬ್ಯಾಂಕ್ನ ಉಳಿತಾಯ ಖಾತೆಯಲ್ಲಿ ಕನಿಷ್ಠ ರೂ. 5000 ಎಂದು ನಿರ್ಧರಿಸಲಾಗಿದೆ. ಖಾತೆಯಲ್ಲಿ ನಿಗದಿತ ಕನಿಷ್ಠ ಬ್ಯಾಲೆನ್ಸ್ಗಿಂತ ಕಡಿಮೆ ಹಣ ಇದ್ದರೆ, ಬ್ಯಾಂಕ್ ನಿಮಗೆ ದಂಡ ವಿಧಿಸುತ್ತದೆ. ನಿಮ್ಮ ಖಾತೆಯಲ್ಲಿ ರೂ. 4000 ಇದೆ ಎಂದು ಹೇಳೋಣ. ಆಗ ಕೊರತೆ ರೂ. 1000 ಆಗುತ್ತದೆ. ಇದಕ್ಕೆ ರೂ. 100 ಸೇರಿಸಿದರೆ ರೂ. 1100 ಆಗುತ್ತದೆ. ಈಗ ರೂ. 1100 ರಲ್ಲಿ 5% ಲೆಕ್ಕ ಹಾಕಿದರೆ ನಿಮಗೆ ವಿಧಿಸುವ ದಂಡ ರೂ. 55 ಆಗುತ್ತದೆ.
HDFC ಬ್ಯಾಂಕ್ನಲ್ಲಿ ಉಳಿತಾಯ ಖಾತೆ ಹೊಂದಿರುವವರು ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸಬೇಕು. ಮೆಟ್ರೋ ಮತ್ತು ನಗರಗಳಲ್ಲಿ ಈ ಮೊತ್ತ ರೂ. 10,000 ಅಥವಾ ಒಂದು ವರ್ಷ ಮತ್ತು ಒಂದು ದಿನದ ಎಫ್ಡಿಗೆ ಸಮಾನವಾದ ಮೊತ್ತ. ಅರೆ-ನಗರಗಳಲ್ಲಿ ಈ ಮೊತ್ತ ರೂ. 5,000 ಅಥವಾ ಒಂದು ವರ್ಷ ಮತ್ತು ಒಂದು ದಿನದ ಎಫ್ಡಿಗೆ ಸಮಾನವಾದ ಮೊತ್ತ. ಈ ನಿಯಮವನ್ನು ಪಾಲಿಸದಿದ್ದರೆ ಗ್ರಾಹಕರು ದಂಡವನ್ನು ಪಡೆದರು. ದಂಡದ ಮೊತ್ತವು ಕೊರತೆಯ 6% ಅಥವಾ ರೂ. 600 ದಂಡ ನೀಡಬೇಕು.
ಯೆಸ್ ಬ್ಯಾಂಕ್ ತನ್ನ ಕನಿಷ್ಠ ಬ್ಯಾಲೆನ್ಸ್ ಇಲ್ಲದೆ ಇದ್ದರೆ ಶುಲ್ಕವನ್ನು ವಿಧಿಸುವುದಿಲ್ಲ.
ಆಕ್ಸಿಸ್ ಬ್ಯಾಂಕ್ನ ಮೂಲ ಉಳಿತಾಯ ಖಾತೆಯಲ್ಲಿ ಕನಿಷ್ಠ ಶುಲ್ಕವಿಲ್ಲ. ಆದರೆ, ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿ ದಂಡವನ್ನು ವಿಧಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಿಮ್ಮ ಹೂಡಿಕೆಯ ಹಣ ಡಬಲ್ ಆಗಬೇಕು ಎಂದರೆ ನೀವು ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ ಹೂಡಿಕೆ ಮಾಡಲೇಬೇಕು.
ಬ್ಯಾಂಕ್ನಲ್ಲಿ ಕನಿಷ್ಠ ಬ್ಯಾಲೆನ್ಸ್ ಉಳಿಸುವುದರಿಂದ ಆಗುವ ಒಳ್ಳೆಯ ಪರಿಣಾಮಗಳು ಏನೇನು?
- ಶುಲ್ಕ ತಪ್ಪಿಸುವುದು: ಬ್ಯಾಂಕುಗಳಿಗೆ ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೆ ಶುಲ್ಕ ವಿಧಿಸಲಾಗುತ್ತದೆ. ಕನಿಷ್ಠ ಬ್ಯಾಲೆನ್ಸ್ ಉಳಿಸುವುದರಿಂದ ಈ ಶುಲ್ಕವನ್ನು ತಪ್ಪಿಸಬಹುದು.
- ಉಳಿತಾಯದ ಅಭ್ಯಾಸ: ಕನಿಷ್ಠ ಬ್ಯಾಲೆನ್ಸ್ ಉಳಿಸುವ ಅಭ್ಯಾಸವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.
- ಆರ್ಥಿಕ ಭದ್ರತೆ: ಅನಿವಾರ್ಯ ಸಂದರ್ಭಗಳಲ್ಲಿ ಈ ಹಣವನ್ನು ಬಳಸಬಹುದು.
ಇದನ್ನೂ ಓದಿ: LPG ಸಿಲಿಂಡರ್ ಖರೀದಿಯ ಮೇಲೆ ಭಾರಿ ರಿಯಾಯಿತಿ; ಇಲ್ಲಿದೆ ಸಂಪೂರ್ಣ ಮಾಹಿತಿ.