ಗ್ರಾಮ್ ಒನ್ ಕೇಂದ್ರಗಳ ಪ್ರಾಂಚೈಸಿ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಇರುವ ಗ್ರಾಮ್ ಒನ್ ಕೇಂದ್ರಗಳಿಗೆ ಪ್ರಾಂಚೈಸಿಗಳ ಅಗತ್ಯ ಇದ್ದು. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು ಎಂದು ಬಳ್ಳಾರಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಮೊಹಮದ್ ಜುಬರ್ ಅವರು ತಿಳಿಸಿದ್ದಾರೆ. ಜನರಿಗೆ ಅಗತ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಇರುವ ಗ್ರಾಮ ಒನ್ ಸೇವಾ ಕೇಂದ್ರಗಳನ್ನು ತೆರೆಯಲು ಆಸಕ್ತಿ ಇರುವವರು ಈಗಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now

ಬಳ್ಳಾರಿ ಜಿಲ್ಲೆಯಲ್ಲಿರುವ ಗ್ರಾಮ ಒನ್ ಕೇಂದ್ರಗಳ ಸಂಖ್ಯೆ ಎಷ್ಟು?: ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 182 ಗ್ರಾಮ್ ಒನ್ ಕೇಂದ್ರಗಳು ಇವೆ. ಇದರಲ್ಲಿ ಸಧ್ಯ 153 ಗ್ರಾಮ್ ಒನ್ ಕೇಂದ್ರಗಳು ಚಾಲನೆಯಲ್ಲಿ ಇವೆ.

ಪ್ರಾಂಚೈಸಿ ನೇಮಕಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- ಖಾಲಿ ಇರುವ ಪ್ರಾಂಚೈಸಿಗಳ ನೇಮಕಾತಿ ಗೆ ಇದೆ ಬರುವ ಜೂಲೈ 15 2024 ಕೊನೆಯ ದಿನ ಆಗಿರುತ್ತದೆ. 

ಗ್ರಾಮ ಕೇಂದ್ರದ ಪ್ರಾಂಚೈಸಿಗಳ ಕೆಲವು ಪ್ರಮುಖ ಜವಾಬ್ದಾರಿಗಳು:

ಗ್ರಾಮ ಒನ್ ಕೇಂದ್ರಗಳು ಭಾರತ ಸರ್ಕಾರದ ಜನಸೇವಾ ಕೇಂದ್ರಗಳು ಫ್ರಾಂಚೈಸಿಗಳಾಗಿ ಕಾರ್ಯನಿರ್ವಹಿಸುತ್ತವೆ. ಈ ಕೇಂದ್ರಗಳು ನಾಗರಿಕರಿಗೆ ವಿವಿಧ ಸರ್ಕಾರಿ ಸೇವೆಗಳನ್ನು ಒದಗಿಸಲು ಜವಾಬ್ದಾರರು ಆಗಿರುತ್ತದೆ. ಹಾಗಾದರೆ ಪ್ರಾಂಚೈಸಿಗಳ ಜವಾಬ್ದಾರಿಗಳು ಹೀಗಿವೆ.

  • ಸರ್ಕಾರಿ ಸೇವೆಗಳನ್ನು ನೀಡುವುದು: ಗ್ರಾಮ ಒನ್ ಕೇಂದ್ರಗಳಲ್ಲಿ ಪ್ರಾಂಚೈಸಿಗಳು ಸರಿಯಾದ ಸಮಯಕ್ಕೆ ಜನನ ಪ್ರಮಾಣಪತ್ರಗಳು ಜಗುಬ್ ಆಧಾರ್ ಕಾರ್ಡ್‌ಗಳು ಜೊತೆಗೆ ಪ್ಯಾನ್ ಕಾರ್ಡ್‌ಗಳನ್ನೂ ಮಾಡಿಕೊಡಬೇಕು. ಜೊತೆಗೆ ಗ್ರಾಹಕರಿಗೆ ವಿದ್ಯುತ್ ಬಿಲ್‌ಗಳ ಪಾವತಿ ಮಾಡಲು ಹಾಗೂ ರೈಲು ಟಿಕೆಟ್‌ಗಳನ್ನು ಕಾಯ್ದಿರಿಸುವಿಕೆ ಅಂತಹ ಇನ್ನೂ ಹೆಚ್ಚಿನಾ ಸೇವಗಳನ್ನು ಸರಿಯಾದ ಸಮಯಕ್ಕೆ ಒದಗಿಸುವುದು ಪ್ರಾಂಚೈಸಿ ಗಳ ಕೆಲಸ ಆಗಿರುತ್ತದೆ.
  • ಅರ್ಜಿ ಸಲ್ಲಿಸುವ ಸಹಾಯ: ಗ್ರಾಹಕರು ಯಾವುದೇ ಕೇಂದ್ರ ಅಥವಾ ರಾಜ್ಯ ಸರಕಾರದ ಸರ್ಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ ಅವರಿಗೆ ಸಹಾಯ ಮಾಡುವುದು ಪ್ರಾಂಚೈಸಿಗಳ ಜವಾಬ್ದಾರಿಯಾಗಿದೆ.
  • ಮಾಹಿತಿಯನ್ನು ಒದಗಿಸುವುದು: ಗ್ರಾಮ್ ಒನ್ ಕೇಂದ್ರಗಳಿಗೆ ಬರುವ ಗ್ರಾಹಕರಿಗೆ ಸರ್ಕಾರಿ ಯೋಜನೆಗಳ ಬಗ್ಗೆ ಮತ್ತು ಸೇವೆಗಳ ಬಗ್ಗೆ ನಿಖರವಾಗಿ ಮಾಹಿತಿಯನ್ನು ಒದಗಿಸುವುದು ಪ್ರಾಂಚೈಸಿಗಳ ಕೆಲಸವಾಗಿರುತ್ತದೆ.
  • ಮಧ್ಯಸ್ಥಿಕೆ: ಸರ್ಕಾರಿ ಇಲಾಖೆಗಳ ಮತ್ತು ನಾಗರಿಕರ ನಡುವೆ ಮಧ್ಯಸ್ಥಿಕೆ ವಹಿಸುವುದು ಪ್ರಾಂಚೈಸಿಗಳ ಜವಾಬ್ದಾರಿಯಾಗಿಯುತ್ತದೆ.
  • ಕೇಂದ್ರ ನಿರ್ವಹಣೆ: ಮುಖ್ಯವಾಗಿ ಗ್ರಾಮ ಒನ್ ಕೇಂದ್ರವನ್ನು ತೆರೆಯುವುದು ಮತ್ತು ಸರಿಯಾಗಿ ನಿರ್ವಹಿಸುವ ಪ್ರಾಂಚೈಸಿಗಳ ಕೆಲಸ ಆಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: NSP ವಿದ್ಯಾರ್ಥಿವೇತನ 2024 ಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ನೋಡೋಣ.

ಗ್ರಾಮ್ ಒನ್ ಕೇಂದ್ರದ ಪ್ರಾಂಚೈಸಿ ಆಗಲು ಇರಬೇಕಾದ ಅರ್ಹತೆಗಳು :-

  • ಭಾರತೀಯ ನಾಗರಿಕರಿಗೆ ಮಾತ್ರ ಅವಕಾಶ ಇರುತ್ತದೆ.
  • 18 ವರ್ಷಕ್ಕಿಂತ ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದು.
  • ಅರ್ಜಿ ಸಲ್ಲಿಸುವ ಅಭ್ಯರ್ಥಿ ಕನಿಷ್ಠ ಪದವಿ ಉತ್ತೀರ್ಣರಾಗಬೇಕು.
  • ಉದ್ಯಮಶೀಲತೆಯಲ್ಲಿ ಉತ್ತಮ ಅನುಭವ ಹೊಂದಿರಬೇಕು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
  • ಉತ್ತಮ ಸಂವಹನ ಮತ್ತು ಜನಸಂಪರ್ಕ ಕೌಶಲ್ಯಗಳನ್ನು ಹೊಂದಿರಬೇಕು
  • ಒಂದರಿಂದ ಎರಡು ಲಕ್ಷ ರೂಪಾಯಿ ಹೂಡಿಕೆ ಮಾಡುವ ಸಾಮರ್ಥ್ಯ ಹೊಂದಿರಬೇಕು.

ಗ್ರಾಮ ಒನ್ ಕೇಂದ್ರದ ಪ್ರಾಂಚೈಸಿ ಆಗುವುದು ಒಂದು ಲಾಭದಾಯಕ ವ್ಯವಹಾರವಾಗಿದೆ. ಭಾರತ ಸರ್ಕಾರವು ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಸೇವೆಗಳನ್ನು ಹೆಚ್ಚು ಪ್ರವೇಶಿಸಬಹುದಾದಂತೆ ಮಾಡಲು ಗ್ರಾಮ ಒನ್ ಕೇಂದ್ರಗಳ ಜಾಲವನ್ನು ವಿಸ್ತರಿಸಲು ಬಯಸುತ್ತದೆ ಇತ್ತೀಚಿನ ದಿನಗಳಲ್ಲಿ ಗ್ರಾಮ ಒನ್ ಕೇಂದ್ರಗಳಿಗೆ ಹೆಚ್ಚಿನ ಬೇಡಿಕೆ ಇದೆ.

ಇದನ್ನೂ ಓದಿ: ಒಂದು ವರ್ಷದ ಅವಧಿಯ FD ಯೋಜನೆಗೆ ಹೆಚ್ಚು ಬಡ್ಡಿ ದರ ನೀಡುವ ಬ್ಯಾಂಕ್ ಗಳು ಇವು..

Sharing Is Caring:

Leave a Comment