ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ರೀಲ್ಸ್ ಮಾಡಿ ಬಹುಮಾನ ಗೆಲ್ಲಬಹುದು.

ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮೀ ಯೋಜನೆ ಯಜಮಾನಿಯರಿಗೆ ರೀಲ್ಸ್ ಮಾಡಿ ಬಹುಮಾನ ಗೆಲ್ಲುವ ಅವಕಾಶ ಕಲ್ಪಿಸಿದ್ದು, ರಾಜ್ಯದ ಕುಟುಂಬದ ಯಜಮಾನಿಗಳಲ್ಲಿ ಸಂತಸ ತಂದಿದೆ. ಗೃಹಲಕ್ಷ್ಮೀ ಯೋಜನೆಯಡಿ ರೀಲ್ಸ್ ಸ್ಪರ್ಧೆಯನ್ನು ನಡೆಸುವ ಮೂಲಕ ರಾಜ್ಯ ಸರ್ಕಾರ ಮಹಿಳೆಯರ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಿದೆ. ರಾಜ್ಯದ ಮಹಿಳೆಯರಲ್ಲಿ ಕಲಾತ್ಮಕ ಪ್ರತಿಭೆಯನ್ನು ಹೊರಹಾಕುವ ಉದ್ದೇಶದಿಂದ ಗೃಹಲಕ್ಷ್ಮೀ ಯೋಜನೆಡಿ ರೀಲ್ಸ್ ಸ್ಪರ್ಧೆಯನ್ನು ಪ್ರಾರಂಭಿಸಲಾಗಿದೆ.

WhatsApp Group Join Now
Telegram Group Join Now

ವರ್ಷದ ಸಂಭ್ರಮ :-

ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ರಾಜ್ಯದ ಎಲ್ಲಾ ಕುಟುಂಬದ ಯಜಮಾನಿಯರಿಗೆ ಹೃದಯಪೂರ್ವಕ ಶುಭಾಶಯಗಳನ್ನು ಮತ್ತು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಗೃಹಲಕ್ಷ್ಮೀ ಯೋಜನೆಯ ಯಶಸ್ಸು ಸರ್ಕಾರದ ಮಹಿಳಾ ಸಬಲೀಕರಣದ ಕಡೆಗಿನ ಬದ್ಧತೆಯನ್ನು ಸಾಬೀತುಪಡಿಸುತ್ತದೆ ಎಂದು ಸಚಿವೆ ಹೇಳಿದ್ದಾರೆ. ಯೋಜನೆಯ ಒಂದು ವರ್ಷದ ಸಂಭ್ರಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಯಜಮಾನಿಯರಿಗೆ ವಿಶೇಷ ಬಹುಮಾನವನ್ನು ಘೋಷಿಸಿದ್ದಾರೆ.

ನೀವು ಬಹುಮಾನ ಗೆಲ್ಲಿ :- ಗೃಹಲಕ್ಷ್ಮೀ ಯೋಜನೆಡಿ, ತಮ್ಮ ಅನುಭವ ರೀಲ್ಸ್ ರೂಪದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲು ಯಜಮಾನಿಗಳನ್ನು ಪ್ರೋತ್ಸಾಹಿಸಿಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ ರೀಲ್ಸ್ ಮಾಡಿದ ಯಜಮಾನಿಯರನ್ನು ಗುರುತಿಸಿ ಬಹುಮಾನ ನೀಡಲಾಗುತ್ತಿದೆ. ಈ ಸ್ಪರ್ಧೆ ಸೆಪ್ಟೆಂಬರ್ 30ರವರೆಗೆ ನಡೆಯಲಿದೆ. ವಿಸ್ತೃತ: ಯಜಮಾನಿಯರು ಸೆಪ್ಟೆಂಬರ್ 30 ರೊಳಗೆ ತಮ್ಮ ರೀಲ್ಸ್‌ಗಳನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಗೃಹಲಕ್ಷ್ಮೀ ಯೋಜನೆಯ ರೀಲ್ಸ್ ಸ್ಪರ್ಧೆ: ಗೃಹಲಕ್ಷ್ಮೀ ಯೋಜನೆ ಯಶಸ್ಸನ್ನು ಹೆಚ್ಚು ಜನರಿಗೆ ತಲುಪಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯಿಂದ ತಮ್ಮ ಜೀವನದಲ್ಲಿ ಆಗಿರುವ ಬದಲಾವಣೆಗಳನ್ನು ಜನರು ತಮ್ಮ ಸ್ವಂತ ಪದಗಳ ವೀಡಿಯೊಗಳ ಮೂಲಕ ಹಂಚಿಕೊಳ್ಳುವಂತೆ ಪ್ರೋತ್ಸಾಹಿಸುತ್ತಿದ್ದಾರೆ.

ಇದನ್ನೂ ಓದಿ: ನೀವು ಎಟಿಎಂ ಕಾರ್ಡ್ ಇಲ್ಲದೆಯೇ UPI ಬಳಸಿ ಈಗ ನಿಮ್ಮ ಹಣವನ್ನು ಡೆಪಾಸಿಟ್ ಮಾಡಿ. 

ಸ್ಪರ್ಧೆಯ ನಿಯಮಗಳು:

  • ರೀಲ್ಸ್ ರಚನೆ: ಗೃಹಲಕ್ಷ್ಮೀ ಯೋಜನೆಯಿಂದ ತಮಗೆ ಆಗಿರುವ ಪ್ರಯೋಜನಗಳ ಬಗ್ಗೆ ಒಂದು ಸಣ್ಣ ವಿಡಿಯೋ ಮಾಡಬೇಕು.
  • ಸಾಮಾಜಿಕ ಮಾಧ್ಯಮ: ಈ ವೀಡಿಯೊಗಳನ್ನು ಯೂಟ್ಯೂಬ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಬೇಕು.
  • ಸಮಯ: ಈ ಸ್ಪರ್ಧೆ ಸೆಪ್ಟೆಂಬರ್ 30 ರವರೆಗೆ ನಡೆಯಲಿದೆ.
  • ವಿಜೇತರ ಆಯ್ಕೆ: ಹೆಚ್ಚು ಜನಪ್ರಿಯತೆ ಗಳಿಸಿದ ವಿಡಿಯೋಗಳನ್ನು ಆಯ್ಕೆ ಮಾಡಲಾಗುವುದು. ಹೆಚ್ಚು ವೀಕ್ಷಣೆಗಳು, ಲೈಕ್‌ಗಳು, ಕಾಮೆಂಟ್‌ಗಳು ಮತ್ತು ಶೇರ್‌ಗಳು ಪಡೆದ ವೀಡಿಯೊಗಳು ವಿಜೇತರಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚು.

ಬಹುಮಾನ: ಮೊದಲ 50 ಸ್ಥಾನ: ಮೊದಲ 50 ಸ್ಥಾನಗಳನ್ನು ಪಡೆದಿರುವ ಯಜಮಾನಿಯರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕ ಅವರಿಗೆ ವೈಯಕ್ತಿಕವಾಗಿ ಬಹುಮಾನ ನೀಡಲಿದ್ದಾರೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮನವಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಎಲ್ಲಾ ಗೃಹಲಕ್ಷ್ಮೀ ಯೋಜನೆ ಯಜಮಾನಿಯರಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸಿ, ತಮ್ಮ ಅನುಭವಗಳನ್ನು ಇತರರೊಂದಿಗೆ ಹಂಚಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಯೋಜನೆಯಿಂದ ಜೀವನದಲ್ಲಿ ಆಗಿರುವ ಬದಲಾವಣೆಗಳನ್ನು ಜನರ ಮುಂದೆ ತರುವ ಮೂಲಕ ಈ ಯೋಜನೆ ಯಶಸ್ಸನ್ನು ಇನ್ನಷ್ಟು ಹೆಚ್ಚಿಸುವಂತೆ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ಈ ಎರಡು BSNL ರೀಚಾರ್ಜ್ ಯೋಜನೆಗಳು 200 ರೂಪಾಯಿ ಒಳಗೆ 70 ದಿನಗಳವರೆಗೆ ಮಾನ್ಯವಾಗಿರುತ್ತದೆ. 

ಇದನ್ನೂ ಓದಿ: ಮಹಿಳೆಯರಿಗೆ ಹೆಚ್ಚು ಲಾಭದಾಯಕವಾದ 5 ಪೋಸ್ಟ್ ಆಫೀಸ್ ಯೋಜನೆಗಳ ಬಗ್ಗೆ ಮಾಹಿತಿ.

Sharing Is Caring:

Leave a Comment