ಗೃಹಲಕ್ಷ್ಮಿ ಯೋಜನೆಯಡಿ ಹಣ ಪಡೆಯುತ್ತಿರುವ ಎಲ್ಲಾ ಮಹಿಳೆಯರು ದಯವಿಟ್ಟು ಗಮನಿಸಿ. ನಿಮ್ಮ ಖಾತೆಯ ಹಣ ದೋಚುವ ಒಂದು ಜಾಲ ನಿಮ್ಮ ಸುತ್ತಲೂ ಇರಬಹುದು. ದಯವಿಟ್ಟು ನೀವು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಗೃಹ ಲಕ್ಷ್ಮಿ ಹಣದ ಜೊತೆಗೆ ನಿಮ್ಮ ಖಾತೆಯ ಪೂರ್ಣ ಹಣವೂ ಬೇರೆಯವರು ದೋಚುತ್ತಾರೆ. ನಿಮ್ಮ ಬ್ಯಾಂಕ್ ಖಾತೆಯ ಹಣವನ್ನು ಉಳಿಸಿಕೊಳ್ಳಬೇಕು ಎಂದರೆ ತಪ್ಪದೆ ಈ ಲೇಖನವನ್ನು ಪೂರ್ತಿಯಾಗಿ ಓದಿ.
ಸುತ್ತಮುತ್ತಲೂ ಕಳ್ಳರು ಇರಬಹುದು ಎಚ್ಚರಿಕೆ :- ಗೃಹಲಕ್ಷ್ಮಿ ಯೋಜನೆ 11 ಮತ್ತು 12 ನೇ ಕಂತುಗಳು ವಿಳಂಬವಾಗುತ್ತಿರುವ ಸಂದರ್ಭದಲ್ಲಿ, ಕೆಲವು ಸ್ಥಳೀಯ ಆನ್‌ಲೈನ್ ಸೆಂಟರ್‌ಗಳು ಇಕೆವೈಸಿ ಕಾರ್ಡ್ ಮಾಡಿಸಬೇಕು ಮತ್ತು ಪಿಂಕ್ ಸ್ಮಾರ್ಟ್ ಆಗಿರಬೇಕು ಎಂಬ ಸುಳ್ಳು ಮಾಹಿತಿ ಹರಡುತ್ತದೆ, ಬಳಕೆದಾರರ ಗೊಂದಲ ಸೃಷ್ಟಿಯಾಗಿದೆ. ಇದರಿಂದ ಹಲವಾರು ಜನರು ತಮ್ಮ ಹತ್ತಿರದ ಕಂಪ್ಯೂಟರ್ ಸೆಂಟರ್ ಗೆ ಹೋಗಿ ತಮ್ಮೆಲ್ಲ ಮಾಹಿತಿ ನೀಡುತ್ತಿದ್ದಾರೆ. ಇದರಿಂದ ಕಂಪ್ಯೂಟರ್ ಸೆಂಟರ್ ನವರೂ ನಿಮ್ಮ ಖಾತೆಯ ಹಣವನ್ನು ಸುಲಭವಾಗಿ ದೋಚುತ್ತಿದ್ದಾರೆ.
ಯಾವುದೇ ರೀತಿಯ ಸರಕಾರಿ ಆದೇಶ ಆಗಲಿಲ್ಲ :- ಕೆಲವು ದುಷ್ಕರ್ಮಿಗಳು ಫಲಾನುಭವಿಗಳನ್ನು ಗುರಿಯಾಗಿಟ್ಟುಕೊಂಡು ವಂಚನೆ ನಡೆಸುತ್ತಿದ್ದಾರೆ. ಅವರು ಫಲಾನುಭವಿಗಳನ್ನು ನಂಬಿಸಿ ಅವರಿಂದ ಹಣ ಪಡೆದುಕೊಂಡು, ನಕಲಿ ಪಿಂಕ್ ಸ್ಮಾರ್ಟ್ ಕಾರ್ಡ್‌ಗಳನ್ನು ಮಾಡಿ ನೀಡುತ್ತಿದ್ದಾರೆ. ದಯವಿಟ್ಟು ಯಾರನ್ನೂ ನಂಬಬೇಡಿ ಜಾಗರೂಕರಾಗಿರಿ! ಗೃಹಲಕ್ಷ್ಮಿ ಯೋಜನೆಯ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಯಿಂದ ದೂರವಿರಿ. ಪಿಂಕ್ ಸ್ಮಾರ್ಟ್ ಕಾರ್ಡ್‌ಗೆ ಸಂಬಂಧಿಸಿದ ಯಾವುದೇ ಹಣವನ್ನು ಪಡೆಯಬೇಡಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: UPI ಪೇಮೆಂಟ್ ನಿಯಮಗಳು ಬದಲಾಗಲಿವೆ, ಈಗ PIN ಇಲ್ಲದೆಯೇ ಪೇಮೆಂಟ್ ಮಾಡಬಹುದು.
ನಿಮ್ಮ ಖಾತೆಯ ಸುರಕ್ಷತೆಗಾಗಿ ಕೆಲವು ಮುಖ್ಯ ವಿಷಯಗಳನ್ನು ನೀವು ಗಮನಿಸಬೇಕು:-
- ಅಪರಿಚಿತರಿಗೆ ಖಾತೆ ವಿವರಗಳನ್ನು ನೀಡಬೇಡಿ: ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ನಿಮ್ಮ ಖಾತೆ ಸಂಖ್ಯೆ, ಪಾಸ್‌ವರ್ಡ್ ಅಥವಾ OTP ಅನ್ನು ಕೇಳಿದರೆ ಅದನ್ನು ನೀಡಬೇಡಿ.
- ಅನಧಿಕೃತ ವೆಬ್‌ಸೈಟ್‌ಗಳು ಅಥವಾ ಅಪ್ಲಿಕೇಶನ್‌ಗಳನ್ನು ಬಳಸಬೇಡಿ: ಗೃಹಲಕ್ಷ್ಮಿ ಯೋಜನೆಗಾಗಿ ಸರ್ಕಾರದ ಅಧಿಕೃತ ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಅನ್ನು ಮಾತ್ರ ಬಳಸಿ.
- ಅನಗತ್ಯ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ: ನಿಮಗೆ ಬಂದ ಇಮೇಲ್ ಅಥವಾ ಮೊಬೈಲ್‌ಗೆ ಬಂದಿರುವ ಎಸ್‌ಎಂಎಸ್‌ನಲ್ಲಿರುವ ಅನಗತ್ಯ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಇದು ನಿಮ್ಮ ಖಾತೆಗೆ ಅಪಾಯವನ್ನುಂಟುಮಾಡಬಹುದು.
- ಅನಧಿಕೃತ ವ್ಯಕ್ತಿಗಳಿಂದ ಕರೆಗಳನ್ನು ಸ್ವೀಕರಿಸಬೇಡಿ: ನಿಮ್ಮ ಖಾತೆಗೆ ಯಾವುದೇ ಮಾಹಿತಿಯನ್ನು ಕೇಳುತ್ತಾ ಅನಧಿಕೃತ ವ್ಯಕ್ತಿಗಳು ಕರೆ ಮಾಡಿದರೆ ಅವರನ್ನು ನಿರ್ಲಕ್ಷಿಸಿ.
- ಯಾರನ್ನೂ ನಂಬಬೇಡಿ: ಗೃಹಲಕ್ಷ್ಮಿ ಯೋಜನೆಗೆ ಯಾರಾದರೂ ಹಣ ಕೇಳಿದರೆ ಅವರನ್ನು ನಂಬಬೇಡಿ.
- ಸರ್ಕಾರಿ ಅಧಿಕಾರಿಗಳನ್ನು ಮಾತ್ರ ಸಂಪರ್ಕಿಸಿ: ಯಾವುದೇ ಮಾಹಿತಿಗಾಗಿ ಸರ್ಕಾರಿ ಅಧಿಕಾರಿಗಳನ್ನು ಮಾತ್ರ ಸಂಪರ್ಕಿಸಿ.
- ದೂರು ನೀಡಿ :- ನೀವು ಈ ರೀತಿಯ ವಂಚನೆಗೆ ಒಳಗಾದ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ.
- ಹಣ ಕೊಡಬೇಡಿ: ಯಾವುದೇ ಸರ್ಕಾರಿ ಸೇವೆಗಾಗಿ ಹಣ ನೀಡಬೇಕು ಎಂದು ಯಾರೂ ನಿಮ್ಮನ್ನು ಕೇಳುವುದಿಲ್ಲ ಆದ್ದರಿಂದ ನೀವು ಯಾರಿಗೂ ನೀಡಿ ಮೋಸ ಹೋಗಬೇಡಿ.
ನಿಮ್ಮ ಹಣವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಯಾವುದೇ ಸಂದೇಹ ಇದ್ದರೆ ತಕ್ಷಣ ಸರ್ಕಾರಿ ಅಧಿಕಾರಿಗಳನ್ನು ಸಂಪರ್ಕಿಸಿ. ಇದರಿಂದ ನಿಮ್ಮ ಹಣ ಹಾಗೂ ನಿಮ್ಮ ಮಾಹಿತಿಗಳು ಗೌಪ್ಯವಾಗಿ ಇರುತ್ತದೆ. ನೀವು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸರಕಾರಿ ವೆಬ್ಸೈಟ್ ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.
ಇದನ್ನೂ ಓದಿ: ಜಿಯೋ ಬಳಕೆದಾರರು 20GB ಡೇಟಾವನ್ನು ಉಚಿತವಾಗಿ ಪಡೆಯುತ್ತಿದ್ದಾರೆ, 72 ದಿನಗಳವರೆಗೆ ರಿಚಾರ್ಜ್ ಮಾಡುವ ಅಗತ್ಯವೇ ಇಲ್ಲ.