ನಿಮ್ಮ ಮಗಳಿಗೂ ಭಾಗ್ಯಲಕ್ಷ್ಮಿ ಯೋಜನೆಯಡಿ 1 ಲಕ್ಷ ಜಮೆ ಆಗಿದೆಯೇ ಎಂಬುದನ್ನು ಹೀಗೆ ತಿಳಿಯಿರಿ

ಹೆಣ್ಣು ಒಂದು ಮನೆಯ ಕಣ್ಣು. ಇದು ಅನಾದಿ ಕಾಲದಿಂದ ಆಡುಭಾಷೆಯ ಒಂದು ನೀಡಿ ಆದರೆ ಕೆಲವು ಮನೆಗಳಲ್ಲಿ ಹೆಣ್ಣು ಮಗು ಹುಟ್ಟಿತೆಂದರೆ ಈಗಲೂ ಸಹ ಮುಖ ಮುರಿಯುವ ಜನರು ಇದ್ದಾರೆ. ಆದರೆ ಹೆಣ್ಣಿಗೆ ಆರ್ಥಿಕವಾಗಿ ಸಮಾಜದಲ್ಲಿ ಸ್ಥಾನ ಮಾನ ಸಿಗಬೇಕು ಆಕೆಯು ಎಲ್ಲರಂತೆ ಜೀವನ ಮಾಡಬೇಕು. ಬಡ ಕುಟುಂಬದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಹಾಗೂ ಉತ್ತಮ ಗುಣಮಟ್ಟದ ಜೀವನ ದೊರೆಯುವುದು ಕಷ್ಟ ಎಂದು ಈಗ ಭಾಗ್ಯ ಲಕ್ಷ್ಮಿ ಯೋಜನೆಯನ್ನು ಜಾರಿ ಗೊಳಿಸಿದೆ. ಈ ಯೋಜನೆಯಲ್ಲಿ ಒಂದು ಕುಟುಂಬದ ಎರಡು ಹೆಣ್ಣು ಮಕ್ಕಳಿಗೆ ಸರಕಾರವೇ 1 ಲಕ್ಷ ರೂಪಾಯಿ ನೀಡಲಿದೆ. ಈ ಯೋಜನೆಯ ಬಗ್ಗೆ ಮಾಹಿತಿ ಹಾಗೂ ಹಣ ಜಮಾ ಆಗಿರುವ ಬಗ್ಗೆ ಮಾಹಿತಿ ತಿಳಿಯುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

WhatsApp Group Join Now
Telegram Group Join Now

ಯಾರಿಗೆ ಭಾಗ್ಯಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆ?: ಈಗಾಗಲೇ ಭಾಗ್ಯಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಹೆಣ್ಣು ಮಕ್ಕಳು 18 ವರ್ಷ ಪೂರೈಸಿದರೆ ಅವರಿಗೆ ಈ ಯೋಜನೆಯ ಹಣವು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಈ ವರ್ಷದಿಂದ ಹಣ ಜಮಾ ಅಗಲಿದ್ದು, ನಿಮ್ಮ ಖಾತೆಗೆ ಭಾಗ್ಯಲಕ್ಷ್ಮಿ ಯೋಜನೆಯ ಹಣ ಬಂದಿರುವ ಬಗ್ಗೆ ನೀವು ನಿಮ್ಮ ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ ನಲ್ಲಿ ಮಾಹಿತಿ ಪಡೆಯಬಹುದಾಗಿದೆ.

ಮೊಬೈಲ್ ಮೂಲಕ ಭಾಗ್ಯಲಕ್ಷ್ಮಿ ಯೋಜನೆ ಹಣ ಜಮ ಆಗಿರುವ ಬಗ್ಗೆ ಮಾಹಿತಿ ತಿಳಿಯುವುದು ಹೇಗೆ?

  • ಸ್ಟೆಪ್ 1:- ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ :- ಭಾಗ್ಯಲಕ್ಷ್ಮಿ ಯೋಜನೆಯ ಸ್ಟೇಟಸ್ ತಿಳಿಯಲು http://blakshmi.kar.nic.in:8080/ ಗೆ ಭೇಟಿ ನೀಡಿ.
  • ಸ್ಟೆಪ್ 2:- Multi Search ಬಟನ್ ಕ್ಲಿಕ್ ಮಾಡಿ :- ಮೇಲಿನ ವೆಬ್ಸೈಟ್ ಗೆ ಭೇಟಿ ನೀಡಿದ ನಂತರ ನಿಮಗೆ ಮುಖಪುಟದಲ್ಲಿ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ ಹಾಗೆಯೇ ನೀವು ಸ್ಟೇಟಸ್ ಚೆಕ್ ಮಾಡಬೇಕೆಂದರೆ ಸರ್ಚ್ ಬಟನ್ ಕ್ಲಿಕ್ ಮಾಡಿ ಅಲ್ಲಿ Multi Search ಆಪ್ಷನ್ ಕ್ಲಿಕ್ ಮಾಡಬೇಕು.
  • ಸ್ಟೆಪ್ 3:- ಅಡ್ರೆಸ್ ಡೀಟೇಲ್ಸ್ ಆಯ್ಕೆ ಮಾಡಿ :- Multi Search ಬಟನ್ ಕ್ಲಿಕ್ ಮಾಡಿದ ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ ಅಲ್ಲಿ ನೀವು ನಿಮ್ಮ ಜಿಲ್ಲೆ, ರಾಜ್ಯ ಹಾಗೂ ನಿಮ್ಮ ತಾಲೂಕು ಹಾಗೂ ಗ್ರಾಮದ ಹೆಸರನ್ನು ಆಯ್ಕೆ ಮಾಡಬೇಕು.
  • ಸ್ಟೆಪ್ 4:- ಹೆಸರು ಮತ್ತು ಹುಟ್ಟಿದ ದಿನಾಂಕ ನಮೂದಿಸಿ :- ಹೆಣ್ಣು ಮಗುವಿನ ಹುಟ್ಟಿದ ದಿನಾಂಕ ಮತ್ತು ಅರ್ಜಿಯಲ್ಲಿ ಹಾಕಿರುವ ನಿಮ್ಮ ಮಗುವಿನ ಹೆಸರನ್ನು ನಮೂದಿಸಿ. ಜೊತೆಗೆ ಚೈಲ್ಡ್ ID ನಮೂದಿಸಿ ನಂತರ ನಿಮಗ ಕೆಳಗೆ ಕಾಣುವ ಅಂಕಿಗಳನ್ನು ಖಾಲಿ ಜಾಗದಲ್ಲಿ ನಮೂದಿಸಿ submit ಬಟನ್ ಕ್ಲಿಕ್ ಮಾಡಿ.

Bhagyalakshmi Scheme(ಭಾಗ್ಯಲಕ್ಷ್ಮಿ ಯೋಜನೆಯು) ಯಾವಾಗ ಜಾರಿಗೆ ಬಂದಿದೆ :- ಇದು 2006-07 ರಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿ ಇರುವಾಗ ಜಾರಿಗೆ ಬಂದಿರುವ ಯೋಜನೆ ಆಗಿದೆ. ಇದು ಬಿಪಿಎಲ್ ಕುಟುಂಬದ ಹೆಣ್ಣು ಮಕ್ಕಳಿಗೆ ಆರ್ಥಿಕ ಸಹಾಯಧನ ನೀಡುವ ಯೋಜನೆ ಆಗಿದ್ದು ಹೆಣ್ಣು ಮಕ್ಕಳ ಪಾಲಿಗೆ ಇದು ವರದಾನವಾಗಿದೆ.

ಇದನ್ನೂ ಓದಿ: 1.5 ಲಕ್ಷವನ್ನು 10 ಲಕ್ಷ ಮಾಡಿ! ಅಂಚೆ ಕಚೇರಿಯ ಈ ಅದ್ಭುತ ಯೋಜನೆಯ ಸಂಪೂರ್ಣ ಮಾಹಿತಿ! 

ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ :-

  • ಸಿಗುವ ಹಣ :- ಯೋಜನೆಗೆ ಅರ್ಜಿ ಸಲ್ಲಿಸಿದ ಕುಟುಂಬದಲ್ಲಿ ಜನಿಸಿದ ಮೊದಲ  ಮಗುವಿಗೆ 19,300 ರೂಪಾಯಿಗಳು ಮತ್ತು ಎರಡನೇ ಮಗುವಿಗೆ 18,350 ರೂಪಾಯಿಗಳನ್ನು ಠೇವಣಿ ಮಾಡಲಾಗುತ್ತದೆ.
  • ನಿಬಂಧನೆಗಳನ್ನು ಪೂರೈಸಿದ ಮೇಲೆ ಸಿಗುವ ಮೊತ್ತ :- ಯೋಜನೆಯ ನಿಬಂಧನೆಗಳನ್ನು ಪೂರೈಸಿದ ಕುಟುಂಬದ ಮೊದಲನೇ ಹೆಣ್ಣು ಮಗುವಿಗೆ ಒತ್ತಿ 1,00,097 ರೂಪಾಯಿ ಮತ್ತು ಎರಡನೇ ಮಗುವಿಗೆ 1,00,052 ರೂಪಾಯಿಯನ್ನು ಸರಕಾರ ನೇರವಾಗಿ ಬ್ಯಾಂಕ್ ಗೆ ಜಮಾ ಮಾಡುತ್ತದೆ.
  • ಸಾಲ ಸೌಲಭ್ಯ ಸಿಗುತ್ತದೆ :- 12 ವರ್ಷ ತುಂಬಿದ ನಂತರ 10ನೇ ತರಗತಿಯಲ್ಲಿ ಪಾಸ್ ಆಗಿರುವ ಹೆಣ್ಣು ಮಕ್ಕಳಿಗೆ ಅವರ ಮುಂದಿನ ವಿದ್ಯಾಭ್ಯಾಸಕ್ಕೆ 50,000 ರೂಪಾಯಿಯ ವರೆಗೆ ಸಾಲ ಪಡೆಯಬಹುದು. ಭಾಗ್ಯಲಕ್ಷ್ಮಿ ಬಾಂಡ್ ಮೂಲಕ ಬ್ಯಾಂಕ್ ನಲ್ಲಿ ಸಾಲ ಸೌಲಭ್ಯ ದೊರೆಯುತ್ತದೆ.

ಭಾಗ್ಯಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ಮಾನದಂಡಗಳು :-

  1. ಈ ಯೋಜನೆಗೆ ಅರ್ಜಿ ಸಲ್ಲಿಸಲು ಪೋಷಕರು ಕಡ್ಡಾಯವಾಗಿ ಕರ್ನಾಟಕದ ನಿವಾಸಿಗಳು ಆಗಿರಬೇಕು.
  2. ಬಡತನ ರೇಖೆಗಿಂತ ಕಡಿಮೆ ಇರಬೇಕು. ಅಂದರೆ ಸರಕಾರ ವಿತರಿಸುವ ಕುಟುಂಬವು ಬಿಪಿಎಲ್ ಕಾರ್ಡ್ ಹೊಂದಿರಬೇಕು.
  3. ಒಂದು ಕುಟುಂಬದಲ್ಲಿ ಇಬ್ಬರು ಹೆಣ್ಣು ಮಕ್ಕಳ ಹೆಸರಲ್ಲಿ ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯ.
  4. ಹೆಣ್ಣು ಮಗು ಜನಿಸಿದ ಒಂದು ವರ್ಷದ ಒಳಗಾಗಿ ಭಾಗ್ಯಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕು.
  5. 1-8-2008 ರ ನಂತರ ಜನಿಸಿದ ಹೆಣ್ಣು ಮಕ್ಕಳು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು.

Bhagyalakshmi Scheme(ಭಾಗ್ಯ ಲಕ್ಷ್ಮಿ ಯೋಜನೆಗೆ) ಅರ್ಜಿ ಸಲ್ಲಿಸುವುದು ಹೇಗೆ?: ಭಾಗ್ಯ ಲಕ್ಷ್ಮಿ ಯೋಜನೆಯ ಅರ್ಜಿಯು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ನಿಮಗೆ ಸಿಗುತ್ತದೆ. ಅರ್ಜಿ ನಮೂನೆಯಲ್ಲಿ ನಿಮ್ಮ ಮಗುವಿನ ಹೆಸರು ಮಗುವಿನ ಭಾವಚಿತ್ರ ಹಾಗೂ ತಂದೆ ತಾಯಿಯ ಹೆಸರು ತಂದೆ ತಾಯಿಯ ಆಧಾರ್ ಕಾರ್ಡ್ ವಿವರ ಹಾಗೂ ವಿಳಾಸದ ವಿವರಗಳು ಹಾಗೂ ಮಗುವಿನ ಜನನ ಪ್ರಮಾಣ ಪತ್ರಗಳನ್ನು ನೀಡಿಸಬೇಕು.

ಕರ್ನಾಟಕದಲ್ಲಿ ಜನಿಸದ ಮಕ್ಕಳಿಗೆ ಹಾಗೂ ಕರ್ನಾಟಕದ ಮೂಲ ನಿವಾಸಿ ಅಲ್ಲದ ಮಕ್ಕಳಿಗೆ ಈ ಯೋಜನೆ ಲಭ್ಯವಿಲ್ಲ. ಬ್ಯಾಂಕ್ ಖಾತೆ ತೆರೆಯುವಾಗ ಪಾಲಕರು ಜಂಟಿ ಖಾತೆ ತೆರೆಯಬೇಕು. ಜೊತೆಗೆ ಮಗುವಿಗೆ 18 ವರ್ಷ ತುಂಬಿದ ಬಳಿಕ ಪೂರ್ಣ ಹಣವನ್ನು ಸರಕಾರ ನೀಡುತ್ತದೆ. ಯೋಜನೆಯ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಬಳಿ ವಿಚಾರಿಸಿ.

Sharing Is Caring:

Leave a Comment