ಭಾರತ್ ಅಕ್ಕಿಗೆ ದೇಶದೆಲ್ಲೆಡೆ ಬೇಡಿಕೆ ಹೆಚ್ಚಾಗಿದೆ. ಆದರೆ ಈಗ ಭಾರತದಲ್ಲಿ ಭಾರತ್ ಅಕ್ಕಿ ಇನ್ಮುಂದೆ ಬಂದ್ ಆಗಲಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿವೆ. ಯಾವ ದಿನಾಂಕದ ವರೆಗೆ ಭಾರತ್ ಅಕ್ಕಿ ಸಿಗಲಿದೆ. ಯಾಕೆ ಭಾರತ್ ಅಕ್ಕಿ ಬಂದ್ ಆಗಲಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿಗೆ ಈ ಲೇಖನವನ್ನು ಓದಿ.
ಚುನಾವಣೆಗೂ ಮುನ್ನ ಭಾರತ್ ಅಕ್ಕಿ ಸದ್ದು ಮಾಡಿತ್ತು :- ಭಾರತದ ಲೋಕಸಭಾ ಚುನಾವಣೆಗೂ ಸ್ವಲ್ಪ ತಿಂಗಳುಗಳ ಮುನ್ನ ಭಾರತದಲ್ಲಿ ಕೇವಲ 29 ರೂಪಾಯಿ ಗೆ ಭಾರತ್ ಅಕ್ಕಿ ವಿತರಣೆ ಮಾಡುವ ಮೂಲಕ ಈ ಯೋಜನೆಯು ಬಹಳ ಸದ್ದು ಮಾಡಿತ್ತು. ಕಡಿಮೆ ಮೊತ್ತದಲ್ಲಿ ಎಲ್ಲಾ ಗ್ರಾಹಕರಿಗೆ ಅಕ್ಕಿ ಸಿಗಬೇಕು ಎಂಬ ಉದ್ದೇಶದಿಂದ ಆರಂಭ ಆಗಿತ್ತು ಈ ಯೋಜನೆ. ಅಕ್ಕಿಯ ಜೊತೆಗೆ ಬೆಳೆ ಹಾಗೂ ಗೋಧಿ ಹಿಟ್ಟು ಸಹ ಕಡಿಮೆ ದರದಲ್ಲಿ ಜನಸಾಮಾನ್ಯರಿಗೆ ನೀಡುತ್ತಿತ್ತು.
ಪಡಿತರ ಚೀಟಿ ಅವಶ್ಯಕತೆ ಇಲ್ಲ :-
ಭಾರತ್ ಅಕ್ಕಿ, ಭಾರತ್ ದಾಲ್ ಹಾಗೂ ಭಾರತ್ ಅಟ್ಟಾ ಕಡಿಮೆ ದರದಲ್ಲಿ ಯಾವುದೇ ರೀತಿಯ ಬಿಪಿಎಲ್ ಅಥವಾ ಎಪಿಎಲ್ ಅಥವಾ ಯಾವುದೇ ರೀತಿಯ ಬಡವ ಶ್ರೀಮಂತರ ಎಂಬ ಬೇಧ ಭಾವ ಇಲ್ಲದೆಯೇ ವಿತರಣೆ ಮಾಡಲಾಗುತಿತ್ತು.
ಉತ್ತಮ ಗುಣಮಟ್ಟದ ಆಹಾರ ವಿತರಣೆ :- ಸಾಮಾನ್ಯವಾಗಿ ಉತ್ತಮ ಗುಣಮಟ್ಟದ ಅಕ್ಕಿ ಬೆಳೆ ಅಥವಾ ಗೋಧಿಹಿಟ್ಟು ಪಡೆಯಬೇಕು ಎಂದರೆ ನಾವು ಹೆಚ್ಚಿನ ದರ ನೀಡಿ ಅಂಗಡಿಯಿಂದ ತರಬೇಕು ಆದರೆ ಬಡವರಿಗೆ ಮತ್ತು ಮಧ್ಯಮ ವರ್ಗದ ಜನರಿಗೆ ಇದು ಸಾಧ್ಯವಿಲ್ಲ. ಅದೇ ಕಾರಣಕ್ಕೆ ಮಾಧ್ಯಮ ಮತ್ತು ಬಡ ವರ್ಗದ ಜನರಿಗೆ ಉತ್ತಮ ಗುಣಮಟ್ಟದ ಆಹಾರವು ಸಿಗಬೇಕು ಎಂಬ ಉದ್ದೇಶದಿಂದ ಭಾರತದಲ್ಲಿ ಈ ಯೋಜನೆಯನ್ನು ಆರಂಭ ಮಾಡಲಾಗಿತ್ತು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಾದ ಬೇಡಿಕೆ :- ಈಗ ಯಾವುದೇ ಅಕ್ಕಿಯನ್ನು ಪೇಟೆಯಲ್ಲಿ ತೆಗೆದುಕೊಂಡರು ಕನಿಷ್ಠ 45 ರೂಪಾಯಿ ಇದೆ. ಇದು ಜನಸಾಮಾನ್ಯರಿಗೆ ಹೆಚ್ಚಿನ ಹೊರೆ ಆಗಿದೆ. ಅದೇ ಜನರನ್ನೇ ಕಡಿಮೆ ದರ ಇರುವ ಭಾರತ್ ಅಕ್ಕಿಗೆ ಎಲ್ಲೆಡೆ ಹೆಚ್ಚಿನ ಬೇಡಿಕೆ ಇದೆ. ಯಾವುದೇ ಅಂಗಡಿಯಲ್ಲಿ ಭಾರತ್ ಅಕ್ಕಿ ಇದೆ ಎಂದರೆ ಎಲ್ಲಾ ಅಕ್ಕಿಗಳಿಗಿಂತ ಬೇಗ ಭಾರತ್ ಅಕ್ಕಿಯು ಸೇಲ್ ಆಗುತ್ತಿದೆ. ಸ್ಥಗಿತ ಗೊಳ್ಳಲಿದೆ ಎಂಬುದು ತಿಳಿದ ಕೂಡಲೇ ಇನ್ನಷ್ಟು ಬೇಗೆ ಇರುವ ಅಕ್ಕಿ ಮೂಟೆಗಳನ್ನು ತೆಗೆದುಕೊಂಡು ಹೋಗಲು ಜನರು ಬರುತ್ತಿದ್ದಾರೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ತಿಂಗಳಿಗೆ 500 ರೂಪಾಯಿ ಇನ್ವೆಸ್ಟ್ ಮಾಡಿ 4,12,321ರೂಪಾಯಿ ಪಡೆಯಬಹುದು.
ಯಾಕೆ ಭಾರತ್ ಅಕ್ಕಿ ವಿತರಣೆ ಬಂದ್ ಆಗಿದೆ :-
ಕೇಂದ್ರವು ಪ್ರತಿ ಬಿಪಿಎಲ್ ಕುಟುಂಬಕ್ಕೆ 5 k.g. ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಜೊತೆಗೆ ಈಗ ರಾಜ್ಯ ಸರ್ಕಾರಗಳು ಹೆಚ್ಚಿನ ಅಕ್ಕಿಯನ್ನು ಕೆಲವು ರಾಜ್ಯಗಳಲ್ಲಿ ನೀಡುತ್ತಿವೆ. ಅದನ್ನು ಹೊರತು ಪಡಿಸಿ ಎಪಿಎಲ್ ಕಾರ್ಡ್ ದಾರರಿಗೆ ಕಡಿಮೆ ದರದಲ್ಲಿ ಅಕ್ಕಿ ಪೂರೈಸಲಾಗುತ್ತಿದೆ. ಇನ್ನು ಭಾರತ್ ಅಕ್ಕಿಯನ್ನು ಪೂರೈಸಲು ಸಾಮಗ್ರಿಗಳ ಕೊರತೆ ಅಂದರೆ ಅಕ್ಕಿಯ ಅಭಾವ ಕಂಡು ಬಂದಿದೆ. ಅದಕ್ಕೆ ಈಗ ವಿತರಣೆಯನ್ನು ಬಂದ್ ಮಾಡಬೇಕು ಎಂದು ಕೇಂದ್ರ ಸರ್ಕಾರವು ಆದೇಶ ನೀಡಿದೆ.
ಜೂನ್ 10 ರ ನಂತರ ಪೂರೈಕೆ ಇಲ್ಲ :- ಇದೆ ಬರುವ ಜೂನ್ 10 ರ ವರೆಗೆ ಈಗ ಇರುವ ಅಕ್ಕಿಗಳನ್ನು ವಿತರಣೆ ಮಾಡಿ ನಂತರ ಬಂದ್ ಮಾಡುವ ಬಗ್ಗೆ ಕೇಂದ್ರವು ಆದೇಶ ನೀಡಿದೆ. ಇದು ತಾತ್ಕಾಲಿಕ ಅಥವಾ ಇನ್ನೂ ಮುಂದೆ ಭಾರತ ಅಕ್ಕಿ ಯೋಜನೆ ಇಲ್ಲವೋ ಎಂಬುದು ಇನ್ನೂ ಮೇಲೆ ತಿಳಿಯಬೇಕಿದೆ.
ಇದನ್ನೂ ಓದಿ: ಸ್ವಂತ ಮನೆಯ ಕನಸು ಕಂಡವರಿಗೆ ಗುಡ್ ನ್ಯೂಸ್; ವಿವಿಧ ವಸತಿ ಯೋಜನೆಯಡಿ 1.30 ಲಕ್ಷ ಮನೆ ನಿರ್ಮಾಣ.