BSNL ನ 150 ದಿನಗಳ ರಿಚಾರ್ಜ್ ಪ್ಲಾನ್ ಕಡಿಮೆ ಬೆಲೆಯಲ್ಲಿ ಪಡೆಯಬಹುದು; Unlimited Call ಜೊತೆ ಡಾಟಾ ಕೂಡ ಸಿಗುತ್ತದೆ.

ಈಗ ಎಲ್ಲಾ ಟೆಲಿಕಾಂ ಸಂಸ್ಥೆಗಳು ಸಹ ತಮ್ಮ ರೀಚಾರ್ಜ್ ದರವನ್ನು ಏರಿಕೆ ಮಾಡಿಗೆ ಇದರಿಂದ ಗ್ರಾಹಕರಿಗೆ ಹೆಚ್ಚಿನ ಹೊರೆ ಆಗಲಿದೆ. ಪ್ರತಿ ತಿಂಗಳು ಹೆಚ್ಚು ಹಣವನ್ನು ವಿನಿಯೋಗ ಮಾಡಲು ಬಯಸದ ಹಲವಾರು ಜನರು ಸರಕಾರದ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ಗೆ ಮರಳಿದ್ದಾರೆ. ಗ್ರಾಹಕರಿಗೆ ಮೊದಲಿಂದಲೂ ಉತ್ತಮ ಸೇವೆ ನೀಡುವ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ 150 ದಿನಗಳ ಕಡಿಮೆ ಬೆಲೆಯ ಪ್ಲಾನ್ ಅನ್ನು ಪರಿಚಯ ಮಾಡಿದೆ. ಹಾಗದರೆ ಈ ಪ್ಲಾನ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ.

WhatsApp Group Join Now
Telegram Group Join Now

150 ದಿನಗಳ ರೀಚಾರ್ಜ್ ಪ್ಲಾನ್ ಬಗ್ಗೆ ಮಾಹಿತಿ :- ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಅತಿ ಕಡಿಮೆ ಬೆಲೆಯಲ್ಲಿ ರೀಚಾರ್ಜ್ ಪ್ಲಾನ್ ಗಾಳನ್ನು ನೀಡುತ್ತದೆ. ಅದರಲ್ಲಿ ಈಗ ನಾವು ಹೇಳುತ್ತಿರುವುದು 150 ದಿನಗಳ ವ್ಯಾಲಿಡಿಟಿ ಹೊಂದಿರುವ ರೀಚಾರ್ಜ್ ಪ್ಲಾನ್ ಬಗ್ಗೆ 150 ದಿನಗಳ ವ್ಯಾಲಿಡಿಟಿ ಹೊಂದಿರುವ ರೀಚಾರ್ಜ್ ಪ್ಲಾನ್ ಬೆಲೆಯು 397 ರೂಪಾಯಿ. ಈ ಪ್ಲಾನ್ ನಲ್ಲಿ ಬಿಎಸ್ಎನ್ಎಲ್ ಗ್ರಾಹಕರು ಭಾರತದ ಯಾವುದೇ ಭಾಗದಲ್ಲಿ ಇದ್ದರೂ ಸಹ ಯಾವುದೇ ಟೆಲಿಕಾಂ ಕಂಪನಿಯ ನಂಬರ್ ಗೆ ಉಚಿತ ಅನಿಯಮಿತ ಕರೆ ಮಾಡಬಹುದು. ಇದರ ಜೊತೆಗೆ ರಾಷ್ಟ್ರೀಯ ಉಚಿತ ರೋಮಿಂಗ್‌ನ ಕರೆಯ ಪ್ರಯೋಜನ ಪಡೆಯಲು ಸಾಧ್ಯವಿದೆ. ಇದರ ಜೊತೆಗೆ ಗ್ರಾಹಕರು ಈ ಯೋಜನೆಯಲ್ಲಿ ಪ್ರತಿ ನಿತ್ಯ 100 ಉಚಿತ SMS ಮಾಡಬಹುದು. ಹಾಗೂ ದಿನಕ್ಕೆ 2GB ಡೇಟಾ ಬಳಕೆಗೆ ಸಿಗುತ್ತದೆ. 

ಆದರೆ ಇದರ ಹೊರತಾಗಿ ಕೆಲವು ನಿಯಮಗಳು ಇವೆ. ಅದೇನಂದರೆ ನೀವು ಕೇವಲ 30 ದಿನಗಳ ಕಾಲ ಮಾತ್ರವೇ ಉಚಿತ ಕರೆ, ದೈನಂದಿನ ಡೇಟಾ ಮತ್ತು ಉಚಿತ SMS ನ ಪ್ರಯೋಜನವನ್ನು ಪಡೆಯಲು ಸಾಧ್ಯ. ಅದರ ಬಳಿಕ 150 ದಿನ ಪೂರ್ಣ ಆಗುವ ತನಕ ಯಾವುದೇ ಉಚಿತ ಕರೆ ಅಥವಾ ಉಚಿತ ಡೇಟಾ ಅಥವಾ ಉಚಿತ SMS ನ ಪ್ರಯೋಜನ ಸಿಗುವುದಿಲ್ಲ. ಆದರೆ ನಿಮಗೆ 150 ದಿನಗಳ ಕಾಲ ನಿಮ್ ಸಿಮ್ ಆಕ್ಟಿವ್ ಇರುತ್ತದೆ ಹಾಗೂ ನಿಮಗೆ ಬೇರೆಯವರು ಮಾಡಿದ ಇನ್ಕಮಿಂಗ್ ಕರೆಗಳು ಬರುತ್ತವೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

160 ದಿನಗಳ ರೀಚಾರ್ಜ್ ಪ್ಲಾನ್ ನೀಡುತ್ತಿದೆ ಬಿಎಸ್ಎನ್ಎಲ್:-

ಬಿಎಸ್ಎನ್ಎಲ್ 160 ದಿನಗಳ ಇನ್ನೊಂದು ವ್ಯಾಲಿಡಿಟಿಯ ರೀಚಾರ್ಜ್ ಪ್ಲಾನ್ ಇದೆ. ಇದರ ರೀಚಾರ್ಜ್ ಮೊತ್ತ 997 ರೂಪಾಯಿ ಅವುದೇ. ಈ ಯೋಜನೆಯಲ್ಲಿ ಬಿಎಸ್ಎನ್ಎಲ್ ಗ್ರಾಹಕರು ದಿನಕ್ಕೆ 2GB ಡೇಟಾ ಉಚಿತವಾಗಿ ಪಡೆಯಬಹುದು. ಹಾಗೂ ಪ್ರತಿ ದಿನವೂ 100 ಉಚಿತ SMS ಕಳುಹಿಸಬಹುದು. ಇದರ ಜೊತೆಗೆ ಅನಿಯಮಿತ ಕರೆಗಳನು ಮಾಡಬಹುದು. ಈ ಪ್ಲಾನ್ ನಾ ಇನ್ನೊಂದು ವಿಶೇಷತೆ ಏನೆಂದರೆ ನಿಂಗೆ ಉಚಿತವಾಗಿ BSNL ಟ್ಯೂನ್ಸ್ ಅನ್ನು 2 ತಿಂಗಳವರೆಗೆ ಪಡೆಯುವ ಅವಕಾಶ ನೀಡುತ್ತದೆ.

ಬಿಎಸ್ಎನ್ಎಲ್ ರೀಚಾರ್ಜ್ ದರಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಬಿಎಸ್ಎನ್ಎಲ್ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಅಥವಾ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಮಾಹಿತಿ ಪಡೆಯಿರಿ ಇದರ ಜೊತೆಗೆ ಬಿಎಸ್ಎನ್ಎಲ್ ರೀಚಾರ್ಜ್ ಪ್ಲಾನ್ ಗಳ ಪೂರ್ಣ ವಿವರಗಳು ಗೂಗಲ್ ಪೇ ಹಾಗೂ ಫೋನ್ ಪೇ ಅಂತಹ ಅಪ್ಲಿಕೇಶನ್ ಗಳಲ್ಲಿಯೂ ನಿಮಗೆ ಸಿಗುತ್ತದೆ.

ಇದನ್ನೂ ಓದಿ: ಕಡಿಮೆ ಬೆಲೆಯಲ್ಲಿ Unlimited Call ಹಾಗೂ ಇಂಟರ್ನೆಟ್; ಹೊಸ ಯೋಜನೆಯನ್ನು ಪರಿಚಯಿಸಿದ ಜಿಯೋ

ಇದನ್ನೂ ಓದಿ: ಜಿಯೋದ 98 ದಿನಗಳ ಹೊಸ ರಿಚಾರ್ಜ್ ಪ್ಲಾನ್ ಕಡಿಮೆ ಬೆಲೆಯಲ್ಲಿ; Unlimited Call ಜೊತೆ ಸಾಕಷ್ಟು ಡೇಟಾ ಪಡೆಯಿರಿ

Sharing Is Caring:

Leave a Comment