BSNL ಆಗಸ್ಟ್ 15 ರಂದು 4G ನೆಟ್‌ವರ್ಕ್ ಕುರಿತು ದೊಡ್ಡ ಘೋಷಣೆ ಮಾಡಲಿದೆ.

ಬಿಎಸ್ಎನ್ಎಲ್ ಟೆಲಿಕಾಂ ಕಂಪನಿಯು ತನ್ನ ಗ್ರಾಹಕರಿಗೆ ಅನೇಕ ರೀಚಾರ್ಜ್ ಆಫರ್‌ಗಳನ್ನು ನೀಡುತ್ತಿದೆ ಮತ್ತು 4G ಮತ್ತು 5G ನೆಟ್‌ವರ್ಕ್‌ಗಳಲ್ಲಿ ವೇಗವಾಗಿ ಬೆಳೆಯುತ್ತಿದೆ. BSNL ತನ್ನ 4G ನೆಟ್‌ವರ್ಕ್‌ಗೆ ಆಗಸ್ಟ್ 15 ರಂದು ದೊಡ್ಡ ನವೀಕರಣವನ್ನು ನೀಡಲಿದೆ ಎಂಬ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿವೆ. ಹಾಗಾದರೆ ಏನಿದು ಸುದ್ದಿ ಎಂದು ತಿಳಿಯೋಣ.

WhatsApp Group Join Now
Telegram Group Join Now

ಬಿಎಸ್ಎನ್ಎಲ್ ಗ್ರಾಹಕರ ಸಂಖ್ಯೆ ಹೆಚ್ಚಳ :-

ಕೆಲವೇ ತಿಂಗಳ ಹಿಂದೆ ಬಿಎಸ್‌ಎನ್‌ಎಲ್‌ ಗ್ರಾಹಕರ ಸಂಖ್ಯೆ ತೀರಾ ಕಡಿಮೆ ಇತ್ತು. ಆದರೆ ಈಗ ಇತರ ಕಂಪನಿಗಳ ಬೆಲೆ ಏರಿಕೆಯಿಂದ BSNL ಗೆ ಹೊಸ ಜೀವ ಸಿಕ್ಕಂತಾಗಿದೆ. ಕಳೆದ ಒಂದು ತಿಂಗಳಿನಿಂದ ದೂರಸಂಪರ್ಕ ಕ್ಷೇತ್ರದಲ್ಲಿ BSNL ಬಗ್ಗೆ ಸಾಕಷ್ಟು ಸುದ್ದಿಗಳು ಕೇಳಿಬರುತ್ತಿವೆ. ಕಳೆದ ಕೆಲವು ವರ್ಷಗಳಿಂದ BSNL ಗ್ರಾಹಕರ ಸಂಖ್ಯೆ ಕುಸಿದಿದ್ದರೂ ಸಹ ಈಗ ಖಾಸಗಿ ಕಂಪನಿಗಳ ಬೆಲೆ ಏರಿಕೆಯಿಂದಾಗಿ BSNL ಗ್ರಾಹಕರು ಗಣನೀಯವಾಗಿ ಹೆಚ್ಚಾಗಿದ್ದಾರೆ. ಕಡಿಮೆ ಬೆಲೆಯ ರೀಚಾರ್ಜ್ ಪ್ಲಾಮ್ ಮೂಲಕ ಬಿಎಸ್‌ಎನ್‌ಎಲ್ ಗ್ರಾಹಕರನ್ನು ಸೆಳೆಯುತ್ತಿದೆ. BSNL ನ ಯೋಜನೆಗಳು Jio, Airtel ಮತ್ತು Vi ಗಳಿಗೆ ತೀವ್ರ ಸ್ಪರ್ಧೆಯನ್ನು ನೀಡುತ್ತಿವೆ. ದುಬಾರಿ ರೀಚಾರ್ಜ್ ಯೋಜನೆಗಳಿಂದ ಬೇಸತ್ತ ಗ್ರಾಹಕರು ಈಗ BSNL ಕಡೆಗೆ ವಾಲುತ್ತಿದ್ದಾರೆ. ಜುಲೈ ತಿಂಗಳ ಅಂಕಿಅಂಶಗಳ ಪ್ರಕಾರ ಕೇವಲ ಆಂಧ್ರಪ್ರದೇಶದಲ್ಲಿ 2.17 ಲಕ್ಷ BSNL ಗೆ ಜನರು ಸೇರಿದ್ದಾರೆ. ಇದರಲ್ಲಿ BSNL ಗ್ರಾಹಕರ ಒಟ್ಟು ಸಂಖ್ಯೆ 40 ಲಕ್ಷ ದಾಟಿದೆ ಎಂದು ವರದಿಯಾಗಿದೆ.

ಆಗಸ್ಟ್ 15 ರಂದು ಬಿಎಸ್ಎನ್ಎಲ್ ನ ಹೊಸ ಹೆಜ್ಜೆ ಏನು?: BSNL ತನ್ನ ಗ್ರಾಹಕರಿಗೆ ಅಗ್ಗದ ರೀಚಾರ್ಜ್ ಯೋಜನೆಗಳ ಜೊತೆಗೆ ಹೆಚ್ಚಿನ ವೇಗದ ಇಂಟರ್ನೆಟ್ ಸೌಲಭ್ಯವನ್ನು ಒದಗಿಸಲು ಯೋಜನೆ ರೂಪಿಸುತ್ತಿದೆ. ದೇಶದ ವಿವಿಧ ಭಾಗಗಳಲ್ಲಿ 4G ನೆಟ್‌ವರ್ಕ್ ಅನ್ನು ವೇಗವಾಗಿ ವಿಸ್ತರಿಸುತ್ತಿದ್ದು, ಆಂಧ್ರಪ್ರದೇಶದಲ್ಲಿ ಆಗಸ್ಟ್ 15 ರಿಂದ 4G ಸೇವೆ ಆರಂಭವಾಗಲಿದೆ. ಸುಮಾರು 15,000 ಸ್ಥಳಗಳಲ್ಲಿ 4G ನೆಟ್‌ವರ್ಕ್ ಸ್ಥಾಪಿಸಿದ ನಂತರ, ಗ್ರಾಹಕರಿಗೆ ಅಗ್ಗದ ರೀಚಾರ್ಜ್ ಯೋಜನೆಗಳ ಜೊತೆಗೆ ಹೆಚ್ಚಿನ ವೇಗದ ಇಂಟರ್ನೆಟ್ ಡೇಟಾ ಸಿಗುವ ನಿರೀಕ್ಷೆ ಇದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: BSNL ಹೊಸ ಸಿಮ್ ಎಲ್ಲಿ ಬೇಕಾದರೂ ಆಕ್ಟಿವೇಟ್ ಮಾಡುವ ಹೊಸ ತಂತ್ರಜ್ಞಾನವನ್ನು ಪರಿಚಯಿಸುತ್ತಿದೆ. ಪೂರ್ಣ ಮಾಹಿತಿಗೆ ಲೇಖನ ಓದಿ.

ಬಿಎಸ್ಎನ್ಎಲ್ ನ ಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆ :-

BSNL ತನ್ನ ಗ್ರಾಹಕರಿಗೆ ನಿರಂತರವಾಗಿ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ. ಇತ್ತೀಚೆಗೆ, ಕಂಪನಿಯು ತನ್ನ ಫೈಬರ್ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೆ ಒಂದು ಅದ್ಭುತ ಕೊಡುಗೆಯನ್ನು ಪರಿಚಯಿಸಿದೆ. ಈಗ ಕೇವಲ 399 ರೂಪಾಯಿಗೆ 3300GB ಡೇಟಾವನ್ನು ಪಡೆಯಬಹುದು. ಇದಕ್ಕೂ ಮುನ್ನ ಈ ಯೋಜನೆಯ ಬೆಲೆ 499 ರೂಪಾಯಿಯಾಗಿತ್ತು. ಈ ಕಡಿತದಿಂದ ಬಳಕೆದಾರರು ಹೆಚ್ಚು ಡೇಟಾವನ್ನು ಕಡಿಮೆ ಬೆಲೆಗೆ ಪಡೆಯಬಹುದು.

ಬಿಎಸ್‌ಎನ್‌ಎಲ್ 5G ಸೇವೆಯನ್ನು ಪ್ರಾರಂಭಿಸುವ ನಿರೀಕ್ಷೆಯಲ್ಲಿ ಗ್ರಾಹಕರು ಇದ್ದಾರೆ. ಯಾಕೆಂದರೆ 5G ಗಿಂತ 4G ಗಿಂತ ಹೆಚ್ಚು ವೇಗದ ಇಂಟರ್ನೆಟ್ ಸಂಪರ್ಕವನ್ನು ಒದಗಿಸುತ್ತದೆ. ಈ ವೀಡಿಯೊ ಸ್ಟ್ರೀಮಿಂಗ್, ಆನ್‌ಲೈನ್ ಗೇಮಿಂಗ್ ಮತ್ತು ಇತರ ಡೇಟಾ-ಇಂಟೆನ್ಸಿವ್ ಕಾರ್ಯಗಳನ್ನು ಸುಲಭವಾಗಿ ಮಾಡಬಹುದು ಹಾಗೂ 5G ತಂತ್ರಜ್ಞಾನದ ಸಹಾಯದಿಂದ ನೀವು ಹೆಚ್ಚು ಸ್ಪಷ್ಟವಾದ ಮತ್ತು ನಿಖರವಾದ ವೀಡಿಯೊ ಕರೆಗಳನ್ನು ಮಾಡಬಹುದು ಹಾಗೂ 5G ತಂತ್ರಜ್ಞಾನದ ಸಹಾಯದಿಂದ ನೀವು ಕೆಲವೇ ಸೆಕೆಂಡುಗಳಲ್ಲಿ ದೊಡ್ಡ ಫೈಲ್‌ಗಳನ್ನು ಡೌನ್‌ಲೋಡ್ ಮಾಡಬಹುದು.

ಇದನ್ನೂ ಓದಿ: BSNL ನ ಕಡಿಮೆ ಬೆಲೆಯ ಈ ಪ್ಲಾನ್ 70 ದಿನಗಳವರೆಗೆ ಮಾನ್ಯವಾಗಿರುತ್ತದೆ. ಉಚಿತ Unlimited ಕರೆ ಮತ್ತು ಡೇಟಾ ಸೀಗುತ್ತದೆ.

Sharing Is Caring:

Leave a Comment