BSNL ತನ್ನ ಗ್ರಾಹಕರ ವಿಶೇಷ ಸಂಖ್ಯೆಗಳನ್ನು ಆಯ್ಕೆ ಮಾಡುವ ಸೇವೆಯನ್ನು ಪ್ರಾರಂಭಿಸಿದೆ. ನೀವು ನಿಮ್ಮ ಜನ್ಮದಿನ, ವರ್ಷ, ಅಥವಾ ನಿಮಗೆ ಇಷ್ಟವಾದ ಸಂಖ್ಯೆಗಳ ಸಂಯೋಜನೆಯನ್ನು ಹೊಂದಿರುವ ಆಯ್ಕೆಯನ್ನು ಮಾಡಬಹುದು. ನೀವು ಹೇಗೆ ಮೊಬೈಲ್ ಸಂಖ್ಯೆ ಆಯ್ಕೆ ಮಾಡಬಹುದು ಎಂಬ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.
ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ನೀಡುತ್ತಿದೆ ಬಿಎಸ್ಎನ್ಎಲ್ :- ಬಿಎಸ್ಎನ್ಎಲ್ ಈಗ ಟೆಲಿಕಾಂ ವಲಯದಲ್ಲಿ ತನ್ನ ರೀಚಾರ್ಜ್ ಯೋಜನೆಗಳ ಬೆಲೆಯನ್ನು ಹೆಚ್ಚಿಸದೇ ಅಗ್ಗದ ರೀಚಾರ್ಜ್ ಯೋಜನೆಗಳನ್ನು ನೀಡುವುದರ ಜೊತೆಗೆ ಹೊಸ ಹೊಸ ಯೋಜನೆಗಳನ್ನು ಜನರಿಗೆ ನೀಡುತ್ತಿದೆ. ಈಗ ನೀವು ಸಹ BSNL ಸಿಮ್ ಖರೀದಿ ಮಾಡಬೇಕು ಎಂದು ಆಲೋಚನೆ ಮಾಡುತ್ತಾ ಇದ್ದರೆ ನಿಮಗೆ ಈಗ ಇನ್ನೊಂದು ಹೊಸ ಸೌಲಭ್ಯ ನೀಡುತ್ತಿದೆ. BSNL ತನ್ನ ಹೊಸ ಬಳಕೆದಾರರಿಗೆ ವಿಶಿಷ್ಟವಾದ BSNL ಸಂಖ್ಯೆಯನ್ನು ಆಯ್ಕೆ ಮಾಡುವ ಸೌಲಭ್ಯ ನೀಡುತ್ತಿದೆ. ಇದು ನಿಜಕ್ಕೂ ಗ್ರಾಹಕರಿಗೆ ಅನುಕೂಲ ಆಗಲಿದೆ.
ಬಿಎಸ್ಎನ್ಎಲ್ 4G ಸೇವೆ ನೀಡುತ್ತಿದೆ :- ಬಿಎಸ್‌ಎನ್‌ಎಲ್ 4ಜಿ ಇಂಟರ್ನೆಟ್ ವೇಗದ ಸೇವೆಯನ್ನು ನೀಡುತ್ತಿದೆ. ಈಗ ದೇಶಾದ್ಯಂತ 1000ಕ್ಕೂ ಹೆಚ್ಚು ಸ್ಥಳಗಳಲ್ಲಿ ಬಿಎಸ್‌ಎನ್‌ಎಲ್ 4ಜಿ ಸಿಮ್‌ನೊಂದಿಗೆ ಉಚಿತ ಕರೆಗಳು ಹಾಗೂ ಎಸ್‌ಎಂಎಸ್‌ಗಳು ಮತ್ತು ಅತ್ಯುತ್ತಮ ಡೇಟಾ ಆಫರ್‌ಗಳನ್ನು ನೀಡುತ್ತದೆ.
ನಿಮ್ಮ ಇಷ್ಟದ ಮೊಬೈಲ್ ಸಂಖ್ಯೆ ಪಡೆಯುವ ವಿಧಾನ:
- BSNL ವೆಬ್‌ಸೈಟ್ ಅಥವಾ ಆಯಪ್ ಗೆ ಭೇಟಿ ನೀಡಿ: ನೀವು BSNL ನ ಅಧಿಕೃತ ವೆಬ್‌ಸೈಟ್ ಅಥವಾ ಆಯಪ್ ಗೆ ಭೇಟಿ ನೀಡಿ. ಇಲ್ಲಿ “ನಿಮ್ಮ ಮೊಬೈಲ್ ಸಂಖ್ಯೆಯನ್ನು ಆರಿಸಿ” ಅಥವಾ ಇದೇ ರೀತಿಯ ಆಯ್ಕೆಯನ್ನು ಪಡೆದುಕೊಳ್ಳಿ.
- ವಲಯ ಮತ್ತು ಸ್ಥಳ ಆಯ್ಕೆ: ನಿಮ್ಮ ವಾಸಸ್ಥಳದ ವಲಯ ಮತ್ತು ಸ್ಥಳವನ್ನು ಆಯ್ಕೆ ಮಾಡಿ. ನಿಮಗೆ ಈ ಸ್ಥಳದಲ್ಲಿ ಇರುವ ಸಂಖ್ಯೆಗಳ ಪಟ್ಟಿ ಸಿಗುತ್ತದೆ.
- ಸಂಖ್ಯೆ ಆಯ್ಕೆ: ನಿಮಗೆ ಇಷ್ಟವಾದ ಸಂಖ್ಯೆಯನ್ನು ಆಯ್ಕೆ ಮಾಡಿ. ಇದು ನಿಮ್ಮ ನೆಚ್ಚಿನ ಸಂಖ್ಯೆ, ಅನನ್ಯ ಸಂಖ್ಯೆ ಅಥವಾ ಫ್ಯಾನ್ಸಿ ಸಂಖ್ಯೆಯಾಗಿರಬಹುದು.
- ಸಂಖ್ಯೆ ಮೀಸಲು: ಆಯ್ದ ಸಂಖ್ಯೆಯನ್ನು ಕೆಲವು ನಿಮಿಷಗಳ ಕಾಲ ಮೀಸಲು ಮಾಡಬಹುದು. ಇದಕ್ಕೆ ನಿಮ್ಮ ಮೊಬೈಲ್ ಸಂಖ್ಯೆಗೆ OTP ಕಳುಹಿಸದಿದ್ದರೆ. OTP ಅನ್ನು ನಮೂದಿಸಿ ಸಂಖ್ಯೆಯನ್ನು ಮೀಸಲು ಮಾಡಿ.
- BSNL ಕಚೇರಿಗೆ ಭೇಟಿ: ಮೀಸಲು ಮಾಡಿದ ಸಂಖ್ಯೆಗೆ ನೀವು ಹತ್ತಿರದ BSNL ಕಚೇರಿಗೆ ಭೇಟಿ ನೀಡಿ. ಅಲ್ಲಿ ನಿಮ್ಮ ದಾಖಲಾತಿಗಳ ಪರಿಶೀಲನೆ ಮಾಡಲಾಗಿದೆ.
- ಸಿಮ್ ಕಾರ್ಡ್ ಪಡೆಯುವುದು: ಪರಿಶೀಲನೆ ನಂತರ, ನಿಮ್ಮ ಆಯ್ದ ಸಂಖ್ಯೆಯೊಂದಿಗೆ ಹೊಸ ಸಿಮ್ ಕಾರ್ಡ್ ಅನ್ನು ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ ನೀವು BSNL ನ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಬಹುದು ಅಥವಾ ಟೋಲ್ ಫ್ರೀ ನಂಬರ್ ಗೆ ಕರೆಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು. ಇಲ್ಲವೇ BSNL ನ ಅಧಿಕೃತ ವೆಬ್‌ಸೈಟ್ ಗೆ ಭೇಟಿನೀಡಿ ನೀವು ಹೆಚ್ಚಿನ ಮಾಹಿತಿ ಪಡೆದು ನಂತರ ನೀವು ಹೊಸ ಸಿಮ್ ಕಾರ್ಡ್ ಪಡೆಯುವುದು ಉತ್ತಮ. ಯಾವುದೇ ಮಧ್ಯವರ್ತಿಗಳ ಬಳಿ ಹೋಗಬೇಡಿ. ನೇರವಾಗಿ ಬಿಎಸ್ಎನ್ಎಲ್ ಕೇಂದ್ರಕ್ಕೆ ಭೇಟಿ ನೀಡಿದರೆ ಈ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಈ ನಗರಗಳು ಮೊದಲು BSNL 5G ನೆಟ್ ವರ್ಕ್ ಅನ್ನು ಪಡೆಯುತ್ತವೆ, ವಿವರಗಳನ್ನು ಪರಿಶೀಲಿಸಿ.
ಇದನ್ನೂ ಓದಿ: ನಿಮ್ಮ ಮನೆ ಬಾಗಿಲಿಗೆ ಬರುವ BSNL ಸಿಮ್ ಕಾರ್ಡ್! ಇಂದೇ ಬುಕ್ ಮಾಡಿ.