BSNL ತನ್ನ ಖಾಸಗಿ ಸ್ಪರ್ಧಿಗಳಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಸೇವೆಗಳನ್ನು ನೀಡುತ್ತದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ BSNL ತನ್ನ ಕೈಗೆಟುಕುವ ಬೆಲೆಗೆ ಹೆಸರುವಾಸಿಯಾಗಿದೆ. ಈಗ ಬಿಎಸ್ಎನ್ಎಲ್ ಕಡಿಮೆ ಬೆಲೆಯಲ್ಲಿ ಬರೋಬ್ಬರಿ ಎರಡು ತಿಂಗಳಿಗೂ ಹೆಚ್ಚು ವ್ಯಾಲಿಡಿಟಿ ನೀಡುತ್ತಿರುವುದು ಬಹಳ ಸಂತಸದ ವಿಷಯ ಆಗಿದೆ. ನೀವು ಬಿಎಸ್ಎನ್ಎಲ್ ಗ್ರಾಹಕರು ಆಗಿದ್ದರೆ ನೀವು ಈ Recharge ಪ್ಲಾನ್ ಬಗ್ಗೆ ತಿಳಿಯಲೇಬೇಕು.
70 ದಿನಗಳ ವ್ಯಾಲಿಡಿಟಿ
ತನ್ನ ಅಗ್ಗದ ರೀಚಾರ್ಜ್ ಯೋಜನೆಗಳಿಂದ ಬಿಎಸ್‌ಎನ್‌ಎಲ್ ಟೆಲಿಕಾಂ ಹೊಸ ದಾಖಲೆ ಸೃಷ್ಟಿಸುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ 200 ರೂ. ಗಿಂತ ಕಡಿಮೆ ಬೆಲೆಯ 70 ದಿನಗಳ ಯೋಜನೆ ಇದಾಗಿದೆ.
BSNL ನ 197 ರೂಪಾಯಿ ಯೋಜನೆಯ ಬಗ್ಗೆ ಮಾಹಿತಿ :- BSNL ಟೆಲಿಕಾಂ ಯಾವಾಗಲೂ ತನ್ನ ಗ್ರಾಹಕರಿಗೆ ಹೊಸ ಹೊಸ ಆಫರ್‌ಗಳನ್ನು ನೀಡುತ್ತಲೇ ಇದೆ. ಆದರೆ ಖಾಸಗಿ ಕಂಪನಿಗಳು ಹಾವಳಿಯಿಂದ ಬಿಎಸ್ಎನ್ಎಲ್ ಗೆ ಸ್ವಲ್ಪ ಹಿನ್ನೆಡೆ ಆಗಿತ್ತು ಆದರೆ ಈಗ ಮತ್ತೆ ಎಲ್ಲಾ ಗ್ರಾಹಕರು ಬಿಎಸ್ಎನ್ಎಲ್ ಗೆ ಮುಖ ಮಾಡುತ್ತಾ ಇದ್ದರೆ. ಈಗ ಬಿಎಸ್ಎನ್ಎಲ್ ಗ್ರಾಹಕರಿಗೆ 200 ರೂಪಾಯಿಗಿಂತ ಕಡಿಮೆ ಬೆಲೆ 70 ವ್ಯಾಲಿಡಿಟಿ ಸಿಗುವಂತಹ ಒಂದು ಅದ್ಭುತ ಯೋಜನೆ ನೀಡುತ್ತಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈ ಯೋಜನೆಯ ವಿಶೇಷತೆಗಳು:
- ಕಡಿಮೆ ಬೆಲೆಯ ಪ್ಲಾನ್ : 197 ರೂಪಾಯಿಗೆ 70 ದಿನಗಳ ವ್ಯಾಲಿಡಿಟಿ ಸಿಗುವುದು ಇದರ ದೊಡ್ಡ ಆಕರ್ಷಣೆ.
- ದೀರ್ಘಾವಧಿಯ ಮಾನ್ಯತೆ ಹೊಂದಿದೆ: 70 ದಿನಗಳ ವ್ಯಾಲಿಡಿಟಿ ಎಂದರೆ ನೀವು ಒಮ್ಮೆ ರೀಚಾರ್ಜ್ ಮಾಡಿದರೆ ಮತ್ತೆ ರೀಚಾರ್ಜ್ ಮಾಡುವ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ.
- ಇತರ ಕಂಪನಿಗಳಿಗೆ ಹೋಲಿಸಿದರೆ ಇದು ಅತಿ ಕಡಮೆ ದರ : 200 ರೂಪಾಯಿಗಿಂತ ಕಡಿಮೆ ಬೆಲೆಯಲ್ಲಿ 70 ದಿನಗಳ ವ್ಯಾಲಿಡಿಟಿ ನೀಡುವ ಯೋಜನೆ ಇತರ ಯಾವುದೇ ಟೆಲಿಕಾಂ ಕಂಪನಿಯ ಯೋಜನೆಯಲ್ಲಿ ಸಿಗುವುದಿಲ್ಲ.
ಈ ಯೋಜನೆಯಲ್ಲಿ ಸಿಗುವ ಇನ್ನಿತರ ಕೊಡುಗೆಗಳು ಹೀಗಿವೆ :-
ನಿಮಗೆ ಈ ಯೋಜನೆಯಲ್ಲಿ ಸಿಮ್ ವ್ಯಾಲಿಡಿಟಿ ಅವಧಿ 70 ದಿನಗಳು ಹಾಗೂ ಕರೆ ಸೌಲಭ್ಯ ಮೊದಲ 18 ಅನಿಯಮಿತ ಕರೆಗಳು ಹಾಗೂ ಮೊದಲ 18 ಪ್ರತಿದಿನ 2GB ಡೇಟಾ ಜೊತೆಗೆ ಮೊದಲ 18 ದಿನಕ್ಕೆ 100 SMS ಉಚಿತ ಕೊಡುಗೆ ಸಿಗುತ್ತದೆ.
- ಮೊದಲ 18 ದಿನಗಳ ವಿಶೇಷ ಆಫರ್: ಈ ಯೋಜನೆಯಲ್ಲಿ ನೀವು ಪಡೆಯುವ ಅನಿಯಮಿತ ಕರೆ, 2GB ಡೇಟಾ ಮತ್ತು 100 ಉಚಿತ SMS ಗಳ ಸೌಲಭ್ಯಗಳು ಮೊದಲ 18 ದಿನಗಳಿಗೆ ಮಾತ್ರ.
- 18 ದಿನಗಳ ನಂತರ: 18 ದಿನಗಳ ನಂತರ ನಿಮ್ಮ ಸಿಮ್ ಕಾರ್ಡ್ 52 ಸಕ್ರಿಯವಾಗಿ ಇರಲಿದೆ ಆದರೆ ನೀವು ಯಾವುದೇ ಉಚಿತ ಕರೆ, ಡೇಟಾ ಅಥವಾ SMS ಸೌಲಭ್ಯವನ್ನು ಪಡೆಯುವುದಿಲ್ಲ. ಆದರೆ ನಿಮಗೆ ಇತರರ ಕರೆ ಬರುತ್ತದೆ.
- ಕಡಿಮೆ ವೇಗದ ಇಂಟರ್ನೆಟ್: ಡೇಟಾ ಮಿತಿ ಮುಗಿದ ನಂತರ ನೀವು ಕಡಿಮೆ ವೇಗದ ಇಂಟರ್ನೆಟ್ ಅನ್ನು ಬಳಸಬಹುದು.
ನೀವು ಈ ಯೋಜನೆಯನ್ನು ಆಯ್ಕೆ ಮಾಡುವ ಮೊದಲು ದಯವಿಟ್ಟು ಬಿಎಸ್‌ಎನ್‌ಎಲ್ ಅಧಿಕೃತ ವೆಬ್‌ಸೈಟ್ ಅಥವಾ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಿ. ಇದು ನಿಮಗೆ ಕೇವಲ 18 ದಿನಗಳ ಉಚಿತ ಸೇವೆಯನ್ನು ನೀಡುತ್ತದೆ.
ಇದನ್ನೂ ಓದಿ: ಕೇವಲ 147 ರೂಪಾಯಿಗೆ ಒಂದು ತಿಂಗಳ ಉಚಿತ ಕರೆ ಮಾಡುವ ಸೌಲಭ್ಯವನ್ನು BSNL ನೀಡುತ್ತಿದೆ.
ಇದನ್ನೂ ಓದಿ: ದಾಖಲೆಗಳಿಲ್ಲದೇ ನಿಮ್ಮ ವಿಳಾಸವನ್ನು ಆಧಾರ್ ಕಾರ್ಡ್ ನಲ್ಲಿ ಅಪ್ಡೇಟ್ ಮಾಡಬಹುದು, ಇಲ್ಲಿದೆ ಸಂಪೂರ್ಣ ಮಾಹಿತಿ