ಇದೀಗ ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ಪ್ಲಾನ್ ಗಳನ್ನು ದಿಢೀರ್ ಹೆಚ್ಚಿಸಿರುವುದುರಿಂದ ಅನೇಕ ಮಾಬೈಲ್ ಬಳಕೆದಾರರು ಕಡಿಮೆ ಬೆಲೆಯಲ್ಲಿ ಹೆಚ್ಚು ಅನುಕೂಲ ಇರುವ ಯೋಜನೆಗಳನ್ನು ಹುಡುಕುತ್ತಿದ್ದಾರೆ. ಇದರ ನಡುವೆ ಈಗ BSNL ದೇಶದಲ್ಲಿ ಹೊಸ ಬಳಕೆದಾರರನ್ನು ಆಕರ್ಷಿಸಲು ಹೊಸ ಯೋಜನೆಗಳನ್ನು ಕಡಿಮೆ ಬೆಲೆಯ ಮೂಲಕ ಈ ಬೇಡಿಕೆಗಳನ್ನು ಪೂರೈಸಲು ಮುಂದಾಗಿದೆ. ಸ್ಪರ್ಧಾತ್ಮಕ ದರಗಳಲ್ಲಿ ಆಕರ್ಷಕ ಆಫರ್ ಗಳೊಂದಿಗೆ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಗಳನ್ನು ಒದಗಿಸುವ ಏಕೈಕ ಕಂಪನಿಯಾಗಿ BSNL ಎದ್ದು ಕಾಣುತ್ತದೆ.
BSNL ಇತ್ತೀಚೆಗೆ ಹಲವಾರು ದೃಢವಾದ ಯೋಜನೆಗಳನ್ನು ಪರಿಚಯ ಮಾಡಿದೆ. ಈ ಯೋಜನೆಗಳು 26 ರಿಂದ 395 ದಿನಗಳವರೆಗೆ ದೀರ್ಘಾವಧಿಯ ಮಾನ್ಯತೆಯನ್ನು ನೀಡುತ್ತದೆ. ಆಗಾಗ ರಿಚಾರ್ಜ್ ಮಾಡುವ ಅಗತ್ಯಗಳನ್ನು ತಪ್ಪಿಸಲು ಬಯಸುವ BSNL ಸಿಮ್ ಬಳಕೆದಾರರಿಗೆ, ಕಂಪನಿಯು 3 ಪ್ಲಾನ್ ಗಳನ್ನು ಪರಿಚಯಿಸಿದು ಅದು 300 ದಿನಗಳಿಗಿಂತ ಹೆಚ್ಚು ಮಾನ್ಯವಾಗಿರುತ್ತದೆ. ಈ ಯೋಜನೆಗಳಲ್ಲಿ ವ್ಯಾಪಕವಾದ ಕರೆ ಹಾಗೂ ಡೇಟಾ ಪ್ರಯೋಜನಗಳನ್ನು ಪಡೆಯಬಹುದು.
BSNL ನ 336 ದಿನಗಳ ಯೋಜನೆ:
ಈ ಯೋಜನೆ 336 ದಿನಗಳವರೆಗೂ ಮಾನ್ಯವಾಗಿರುತ್ತದೆ. ಕಡಿಮೆ ರಿಚಾರ್ಜ್ ವೆಚ್ಚದಲ್ಲಿ ಉಚಿತ ಕರೆಗಳನ್ನು ನೀಡುತ್ತದೆ, 336 ದಿನಗಳ ಸಂಪೂರ್ಣ ಅವಧಿಗೆ ಕೇವಲ 24GB ಡೇಟಾವನ್ನು ಒಳಗೊಂಡಿರುತ್ತದೆ. ಪ್ರತಿದಿನ 100 SMS ಗಳನ್ನು ಕಳುಹಿಸಬಹುದು. ಈ ಯೋಜನೆಯು ಹೆಚ್ಚು ಡಾಟಾ ಬಳಸುವವರಿಗೆ ಅಷ್ಟು ಪ್ರಯೋಜನಗಳನ್ನು ನೀಡುವುದಿಲ್ಲ, ಕೇವಲ ಫೋನ್ ನಲ್ಲಿ ಮಾತಾನಾಡುವವರಿಗೆ ಈ ಪ್ಲಾನ್ ತುಂಬಾ ಸೂಕ್ತವಾಗಿದೆ. ಈ ಪ್ಲಾನ್ ನ ಬೆಲೆ 1499 ರೂಪಾಯಿ ಆಗಿದೆ.
BSNL 365 ದಿನಗಳ ಯೋಜನೆ:
ಇದನ್ನೂ ವಾರ್ಷಿಕ ರಿಚಾರ್ಜ್ ಪ್ಲಾನ್ ಎಂದು ಕರೆಯಬಹುದು. ಇದು 365 ದಿನಗಳವರೆಗೂ ಮಾನ್ಯವಾಗಿರುತ್ತದೆ, ರೂ 1,999 ಬೆಲೆಯಲ್ಲಿ ಬಳಕೆದಾರರಿಗೆ ಇಡೀ ವರ್ಷ ಯಾವುದೇ ರಿಚಾರ್ಜ್ ಮಾಡುವ ತೊಂದರೆ ಇಲ್ಲದೆ ಬಳಸಬಹುದು. ಈ ಪ್ಲಾನ್ 356 ದಿನಗಳವರೆಗೆ 600GB ಡೇಟಾ ದೊಂದಿಗೆ ಬರುತ್ತದೆ. ಹೆಚ್ಚು ಇಂಟರ್ನೆಟ್ ಬಳಸುವವರಿಗೆ ಈ ಯೋಜನೆ ಸಾಕಷ್ಟು ಪ್ರಯೋಜನವನ್ನು ನೀಡಿದೆ. ವರ್ಷ ಪೂರ್ತಿ ಉಚಿತ ಕರೆಗಳನ್ನು ನೀಡುತ್ತದೆ. ಇದಲ್ಲದೆ ಈ ಯೋಜನೆಯು 30 ದಿನಗಳ ಉಚಿತ BSNL ಟ್ಯೂನ್ ಗಳೊಂದಿಗೆ ಹಾಗೂ ದಿನಕ್ಕೆ 100 SMS ಕಳುಹಿಸಬಹುದು. ಹೆಚ್ಚಿನ ಮಾಹಿತಿ ಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: BSNL ಬಳಕೆದಾರರಿಗೆ ಗುಡ್ ನ್ಯೂಸ್ ಕಡಿಮೆ ಬೆಲೆಯಲ್ಲಿ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ!
BSNL 395 ದಿನಗಳ ಪ್ಲಾನ್
ಈ ಯೋಜನೆಯು 1 ವರ್ಷಕ್ಕೂ ಹೆಚ್ಚು ಕಾಲ ಇರುತ್ತದೆ, ಏಕೆಂದರೆ 395 ದಿನಗಳವರೆಗೆ ವ್ಯಾಲಿಡಿಟಿ ಇರುತ್ತದೆ ಈ ಪ್ಲಾನ್ ನ ಬೆಲೆ 2,399 ರೂಪಾಯಿ ಈ ಯೋಜನೆಯು ಬಳಕೆದಾರರಿಗೆ ಒಂದು ವರ್ಷದ Unlimited ಉಚಿತ ಕೆರೆಯನ್ನು ಒದಗಿಸುತ್ತದೆ. ಅಲ್ಲದೆ, ಗ್ರಾಹಕರು ಪ್ರತಿ ದಿನ 2GB ಡೇಟಾವನ್ನು ಆನಂದಿಸಬಹುದು, ಸುಮಾರು 13 ತಿಂಗಳವರೆಗೆ ಈ ಯೋಜನೆಯ ಪ್ರಯೋಜನ ವನ್ನು ಪಡೆಯಬಹುದು.
ಇದನ್ನೂ ಓದಿ: ನಿಮ್ಮ ಏರಿಯಾದಲ್ಲಿ BSNL 4G ನೆಟ್ ವರ್ಕ್ ಸಿಗುತ್ತಿದ್ದಿಯಾ ಎಂದು ಕಂಡುಹಿಡಿಯುವುದು ಹೇಗೆ?
ಇದನ್ನೂ ಓದಿ: ಜಿಯೋ ಕಡಿಮೆ ಬೆಲೆಯಲ್ಲಿ ವಾರ್ಷಿಕ ಯೋಜನೆ; 336 ದಿನಗಳವರೆಗೆ ರಿಚಾರ್ಜ್ ಮಾಡುವ ಅಗತ್ಯವೇ ಇಲ್ಲ