ಖಾಸಗಿ ಟೆಲಿಕಾಂ ಕಂಪನಿಗಳ ರಿಚಾರ್ಜ್ ಏರಿಕೆಯಿಂದ BSNL ಗ್ರಾಹಕರ ಸಂಖ್ಯೆ ಹೆಚ್ಚಳ; BSNL ಸೇರಿದ 15 ಲಕ್ಷ ಹೊಸ ಗ್ರಾಹಕರು.

ಇದೀಗ ದೇಶದಲ್ಲಿ ಎಲ್ಲಿ ನೋಡಿದರು ಕೂಡ ಬದಲಾವಣೆಯ ಪರವಾಗಿಲ್ಲ ಆರಂಭವಾಗಿದೆ ಅಂತಲೇ ಹೇಳಬಹುದು. ಅದರಲ್ಲೂ ಮೊಬೈಲ್ ಫೋನ್ ಬಳಕೆದಾರರ ಆಯ್ಕೆಗಳು ಎಲ್ಲಾದರೂ ಕೂಡ ಸಂಪೂರ್ಣ ಹೊಸದು ಹಾಗೂ ಬೆಲೆ ಕಡಿಮೆ ಇರೋದನ್ನೇ ಹುಡುಕ್ತಾರೆ. ಹೀಗಾಗಿಯೇ ಜುಲೈ 15ರವರೆಗೆ 15 ಲಕ್ಷ ಹೊಸ ಗ್ರಾಹಕರು BSNL ಸೇರಿದ್ದಾರೆ. ಹೌದು ದರ ಏರಿಕೆಯಿಂದ BSNL ನೇರವಾಗಿ ಲಾಭ ಪಡೆಯುತ್ತಿದೆ. ಅಲ್ದೇ ಸುಂಕ ಹೆಚ್ಚಳದ ನಂತರ, BSNL ಅನ್ನು ಅಳವಡಿಸಿಕೊಳ್ಳುವ ಪ್ರವೃತ್ತಿಯೂ ಹೆಚ್ಚಾಗತೊಡಗಿತು. ಇನ್ನು ಮುಖ್ಯವಾಗಿ ಸುಂಕ ಹೆಚ್ಚಳದಿಂದ BSNL ನ ದಿನಗಳು ಬದಲಾಗುತ್ತಿವೆ, ಜುಲೈನಲ್ಲಿ 15 ಲಕ್ಷ ಹೊಸ ಗ್ರಾಹಕರು ಕಂಪನಿಗೆ ಸೇರಿದ್ದಾರೆ. ಹೀಗಾಗಿ BSNL ಸುಂಕ ಹೆಚ್ಚಳದ ಲಾಭವನ್ನು ಪಡೆಯುತ್ತಿದೆ ಅಂತಲೇ ಹೇಳಬಹುದು. ಇನ್ನು ಕಂಪನಿಯ ಗ್ರಾಹಕರು ನಿರಂತರವಾಗಿ ಹೆಚ್ಚುತ್ತಿದ್ದಾರೆ.

WhatsApp Group Join Now
Telegram Group Join Now

ಜುಲೈ 3 ಮತ್ತು ಜುಲೈ 4 ರಂದು, ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ತಮ್ಮ ಸುಂಕವನ್ನು ಶೇಕಡಾ 11-25 ರಷ್ಟು ಹೆಚ್ಚಿಸಿದ್ದವು. ಇದರ ನಂತರ BSNL ಪರ್ಯಾಯವಾಗಿ ಹೊರಹೊಮ್ಮಿದೆ. ಇದರ ಪ್ರತಿಫಲ ಎಂಬಂತೆ ಜುಲೈ 15ರವರೆಗೆ 15 ಲಕ್ಷ ಹೊಸ ಗ್ರಾಹಕರು ಕಂಪನಿಗೆ ಸೇರ್ಪಡೆಗೊಂಡಿದ್ದಾರೆ. ಹೌದು ಖಾಸಗಿ ಕಂಪನಿಗಳು ಕೆಲವು ದಿನಗಳ ಹಿಂದೆ ದರವನ್ನು ಹೆಚ್ಚಿಸಲು ನಿರ್ಧರಿಸಿವೆ. ಇದರ ಪರಿಣಾಮ ಗ್ರಾಹಕರ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವಿಐನ ದುಬಾರಿ ರೀಚಾರ್ಜ್ ಯೋಜನೆಗಳಿಂದ ಗ್ರಾಹಕರು ಹೊಸ ಆಯ್ಕೆಗಳನ್ನು ಹುಡುಕುತ್ತಿದ್ದಾರೆ. ಇದಕ್ಕೆ ಪರ್ಯಾಯ ಎಂಬಂತೆ BSNL ಅಂದ್ರೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ತನ್ನ ಸುಂಕದ ಹೆಚ್ಚಳದ ಲಾಭವನ್ನು ಪಡೆಯುತ್ತಿದೆ. ಕಂಪನಿಯು ಪ್ರತಿದಿನ ಲಕ್ಷಾಂತರ ಹೊಸ ಗ್ರಾಹಕರನ್ನು ಸೇರಿಸುತ್ತಿದೆ. ಕೆಲವು ತಿಂಗಳ ಹಿಂದಿನವರೆಗೆ ಕಂಪನಿಯ ಪರಿಸ್ಥಿತಿ ವಿಶೇಷವಾಗಿರಲಿಲ್ಲ. ಆದರೆ ಈಗ ವಿಷಯಗಳು ಬದಲಾಗುವ ಕಡೆಗೆ ಸೂಚಿಸುತ್ತಿವೆ ಅಂತ ಹೇಳಲಾಗುತ್ತಿದೆ.

ಹೌದು BSNL ಗೆ ಲಾಭದಾಯಕ ಸುಂಕದ ಹೆಚ್ಚಳವಾಗ್ತಿದ್ದು, ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸುಂಕವನ್ನು ಹೆಚ್ಚಿಸಿದ ನಂತರ BSNL ಹೊಸ ಗ್ರಾಹಕರನ್ನು ಪಡೆಯುತ್ತಿದೆ. ಈ ಹಿಂದೆ BSNL ಮೇ ತಿಂಗಳಲ್ಲಿ 15 ಸಾವಿರ ಗ್ರಾಹಕರನ್ನು ಹೆಚ್ಚಿಸಿತ್ತು ಮತ್ತು ಜೂನ್‌ನಲ್ಲಿ 58 ಸಾವಿರ ಗ್ರಾಹಕರು ಕಂಪನಿಯನ್ನು ತೊರೆದಿದ್ದರು, ಆದರೆ ಈಗ ಪರಿಸ್ಥಿತಿ ಬದಲಾಗುತ್ತಿದೆ. ಜುಲೈ ತಿಂಗಳ ಮೊದಲ 15 ದಿನಗಳಲ್ಲಿಯೇ ಕಂಪನಿಯು ಸರಿಸುಮಾರು 15 ಲಕ್ಷ ಹೊಸ ಗ್ರಾಹಕರನ್ನು ಪಡೆದುಕೊಂಡಿದೆ. ಅಂದರೆ ಒಂದು ದಿನದಲ್ಲಿ 1 ಲಕ್ಷ ಹೊಸ ಗ್ರಾಹಕರು ಕಂಪನಿಗೆ ಸೇರುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸುಂಕ ಹೆಚ್ಚಳದಿಂದ ಲಾಭ ಪಡೆಯುತ್ತಿದೆ BSNL

ಮುಖ್ಯವಾಗಿ ಜಿಯೋ ಮತ್ತು ಏರ್‌ಟೆಲ್ ಹೊರತುಪಡಿಸಿ ಈ ಗ್ರಾಹಕರಲ್ಲಿ ಹೆಚ್ಚಿನವರು ಕಂಪನಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ. ಕಳೆದ ಏಳು ವರ್ಷಗಳ ದತ್ತಾಂಶವನ್ನು ಗಮನಿಸಿದರೆ, BSNL ನ ಗ್ರಾಹಕರು 7 ಕೋಟಿಗಳಷ್ಟು ಕಡಿಮೆ ಮಾಡಿದ್ದಾರೆ. ಕಂಪನಿಯ ಒಟ್ಟು ಗ್ರಾಹಕರು ರಿಲಯನ್ಸ್ ಜಿಯೋ 47.46 ಕೋಟಿ ಏರ್‌ಟೆಲ್ 27.01 ಕೋಟಿ ವೊಡಾಫೋನ್ ಐಡಿಯಾ 12.72 ಕೋಟಿ ರೂ
BSNL 2.16 ಕೋಟಿ ಇದ್ದರು. ಅದರಲ್ಲಿ ಮುಖ್ಯವಾಗಿ ಹೆಚ್ಚಿನ ಗ್ರಾಹಕರು ಎಲ್ಲಿಗೆ ಸಂಪರ್ಕ ಹೊಂದಿದ್ದಾರೆ ಅನ್ನೋದನ್ನ ನೋಡೋದಾದ್ರೆ ಯುಪಿ ಪೂರ್ವ-ಪಶ್ಚಿಮ 2.98 ಲಕ್ಷ ಚೆನ್ನೈ ತಮಿಳುನಾಡು 1.19 ಲಕ್ಷ ಮಹಾರಾಷ್ಟ್ರ 98 ಸಾವಿರ ಬಂಗಾಳ ಮತ್ತು ಸಿಕ್ಕಿಂ 90,000, ರಾಜಸ್ಥಾನ 81,000 ಸಾವಿರದಸ್ಟಿವೆ. ಇನ್ನು BSNL ಕಂಪನಿಯ ಪರಿಸ್ಥಿತಿಗಳು ಬದಲಾಗುತ್ತವೆ ಅಂತ ಹೇಳಲಾಗುತ್ತಿದೆ. ಹೀಗಾಗಿ ಜುಲೈ 3 ಮತ್ತು ಜುಲೈ 4 ರಂದು, ರಿಲಯನ್ಸ್ ಜಿಯೋ,  ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ತಮ್ಮ ಸುಂಕವನ್ನು 11-25 ಪ್ರತಿಶತದಷ್ಟು ಹೆಚ್ಚಿಸಿವೆ, ಖಾಸಗಿ ಕಂಪನಿಗಳಿಂದ ರೀಚಾರ್ಜ್ ಯೋಜನೆಗಳನ್ನು ದುಬಾರಿ ಮಾಡುವುದರಿಂದ ಗ್ರಾಹಕರ ಮೇಲೆ ಪರಿಣಾಮ ಬೀರಿತು ಮತ್ತು ಜಿಯೋವನ್ನು ಬಹಿಷ್ಕರಿಸುವ ಪ್ರವೃತ್ತಿಯು X ನಲ್ಲಿ ಪ್ರಾರಂಭವಾಯಿತು. ಹೀಗಾಗಿ BSNL ಈಗ “BSNL ಕಿ ಘರ್ ವಾಪ್ಸಿ” ಮತ್ತು “Boycott Jio” ನಂತಹ ಟ್ರೆಂಡಿಂಗ್ ಹ್ಯಾಶ್‌ಟ್ಯಾಗ್‌ಗಳ ಪ್ರಯೋಜನವನ್ನು ಪಡೆಯುತ್ತಿದೆ ಅಂತಲೇ ಹೇಳಬಹುದು.

ಇದನ್ನೂ ಓದಿ: BSNL ನ 797 ರೂಪಾಯಿ ಪ್ಲಾನ್ 300 ದಿನಗಳ ವ್ಯಾಲಿಡಿಟಿ ಮತ್ತು 600GB ಡೇಟಾವನ್ನು ನೀಡುತ್ತದೆ; ಸಂಪೂರ್ಣ ಮಾಹಿತಿ ಇಲ್ಲಿದೆ.

BSNL ನ ರಿಚಾರ್ಜ್ ಯೋಜನೆಗಳು

ಈ ಮೊದಲೇ ಹೇಳಿರುವಂತೆ ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ ರಿಚಾರ್ಜ್ ಪ್ಲಾನ್ ಗಳ ಬೆಲೆಯನ್ನು ದಿಢೀರ್ ಹೆಚ್ಚಿಸಿರುವುದುರಿಂದ ಅನೇಕ ಮೊಬೈಲ್ ಬಳಕೆದಾರರು ಕಡಿಮೆ ಬೆಲೆಯಲ್ಲಿ ಹೆಚ್ಚು ಅನುಕೂಲ ಇರುವ ಯೋಜನೆಗಳನ್ನು ಹುಡುಕುತ್ತಿದ್ದಾರೆ. ಈಗಾಗಿಯೇ BSNL ದೇಶದಲ್ಲಿ ಹೊಸ ಬಳಕೆದಾರರನ್ನು ಆಕರ್ಷಿಸಲು ಹೊಸ ಯೋಜನೆಗಳನ್ನು ಟ್ರೆಂಡಿಂಗ್ ನಲ್ಲಿ ಇಟ್ಟಿದೆ ಅಂತ ಹೇಳಬಹುದು. ಹೌದು ಸ್ಪರ್ಧಾತ್ಮಕ ದರಗಳಲ್ಲಿ ಆಕರ್ಷಕ ಆಫರ್ ಗಳೊಂದಿಗೆ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಗಳನ್ನು ಒದಗಿಸುವ ಏಕೈಕ ಕಂಪನಿಯಾಗಿ BSNL ಎದ್ದು ಕಾಣುತ್ತದೆ.

ಇನ್ನು BSNL ಇತ್ತೀಚೆಗೆ ಹಲವಾರು ದೃಢವಾದ ಯೋಜನೆಗಳನ್ನು ಪರಿಚಯ ಮಾಡಿದೆ. ಆಗಾಗ ರಿಚಾರ್ಜ್ ಮಾಡುವ ಅಗತ್ಯಗಳನ್ನು ತಪ್ಪಿಸಲು ಬಯಸುವ BSNL ಸಿಮ್ ಬಳಕೆದಾರರಿಗೆ, ಕಂಪನಿಯು 3 ಪ್ಲಾನ್ ಗಳನ್ನು ಪರಿಚಯಿಸಿದು ಅದು 300 ದಿನಗಳಿಗಿಂತ ಹೆಚ್ಚು ಮಾನ್ಯವಾಗಿರುತ್ತದೆ. ಈ ಯೋಜನೆಗಳಲ್ಲಿ ವ್ಯಾಪಕವಾದ ಕರೆ ಹಾಗೂ ಡೇಟಾ ಪ್ರಯೋಜನಗಳನ್ನು ಪಡೆಯಬಹುದು. ಹೌದು ಈ ಯೋಜನೆಯು 1 ವರ್ಷಕ್ಕೂ ಹೆಚ್ಚು ಕಾಲ ಇರುತ್ತದೆ, ಏಕೆಂದರೆ 395 ದಿನಗಳವರೆಗೆ ವ್ಯಾಲಿಡಿಟಿ ಇರುತ್ತದೆ ಈ ಪ್ಲಾನ್ ನ ಬೆಲೆ 2,399 ರೂಪಾಯಿ ಈ ಯೋಜನೆಯು ಬಳಕೆದಾರರಿಗೆ ಒಂದು ವರ್ಷದ Unlimited ಉಚಿತ ಕೆರೆಯನ್ನು ಒದಗಿಸುತ್ತದೆ. ಅಲ್ಲದೆ, ಗ್ರಾಹಕರು ಪ್ರತಿ ದಿನ 2GB ಡೇಟಾವನ್ನು ಆನಂದಿಸಬಹುದು, ಸುಮಾರು 13 ತಿಂಗಳವರೆಗೆ ಈ ಯೋಜನೆಯ ಪ್ರಯೋಜನ ವನ್ನು ಪಡೆಯಬಹುದು. ಅವುಗಳಲ್ಲಿ ಮುಖ್ಯವಾಗಿ

BSNL 336 ವ್ಯಾಲಿಡಿಟಿ ಯೋಜನೆ: ಈ ಯೋಜನೆಯು 336 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಇದರ ಬೆಲೆ 1199 ರೂ. ಇದರಲ್ಲಿ 24 GB ಡೇಟಾ ಮತ್ತು ಅನಿಯಮಿತ ಕರೆ ಸೌಲಭ್ಯದೊಂದಿಗೆ, ಪ್ರತಿದಿನ SMS ಕಳುಹಿಸುವ ಸೌಲಭ್ಯ ಲಭ್ಯವಿದೆ.

ಇನ್ನು ಮತ್ತೊಂದು 365 ದಿನಗಳ ಯೋಜನೆ: ಒಂದು ರೀಚಾರ್ಜ್‌ನಲ್ಲಿ ನೀವು ಇಡೀ ವರ್ಷ ಟೆನ್ಶನ್ ಮುಕ್ತವಾಗಿರಲು ಬಯಸಿದರೆ ಈ ಯೋಜನೆ ಉತ್ತಮವಾಗಿದೆ. ಇದು ಪ್ರತಿದಿನ 600 GB ಡೇಟಾ ಮತ್ತು 100 SMS ನೀಡುತ್ತದೆ. ಯೋಜನೆಯಲ್ಲಿ ಅನಿಯಮಿತ ಕರೆ ಕೂಡ ಲಭ್ಯವಿದೆ. ಈ ಯೋಜನೆಯ ಬೆಲೆ 2399 ರೂ. 790 GB ಡೇಟಾ ಇದರಲ್ಲಿ ಲಭ್ಯವಿದೆ. ಇದರಲ್ಲಿ ಪ್ರತಿದಿನ 2 GB ಡೇಟಾವನ್ನು ಹೊರತರಲಾಗುತ್ತದೆ. ಈ ಯೋಜನೆಯಲ್ಲಿ SMS ಮತ್ತು ಅನಿಯಮಿತ ಕರೆ ಸೌಲಭ್ಯಗಳು ಸಹ ಲಭ್ಯವಿದೆ. ಹೀಗಾಗಿ BSNL ಸೇರುವ ಗ್ರಾಹಕರು ಕೂಡ ಹೆಚ್ಚಾಗುತ್ತಿದ್ದೂ ಇದು ನಿಜಕ್ಕೂ ಕೂಡ ಸಂತೋಷದ ವಿಷಯ ಅಂತಲೇ ಹೇಳಬಹುದು.

ಇದನ್ನೂ ಓದಿ: BSNL ನ ಈ ಯೋಜನೆಗಳು 300 ದಿನಗಳಿಗಿಂತ ಹೆಚ್ಚು ಉಚಿತ ಕರೆ ಮತ್ತು ಡೇಟಾವನ್ನು ನೀಡುತ್ತದೆ; ಕಡಿಮೆ ಬೆಲೆಯಲ್ಲಿ.

Sharing Is Caring:

Leave a Comment