ಸ್ವಂತ ಉದ್ಯಮ ಆರಂಭಿಸಬೇಕು ಎಂಬ ಕನಸು ಹೊತ್ತವರಿಗೆ ಈಗ ಒಂದು ಸುವರ್ಣ ಅವಕಾಶ. ನೀವು ಉದ್ಯಮ ಆರಂಭಿಸಲು ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯ ಅಡಿಯಲ್ಲಿ 1 ಲಕ್ಷ ರೂಪಾಯಿ ಸಾಲ ಸೌಲಭ್ಯ ಸಿಗಲಿದೆ. ಸಾಲ ತೆಗೆದುಕೊಳ್ಳಲು ಅರ್ಹತಾ ಮಾನದಂಡಗಳು ಏನೇನು ಹಾಗೂ ಸಾಲ ಪಡೆಯುವ ವಿಧಾನ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ.
ಸಾಲ ಪಡೆಯಲು ಇರುವ ಅರ್ಹತಾ ಪಟ್ಟಿ ಏನು?
1) ಆದಾಯ ಮಿತಿ : ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಸಾಲವನ್ನು ಪಡೆಯಲು ಗ್ರಾಮೀಣ ಪ್ರದೇಶಗಳ ಅರ್ಜಿದಾರರ ಕುಟುಂಬ ಸದಸ್ಯರ ವಾರ್ಷಿಕ ಆದಾಯದ ಮಿತಿ 3,00,000 ಆಗಿರುತ್ತದೆ. ಇದಕ್ಕೂ ಹೆಚ್ಚಿನ ಆದಾಯ ಹೊಂದಿರುವ ಕುಟುಂಬಕ್ಕೆ ಈ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಸಿಗುವುದಿಲ್ಲ. ಹಾಗೆಯೇ ನಗರ ಪ್ರದೇಶಗಳ ಅರ್ಜಿದಾರರ ಕುಟುಂಬ ಸದಸ್ಯರ ವಾರ್ಷಿಕ ಆದಾಯವು 3,00,000 ರೂಪಾಯಿ ಆಗಿದೆ.
2) ಜಾತಿ: ಅರ್ಜಿದಾರರು ಸಾಮಾನ್ಯ ವರ್ಗದಲ್ಲಿ ಆರ್ಯ ವೈಶ್ಯ ಸಮುದಾಯಕ್ಕೆ ಸೇರಿದವರು ಮತ್ತು ನಮೂನೆ-ಜಿ ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಹೊಂದಿರಬೇಕು.
3) ವಯಸ್ಸಿನ ಮಿತಿ :- ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಸಾಲವನ್ನು ಪಡೆಯಲು ಅರ್ಜಿದಾರರ ಕನಿಷ್ಠ ವಯಸಿ 18 ವರ್ಷ ಹಾಗೂ ಗರಿಷ್ಠ ವಯಸು 55 ವರ್ಷ.
4) ವಿಳಾಸ :- ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಸಾಲವನ್ನು ಪಡೆಯಲು ಅರ್ಜಿದಾರರು ಅದು ಕರ್ನಾಟಕ ರಾಜ್ಯದ ಅವರ ಖಾಯಂ ನಿವಾಸಿ ಆಗಿರಬೇಕು.
5) ಕುಟುಂಬದಲ್ಲಿ ಒಬ್ಬ ವ್ಯಕ್ತಿ: ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಸಾಲವನ್ನು ಪಡೆಯಲು ಒಂದು ಕುಟುಂಬದಿಂದ ಒಬ್ಬ ವ್ಯಕ್ತಿಗೆ ಮಾತ್ರ ಸಾಲದ ಸೌಲಭ್ಯ ಸಿಗಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: RBI CIBIL ಸ್ಕೋರ್‌ನಲ್ಲಿ 5 ಹೊಸ ಬದಲಾವಣೆಗಳು; ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಮೊದಲು ತಿಳಿದುಕೊಳ್ಳಿ
ಸ್ವಯಂ ಉದ್ಯೋಗ ಯೋಜನೆಯಡಿ ಎಷ್ಟು ಹಣ ಸಹಾಯ ಪಡೆಯಬಹುದು?
- ಸಹಾಯಧನ ಮತ್ತು ಸಾಲದ ವಿವರ: ಈ ಯೋಜನೆಯಡಿ ಒಟ್ಟು 1,00,000 ರೂಪಾಯಿಯ ವರೆಗೆ ವರೆಗೆ ಆರ್ಥಿಕ ನೆರವು ಪಡೆಯಬಹುದು.
ಒಟ್ಟು ಸಾಲದ ಮೊತ್ತದಲ್ಲಿ 20,000 ಸಾವಿರ ರೂಪಾಯಿ ಸಹಾಯಧನವಾಗಿ ಮತ್ತು ಉಳಿದ 80,000 ರೂಪಾಯಿ ಅಂದರೆ ವಾರ್ಷಿಕ ಶೇಕಡಾ 4 ರ ಬಡ್ಡಿದರದಲ್ಲಿ ಸಾಲವನ್ನೂ ನೀಡುತ್ತಾರೆ. - ಕನಿಷ್ಠ ವೆಚ್ಚ ಘಟಕ ಮತ್ತು ಸಹಾಯಧನ: ಈ ಯೋಜನೆಯಡಿ ಘಟಕ ಸ್ಥಾಪನೆಗೆ ಕನಿಷ್ಠ 50,000 ರೂಪಾಯಿ ಖರ್ಚು ಮಾಡಬೇಕಾಗಿತ್ತದೆ. ಈ ಕನಿಷ್ಠ ಘಟಕದ ವೆಚ್ಚದ ಮೇಲೆ 10,000 ರೂಪಾಯಿ ಸಹಾಯಧನ ಪಡೆಯಬಹುದು. ಉಳಿದ 40,000 ರೂಪಾಯಿ ಸಾಲವಾಗಿ ಪಡೆಯಬಹುದು.
ಸಾಲ ಮರುಪಾವತಿ ಹೇಗೆ?: ಸ್ವಯಂ ಉದ್ಯೋಗ ನೇರಸಾಲ ಯೋಜನೆ ಪಡೆದ ಸಾಲವನ್ನು 3 ವರ್ಷಗಳ ಅವಧಿಯಲ್ಲಿ ಮರುಪಾವತಿಸಬೇಕು ಎಂಬ ನಿಯಮ ಇದೆ. ಒಟ್ಟು 34 ಮಾಸಿಕ ಕಂತುಗಳಲ್ಲಿ ಸಾಲವನ್ನು ಅಸಲು ಮತ್ತು ಬಡ್ಡಿಯೊಂದಿಗೆ ಮರುಪಾವತಿಸಬೇಕು. ಮರುಪಾವತಿಯಲ್ಲಿ 2 ತಿಂಗಳ ವಿರಾಮದ ಸಮಯ ಇರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ :- ನಿಗದಿತ ದಿನಾಂಕದ ಒಳಗಾಗಿ ಅಧಿಕೃತ ವೆಬ್ಸೈಟ್ https://aryavysya.karnataka.gov.in/KACDC_Data/Main/SE ಗೆ ತೆರಳಿ ಅರ್ಜಿ ಸಲ್ಲಿಸಿ.. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಆಗಸ್ಟ್ 2024 ಆಗಿರುತ್ತದೆ. ಜೂಲೈ 12 ರಿಂದ ಅರ್ಜಿ ಸಲ್ಲಿಕೆ ಆರಂಭ ಆಗಿದೆ.
ಇದನ್ನೂ ಓದಿ: PM ವಿಶ್ವಕರ್ಮ ಯೋಜನೆಯಡಿಯಲ್ಲಿ ಉಚಿತವಾಗಿ ಸಿಗುತ್ತೆ ಹೊಲಿಗೆ ಮಿಷನ್! ಈ ರೀತಿ ಅರ್ಜಿ ಸಲ್ಲಿಸಿ.
ಇದನ್ನೂ ಓದಿ: ಗರ್ಭಿಣಿ ಮಹಿಳೆಯರಿಗೆ ಬ್ಯಾಂಕ್ ಖಾತೆಗೆ 5000 ಹಣ ಜಮೆ ಮಾಡಲಿದೆ ಕೇಂದ್ರ ಸರ್ಕಾರ! ಈ ರೀತಿ ಅರ್ಜಿ ಸಲ್ಲಿಸಿ