ಕಾರ್ ಲೋನ್ ತೆಗೆದುಕೊಳ್ಳುವ ಮೊದಲು ಈ ವಿಚಾರಗಳನ್ನು ನೆನಪಿಡಿ

ಕಾರ್ ತೆಗೆದುಕೊಳ್ಳಬೇಕು ಎಂದರೆ ಲಕ್ಷ ಲಕ್ಷ ಹಣ ಬೇಕೆ ಬೇಕು. ಆಗ ನಾವು ಕಾರ್ ಗೆ ನಮ್ಮ ಹತ್ತಿರ ಇರುವ ಸೇವಿಂಗ್ಸ್ ಹಣದ ಜೊತೆಗೆ ಬ್ಯಾಂಕ್ ಅಥವಾ ಯಾವುದೇ ಫೈನಾನ್ಸ್ ಕಂಪನಿಯಿಂದ ಕಾರ್ ಲೋನ್ ತೆಗೆದುಕೊಳ್ಳುತ್ತೇವೆ. ಹಾಗೆಯೇ ನಾವು ಕಾರ್ ಲೋನ್ ತೆಗೆದುಕೊಳ್ಳುವಾಗ ಕೆಲವು ಅಂಶಗಳನ್ನು ನೆನಪಿಟ್ಟಿಕೊಂಡರೆ ನೀವು ನಷ್ಟದಿಂದ ಪಾರಾಗಲು ಸಾಧ್ಯವಿದೆ. ಹಾಗಾದರೆ ನೀವು ಕಾರ್ ಲೋನ್ ಪಡೆಯಬೇಕಾದರೆ ಯಾವ ವಿಚಾರಗಳ ಬಗ್ಗೆ ಗಮನ ಹರಿಸಬೇಕು ಹಾಗೂ ಫಾಲೋ ಮಾಡಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಪಡೆಯಿರಿ.

WhatsApp Group Join Now
Telegram Group Join Now

Car Loan ಪಡೆಯುವಾಗ ಬ್ಯಾಂಕ್ ನಿಮಗೆ ಸಹಾಯ ಮಾಡುತ್ತದೆ: ನೀವು ಕಾರ್ ತೆಗೆದುಕೊಳ್ಳುವ ನೀವು ಲೋನ್ ಪಡೆದರೆ ನೀವು ನಿಮಗೆ ಲೋನ್ ತೀರಿಸುವ ಸುಲಭ ವಿಧಾನಗ ಹಾಗೂ EMI ಪಾವತಿಸುವ ವಿಚಾರಗಳ ಬಗ್ಗೆ ಒಂದಿಷ್ಟು ಸಹಾಯ ಮಾಡುತ್ತದೆ. ಎಷ್ಟು ಕಂತಿನ ಪಾವತಿ ತೆಗೆದುಕೊಂಡರೆ ನಿಮಗೆ ಹಣ ಉಳಿತಾಯ ಆಗುತ್ತದೆ. ಬಡ್ಡಿದರಗಳು ಮಾಹಿತಿ, ಲೋನ್ ಪ್ರೊಸೆಸ್ ಬಗ್ಗೆ ಮಾಹಿತಿಗಳನ್ನು ಬ್ಯಾಂಕ್ ಅಥವಾ ಫೈನಾನ್ಸ್ ಕಂಪನಿ ನಿಮಗೆ ತಿಳಿಸಿರುತ್ತದೆ. ಆದರೆ ಅದರ ಹೊರತಾಗಿಯೂ ನೀವು ಲೋನ್ ಪಡೆದುಕೊಳ್ಳುವ ಕೆಲವು ಅಂಶಗಳನ್ನು ಅರಿತುಕೊಳ್ಳುವುದು ಉತ್ತಮ.

ಕಾರ್ ಲೋನ್ ಪಡೆಯುವಾಗ ಈ ವಿಚಾರಗಳನ್ನು ನೆನಪಿಟ್ಟುಕೊಳ್ಳಿ :-

1) ಬಡ್ಡಿದರಗಳ ಬಗ್ಗೆ ಮಾಹಿತಿ :- ನೀವು ಕಾರ್ ಲೋನ್ ತೆಗೆದುಕೊಳ್ಳುವ ಮುನ್ನ ಬಡ್ಡಿದರ ಏಷ್ಟು ಎಂಬುದನ್ನು ಮೊದಲು ಅರಿತಿರಬೇಕು. ಒಂದೊಂದು ಬ್ಯಾಂಕ್ ಹಾಗೂ ಕಂಪನಿಯಲ್ಲಿ ಒಂದೊಂದು ರೀತಿಯ ಬಡ್ಡಿದರಗಳು ಇರುತ್ತವೆ. ಸಾಮಾನ್ಯವಾಗಿ ಶೇಕಡಾ 6.75% ಇಂದ 9% ವರೆಗೆ ಕಾರ್ ಲೋನ್ ಗೆ ಬಡ್ಡಿದರ ಇರುತ್ತದೆ. ಕೆಲವು ಬ್ಯಾಂಕ್ ನಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಹಾಗೂ ನಿಮ್ಮ ಆದಾಯ ಹಾಗೂ ಕಾರ್ ಮಾಡಲ್ ಹಾಗೂ ನಿಮ್ಮ ಡೌನಪೇಮೆಂಟ್ ಹಣದ ಮೇಲೆ ಬಡ್ಡಿದರಗಳು ಹೆಚ್ಚು ಕಡಿಮೆ ಆಗುತ್ತವೆ. ಈಗ ಆನ್ಲೈನ್ ನಲ್ಲಿಯೇ ನೀವು ಕಾರ್ ಲೋನ್ ಗೆ ಬಡ್ಡಿದರ ಎಷ್ಟು ಎಂಬುದನ್ನು ಲೆಕ್ಕಹಾಕಲು ಸಾಧ್ಯವಿದೆ. ಯಾವ ಬ್ಯಾಂಕ್ ನಲ್ಲಿ ನಿಮಗೆ ಕಡಿಮೆ ಬಡ್ಡಿದರ ಇದೆ ಎಂಬುದನ್ನು ನೋಡಿ ನೀವು ಅಲ್ಲಿಯೇ ಲೋನ್ ತೆಗೆದುಕೊಳ್ಳಬಹುದು.

2) ಕ್ರೆಡಿಟ್ ಸ್ಕೋರ್ ಚೆಕ್ ಮಾಡಿ :- ನೀವು ಸಾಲ ತೆಗೆದುಕೊಳ್ಳುವ ಮುನ್ನ ನಿಮ್ಮ ಕ್ರೆಡಿಟ್ ಸ್ಕೋರ್ ಚೆಕ್ ಮಾಡಿ. ಇದರಿಂದ ನೀವು ಹೆಚ್ಚಿನ ಬಡ್ಡಿ ಹಾಗೂ ಹಣವನ್ನು ಕಟ್ಟುವುದು ತಪ್ಪುತ್ತದೆ. ಕೆಲವು ಬ್ಯಾಂಕ್ ನಲ್ಲಿ ಕ್ರೆಡಿಟ್ ಸ್ಕೋರ್ ಚೆನ್ನಾಗಿ ಇದ್ದರೆ ಮಾತ್ರ ಲೋನ್ ಸಿಗುತ್ತದೆ. ಆದ್ದರಿಂದ ನೀವು ಕಾರ್ ಲೋನ್ ಪಡೆಯುವ ಮುನ್ನ ಕ್ರೆಡಿಟ್ ಸ್ಕೋರ್ ಚೆಕ್ ಮಾಡುವುದು ಉತ್ತಮ. ಕ್ರೆಡಿಟ್ ಸ್ಕೋರ್ ಚೆನ್ನಾಗಿಲ್ಲ ಎಂದಾದರೆ ನೀವು ಕ್ರೆಡಿಟ್ ಸ್ಕೋರ್ ಉತ್ತಮಗೊಳಿಸಲು ಪ್ರಯತ್ನಿಸಿ. ನೀವು ನಿಮ್ಮ ಕ್ರೆಡಿಟ್ ಸ್ಕೋರ್ ಮಾಹಿತಿಯನ್ನು ಈಗ ಗೂಗಲ್ ಪೇ ಅಂತಹ ಪೇಮೆಂಟ್ ಅಪ್ಲಿಕೇಶನ್ ಮೂಲಕ ಸುಲಭವಾಗಿ ಪಡೆಯಲು ಸಾಧ್ಯವಿದೆ.

3) ಕಡಿಮೆ ಸಾಲದ ಅವಧಿಯನ್ನು ಆರಿಸಿ :- ನೀವು ಲೋನ್ ಪಡೆಯುವಾಗ ಸಾಲ ಮರುಪಾವತಿ ಮಾಡುವ ಅವಧಿ ದೀರ್ಘಾವಧಿ ಆಗಿರದೇ ಅಲ್ಪಾವಧಿ ಆಗಿದ್ದಾರೆ ನೀವು ಸಾಲವನ್ನು ಮರುಪಾವತಿ ಮಾಡುವ ಹಣ ಕಡಿಮೆ ಆಗುತ್ತದೆ. ನೀವು EMI ಅವಧಿ ಹೆಚ್ಚಾದಂತೆ ನೀವು ಪಾವತಿಸುವ ಸಾಲದ ಮೊತ್ತ ಹೆಚ್ಚು ಆಗುತ್ತದೆ. ಏಕೆಂದರೆ ದೀರ್ಘಾವಧಿ ಸಾಲಕ್ಕೆ ಬಡ್ಡಿ ಹೆಚ್ಚಾಗಿರುತ್ತದೆ.

4) ಸಾಲದ ಮೇಲಿನ ಶುಲ್ಕಗಳ ಬಗ್ಗೆ ಮಾಹಿತಿ ಪಡೆಯಿರಿ:- ನೀವು ಸಾಲ ತೆಗೆದುಕೊಳ್ಳುವಾಗ ಬಡ್ಡಿದರಗಳ ಮಾಹಿತಿಯನ್ನು ಪಡೆದ ರೀತಿಯಲ್ಲಿ ನೀವು ಶುಲ್ಕಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬೇಕು. ಯಾಕೆಂದರೆ ಅನೇಕ ಸಾಲ ನೀಡುವ ಸಂಸ್ಥೆ ಅಥವಾ ಯಾವುದೇ ಬ್ಯಾಂಕ್ ನಿಮಗೆ ಲೋನ್ ಗೆ ವಿಧಿಸುವ ಬಡ್ಡಿ ಕಡಿಮೆ ಇರುತ್ತದೆ ಆದರೆ ಸಂಸ್ಕರಣಾ ಶುಲ್ಕಗಳು ಹಾಗೂ ಇತರ ಇತರ ಶುಲ್ಕಗಳ ಮೊತ್ತ ಹೆಚ್ಚಾಗಿ ಇರುತ್ತದೆ. ಅದು ನೀವು ಪಾವತಿಸುವ ಬಡ್ಡಿದರದ ಮೊತ್ತಕ್ಕಿಂತ ಶುಲ್ಕದ ಹಣವೇ ಜಾಸ್ತಿ ಆಗುತ್ತದೆ. ಅದರಿಂದ ನೀವು ಶುಲ್ಕದ ಮೊತ್ತ ಕಡಿಮೆ ಇರುವ ಬ್ಯಾಂಕ್ ಅಥವಾ ಕಂಪನಿಯಲ್ಲಿ ಸಾಲ ತೆಗೆದುಕೊಳ್ಳುವುದು ಉತ್ತಮ.

5) ದಂಡ ವಿಧಿಸುವ ಬಗ್ಗೆ ಎಚ್ಚರಿಕೆ :-

ನೀವು ಸಾಲ ಪಡೆಯುವಾಗ ಯಾವುದೇ ರೀತಿಯ ದಂಡ ವಿಧಿಸುವ ಬಗ್ಗೆ ಮಾಹಿತಿ ಪಡೆಯುವುದು ಉತ್ತಮ. ಕೆಲವು ಕಂಪನಿ ಅಥವಾ ಬ್ಯಾಂಕ್ ನೀವು ಅವಧಿಯ ಮೊದಲು ಏನಾದರೂ ಒಮ್ಮೆಲೇ ಸಾಲವನ್ನು ಮರುಪಾವತಿ ಮಾಡಿದರೆ ಅದರ ಮೇಲೆ ನಿನಗೆ ನಿಗದಿತ ದಂಡ ವಿಧಿಸುತ್ತದೆ. ಇದರಿಂದ ನೀವು ಹೆಚ್ಚಿನ ಹಣ ಪಾವತಿಸುವ ಸಂದರ್ಭ ಬರಬಹುದು. ಆದ್ದರಿಂದ ನೀವು ಏನಾದರೂ ದಂಡ ವಿಧಿಸುವ ಸಾಧ್ಯತೆ ಇದೆಯೇ ಎಂಬುದರ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. 

6) ಸಾಲದ ಒಪ್ಪಂದ ಪತ್ರವನ್ನು ಪರಿಶೀಲಿಸಿ :- ನೀವು ಸಾಲವನ್ನು ತೆಗೆದುಕೊಳ್ಳುವಾಗ ಸಾಲ ಪಾತ್ರಕ್ಕೆ ಸಹಿ ಹಾಕುವ ಮುನ್ನ ಸಾಲ ಪಾತ್ರವನ್ನು ಪೂರ್ಣವಾಗಿ ಓದಿ ನಂತರ ಸಹಿ ಹಾಕಬೇಕು. ಅದರಲ್ಲಿ ತಿಳಿಸಿರುವ ಸಾಲದ ಮೇಲಿನ ಬಡ್ಡಿ ಮೊತ್ತ ಹಾಗೂ ಅವಧಿಯ ಮಾಹಿತಿ ಹಾಗೂ ವಿಧಿಸಿದ ಶುಲ್ಕದ ಮೊತ್ತ ಹಾಗೂ ಯಾವುದೇ ರೀತಿಯ ಇನ್ನಿತರ ಶುಲ್ಕ ಹಾಗೂ ದಂಡ ಹಾಗೂ ಡೌನಪೇಮೆಂಟ್ ವಿವರಗಳು ಹಾಗೂ ಯಾವ ಕಾರ್ ಗೆ ಲೋನ್ ತೆಗೆದುಕೊಳ್ಳುತ್ತಿದ್ದೀರಿ ಎಂಬ ಮಾಹಿತಿಗಳು ಸರಿಯಾಗಿ ಇವೆಯೇ ಎಂಬುದನ್ನು ನೀವು ಪರಿಶೀಲನೆ ಮಾಡಬೇಕು. ಇಲ್ಲದೆ ಇದ್ದರೆ ನೀವು ಮುಂದೆ ಯಾವುದಾದರೂ ತೊಂದರೆ ಅನುಭವಿಸುವ ಸ್ಥಿತಿ ಬರಬಹುದು. 

7) ನಿಮ್ಮ ಡೌನ್ ಪೇಮೆಂಟ್ ಮೊತ್ತಕ್ಕೆ ಸರಿ ಹೊಂದುವ ಬ್ಯಾಂಕ್ ಅಥವಾ ಕಂಪನಿಯಲ್ಲಿ ಲೋನ್ ಪಡೆಯಿರಿ :- ಕೆಲವು ಬ್ಯಾಂಕ್ ಅಥವಾ ಕಂಪನಿಯಲ್ಲಿ ನಿಮ್ಮ ಡೌನಪೇಮೆಂಟ್ ಹಣಕ್ಕೆ ಸಾಲ ಸಿಗದೇ ಇದರಬಹುದ್ ಅಥವಾ ಹೆಚ್ಚಿನ ಬಡ್ಡಿ ಹಾಗೂ ಶುಲ್ಕ ಪಾವತಿಸುವ ಹಾಗೆ ಆಗಬಹುದು. ಆದ ಕಾರಣ ನೀವು ನಿಮ್ಮ ಡೌನ್ ಪೇಮೆಂಟ್ ಹಣಕ್ಕೆ ಹೊಂದುವ ಬ್ಯಾಂಕ್ ಅಥವಾ ಕಂಪನಿಯಲ್ಲಿ ಸಾಲ ತೆಗೆದುಕೊಳ್ಳುವುದು ಉತ್ತಮ.

8) ಇನ್ನಿತರ ಸಾಲದ ಆಯ್ಕೆ ಮಾಡಿ :- ಒಮ್ಮೆ ನೀವು ಯಾವುದೇ ಕಾರಣಗಳಿಂದ ಬ್ಯಾಂಕ್ ಅಥವಾ ಕಂಪನಿ ಹೇಳಿರುವ ಕಾರ್ ಲೋನ್ ಅರ್ಹತೆಗಳನ್ನು ಪೂರೈಸಲು ಸಾಧ್ಯವಾಗದೆ ಇದ್ದರೆ ನೀವು ಲೋನ್ ಪಡೆಯಲು ಇನ್ನಿತರ ಮಾರ್ಗವನ್ನು ಅನುಸರಿಸಿ. ಎಫ್‌ಡಿ, ಅಥವಾ ಚಿನ್ನದ ಮೇಲಿನ ಸಾಲದ ಆಪ್ಷನ್ ಇದೆ.

9) ಕಾರ್ ಖರೀದಿಸುವ ಮೊದಲು ಯಾವ ಬ್ಯಾಂಕುಗಳು ಯಾವ ಕಾರ್ ಕಂಪನಿಗಳಿಗೆ ಲೋನ್ ನೀಡುತ್ತವೆ ಎಂದು ತಿಳಿದುಕೊಳ್ಳಿ. :- ಕೆಲವು ಕಂಪನಿಗಳು ಅಥವಾ ಬ್ಯಾಂಕ್ ಕೆಲವು ಕಂಪನಿ ಕಾರ್ ಗಳಿಗೆ ಕಡಿಮೆ ಬಡ್ಡಿದರ ಹಾಗೂ ಶುಲ್ಕ ವಿಧಿಸುತ್ತದೆ. ಅದನ್ನು ಅರಿತು ಸಾಲ ತೆಗೆದುಕೊಳ್ಳಿ. ಆಗ ನಿಮಗೆ ಹಣದ ಉಳಿತಾಯ ಆಗುತ್ತದೆ.

ಇದನ್ನೂ ಓದಿ: ಬಜಾಜ್ CNG ಬೈಕ್ ಜುಲೈ 17ಕ್ಕೆ ಬಿಡುಗಡೆ; ಎಲ್ಲಾ ಬೈಕ್ ಗಳಿಗೆ ನಡುಕ ಹುಟ್ಟಿಸಿದ ಬಜಾಜ್

Sharing Is Caring:

Leave a Comment