ಕಾರವಾರ ಜಿಲ್ಲೆಯಲ್ಲಿ 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಎಲ್ಲಾ ವಿದ್ಯಾರ್ಥಿಗಳ ಆಧಾರ್ ಕಾರ್ಡ್‌ಗಳನ್ನು ಬಯೋಮೆಟ್ರಿಕ್ ಮಾಹಿತಿಯನ್ನು ಕಡ್ಡಾಯವಾಗಿ ನವೀಕರಿಸುವಂತೆ ಶಿಕ್ಷಣ ಇಲಾಖೆಯು ಆದೇಶಿಸಿದೆ. ಈ ಕುರಿತು ಶಾಲಾ ಆಡಳಿತ ಮಂಡಳಿಗಳು ಎಲ್ಲಾ ತಿಳಿಸಿ, ಯಾವುದೇ ವಿದ್ಯಾರ್ಥಿ ಈ ಪ್ರಕ್ರಿಯೆಯಿಂದ ವಂಚಿತರಾಗದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಲಾಗಿದೆ.
ಲಕ್ಷ್ಮಿ ಪ್ರಿಯ ಅವರ ಸೂಚನೆ ಏನು?: ಬುಧವಾರ ನಡೆದ ಜಿಲ್ಲಾ ಮಟ್ಟದ ಆಧಾರ್ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು, ಎಲ್ಲಾ ವಿದ್ಯಾರ್ಥಿಗಳ ಆಧಾರ್ ಕಾರ್ಡ್‌ಗಳ ಬಯೋಮೆಟ್ರಿಕ್ ಮಾಹಿತಿಯನ್ನು ನವೀಕರಿಸುವ ಕುರಿತು ಕ್ರಮ ಕೈಗೊಳ್ಳಲು ಸೂಚನೆಗಳನ್ನು ನೀಡಲಾಗಿದೆ.
5 ವರ್ಷ ಮಕ್ಕಳಿಗೆ ಆಧಾರ್ ನವೀಕರಣ ಕಡ್ಡಾಯಗೊಳಿಸಲು ಆದೇಶ :-
ಶಾಲಾ ಮಕ್ಕಳ ಆಧಾರ್ ಕಾರ್ಡ್ ಸೂಚಿಸಿರುವ ತಪ್ಪುಗಳನ್ನು ಸರಿಪಡಿಸಲು ಮತ್ತು ಬಯೋಮೆಟ್ರಿಕ್ ಮಾಹಿತಿಯನ್ನು ನವೀಕರಿಸಲು ಜಿಲ್ಲಾಧಿಕಾರಿಗಳು ವಿಶೇಷ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರೂ. ಇದರಿಂದ ವಿದ್ಯಾರ್ಥಿಗಳು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಯಾವುದೇ ತೊಂದರೆ ಎದುರಿಸಬೇಕಾಗುವುದಿಲ್ಲ ಎಂದು ಅವರು ಹೇಳಿದರು. 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಎಲ್ಲಾ ವಿದ್ಯಾರ್ಥಿಗಳ ಆಧಾರ್ ಕಾರ್ಡ್‌ಗಳನ್ನು ಬಯೋಮೆಟ್ರಿಕ್ ಮಾಹಿತಿಯೊಂದಿಗೆ ಕಡ್ಡಾಯವಾಗಿ ನವೀಕರಿಸಿ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಬಯೋಮೆಟ್ರಿಕ್ ಸ್ವೀಕರಿಸಿದ ವಿದ್ಯಾರ್ಥಿಗಳ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡು, ಪ್ರತ್ಯೇಕ ಶಿಬಿರಗಳನ್ನು ನಡೆಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಹೆಸರು ಅಥವಾ ಮಾಹಿತಿ ತಪಾಗಿದ್ದರೆ ಸರಿಪಡಿಸಲು ಸೂಚನೆ :- ಶಾಲಾ ಮಕ್ಕಳ ಆಧಾರ್ ಕಾರ್ಡ್‌ಗಳಲ್ಲಿ ಹೆಸರು ತಪ್ಪಾಗಿದ್ದರೆ, ಶಾಲೆಯ ಮುಖ್ಯಸ್ಥರು ಅಥವಾ ಶಿಕ್ಷಕರು ನೀಡಿರುವ ನಿರ್ದಿಷ್ಟ ಅರ್ಜಿಯಲ್ಲಿ ಸರಿಯಾದ ಹೆಸರನ್ನು ಬರೆಯಬೇಕು. ಅದನ್ನು ತಿದ್ದುಪಡಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮನೆಯಿಂದ SBI ನಲ್ಲಿ ಉಳಿತಾಯ ಖಾತೆಯನ್ನು ಹೇಗೆ ತೆರೆಯುವುದು, ಇಲ್ಲಿದೆ ಸಂಪೂರ್ಣ ವಿವರ
ಉತ್ತಮ ಗುಣಮಟ್ಟದ ಸೇವೆ ನೀಡಲು ಆದೇಶ :-
ಜಿಲ್ಲಾಧಿಕಾರಿಗಳು ಎಲ್ಲಾ ಆಧಾರ್ ತಿದ್ದುಪಡಿ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸುವಂತೆ ಆದೇಶ ನೀಡಿದ್ದಾರೆ. ಜೊತೆಗೆ, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಆಧಾರ್ ಸಂಬಂಧಿತ ಸಮಸ್ಯೆಗಳ ಸೌಲಭ್ಯಗಳನ್ನು ತೊಂದರೆ ಅನುಭವಿಸುತ್ತಿರುವುದನ್ನು ಗಮನಿಸಿ, ಈ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಜಿಲ್ಲೆಯಲ್ಲಿರುವ ಆಧಾರ್ ಬಯೋಮೆಟ್ರಿಕ್ ಕೇಂದ್ರಗಳ ಸಂಖ್ಯೆ ಬಗ್ಗೆ ಮಾಹಿತಿ :- ಜಿಲ್ಲೆಯ ಆಧಾರ್ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಈ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಜೊತೆಗೆ ಜಿಲ್ಲೆಯಲ್ಲಿ ಒಟ್ಟು 16,43,471 ಆಧಾರ್ ಕಾರ್ಡ್‌ಗಳು ಇದ್ದು, ಇದರಲ್ಲಿ 1,10,605 ಆಧಾರ್ ಕಾರ್ಡ್‌ಗಳಿಗೆ ಬಯೋಮೆಟ್ರಿಕ್ ಕಾರ್ಯ ನಿರ್ವಹಿಸಿರುವ ಇನ್ನು ಬಾಕಿ ಇದೆ., ಈ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಲು ನಿರ್ದೇಶಿಸಲಾಗಿದೆ. ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳಿಂದ ಆಧಾರ್ ಸಂಬಂಧಿತ ಸಮಸ್ಯೆಗಳ ಸೌಲಭ್ಯಗಳನ್ನು ಪಡೆಯಲು ತೊಂದರೆ ಅನುಭವಿಸುತ್ತಿರುವುದನ್ನು ಗಮನಿಸಿ, ಜಿಲ್ಲಾಧಿಕಾರಿಗಳು ಆಧಾರ್ ಕೇಂದ್ರಗಳನ್ನು ಸುಧಾರಿಸಲು ಮತ್ತು ಬಾಕಿ ಇರುವ ಬಯೋಮೆಟ್ರಿಕ್ ಕೆಲಸವನ್ನು ಪೂರ್ಣಗೊಳಿಸಲು ಆದೇಶ ನೀಡಲಾಗಿದೆ.
ಆಧಾರ್ ಕಾರ್ಡ್ ನವೀಕರಣದ ಬಗ್ಗೆ ಲಕ್ಷ್ಮಿ ಪ್ರಿಯ ಅವರು ನೀಡಿದ ಮಾಹಿತಿಗಳು :- ಜಿಲ್ಲೆಯಲ್ಲಿ 15,38,406 ಆಧಾರ್ ಕಾರ್ಡ್‌ಗಳಲ್ಲಿ 1,05,065 ಕಾರ್ಡ್‌ಗಳಿಗೆ ಮೊಬೈಲ್ ಸೀಡ್ ಮಾಡುವ ಕೆಲಸ ಬಾಕಿ ಇದೆ. ಸ್ಯಾಟ್ಸ್ ತಂತ್ರಾಂಶದ ಮೂಲಕ ಜಿಲ್ಲೆಯಲ್ಲಿ 1, 01, 230 ವಿದ್ಯಾರ್ಥಿಗಳ ಆಧಾರ್ ಕಾರ್ಡ್‌ಗಳ ಪರಿಶೀಲನೆ ಕೆಲಸ ನಡೆಯುತ್ತಿದೆ, 87% ಕೆಲಸ ಸಾಧಿಸಲಾಗಿದೆ. ಜಿಲ್ಲೆಯ ವಿಕಲಚೇತನರು ಮತ್ತು ಹಾಸಿಗೆ ಪೀಡಿತರ ಮನೆಗೆ ಹೋಗಿ ಅವರ ಆಧಾರ್ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ವಿಶೇಷ ಕಿಟ್‌ಗಳನ್ನು ವಿತರಿಸಲಾಗಿದೆ ಎಂಬ ಮಾಹಿತಿಯನ್ನು ಲಕ್ಷ್ಮಿ ಪ್ರಿಯ ಅವರು ತಿಳಿಸಿದರು.
ಇದನ್ನೂ ಓದಿ: UPI ನ ಹೊಸ ವೈಶಿಷ್ಟ್ಯ ಈಗ ಒಂದು ಕುಟುಂಬದ 5 ಜನರು ಒಂದು ಖಾತೆಯಿಂದ UPI ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ.