ಸಾಲ ತೆಗೆದುಕೊಳ್ಳಬೇಕು ಎಂದರೆ ಮುಖ್ಯವಾಗಿ ನಮ್ಮ CIBIL ಸ್ಕೋರ್ ಚೆನ್ನಾಗಿ ಇರಬೇಕು. ಯಾವುದೇ ಬ್ಯಾಂಕ್ ಅಥವಾ ಫೈನಾನ್ಸ್ ಕಂಪನಿಯಲ್ಲಿ ನಮಗೆ ಸಾಲ ನೀಡುವ ಮುನ್ನ ನಮ್ಮ CIBIL ಸ್ಕೋರ್ ನೋಡಿಯೇ ನಮಗೆ ಸಾಲವನ್ನು ನೀಡುತ್ತಾರೆ. ನಮ್ಮ ಸಾಲಕ್ಕೆ ಬಡ್ಡಿ ಹಾಗೂ ಸಾಲವನ್ನು ಹಿಂದಿರುಗಿಸುವ ಸಮಯವೂ ಸಹ CIBIL ಸ್ಕೋರ್ ಆಧಾರದ ಮೇಲೆಯೇ ನಿರ್ಧಾರ ಆಗಿರುತ್ತದೆ. ಈಗ ಮುಖ್ಯವಾಗಿ RBI CIBIL ಸ್ಕೋರ್ನಲ್ಲಿ 5 ಹೊಸ ಬದಲಾವಣೆಗಳನ್ನು ತಂದಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಗೆ ಈ ಲೇಖನವನ್ನು ಓದಿ.
CIBIL ಸ್ಕೋರ್ನಲ್ಲಿ ಏನೇನು ಬದಲಾವಣೆ ಆಗಿದೆ?
CIBIL ಸ್ಕೋರ್ನ ಈ ಹೊಸ ನಿಯಮಗಳು ಏಪ್ರಿಲ್ 2024 ಜಾರಿಯಲ್ಲಿ ಇವೆ ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ.
1) ಗ್ರಾಹಕರಿಗೆ CIBIL ವರದಿ ನೀಡಲು RBI ಸೂಚಿಸಲಾಗಿದೆ: ಸಾಮಾನ್ಯವಾಗಿ ಎಲ್ಲರಿಗೂ CIBIL ಸ್ಕೋರ್ ಎಷ್ಟು ಇದೆ ಅಥವಾ ಅದರ ಬಗ್ಗೆ ಮಾಹಿತಿ ಇರುವುದು ಇಲ್ಲ ಅದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಎಲ್ಲಾ ಕ್ರೆಡಿಟ್ ಮಾಹಿತಿ ಕಂಪನಿಗಳಿಗೆ ಬ್ಯಾಂಕ್ ಅಥವಾ NBFC ಗ್ರಾಹಕರು ಸಾಲದ ವರದಿಯನ್ನು ಪರಿಶೀಲಿಸಿದಾಗ ಗ್ರಾಹಕರಿಗೆ ನೀಡಲು ಸೂಚಿಸಲಾಗಿದೆ. ಮಾಹಿತಿಯನ್ನು SMS ಅಥವಾ ಇಮೇಲ್ ಮೂಲಕ ಕಳುಹಿಸಬಹುದು. ಇದರಿಂದ ಜನರಿಗೆ CIBIL ಸ್ಕೋರ್ಗಳ ಬಗ್ಗೆ ಹೆಚ್ಚಿನ ಪಾರದರ್ಶಕತೆ ಜೊತೆಗೆ ದೂರುಗಳ ಸಂಖ್ಯೆ ಕಡಿಮೆ ಮಾಡಲು ಸಹಾಯವಾಗುತ್ತದೆ.
2) ಗ್ರಾಹಕರ ವಿನಂತಿಗಳನ್ನು ತಿರಸ್ಕರಿಸುವಾಗ ಕಾರಣವನ್ನು ತಿಳಿಸುವುದು ಕಡ್ಡಾಯ :- ಗ್ರಾಹಕರ ವಿನಂತಿಯನ್ನು ತಿರಸ್ಕರಿಸಿದರೆ, ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ಈಗ ತಿರಸ್ಕರಣೆಯ ಕಾರಣವನ್ನು ತಿಳಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸ್ಪಷ್ಟವಾಗಿ ತಿಳಿಸಿದೆ. ಇದರಿಂದ ಗ್ರಾಹಕರಿಗೆ ತಮ್ಮ ವಿನಂತಿಗಳನ್ನು ಏಕೆ ತಿರಸ್ಕರಿಸಲಾಗಿದೆ ಎಂಬುದನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅವರಿಗೆ ತಮ್ಮ ಹಣಕಾಸು ಪರಿಸ್ಥಿತಿಯನ್ನು ಸುಧಾರಿಸಲು ಕ್ರಮಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
3) ಗ್ರಾಹಕರಿಗೆ ವಾರ್ಷಿಕ ಉಚಿತ ಕ್ರೆಡಿಟ್ ವರದಿ :- ಭಾರತೀಯ ರಿಸರ್ವ್ ಬ್ಯಾಂಕ್ (RBI) ಕ್ರೆಡಿಟ್ ಕಂಪನಿಗಳಿಗೆ ವರ್ಷಕ್ಕೊಮ್ಮೆ ತಮ್ಮ ಗ್ರಾಹಕರಿಗೆ ಉಚಿತ ಪೂರ್ಣ ಕ್ರೆಡಿಟ್ ವರದಿಯನ್ನು ಒದಗಿಸಲು ಸೂಚಿಸಿದೆ. ಇದರಲ್ಲಿ ಗ್ರಾಹಕರ CIBIL ಸ್ಕೋರ್ ಮತ್ತು ಅವರ ಸಂಪೂರ್ಣ ಕ್ರೆಡಿಟ್ ಇತಿಹಾಸ ಇರಬೇಕು.
4)ಡಿಫಲ್ಟ್ ವರದಿ ಸಲ್ಲಿಸಬೇಕು :- ಭಾರತೀಯ ರಿಸರ್ವ್ ಬ್ಯಾಂಕ್ (RBI) ಗ್ರಾಹಕರು ಖಚಿತವಾಗಿ ತಿಳಿಸಬೇಕು. ಯಾವುದೇ ಖಾತೆ ಡೀಫಾಲ್ಟ್ ಆಗುವ ಮೊದಲು. ಈ ನಿಯಮದ ಪ್ರಕಾರ, ಸಾಲ ನೀಡುವ ಸಂಸ್ಥೆಗಳು ಗ್ರಾಹಕರಿಗೆ SMS ಅಥವಾ ಇಮೇಲ್ ಮೂಲಕ ಎಲ್ಲಾ ಅಗತ್ಯ ಮಾಹಿತಿಯನ್ನು ಒದಗಿಸಬೇಕು. ಹೆಚ್ಚುವರಿಯಾಗಿ, ಬ್ಯಾಂಕುಗಳು ಮತ್ತು ಸಾಲ ನೀಡುವ ಸಂಸ್ಥೆಗಳು “ನೋಡಲ್ ಅಧಿಕಾರಿ” ಯನ್ನು ನೇಮಿಸಬೇಕು. ಈ ಅಧಿಕಾರಿ ಕ್ರೆಡಿಟ್ ಸ್ಕೋರ್ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಗ್ರಾಹಕರಿಗೆ ಸಹಾಯ ಮಾಡುತ್ತಾರೆ.
5) 30 ದಿನಗಳ ಒಳಗೆ ದೂರು ಬಗೆಹರಿಸಿ :- ಗ್ರಾಹಕರು ನೀಡಿದ ದೂರನ್ನು 30ದಿನಗಳ ಒಳಗೆ ಪರಿಹರಿಸಬೇಕು. ಇಲ್ಲವಾದರೆ ಪಡೆದ ಮಾಹಿತಿ ಪ್ರತಿ ಗ್ರಾಹಕರು 30 ದಿನಗಳ ಒಳಗೆ ದಿನಕ್ಕೆ ₹100 ದಂಡವನ್ನು ಕಂಪನಿ ಪಾವತಿಸಬೇಕು. ದೂರನ್ನು ಪರಿಹರಿಸಿದ ಬಳಿಕವೂ ದಂಡ ಪಾವತಿ ಮಾಡಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: PM ವಿಶ್ವಕರ್ಮ ಯೋಜನೆಯಡಿಯಲ್ಲಿ ಉಚಿತವಾಗಿ ಸಿಗುತ್ತೆ ಹೊಲಿಗೆ ಮಿಷನ್! ಈ ರೀತಿ ಅರ್ಜಿ ಸಲ್ಲಿಸಿ.