ಸಿಎಂ 1 ಲಕ್ಷ ಮನೆ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್; ಸರ್ಕಾರವೇ ಭರಿಸಲಿದೆ ವಂತಿಗೆ ಹಣ

ರಾಜ್ಯದ ಜನರಿಗೆ ಈ ಸುದ್ದಿ ಸಾಕಷ್ಟು ಸಿಹಿ ನಿಡ್ತದೆ ಅಂತಲೇ ಹೇಳಬಹುದು. ಹೌದು ಸರ್ಕಾರದಿಂದ ಸಿಗುವ ವಸತಿ ಸೌಲಭ್ಯಕ್ಕಾಗಿ ಕಾಯ್ತಿದ್ದ ಜನರಿಗಂತೂ ಅತ್ಯಂತ ಖುಷಿ ಸುದ್ದಿ ಅಂತಲೇ ಹೇಳಬಹುದು. ಹೌದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಲಕ್ಷ ಮನೆ ಯೋಜನೆ ಫಲಾನುಭವಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಇನ್ನು ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಆರ್ಥಿಕ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಹೌದು ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಆರ್ಥಿಕ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.

WhatsApp Group Join Now
Telegram Group Join Now

ಬಿಜೆಪಿ ಸರ್ಕಾರದಲ್ಲಿ ಯೂನಿಟ್ ವೆಚ್ಚ ಹೆಚ್ಚಳ ನಿರ್ಧಾರದಿಂದ ಆತಂಕ ಗೊಂಡಿದ್ದ 12,153 ಕುಟುಂಬಗಳಿಗೆ ಸಿಹಿ ಸುದ್ದಿ ನೀಡಿದ್ದು, ಪ್ರತಿ ಮನೆಗೆ ಒಂದು ಲಕ್ಷ ರೂಪಾಯಿಯಂತೆ 121 ಕೋಟಿ 53 ಲಕ್ಷ ರೂಪಾಯಿಯನ್ನ ಸರ್ಕಾರವೇ ಭರಿಸಲು ಒಪ್ಪಿಗೆ ನೀಡಿದೆ. ಹೌದು ವಸತಿ ಸಚಿವ ಜಮೀರ್ ಅಹಮದ್ ಖಾನ್ ನೇತೃತ್ವದಲ್ಲಿ ವಿಧಾನ ಸೌಧದ ಮುಖ್ಯಮಂತ್ರಿಯವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು ಮುಖ್ಯಮಂತ್ರಿಯವರ ಮನವೊಲಿಸುವಲ್ಲಿ ಯಶಸ್ವಿಯಾದರು. ಸದ್ಯ ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆ ಅಡಿ ಆಯ್ಕೆಯಾದ 12,153 ಕುಟುಂಬಗಳು ಕಟ್ಟಬೇಕಿದ್ದ ತಲಾ ₹1 ಲಕ್ಷ ವಂತಿಗೆಯನ್ನು ಸರ್ಕಾರವೇ ಭರಿಸಲಿದೆ. ಸಿಎಂ ಸಿದ್ದರಾಮಯ್ಯ ಅವರು ಫಲಾನುಭವಿಗಳ ವಂತಿಕೆಯ ಒಟ್ಟು ₹121.53 ಕೋಟಿ ಬಿಡುಗಡೆ ಮಾಡಲು ಸಮ್ಮತಿಸಿದ್ದಾರೆ ಎಂದು ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ತಿಳಿಸಿದ್ದಾರೆ. ಮುಖ್ಯಮಂತ್ರಿ ಯವರ ಒಂದು ಲಕ್ಷ ಮನೆ ಯೋಜನೆ ಗೆ 2017, ಸೆಪ್ಟೆಂಬರ್ 23 ರಂದು ಅಧಿಸೂಚನೆ ಹೊರಡಿಸಿ ಘಟಕ ವೆಚ್ಚ 6 ಲಕ್ಷ ರೂಪಾಯಿ ನಿಗದಿ ಮಾಡಲಾಗಿತ್ತು.

ಸರ್ಕಾರವೇ ಭರಿಸಲಿದೆ ವಂತಿಗೆ ಹಣ

ಹೌದು ಸಾಕಷ್ಟು ಜನರು ಈ ಯೋಜನೆಯಡಿಯಲ್ಲಿ ಲಾಭ ಪಡೆಯಲು ತುದಿಗಾಲಿನಲ್ಲಿ ಕಾದು ನಿಂತಿದ್ರು. ಆದ್ರೆ ವಂತಿಕೆ ಪಾವಿತಿಸೋದು ಹೇಗೆ ಅನ್ನೋದು ಬಹಳ ಕಷ್ಟ ಅಂತ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಏನು ಮಾಡೋದು ಅಂತ ಯೋಚನೆ ಮಾಡ್ತಿದ್ರು ಸದ್ಯ ಅಂತಹ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಇದು ಅತ್ಯಂತ ಸಿಹಿ ಸುದ್ದಿಯಾಗಿದ್ದು ರಾಜ್ಯ ಸರ್ಕಾರದ ಕ್ರಮಕ್ಕೆ ಬಡಾ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.

ಹೌದು ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ 1.50 ಲಕ್ಷ, ರಾಜ್ಯ ಸರ್ಕಾರ ಸಾಮಾನ್ಯ ವರ್ಗಕ್ಕೆ 1.20 ಲಕ್ಷ, ಎಸ್ ಟಿ -ಎಸ್ ಸಿ ವರ್ಗಕ್ಕೆ 2 ಲಕ್ಷ ರೂಪಾಯಿ ನಿಗದಿ ಮಾಡಿತ್ತು. ನಂತರ ಬಿ. ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಬಿಜೆಪಿ ಸರ್ಕಾರದಲ್ಲಿ ಘಟಕ ವೆಚ್ಚ 10 ಲಕ್ಷದ 60 ಸಾವಿರ ರೂಪಾಯಿ ನಿಗದಿ ಮಾಡಲಾಗಿತ್ತು. ಇದಕ್ಕೆ 60 ಸಾವಿರ ರೂಪಾಯಿ ಜಿಎಸ್ ಟಿ ಸೇರಿ 11 ಲಕ್ಷದ 20 ಸಾವಿರ ರೂಪಾಯಿ ಆಗಿತ್ತು. ಇಷ್ಟು ಮೊತ್ತ ಭರಿಸಲು ಕಷ್ಟ ಎಂದು ಫಲಾನುಭವಿಗಳು ಸಚಿವರ ಬಳಿ ಮನವಿ ಮಾಡಿಕೊಂಡಿದ್ದರು. ಏಕೆಂದ್ರೆ ಟಿ ವರ್ಗ 6.70 ಲಕ್ಷ ರೂಪಾಯಿ ಕಟ್ಟಬೇಕಾಗುತ್ತದೆ. ಇದರಿಂದ 12,153 ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇನ್ನು ಯೋಜನೆಯ ಲಾಭ ಪಡೆಯಲು ಈ ಹಿಂದೆ ಕ್ರಮವಾಗಿ 8.50 ಲಕ್ಷ ಹಾಗೂ 7.70 ಲಕ್ಷ ರೂಪಾಯಿ ಕಟ್ಟಬೇಕಿತ್ತು. ಈ ತೀರ್ಮಾನ 2020 ರಲ್ಲಿ ಘಟಕ ವೆಚ್ಚ ಹೆಚ್ಚಳ ತೀರ್ಮಾನದ ಅಧಿಸೂಚನೆ ಹೊರಡಿಸಿದ ಸಂದರ್ಭದಲ್ಲಿ ಪ್ರಾರಂಭಿಕ ಠೇವಣಿ ಮೊತ್ತ ಪಾವತಿ ಮಾಡಿರುವ 12,153 ಮಂದಿಗೆ ಮಾತ್ರ ಅನ್ವಯವಾಗಲಿದೆ. ಸದ್ಯ ಈಗ ಪ್ರಾರಂಭಿಕ ಠೇವಣಿ ಮೊತ್ತ ಪಾವತಿ ಮಾಡದ ಆನ್ ಲೈನ್ ಅರ್ಜಿಗಳಿಗೆ ಅನ್ವಯ ಆಗದು ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟ ಪಡಿಸಿದ್ದಾರೆ.

ಹೌದು ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರು ಭಾಗವಹಿಸಿದ್ದರು ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದ್ದು, ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ, ಶಾಸಕರಾದ ಎಸ್. ಟಿ. ಸೋಮಶೇಖರ್, ಎಸ್. ಆರ್. ವಿಶ್ವನಾಥ್, ಮಂಜುಳಾ ಲಿಂಬಾವಳಿ, ಎಂ. ಕೃಷ್ಣಪ್ಪ, ಮುನಿರಾಜು, ಶಿವಣ್ಣ ಪಾಲ್ಗೊಂಡು ಯೋಜನೆಯ ಪರ ನಿರ್ಧಾರಕ್ಕೆ ಕೈ ಜೋಡಿಸಿದ್ದರಿಂದ ಸಭೆಯಲ್ಲಿ ಇದೀಗ ಈ ನಿರ್ಧಾರಕ್ಕೆ ಅಧಿಸೂಚನೆ ಸಿಕ್ಕಂತಾಗಿದೆ. ಸರಿಸುಮಾರು 121 ಕೋಟಿ 53 ಲಕ್ಷ ಭರಿಸಲು ಸಿದ್ದರಾಮಯ್ಯ ಅಷ್ಟು ಎಂದಿದ್ದು, ಸದ್ಯ ಸರ್ಕಾರದಿಂದ ಅಧಿಸೂಚನೆ ಹೊರಾಡಿಸುವುದು ಒಂದೇ ಬಾಕಿ ಇದೆ. ಅಧಿಸೂಚನೆ ಆದ ತಕ್ಷಣ ಅರ್ಜಿ ಸಲ್ಲಿಸುವ ಫಲನುಭವಿಗಳಿಗೆ ಯೋಜನೆಯ ಲಾಭ ಸಿಗೋದ್ರಲ್ಲಿ ಯಾವುದೇ ಸಂದೇಹವಿಲ್ಲ.

ಇದನ್ನೂ ಓದಿ: ಏರ್‌ಟೆಲ್ ಮತ್ತು ಜಿಯೋ ಗ್ರಾಹಕರಿಗೆ ಅತ್ಯುತ್ತಮ ಅನಿಯಮಿತ 5G ಯೋಜನೆಗಳನ್ನು ನೀಡುತ್ತಿದೆ. 

Sharing Is Caring:

Leave a Comment