ಹೈನುಗಾರಿಕೆ ಕೃಷಿಯು ಕೆಲಸ-ಸಮೃದ್ಧ ಉದ್ಯಮವಾಗಿದೆ, ಆದರೆ ಇದು ತುಂಬಾ ಲಾಭದಾಯಕವಾಗಿರಬಹುದು. ಹಸುಗಳನ್ನು ಆರೋಗ್ಯಕರವಾಗಿ ಮತ್ತು ಉತ್ಪಾದಕವಾಗಿರಿಸಲು ರೈತರು ಸಾಕಷ್ಟು ಸಮಯ ಮತ್ತು ಶ್ರಮವನ್ನು ಹೂಡಬೇಕಾಗುತ್ತದೆ. ಹೆಚ್ಚಿನ ಹಣವನ್ನು ವಿನಿಯೋಗ ಮಾಡಬೇಕಾಗುತ್ತದೆ. ಈಗ ಮಹಿಳೆಯರು ಪುರುಷರಂತೆ ಉದ್ಯಮ ಕ್ಷೇತ್ರಕ್ಕೆ ಸಮನಾಗಿ ಕಾಲಿಡುತ್ತಿದ್ದಾರೆ. ಹೈನುಗಾರಿಕೆಯಲ್ಲಿ ಆಸಕ್ತಿ ಇರುವ ಮಹಿಳೆಯರಿಗಾಗಿಯೇ ಈಗ ಸಾಲ ಸೌಲಭ್ಯ ನೀಡಲಾಗುತ್ತದೆ. ಹೈನುಗಾರಿಕೆ ಇಂದಿನ ದಿನಮಾನದಲ್ಲಿ ಹೆಚ್ಚು ಲಾಭ ನೀಡುವ ಜೊತೆಗೆ ಹೆಚ್ಚಿನ ಇನ್ವೆಸ್ಟ್ಮೆಂಟ್ ಮಾಡ್ಬೇಕಾದ ಉದ್ಯಮ ಆಗಿದೆ. ಮಹಿಳೆಯರು ಸಾಲ ಪಡೆಯುವುದು ಹೇಗೆ ಹಾಗೂ ಅರ್ಹತೆಗಳು ಏನೇನು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ಆಕಳು ಅಥವಾ ಎಮ್ಮೆ ಖರೀದಿಗೆ ಸಹಾಯ ಧನ :- ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಮಹಿಳೆಯರು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒಲವು ತೋರಿಸಬೇಕು ಎಂಬ ನಿಟ್ಟಿನಲ್ಲಿ ಈಗ ಹೈನುಗಾರಿಕೆ ಆಯ್ಕೆ ಮಾಡಿಕೊಳ್ಳುವ ಮಹಿಳೆಯರಿಗೆ ಹಸು ಅಥವಾ ಎಮ್ಮೆ ಖರೀದಿ ಮಾಡುವ ಸಲುವಾಗಿ ಸಾಲವನ್ನು ನೀಡುತ್ತುದೆ. ಈ ಸಾಲಕ್ಕೆ ರಾಜ್ಯ ಸರ್ಕಾರವು ಕೇವಲ ಶೇಕಡಾ 6% ಬಡ್ಡಿಯನ್ನು ನೀಡುತ್ತಿದೆ. ಇದರಿಂದ ಮಹಿಳೆಯರಿಗೆ ಹೆಚ್ಚಿನ ಬಡ್ಡಿದರವನ್ನು ಪಾವತಿ ಮಾಡಬೇಕಾಗಿಲ್ಲ. ಇದೆ ಬ್ಯಾಂಕ್ ನಲ್ಲಿ ಅಥವಾ ಬೇರೆ ಸಂಘ ಸಂಸ್ಥೆಯಲ್ಲಿ ಹೈನುಗಾರಿಕೆ ಕೃಷಿಗೆ ಸಾಲ ಪಡೆದರೆ ಹೆಚ್ಚಿನ ಬಡ್ಡಿಯನ್ನು ನೀಡಬೇಕಾಗುತ್ತದೆ.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಸಾಲಾ ನೀಡಲಾಗುತ್ತಿದೆ:- ರಾಜ್ಯದ ಮಹಿಳೆಯರಿಗೆ ಕೃಷಿಯಲ್ಲಿ ಹೆಚ್ಚಿನ ಉತ್ಸಾಹ ಹಾಗೂ ಕೃಷಿ ಚಟುವಟಿಕೆಗಳಲ್ಲಿ ತೊಡಕಿಕೊಂಡು ಉತ್ತಮ ಆರ್ಥಿಕತೆ ಕಂಡುಕೊಳ್ಳಬೇಕು ಎಂಬ ಉದ್ದೇಶದಿಂದ ರಾಜ್ಯದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತಿದೆ.
ಹೈನುಗಾರಿಕೆ ಸಾಲಕ್ಕೆ ಬಡ್ಡಿ ಸಹಾಯಧನ!
ಈ ವರ್ಷವು ವಿವಿಧ ಬ್ಯಾಂಕ್‌ಗಳಿಂದ ಹೈನುಗಾರಿಕೆ ಸಾಲ ಪಡೆದ ಪ್ರತಿ ರೈತರಿಗೆ ಗರಿಷ್ಠ 65,000 ರೂಪಾಯಿ ಸಾಲದ ಮೊತ್ತದ ಮೇಲೆ ಶೇಕಡಾ 6% ಬಡ್ಡಿಯನ್ನು ಸಹಾಯಧನದ ರೂಪದಲ್ಲಿ ನೀಡಲಾಗುತ್ತದೆ. ಒಟ್ಟು ಸಹಾಯಧನದ ರೂಪದಲ್ಲಿ 3625 ರೂಪಾಯಿಗಳನ್ನು ನೀಡಲಾಗುತ್ತದೆ. ಮಹಿಳೆಯರು ಸ್ಥಾಪಿಸುವ ಪ್ರತಿ ಹಸು ಅಥವಾ ಎಮ್ಮೆ ಯ ಘಟಕಕ್ಕೆ ನೀಡುವ ಸಾಲದ ಮೊತ್ತವು 65,000 ಆಗಿರುತ್ತದೆ. ಪ್ರತಿ ರೈತ ಮಹಿಳೆಗೆ ಗರಿಷ್ಠ 3624.50 ರೂಪಾಯಿ ವಾರ್ಷಿಕ ಬಡ್ಡಿಯ ಸಹಾಯಧನ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹೈನುಗಾರಿಕೆ ಕೃಷಿಯಲ್ಲಿ ಕೆಲವು ಸವಾಲುಗಳು ಇವೆ :-
- ಇದಕ್ಕೆ ಹೆಚ್ಚಿನ ಶ್ರಮ ಮತ್ತು ಶ್ರಮದ ಅಗತ್ಯವಿರುತ್ತದೆ.
- ಇದು ಪರಿಸರದ ಮೇಲೆ ಪರಿಣಾಮ ಬೀರಬಹುದು, ಹಸಿರುಮನೆ ಅನಿಲಗಳ ಹೊರಸೂಸುವಿಕೆ ಮತ್ತು ನೀರು ಮತ್ತು ಭೂಮಿಯ ಮಾಲಿನ್ಯಕ್ಕೆ ಕಾರಣವಾಗಬಹುದು.
- ಹಸುಗಳ ಆರೋಗ್ಯವನ್ನು ನಿರ್ವಹಿಸುವುದು ದುಬಾರಿಯಾಗಬಹುದು ಮತ್ತು ಅವುಗಳಿಗೆ ರೋಗ ಮತ್ತು ಕಾಯಿಲೆಗಳಿಂದ ರಕ್ಷಣೆ ನೀಡಬೇಕು.
ಸಂಪರ್ಕಿಸಿ: ಮಹಿಳೆಯರಿಗೆ ನೀಡುವ ಹೈನುಗಾರಿಕೆಗೆ ಸಾಲದ ಬಗ್ಗೆ ಅಥವಾ ನೀಡುವ ಸಹಾಯಧನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ ಭೇಟಿ ನೀಡಿದ ಮಾಹಿತಿ ಪಡೆಯಬಹುದು ಅಥವಾ ರೈತರು ತಮ್ಮ ಹತ್ತಿರದ ಪಶುವೈದ್ಯಕೀಯ ಸಂಸ್ಥೆ ಅಥವಾ ಪಶು ಆಸ್ಪತ್ರೆಯನ್ನು ಸಂಪರ್ಕಿಸಬಹುದು. ಇಲ್ಲಿ ನಿಮಗೆ ಸಾಲವನ್ನು ಪಡೆಯಲು ವಿಧಾನ ಹಾಗೂ ಸಾಲದ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಳು ಸಿಗುತ್ತದೆ.
ಇದನ್ನೂ ಓದಿ: ಕುರಿ ಮತ್ತು ಮೇಕೆ ಸಾಕಾಣಿಕೆಗೆ ಸರಕಾರದಿಂದ ಸಹಾಯ ಧನ ಸಿಗಲಿದೆ.