ಇನ್ನು ಮುಂದೆ ಗ್ರಾಹಕರು ಎಟಿಎಂಗೆ ಹೋಗಿ ಹಣ ಜಮಾ ಮಾಡಲು ಡೆಬಿಟ್ ಕಾರ್ಡ್ ಬಳಸಬೇಕು ಎಂಬ ಅಗತ್ಯ ಇರುವುದಿಲ್ಲ. ಈಗ ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ UPI ಅಪ್ಲಿಕೇಶನ್ ಅನ್ನು ಸುಲಭವಾಗಿ ಹಣ ಜಮಾ ಮಾಡಬಹುದು. ಇದರಿಂದ ನಿಮ್ಮ ಸಮಯ ಮತ್ತು ಶ್ರಮ ಎರಡೂ ಉಳಿಯುತ್ತದೆ. ನೀವು ಮನೆಯಲ್ಲಿಯೇ ಕುಳಿತು ನಿಮ್ಮ ಡೆಬಿಟ್ ಕಾರ್ಡ್ ಗೆ ಹಣ ಜಮಾ ಮಾಡುವ ಉತ್ತಮ ಸೌಲಭ್ಯ ಈಗ ಬಂದಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ನಾ ಹೊಸ ತಂತ್ರಜ್ಞಾನ :- ಭಾರತೀಯ ರಿಸರ್ವ್ ಬ್ಯಾಂಕ್ ಈಗ ನಮ್ಮ ದಿನನಿತ್ಯದ ಜೀವನವನ್ನು ಸುಲಭಗೊಳಿಸುವ ಹೊಸ ವ್ಯವಸ್ಥೆಗಳನ್ನು ತಂದಿದೆ. ಇದರ ಹೆಸರು UPI ಇಂಟರ್‌ಆಪರೇಬಲ್ ಕ್ಯಾಶ್ ಡೆಪಾಸಿಟ್. UPI-ICD ತಂತ್ರಜ್ಞಾನದಿಂದ ATM ನಲ್ಲಿ ಹಣ ಜಮಾ ಮಾಡುವ ಪ್ರಕ್ರಿಯೆ ಇನ್ನು ಮುಂದೆ ತುಂಬಾ ಸುಲಭವಾಗಿದೆ.
ಹೊಸ ತಂತ್ರಜ್ಞಾನದಿಂದ ಎಟಿಎಂ ಗೆ ಹಣ ಟ್ರಾನ್ಸ್ಫರ್ ಮಾಡುವುದು ಹೇಗೆ?
- ಎಟಿಎಂ ಅನ್ನು ಪತ್ತೆ ಮಾಡಿ:ನಿಮ್ಮ ಬಳಿ ಇರುವ UPI ಅಪ್ಲಿಕೇಶನ್ ಅಥವಾ ಬ್ಯಾಂಕಿನ ಅಪ್ಲಿಕೇಶನ್‌ನಲ್ಲಿ ನೀವು UPI-ICD ಸೌಲಭ್ಯ ಇರುವ ಎಟಿಎಂಗಳನ್ನು ಹುಡುಕಬಹುದು ಇಲ್ಲವೇ ನೀವು ನಿಮಗೆ ಹತ್ತಿರದಲ್ಲಿರುವ ಬ್ಯಾಂಕ್ ಶಾಖೆಗೆ ಹೋಗಿ, ಅಲ್ಲಿನ ಸಿಬ್ಬಂದಿಯನ್ನು ಕೇಳಿ UPI-ICD ಸೌಲಭ್ಯ ಇರುವ ಎಟಿಎಂ ಎಲ್ಲಿವೆ ಎಂದು ತಿಳಿದುಕೊಳ್ಳಬಹುದು.
- ಠೇವಣಿ ಆರಂಭಿಸಿ: ಎಟಿಎಂನಲ್ಲಿ ಹಣ ಜಮಾ ಮಾಡುವ ಆಯ್ಕೆಯನ್ನು ಆರಿಸಿದ ನಂತರ, “UPI ಮೂಲಕ ಜಮಾ ಮಾಡಿ” ಎಂಬ ಆಯ್ಕೆಯನ್ನು ಆರಿಸಿ.
- ಮೊಬೈಲ್ ಸಂಖ್ಯೆ ಅಥವಾ VPA ನಮೂದಿಸಿ: ನಿಮ್ಮ UPI ಐಡಿ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
- ಹಣ ಜಮಾ ಮಾಡಿ :- ಎಟಿಎಂ ಪರದೆಯ ಮೇಲೆ “ಹಣ ಜಮಾ ಮಾಡಿ” ಅಥವಾ “ಕ್ಯಾಶ್ ಡೆಪಾಸಿಟ್” ಎಂಬ ಆಯ್ಕೆಯನ್ನು ಆರಿಸಿ.
ಹೆಚ್ಚು ಸುರಕ್ಷಿತ :- ಈ ಹೊಸ ವ್ಯವಸ್ಥೆ UPI-ICD ಎಂದು ಕರೆಯುತ್ತಾರೆ. ಇದು UPI ಪಾವತಿ ವ್ಯವಸ್ಥೆಯ ಒಂದು ಭಾಗವಾಗಿದೆ. ಈ ವ್ಯವಸ್ಥೆಯಿಂದ ನಾವು ನಮ್ಮ ಹಣವನ್ನು ಹೆಚ್ಚು ಸುರಕ್ಷಿತವಾಗಿ ಮತ್ತು ಸುಲಭವಾಗಿ ನಿರ್ವಹಿಸಬಹುದು.ಈ ಹೊಸ ವ್ಯವಸ್ಥೆಯಿಂದ ನಮ್ಮ ಬ್ಯಾಂಕಿಂಗ್ ಕೆಲಸಗಳು ಇನ್ನಷ್ಟು ಸುಲಭವಾಗಿದೆ. ನಾವು ಯಾವುದೇ ಸಮಯದಲ್ಲಿ, ಎಲ್ಲಿ ಬೇಕಾದರೂ ನಮ್ಮ ಹಣವನ್ನು ಸುರಕ್ಷಿತವಾಗಿ ಜಮಾ ಮಾಡಬಹುದು. ಮೊದಲು ನೀವು ಬ್ಯಾಂಕಿಗೆ ಹೋಗಿ, ಕ್ಯೂನಲ್ಲಿ ನಿಂತು, ಕಾರ್ಡ್ ಸ್ವೈಪ್ ಮಾಡಿ, ಪಿನ್ ನಮೂದಿಸಿ ಹೀಗೆ ಹಲವಾರು ಹಂತಗಳನ್ನು. ಆದರೆ ಈಗ ನೀವು ನಿಮ್ಮ ಮನೆಯಲ್ಲಿ ಕುಳಿತು, ನಿಮ್ಮ ಮೊಬೈಲ್‌ನಲ್ಲಿ ಕೆಲವೇ ದಿನಗಳಲ್ಲಿ ಟ್ಯಾಪ್ ಮಾಡುವ ಮೂಲಕ ಜಮಾ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
Big announcements from #GFF24!
RBI Deputy Governor Shri T. Rabi Sankar announced innovative steps towards transforming the ATM infrastructure in India.
Launches include UPI Interoperable Cash Deposit (UPI-ICD) at ATMs with Banks showcasing Android-based Digital Banking Units… pic.twitter.com/kwmPzWgSq1— NPCI (@NPCI_NPCI) August 29, 2024
ಇದನ್ನೂ ಓದಿ: ರಿಲಯನ್ಸ್ ಜಿಯೋ ಗ್ರಾಹಕರಿಗೆ ಬಂಪರ್ ದೀಪಾವಳಿ ಆಫರ್ ಘೋಷಿಸಿದ ಮುಕೇಶ್ ಅಂಬಾನಿ.
ಈ ತಂತ್ರಜ್ಞಾನದ ಉಪಯೋಗ :-
- ಎಲ್ಲಿಂದಲಾದರೂ ಹಣ ಜಮಾ ಮಾಡಿ: ನಿಮ್ಮ ಮನೆಯಿಂದಲೇ ಅಥವಾ ಎಟಿಎಂನಲ್ಲಿ ಹಣ ಜಮಾ ಮಾಡಬಹುದು.
- ಕಡಿಮೆ ಸಮಯ: ಡೆಬಿಟ್ ಕಾರ್ಡ್ ಬಳಸುವ ಪ್ರಕ್ರಿಯೆಗಿಂತ ಹೆಚ್ಚು ವೇಗವಾಗಿ ಹಣ ಜಮಾ ಮಾಡಬಹುದು.
- ಸುರಕ್ಷಿತ UPI ವ್ಯವಸ್ಥೆ: UPI ಒಂದು ಸುರಕ್ಷಿತ ಪಾವತಿ ವ್ಯವಸ್ಥೆ ಇದಾಗಿದೆ.
- ಡೆಬಿಟ್ ಕಾರ್ಡ್ ಅಗತ್ಯವಿಲ್ಲ: ಕೇವಲ UPI ಅಪ್ಲಿಕೇಶನ್ ಬಳಸಿ ಹಣ ಜಮಾ ಮಾಡಬಹುದು..
ಇದನ್ನೂ ಓದಿ: ಪೋಸ್ಟ್ ಆಫೀಸ್‌ನಲ್ಲಿ FD ಮಾಡಿದರೆ 2 ಲಕ್ಷ ರೂಪಾಯಿಗೆ ಎಷ್ಟು ಬಡ್ಡಿ ಸಿಗುತ್ತದೆ ಎಂಬ ಮಾಹಿತಿ ಇಲ್ಲಿದೆ.