ಈ ಕಾರ್ಡ್ ಇದ್ರೆ 2 ಲಕ್ಷ ರೂಪಾಯಿಗಳ ಉಚಿತ ವಿಮೆ ಸೌಲಭ್ಯ; ಯಾರಿಗೆ ಸಿಗಲಿದೆ ಇದರ ಪ್ರಯೋಜನ.

ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಶ್ರಮಿಕ ಕಾರ್ಮಿಕ ವರ್ಗದವರಿಗೆ 2 ಲಕ್ಷ ರೂಪಾಯಿ ವಿಮಾ ನೀಡುವ ಯೋಜನೆಯನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ನೀಡುತ್ತುದೆ. ಇದರಲ್ಲಿ ನೀವೇ ಕೇವಲ ಇ-ಶ್ರಮ್ ಕಾರ್ಡ್(E shram Card) ಅಥವಾ ಶ್ರಮ ಕಾರ್ಡ್ ಹೊಂದಿರಬೇಕು. ಈ ವಿಮಾ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿಯು ಇಲ್ಲಿದೆ.

WhatsApp Group Join Now
Telegram Group Join Now

2021 ರಿಂದ ವಿಮಾ ಯೋಜನೆ ಆರಂಭ ಮಾಡಿದೆ :- ಶ್ರಮಿಕ ವರ್ಗದವರಿಗೆ ಆರ್ಥಿಕ ಭದ್ರತೆ ನೀಡುವ ನಿಟ್ಟಿನಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವ 2021 ನೇ ಇಸವಿಯಿಂದ ಅಸಂಘಟಿತ ವಲಯದ ಕಾರ್ಮಿಕ ವರ್ಗದ ರಾಷ್ಟ್ರೀಯ ಡೇಟಾಬೇಸ್ ಇ-ಶ್ರಾಮ್ ಪೋರ್ಟಲ್ ಅನ್ನು ಆರಂಭ ಮಾಡಿದೆ. ಈ ವಿಮಾ ಯೋಜನೆಯ ವಲಸೆ ಕಾರ್ಮಿಕರಿಗೆ ಹಾಗೂ ಗೃಹ ಕಾರ್ಮಿಕ ವರ್ಗದ ಜನರಿಗೆ ಹಾಗೂ ಇನ್ನಿತರ ಅಸಂಘಟಿತ ವಲಯದ ಕಾರ್ಮಿಕರಿಗೆ ಎಂದೇ ಈ ಯೋಜನೆಯನ್ನು ಆರಂಭ ಮಾಡಿದೆ.

ಇ-ಶ್ರಮ್ ಕಾರ್ಡ್(E shram Card) ಎಂದರೇನು?

ಇ-ಶ್ರಮ್ ಕಾರ್ಡ್ ಎಂಬುದು ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವಂತಹ ಶ್ರಮಿಕ ವರ್ಗದ ಜನರಿಗೆ ನೀಡುವ ಗುರುತಿನ ಚೀಟಿ ಆಗಿದೆ. ಕಾರ್ಮಿಕ ವರ್ಗದಲ್ಲಿ ಕೆಲಸ ಮಾಡುವವಾರು ಶ್ರಮಿಕ್ ಕಾರ್ಡ್ ಅಥವಾ ಇ-ಶ್ರಮ್ ಕಾರ್ಡ್‌ ಪಡೆಯಲು ಅರ್ಜಿ ಸಲ್ಲಿಸಿ ಪಡೆಯಬಹುದು. ಈ ಕಾರ್ಡ್ ಗಳನ್ನು ಪಡೆದರೆ ಕಾರ್ಮಿಕರಿಗೆ 60 ವರ್ಷ ತುಂಬಿದ ಬಳಿಕ ನಂತರ ಪಿಂಚಣಿ ಭತ್ಯೆ ಹಾಗೂ ಮರಣ ವಿಮೆ ಮತ್ತು ಆಯವ ಅಂಗವೈಕಲ್ಯ ಉಂಟಾದರೆ ಆರ್ಥಿಕ ಸಹಾಯದ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಈ ಕಾರ್ಡ್ ಭಾರತದಲ್ಲಿ ಮಾನ್ಯವಾಗಿರುತ್ತದೆ.

ಕಾರ್ಮಿಕರಿಗೆ 2 ಲಕ್ಷ ರೂಪಾಯಿ ವಿಮಾ ಯೋಜನೆ :- ಕಾರ್ಮಿಕ ವರ್ಗದ ಜನರಿಗೆ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಅಡಿಯಲ್ಲಿ 2 ಲಕ್ಷ ರೂಪಾಯಿ ವಿಮೆ ಪಡೆಯಬಹುದು. ಈ ವಿಮೆ ಪಡೆಯಲು ಕಾರ್ಮಿಕ ವರ್ಗದ ಜನರು ಪ್ರೀಮಿಯಂ ಪಾವತಿಸುವ ಅಗತ್ಯ ಇಲ್ಲ. ಈ ವಿಮಾ ಹಣವು ಕಾರ್ಮಿಕರು ಅಪಘಾತದಲ್ಲಿ ಮೃತಪಟ್ಟರೆ ಅಥವಾ ಸಂಪೂರ್ಣ ಅಂಗವಿಕಲರಾದರೆ 2 ಲಕ್ಷ ವಿಮಾ ಮೊತ್ತ ಸಿಗುತ್ತದೆ. ಹಾಗೂ ಭಾಗಶಃ ಅಂಗವೈಕಲ್ಯಕ್ಕೆ ತುತ್ತಾದರೆ ರೂ. 1 ಲಕ್ಷ ವಿಮೆ ಸಿಗಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: SBI ನ ಈ 4 ವಿಶೇಷ FD ಯೋಜನೆಗಳು ಬಂಪರ್ ರಿಟರ್ನ್ಸ್ ನೀಡುತ್ತಿವೆ.

ಇ-ಶ್ರಮ ಕಾರ್ಡ್ ಪಡೆಯುವುದು ಹೇಗೆ?

ಇ-ಶ್ರಮ ಕಾರ್ಡ್(E shram Card) ಪಡೆಯಲು ಕಾರ್ಮಿಕ ವರ್ಗದ ಜನರು ಇ-ಶ್ರಮ ಪೋರ್ಟಲ್‌’ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಯನ್ನು ಸ್ವಯಂ-ನೋಂದಣಿ ಹಾಗೂ ಸಹಾಯಕ ಮೋಡ್ ಮೂಲಕ ಮಾಡಿಕೊಳ್ಳಬಹುದಾಗಿದೆ. ನೀವೇ ಸ್ವಯಂ-ನೋಂದಣಿ ಮಾಡಲು, ನೀವು ಇಶ್ರಾಮ್ ಪೋರ್ಟಲ್ ಯುನಿಫೈಡ್ ಮೊಬೈಲ್ ಅಪ್ಲಿಕೇಶನ್ ಫಾರ್ ನ್ಯೂ ಏಜ್ ಗವರ್ನೆನ್ಸ್ (UMANG) ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಿ ನೋಂದಣಿ ಮಾಡಿಕೊಳ್ಳಬಹುದು ಇಲ್ಲವೇ ಸಹಾಯ ಮೋಡ್ ನೋಂದಣಿ ಮಾಡಿಕೊಳ್ಳುವ ಅವಕಾಶ ಇರುತ್ತದೆ. ನೀವು ನೀವು ಸಾಮಾನ್ಯ ಸೇವಾ ಕೇಂದ್ರ (CSC) ಅಥವಾ ರಾಜ್ಯ ಸೇವಾ ಕೇಂದ್ರಗಳು (SSK) ಗೆ ಭೇಟಿ ನೀಡಿ ಅಗತ್ಯ ದಾಖಲೆ ಸಲ್ಲಿಸಿ ನೋಂದಣಿ ಮಾಡಿಕೊಂಡು ಕಾರ್ಡ್ ಪಡೆಯಬಹುದು.

ನೋಂದಣಿಗಾಗಿ ಸಲ್ಲಿಸಬೇಕಾದ ದಾಖಲೆಗಳ

  • ಆಧಾರ್ ಕಾರ್ಡ್
  • ಮೊಬೈಲ್ ಸಂಖ್ಯೆ
  • ಬ್ಯಾಂಕ್ ಖಾತೆಯ ವಿವರ

ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ನೀವು ನೇಮಕಾತಿಯಲ್ಲಿ ಆಯ್ಕೆಯಾದರೆ ನಿಮಗೆ ಎಷ್ಟು ಸಂಬಳ ಸಿಗುತ್ತದೆ; ಕರ್ನಾಟಕದಲ್ಲಿ 1940 ಹುದ್ದೆಗಳು ಖಾಲಿ ಇವೆ.

Sharing Is Caring:

Leave a Comment