ಈ ಹಿಂದೆ ಕೇಂದ್ರ ಸರಕಾರವು ಇಪಿಎಸ್ ಅಡಿಯಲ್ಲಿ 10 ವರ್ಷಗಳಿಗಿಂತ ಮುಂಚೆ ಯೋಜನೆಯನ್ನು ತೊರೆದರೆ ನಿಮಗೆ ಹಲವು ಸೌಲಭ್ಯಗಳನ್ನು ನೀಡುವ ಬಗ್ಗೆ ಹೇಳಿತ್ತು. ಆದರೆ ಈಗ ಅದರ ಬೆನ್ನಲ್ಲೇ ಮತ್ತೆ ಭಾರತ ಸರ್ಕಾರವು ಲಕ್ಷಗಟ್ಟಲೆ ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಗಳ ಮೇಲೆ 6 ತಿಂಗಳ ಮೊದಲು ಯೋಜನೆಯನ್ನು ತೊರೆದವರಿಗೆ ಯಾವ ರೀತಿಯ ಪರಿಣಾಮ ಅಥವಾ ಸೌಲಭ್ಯಗಳು ಸಿಗಲಿವೆ ಎಂಬ ಬಗ್ಗೆ ತಿಳಿಯಿಸಿದೆ.
6 ತಿಂಗಳಿಗಿಂತ ಕಡಿಮೆ ಅವಧಿಗೆ ಸದಸ್ಯರಿಗೂ ಹಲವು ಸೌಲಭ್ಯಗಳು ಇವೆ :-
6 ತಿಂಗಳಿಗಿಂತ ಕಡಿಮೆ ಅವಧಿಯ ಇಪಿಎಫ್‌ಒ ಸದಸ್ಯರಿಗೆ ಯಾವ ಯಾವ ಫೆಸಿಲಿಟಿ ಸಿಗಲಿದೆ ಎಂಬುದನ್ನು ನೋಡೋಣ.
- ಹಿಂಪಡೆಯುವಿಕೆ ಸೌಲಭ್ಯ : ಈಗ 6 ತಿಂಗಳಿಗಿಂತ ಕಡಿಮೆ ಸೇವೆ ಸಲ್ಲಿಸಿದ EPF ಸದಸ್ಯರು ಸಹ ತಮ್ಮ ಕೊಡುಗೆಗಳನ್ನು ಹಿಂಪಡೆಯಬಹುದು ಎಂದು ಶುಕ್ರವಾರ ಕೇಂದ್ರ ಸರ್ಕಾರವು ತಿಳಿಸಿದೆ.
- 10 ವರ್ಷಗಳ ಅವಧಿ ಕಡಿಮೆ: ಈ ಹಿಂದೆ ಕೇಂದ್ರ ಸರ್ಕಾರವು ಪಿಂಚಣಿಗೆ ಅರ್ಹತೆ ಪಡೆಯಲು ಈಗ ಕನಿಷ್ಠ 10 ವರ್ಷಗಳ ಸೇವೆ ಅಗತ್ಯ ಎಂದು ತಿಳಿಸಿತ್ತು. ಆದರೆ ಈಗ ಬದಲಿಗೆ 6 ತಿಂಗಳ ಸೇವೆ ಸಾಕು.
ಯಾಕೆ ಈ ನಿಮಯದಲ್ಲಿ ಬದಲಾವಣೆ ತರಲಾಗಿದೆ?
ಕೇಂದ್ರ ಸರ್ಕಾರವು ಪಿಂಚಣಿ ಯೋಜನೆಯನ್ನ ಇನ್ನಷ್ಟು ಸುಧಾರಿಸುವ ಸಲುವಾಗಿ ಸರ್ಕಾರವು ನಿಯಮದಲ್ಲಿ ಬದಲಾವಣೆಗಳನ್ನು ತರುತ್ತಿದೆ. 6 ತಿಂಗಳಿಗಿಂತ ಕಡಿಮೆ ಸೇವೆ ಸಲ್ಲಿಸಿದ ಸದಸ್ಯರುಗಳು ತಮ್ಮ ಇಪಿಎಫ್ ಕೊಡುಗೆಗಳನ್ನು ಪಡೆಯುವ ನಿಟ್ಟಿನಲ್ಲಿ ಈ ಬದಲಾವಣೆ ಗಳನ್ನೂ ತರುತ್ತಿದೆ. ಹೊಸ ನಿಯಮದ ಪ್ರಕಾರವಾಗಿ ವಾಪಸಾತಿ ಪ್ರಯೋಜನಗಳು ಎಷ್ಟು ತಿಂಗಳ ಸೇವೆಯನ್ನು ಸಲ್ಲಿಸುತ್ತೇವೆ ಹಾಗೂ ಸಂಬಳದ ಮೇಲೆ ನೀಡಿದ ಇಪಿಎಫ್ ಕೊಡುಗೆಗಳ ಮೇಲೆ ಆಧಾರಿತವಾಗಿದೆ. ಈಗ ಈ ನಿಯಮವನ್ನು ಬದಲಾಯಿಸುವ ಮೂಲಕ 6 ತಿಂಗಳಿಗಿಂತ ಕಡಿಮೆ ಕೊಡುಗೆ ಸೇವೆಯ ನಂತರ ಯೋಜನೆಯನ್ನು ವಾರ್ಷಿಕವಾಗಿ ತೊರೆಯುವ 7 ಲಕ್ಷಕ್ಕೂ ಹೆಚ್ಚಿನವರಿಗೆ ಇದು ಉಪಯೋಗ ಆಗಲಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಸರ್ಕಾರದ ಹಿಂದಿನ ನಿಯಮ ಏನಿತ್ತು?: ಕೇಂದ್ರ ಸರ್ಕಾರವು ಇಪಿಎಫ್ ಹಿಂಪಡೆಯುವ ಪ್ರಯೋಜನವನ್ನು ಹುದ್ದೆ ಸೇವೆಯ ಅವಧಿ ಮತ್ತು ಇಪಿಎಸ್ ಕೊಡುಗೆಯನ್ನು ಪಾವತಿಸಿದ ವೇತನದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. 6 ತಿಂಗಳ ಮುಂಚೆ ಪಿಂಚಣಿ ಯೋಜನೆಯಿಂದ ಹಿಂಪಡೆಯುವ ಯೋಜನೆಯನ್ನು ಪಡೆಯುವ ಅವಕಾಶ ಇರಲಿಲ್ಲ. ಈಗ ಆ ಯೋಜನೆ ಬದಲಾವಣೆ ತರಲಾಗಿದೆ.
7ಲಕ್ಷ ಕ್ಲೈಮ್ ಈಗಾಗಲೇ ತಿರಸ್ಕರಿಸಲಾಗಿದೆ :- ಹೋದ ಆರ್ಥಿಕ ವರ್ಷದಲ್ಲಿ ಬರೋಬ್ಬರಿ 7 ಲಕ್ಷ ಜನರ ಅರ್ಜಿಗಳು ತಿರಸ್ಕಾರ ಆಗಿವೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ನ ಈ ಯೋಜನೆ ಅಡಿಯಲ್ಲಿ ಮಹಿಳೆಯರು ಭರ್ಜರಿ ಹಣ ಗಳಿಸಬಹುದು.
ಇಪಿಎಸ್ ಯೋಜನೆ ಎಂದರೇನು?
ಉದ್ಯೋಗಿ ಪಿಂಚಣಿ ಯೋಜನೆಯು ಭಾರತ ಸರ್ಕಾರವು 1995 ರಲ್ಲಿ ಜಾರಿಗೆ ತಂದ ಒಂದು ಉದ್ಯೋಗಿಗಳಿಗೆ ಪಿಂಚಣಿ ಒದಗಿಸುವ ಯೋಜನೆಯಾಗಿದೆ. ಈ ಯೋಜನೆಯ ಅಡಿಯಲ್ಲಿ ಉದ್ಯೋಗಿಯೂ ತನ್ನ ನಿವೃತ್ತಿಯ ನಂತರ ಪಿಂಚಣಿ ಹಣವನ್ನು ಪಡೆಯುತ್ತಾನೆ. ಕನಿಷ್ಠ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದವರಿಗೆ ಈ ಯೋಜನೆಯ ಹಣವನ್ನು ಹಿಂಪಡೆಯುವ ಅವಕಾಶ ಇದೆ ಎಂಬುದಾಗಿ ಈ ಹಿಂದೆ ನಿಯಮ ಇತ್ತು. ಇನ್ನು ಕನಿಷ್ಠ 6 ತಿಂಗಳ ಅವಧಿಯಲ್ಲಿ ಕೆಲಸ ಮಾಡಿದವರಿಗೆ ಅವರ ಸಂಬಳದ ಅನುಗುಣವಾಗಿ ಹಾಗೂ ಪಿಎಫ್ ಹಣವು ಕಡಿತಗೊಂಡ ಹಣದಲ್ಲಿ ನಿಮಗೆ ಪಿಂಚಣಿ ಹಣವು ಸಿಗುತ್ತದೆ.
ಇದನ್ನೂ ಓದಿ: SSLC ಪಾಸಾದವರು ಸರ್ಕಾರಿ ಉದ್ಯೋಗ ಮಾಡಬೇಕು ಅಂತ ಆಸೆ ಇರೋರಿಗೆ SSC ನೀಡುತ್ತಿದೆ ಭರ್ಜರಿ ಗುಡ್ ನ್ಯೂಸ್.