ರೈತರಿಗೆ ಈಗ ಯಂತ್ರೋಪಕರಣಗಳು ಬಹಳ ಮುಖ್ಯ ಆಗುತ್ತವೆ. ಹಿಂದಿನ ಕಾಲದ ಹಾಗೆಯೇ ಮನುಷ್ಯನಿಂದ ಎಲ್ಲಾ ಕೆಲಸಗಳು ಸಾಧ್ಯವಿಲ್ಲ. ಅದರಿಂದ ಈಗ ಎಲ್ಲ ಕ್ಷೇತ್ರಗಳಲ್ಲಿ ಯಂತ್ರಗಳು ಬಹಳ ಮುಖ್ಯ. ಆದರೆ ರೈತರಿಗೆ ಅವುಗಳನ್ನು ಕೊಂಡುಕೊಳ್ಳಲು ಕಷ್ಟ ಆಗುತ್ತದೆ. ಅದಕ್ಕೆ ರೈತರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಸರ್ಕಾರವು ವಿವಿಧ ಯೋಜನೆಗಳಲ್ಲಿ ರೈತರಿಗೆ ಯಂತ್ರೋಪಕರಣ ಬಿತ್ತನೆಯ ಬೀಜಗಳು ಹಾಗೂ ಇನ್ನಿತರ ವಸ್ತುಗಳನ್ನು ಖರೀದಿಸಲು ಸಬ್ಸಿಡಿ ನೀಡುತ್ತಾರೆ.
ಹುಬ್ಬಳ್ಳಿ ತಾಲೂಕಿನ ರೈತರು ಅರ್ಜಿ ಸಲ್ಲಿಸಬಹುದು. :- 2024-25ನೇ ಸಾಲಿನಲ್ಲಿ ಹುಬ್ಬಳ್ಳಿ ತಾಲ್ಲೂಕಿನ ರೈತರು ತೋಟಗಾರಿಕೆ ಉತ್ಪಾದಕ ಸಂಸ್ಥೆಗಳಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಹಾಗೂ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಹನಿ ನೀರಾವರಿ) ಮತ್ತು ಯಂತ್ರೋಪಕರಣ ಯೋಜನೆಗಳಲ್ಲಿ ಸಬ್ಸಿಡಿ ಪಡೆಯಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ :- ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಲ್ಲಿ ರೈತರೂ ಬೆಳೆಯುವ ಬೆಳಗಳು ಅಂದರೆ ಬಾಳೆಹಣ್ಣು ಹೈಬ್ರಿಡ್ ತರಕಾರಿಗಳು ಮತ್ತು ಹೂವುಗಳ ಉತ್ಪಾದನೆಗೆ ಸಹಾಯಧನ ನೀಡಲಾಗುತ್ತದೆ. ಈ ಯೋಜನೆಯು ವೈಯಕ್ತಿಕ ಮತ್ತು ಕೃಷಿ ಸಮುದಾಯ ಕೃಷಿಹೊಂಡ ಸ್ಥಾಪನೆ ಗೆ ಹಾಗೂ ಸಣ್ಣ ಟ್ರಾಕ್ಟರ್ ಖರೀದಿ ಹಾಗೂ ಪಾಲಿಹೌಸ್ ನಿರ್ಮಾಣಕ್ಕೆ ಮತ್ತು ನೆರಳು ಪರದೆಗಳ ಸ್ಥಾಪನೆಗೆ ಜೊತೆಗೆ ಈರುಳ್ಳಿ ಶೇಖರಣಾ ಘಟಕಗಳ ನಿರ್ಮಾಣಕ್ಕೆ ಹಾಗೂ ಪ್ಯಾಕ್ ಹೌಸ್ ಸ್ಥಾಪನೆಗೆ ಮತ್ತು ತಳ್ಳುವ ಗಾಡಿ ಘಟಕಗಳ ಸ್ಥಾಪನೆಗೆ ಸಹಾಯಧನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಏನು?
- ಜಾಮೀನು :- ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಸ್ವಂತ ಜಮೀನು ಹೊಂದಿರಬೇಕು. ಅರ್ಜಿ ಸಲ್ಲಿಕೆಗೆ ಸ್ವಂತ ಜಮೀನಿನ ದಾಖಲೆ ಪತ್ರವನ್ನು ನೀಡಬೇಕು.
- ಗುರುತಿನ ಚೀಟಿ :- ಅರ್ಜಿದಾರರು ಆಧಾರ್ ಕಾರ್ಡ್ ಅಥವಾ ವೋಟರ್ ಕಾರ್ಡ್ ಹಾಗೂ ಯಾವುದೇ ಸರ್ಕಾರಿ id ಕಾರ್ಡ್ ನೀಡಬೇಕು.
- ಬ್ಯಾಂಕ್ ಪಾಸ್ ಬುಕ್ :- ಅರ್ಜಿ ಸಲ್ಲಿಸಲು ಅರ್ಜಿದಾರರು ಬ್ಯಾಂಕ್ ಅಕೌಂಟ್ ಹೊಂದಿರುವುದು ಅವಶ್ಯಕ. ಅರ್ಜಿ ಸಲ್ಲಿಸುವಾಗ ಬ್ಯಾಂಕ್ ಪಾಸ್ ಬುಕ್ ವಿವರಗಳನ್ನು ನೀಡಬೇಕು.
- ಮೀಸಲಾತಿಗೆ ಆದ್ಯತೆ ಇದೆ :- ಜಾತಿ ಆಧಾರದ ಮೇಲೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪರಿಶಿಷ್ಟ ಜಾತಿಯವರಿಗೆ ಶೇಕಡಾ 17% ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇಕಡಾ 7% ಹಾಗೂ ಮಹಿಳೆಯಾರಿಗೆ ಶೇಕಡಾ 33% ಹಾಗೂ ಅಲ್ಪಸಂಖ್ಯಾತರಿಗೆ ಶೇಕಡಾ 5% ಹಾಗೂ ಅಂಗವಿಕಲರಿಗೆ ಶೇಕಡಾ 3% ಆದ್ಯತೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: SBI ಬ್ಯಾಂಕ್ ಶಿಶು ಮುದ್ರಾ ಯೋಜನೆ ಅಡಿಯಲ್ಲಿ 50,000 ರೂಪಾಯಿ ಸಾಲ ನೀಡುತ್ತಿದೆ; ಈ ರೀತಿ ಅರ್ಜಿ ಸಲ್ಲಿಸಿ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳ ಮಾಹಿತಿ ಇಲ್ಲಿದೆ
- ಸಹಾಯಕ ತೋಟಗಾರಿಕೆ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರ ಹುಬ್ಬಳ್ಳಿ ಅವರನ್ನು ಸಂಪರ್ಕಿಸುವ ದೂರವಾಣಿ ಸಂಖ್ಯೆ :- 9740164868.
- ಸಹಾಯಕ ತೋಟಗಾರಿಕೆ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರ ಛಬ್ಬಿ ಅವರ ದೂರವಾಣಿ ಸಂಖ್ಯೆ 9164126426.
- ಸಹಾಯಕ ತೋಟಗಾರಿಕ ಅಧಿಕಾರಿಗಳು ರೈತ ಸಂಪರ್ಕ ಕೇಂದ್ರ ಶಿರಗುಪ್ಪಿ ಅವರನ್ನು ಸಂಪರ್ಕಿಸಲು ದೂರವಾಣಿ ಸಂಖ್ಯೆ 9663474155.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- ರೈತರು ಜುಲೈ 15 2024 ರ ಒಳಗಾಗಿ ಅರ್ಜಿಯನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾಹಿರುವ ಪ್ರಭುಲಿಂಗ ಆರ್. ಗಡ್ಡದ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಕೇಂದ್ರ ಸರ್ಕಾರದ ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 5000 ರೂಪಾಯಿ ಪಿಂಚಣಿ ಪಡೆಯಿರಿ.