ಫಾಸ್ಟ್ ಟ್ಯಾಗ್ ನ ಹೊಸ ನಿಯಮ ಈಗ ನೀವು ಈ ತಪ್ಪಿಗೆ ಎರಡುರಷ್ಟು ಟೋಲ್ ಪಾವತಿಸಬೇಕಾಗುತ್ತದೆ.

ಈಗ ಮತ್ತೆ NHAI ಫಾಸ್ಟ್ ಟ್ಯಾಗ್(Fastag) ನಿಯಮವನ್ನು ಬದಲಾಯಿಸಿದೆ. ಇಲಾಖೆಯ ಹೊಸ ನಿಯಮಗಳನ್ನು ಪಾಲಿಸದೆ ಇದ್ದರೆ ನೀವು ಹೆಚ್ಚಿನ ದಂಡ ನೀಡಬೇಕಾಗಿ ಬರಬಹುದು ಆದ್ದರಿಂದ ಈಗ ಹೊಸದಾಗಿ ಇಲಾಖೆ ತಿಳಿಸಿರುವ ನಿಯಮಗಳ ಬಗ್ಗೆ ತಿಳಿದುಕೊಂಡು ಹೆಚ್ಚುವರಿ ದಂಡ ಪಾವತಿ ಮಾಡುವುದನ್ನು ತಪ್ಪಿಸಿಕೊಳ್ಳಿ.

WhatsApp Group Join Now
Telegram Group Join Now

NHAI ರೂಪಿಸಿದ ಫಾಸ್ಟ್ ಟ್ಯಾಗ್ ನಿಯಮಗಳ ಬಗ್ಗೆ ತಿಳಿಯಿರಿ :- ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎಂದರೆ NHAI ರೂಪಿಸಿದ ಹೊಸ ನಿಯಮದ ಎಂದರೆ ವಾಹನ ಸವಾರರು ಫಾಸ್ಟ್ಯಾಗ್(Fastag) ಹೊಂದಿದ್ದರೆ ಜೊತೆಗೆ ನೀವು ಫಾಸ್ಟ್ಯಾಗ್ ವಾಹನದ ವಿಂಡ್‌ಶೀಲ್ಡ್‌ನಲ್ಲಿ ಸ್ಥಾಪಿಸದೇ ಇದ್ದರೆ ಈ ಹೊಸ ನಿಯಮ ಅನ್ವಯ ಆಗುತ್ತದೆ. ಇಲ್ಲಿ ತನಕ ನೀವು ಫಾಸ್ಟ್ಯಾಗ್ ಅನ್ನು ನಿಮ್ಮ ವಾಹನದ ವಿಂಡ್‌ಶೀಲ್ಡ್‌ನಲ್ಲಿ ಹಾಕದೆ ಇದ್ದರೆ ಮೊದಲು ಅಳವಡಿಸಿಕೊಳ್ಳಿ. ಯಾಕೆಂದರೆ ನೀವು ಅಳವಡಿಕೆ ಮಾಡಿಕೊಳ್ಳದೆ ಇದ್ದರೆ ನೀವು ಫಾಸ್ಟ್ಯಾಗ್ ಹೊಂದಿದ್ದರೂ ಸಹ ನೀವು ದುಪ್ಪಟ್ಟು ಟೋಲ್ ಪಾವತಿಸಬೇಕಾಗಬಹುದು. ಎಕ್ಸ್‌ಪ್ರೆಸ್‌ವೇಗಳಲ್ಲಿ ಹಾಗೂ ಗ್ರೀನ್‌ಫೀಲ್ಡ್ ಹೆದ್ದಾರಿಗಳಲ್ಲಿ ಹಲವು ಫಾಸ್ಟ್ಯಾಗ್ ಬಳಸುವ ವಾಹನ ಸವಾರರು ವಿಂಡ್‌ಶೀಲ್ಡ್‌ನಲ್ಲಿ ಫಾಸ್ಟ್ಯಾಗ್ ಅನ್ನು ಹಾಕದೆಯೇ ಟೋಲ್ ಪಾವತಿ ಮಾಡುವುದನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಇದೆ ಕಾರಣದಿಂದ ಕಾರಣ ಈಗ ನಿಯಮವನ್ನು ತರಲಾಗಿದೆ.

ಎಲ್ಲೆಲ್ಲಿ ಇಂತಹ ಪ್ರಕರಣಗಳು ಕಂಡು ಬಂದಿವೆ?

ಫಾಸ್ಟ್ಯಾಗ್(Fastag) ಅನ್ನು ಹಾಕದೆಯೇ ಟೋಲ್ ಪಾವತಿ ಮಾಡದೇ ತಪ್ಪಿಸಿಕೊಳ್ಳುತ್ತಿರುವ ಘಟನೆಗಳು ಅಲಹಾಬಾದ್ ನ ಬೈಪಾಸ್, ಹಾಗೂ ಅಮೃತಸರ ಇಂದ ಜಾಮ್‌ನಗರ ಎಕ್ಸ್‌ಪ್ರೆಸ್‌ವೇ ಜೊತೆಗೆ ಇತರ ಕೆಲವು ಗ್ರೀನ್‌ಫೀಲ್ಡ್ ಹೆದ್ದಾರಿಗಳಲ್ಲಿ ಕಂಡು ಬಂದಿದೆ. ಇದನ್ನು ಅಧಿಕಾರಿಗಳು ಗಮನಿಸಿದ್ದಾರೆ. ವಿಂಡ್‌ಶೀಲ್ಡ್‌ನಲ್ಲಿ ಫಾಸ್ಟ್ಯಾಗ್ ಅಳವಡಿಕೆ ಮಾಡಿಕೊಳ್ಳದೆ ತಮ್ಮ ಕೈಯಲ್ಲಿ ಅಥವಾ ಕಾರಿನಲ್ಲಿ ಫಾಸ್ಟ್ಯಾಗ್ ಇರಿಸಿಕೊಂಡು ಫಸ್ಟ್ ಟ್ಯಾಗ್ ತೋರಿಸಿ ಹಣ ಪಾವತಿ ಮಾಡುವುದನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಡಬಲ್ ಟೋಲ್ ಪಾವತಿಸುವ ಕಠಿಣ ನಿಯಮ ರೂಪಿಸಿದ ಇಲಾಖೆ

ಟೋಲ್ ಹಣವನ್ನು ಪಾವತಿಸದೇ ಹೋಗುವ ವಾಹನ ಸವಾರರಿಗೆ ಕಠಿಣ ಕ್ರಮ ಜರುಗಿಸಬೇಕು ಎಂದು ಎನ್‌ಎಚ್‌ಎಂಸಿಎಲ್ ಯು ಸುತ್ತೋಲೆಯನ್ನು ಹೊರಡಿಸಿದೆ. ಅದರಲ್ಲಿನ ಮುಖ್ಯ ಅಂಶ ಏನೆಂದರೆ “ವಾಹನವು ಫಾಸ್ಟ್ಯಾಗ್ ಲೇನ್‌ಗೆ ಪ್ರವೇಶಿಸಿಸಾಗ ವಾಹನದ ವಿಂಡ್‌ಶೀಲ್ಡ್‌ನಲ್ಲಿ ಟ್ಯಾಗ್ ಅಳವಡಿಕೆ ಮಾಡದೆ ಇದ್ದರೆ ಟೋಲ್ ಗೇಟ್ ನಾ ಟೋಲ್ ಪಾವತಿ ತೆಗೆದುಕೊಳ್ಳುವವರು ದುಪ್ಪಟ್ಟು ಟೋಲ್ ಪಾವತಿ ತೆಗೆದುಕೊಳ್ಳಬೇಕು. ಹೆಚ್ಚಿನ ಹಣವನ್ನು ದಂಡದ ರೂಪದಲ್ಲಿ ತೆಗೆದುಕೊಳ್ಳಬೇಕು ಎಂದು ತಿಳಿಸಲಾಗಿದೆ. ಜೊತೆಗೆ ಈ ನಿಯಮವನ್ನು ಟೋಲ್ ಗೇಟ್ ನಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಹಾಕಬೇಕು ಎಂದು ಸಹ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಇದರ ಜೊತೆಗೆ ಸಿಸಿಟಿವಿಯ ದೃಶ್ಯಾವಳಿಗಳನ್ನು ಸ್ಪಷ್ಟ ವಾಹನ ನೋಂದಣಿ ಸಂಖ್ಯೆಯೊಂದಿಗೆ ಸಂಗ್ರಹ ಮಾಡುವಂತೆ ಟೋಲ್ ಕಲೆಕ್ಟರ್‌ಗಳಿಗೆ ಸೂಚನೆಯನ್ನು ನೀಡಲಾಗಿದೆ.

ಇದನ್ನೂ ಓದಿ: ಕಡಿಮೆ ಬೆಲೆಯಲ್ಲಿ Unlimited Call ಹಾಗೂ ಇಂಟರ್ನೆಟ್; ಹೊಸ ಯೋಜನೆಯನ್ನು ಪರಿಚಯಿಸಿದ ಜಿಯೋ

ಈಗಲೇ ವಿಂಡ್‌ಶೀಲ್ಡ್‌ನಲ್ಲಿ ಫಾಸ್ಟ್ ಟ್ಯಾಗ್ ಸ್ಥಾಪಿಸಿ ದಂಡ ಪಾವತಿಸುವುದನ್ನು ತಪ್ಪಿಸಿಕೊಳ್ಳಿ.

ನಿಮ್ಮ ಕಾರಿನ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಫಾಸ್ಟ್‌ಟ್ಯಾಗ್ ಅನ್ನು ಅಳವಡಿಸಿಕೊಳ್ಳಿ ಆಗ ನಿಮ್ಮ ಕಾರು ಟೋಲ್‌ಗೆ ಹೋದ ತಕ್ಷಣ ನಿಮ್ಮ ಫಾಸ್ಟ್ ಟ್ಯಾಗ್ ಸ್ಕ್ಯಾನ್ ಮಾಡಿ ತಾನಾಗಿಯೇ ನಿಮ್ಮ ಅಕೌಂಟ್ ನಿಂದಾ ತೆರಿಗೆಯನ್ನು ಕಡಿತಗೊಳಿಸಲಾಗುತ್ತದೆ. ಸಮಯ ಉಳಿತಾಯಕ್ಕೆ ಈ ನಿಯಮವನ್ನು ತರಲಾಗಿದ್ದು ಇದನ್ನು ಸರಿಯಾದ ರೀತಿಯಲ್ಲಿ ವಾಹನ ಸವಾರರು ಅಳವಡಿಕೆ ಮಾಡಿಕೊಂಡು ಹೆಚ್ಚು ದಂಡ ಪಾವತಿ ಮಾಡುವ ಹೊರೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲವಾದರೆ ಟೋಲ್ ನ ಹಣದ ಜೊತೆ ಹೆಚ್ಚಿನ ಹಣ ನೀಡಬೇಕಾಗುತ್ತದೆ.

ಇದನ್ನೂ ಓದಿ: 10 ಸಾವಿರ ರೂಪಾಯಿ ಹೂಡಿಕೆ ಮಾಡಿ 55 ಲಕ್ಷ ರೂಪಾಯಿ ಪಡೆಯುವ ಸುಕನ್ಯಾ ಸಮೃದ್ಧಿ ಯೋಜನೆಯ ಬಗ್ಗೆ ಮಾಹಿತಿ ಇಲ್ಲಿದೆ.

Sharing Is Caring:

Leave a Comment