ಹಿರಿಯ ನಾಗರಿಕರಿಗೆ FD ಯೋಜನೆಯಲ್ಲಿ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್ ಗಳು ಯಾವುವು?

ಹಿರಿಯ ನಾಗರಿಕರು ಆರ್ಥಿಕವಾಗಿ ಹೆಚ್ಚು ಸದೃಢ ಆಗಬೇಕು ಎಂಬ ಉದ್ದೇಶದಿಂದ ಯಾವುದಾದರೂ ಹೂಡಿಕೆಯ ಯೋಜನೆಯಲ್ಲಿ ಹಣ ಹೂಡಿಕೆ ಮಾಡುತ್ತಾರೆ. ಆದರೆ ಎಲ್ಲಿ ಹೂಡಿಕೆ ಮಾಡಬೇಕು ಎಂಬ ಗೊಂದಲ ಎಲ್ಲಾರಿಗೂ ಎಲ್ಲಿ ಹೂಡಿಕೆ ಮಾಡಬೇಕು ಎಂಬ ಗೊಂದಲ ಎಲ್ಲರಿಗೂ ಇರುತ್ತದೆ. ಅದಕ್ಕೇ ಉತ್ತಮ ಆಯ್ಕೆ ಎಂದರೆ ಬ್ಯಾಂಕ್ FD ಯೋಜನೆ. ಸೇಫ್ಟಿ ಜೊತೆಗೆ ಉತ್ತಮ ರೀತಿಯ ಬಡ್ಡಿದರಗಳು ಸಿಗುತ್ತವೆ. ನೀವು ಬ್ಯಾಂಕ್ ನಲ್ಲಿ FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ಹೆಚ್ಚಿನ ಬಡ್ಡಿದರಗಳು ಸಿಗುತ್ತವೆ ಎಂಬ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಹಿರಿಯ ನಾಗರಿಕರಿಗೆ FD ಯೋಜನೆಯಲ್ಲಿ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್ ಗಳು ಯಾವುವು?

ಬಂಧನ್ ಬ್ಯಾಂಕ್ :- ಬಂಧನ್ ಬ್ಯಾಂಕ್ ಭಾರತದ ಪ್ರಮುಖ ಖಾಸಗಿ ವಲಯದ ಬ್ಯಾಂಕ್ ಆಗಿದ್ದು, ಇದು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಕಂಡು ಬರುವ ಬ್ಯಾಂಕ್ ಆಗಿದೆ. ಈ ಬಂಧನ್ ಬ್ಯಾಂಕ್ ನಲ್ಲಿ ಹಿರಿಯ ನಾಗರಿಕರು FD ಯೋಜನೆಯಲ್ಲಿ ಒಂದು ವರ್ಷದ ಅವಧಿಗೆ ಹೂಡಿಕೆ ಮಾಡಿದರೆ ಹೂಡಿಕೆಯ ಮೊತ್ತಕ್ಕೆ ಶೇಕಡಾ 8.35% ಬಡ್ಡಿದರ ನೀಡಲಾಗುತ್ತದೆ.

ಐಡಿಎಫ್‌ಸಿ ಫಸ್ಟ್ ಬ್ಯಾಂಕ್ :- IDFC ಫಸ್ಟ್ ಬ್ಯಾಂಕ್ ಭಾರತದ ಪ್ರಮುಖ ಖಾಸಗಿ ವಲಯದ ಬ್ಯಾಂಕ್ ಆಗಿದೆ. FD ಯೋಜನೆಯಲ್ಲಿ ಹೂಡಿಕೆ ಮಾಡುವ ಗ್ರಾಹಕರಿಗೆ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಹೂಡಿಕೆಯ ಮೊತ್ತಕ್ಕೆ ಅನುಗುಣವಾಗಿ ಶೇಕಡಾ 8.40% ಬಡ್ಡಿಯನ್ನು ನೀಡುತ್ತಿದೆ. 500 ದಿನಗಳ FD ಯೋಜನೆಗೆ ಈ ಬಡ್ಡಿ ದರವನ್ನು ನೀಡಲಾಗುತ್ತದೆ.

ಡಿಸಿಬಿ ಬ್ಯಾಂಕ್ :- ಇದು ಒಂದು ಭಾರತದ ಪ್ರಮುಖ ಖಾಸಗಿ ವಲಯದ ಬ್ಯಾಂಕ್ ಆಗಿದೆ. ಈ ಬ್ಯಾಂಕ್ ನಲ್ಲಿ FD ಯೋಜನೆಯಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರಿಕ ಹೂಡಿಕೆ ದಾರರಿಗೆ ಹೂಡಿಕೆಯ ಮೊತ್ತಕ್ಕೆ ಅನುಗುಣವಾಗಿ ಶೇಕಡಾ 8.55% ಬಡ್ಡಿ ದರವನ್ನು ನೀಡುತ್ತದೆ. ಈ ಬಡ್ಡಿ ದರವು ಹೂಡಿಕೆ ಪೂರ್ಣಗೊಳ್ಳುವ ಅವಧಿ 19 ರಿಂದ 20 ತಿಂಗಳವರೆಗೆ ಇದ್ದರೆ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

RBL ಬ್ಯಾಂಕ್ :- ಇದು ಒಂದು ಖಾಸಗಿ ವಲಯದ ಬ್ಯಾಂಕ್ ಅದು. ಇದರಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರಿಕರಿಗೆ FD ಯೋಜನೆಗೆ ಶೇಕಡಾ 8.50% ಬಡ್ಡಿದರ ನೀಡಲಾಗುತ್ತದೆ. ಈ ಬಡ್ಡಿ ದರವು ಹೂಡಿಕೆಯ ಅವಧ 18 ತಿಂಗಳಿನಿಂದ 2 ವರ್ಷಗಳ ಒಳಗೆ ಇದ್ದರೆ ಮಾತ್ರ ಸಿಗುತ್ತದೆ.

SBM ಬ್ಯಾಂಕ್ ಇಂಡಿಯಾ :- ಈ ಬ್ಯಾಂಕ್ ನಲ್ಲಿ FD ಹೂಡಿಕೆ ಮಾಡುವ ಹಿರಿಯ ನಾಗರಿಕರಿಗೆ ಉತ್ತಮ ಬಡ್ಡಿದರ ನೀಡಲಾಗುತ್ತದೆ. ಹಿರಿಯ ನಾಗರಿಕರ ಹೂಡಿಕೆಯ ಮೊತ್ತಕ್ಕೆ ಶೇಕಡಾ 8.8 ಶೇಕಡಾ ಬಡ್ಡಿ ದರವನ್ನು ಬ್ಯಾಂಕ್ ನೀಡುತ್ತಿದೆ. ಈ ಬದ್ದಿದರವು ಹೂಡಿಕೆ ಅವಧಿಯು 15 ಇಂದ 18 ತಿಂಗಳ ಒಳಗೆ ಇದ್ದರೆ ಮಾತ್ರ ಸಿಗುತ್ತದೆ.

FD ಯೋಜನೆಗಳ ಜೊತೆಗೆ ಇನ್ನಷ್ಟು ಉತ್ತಮ ಯೋಜನೆಗಳನ್ನು ಬ್ಯಾಂಕ್ ನೀಡುತ್ತದೆ. ನಿಮಗೆ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ FD ಖಾತೆಯನ್ನು ತೆರೆಯಬಹುದು. ನೀವು ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಮೇಲಿನ ಬ್ಯಾಂಕ್ ಗಳ ಹತ್ತಿರದ ಶಾಖೆ ಗೆ ಹೋಗಿ ವಿಚಾರಿಸಿ ಅಥವಾ ಬ್ಯಾಂಕ್ ನಾ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದು ನಂತರ ಹೂಡಿಕೆ ಮಾಡುವುದು ಉತ್ತಮ.

ಇದನ್ನೂ ಓದಿ: ನಿಮ್ಮ ಹೆಂಡತಿಯ ಹೆಸರಲ್ಲಿ ತಿಂಗಳಿಗೆ 5000 ರೂಪಾಯಿ ಇನ್ವೆಸ್ಟ್ಮೆಂಟ್ ಮಾಡಿ ಮತ್ತು 1,76,49,569 ರೂಪಾಯಿ ಪಡೆಯುವ ಪಿಂಚಣಿ ಯೋಜನೆಯ ಬಗ್ಗೆ ತಿಳಿಯಿರಿ.

Sharing Is Caring:

Leave a Comment