ಹತ್ತನೇ ಮತ್ತು ಪದವಿ ಪೂರ್ವ ಶಿಕ್ಷಣ ಪೂರ್ಣಗೊಳಿಸಿದ ಅಭ್ಯರ್ಥಿಗಳು ಗದಗ ಜಿಲ್ಲೆಯ ಎಲ್ಲಾ ತಾಲೂಕುಗಳ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತರು ಮತ್ತು ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಲು ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಇಲಾಖೆ ತಿಳಿಸಿದೆ. ಹುದ್ದೆಗಳ ಬಗ್ಗೆ ಪೂರ್ಣ ವಿವರಗಳು ಇಲ್ಲಿವೆ.
ಖಾಲಿ ಇರುವ ಹುದ್ದೆಗಳ ಸಂಖ್ಯೆ :- ಮುಂಡರಗಿ ತಾಲೂಕಿನಲ್ಲಿ 5 ಅಂಗನವಾಡಿ ಕಾರ್ಯಕರ್ತೆಯರು ಮತ್ತು 24 ಅಂಗನವಾಡಿ ಸಹಾಯಕಿಯರ ಹುದ್ದೆಗಳು ಮತ್ತು ನರಗುಂದ ತಾಲೂಕಿನಲ್ಲಿ 5 ಅಂಗನವಾಡಿ ಕಾರ್ಯಕರ್ತೆಯರು ಮತ್ತು 12 ಅಂಗನವಾಡಿ ಸಹಾಯಕರ ಹುದ್ದೆಗಳು ಖಾಲಿ ಇವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 19 2024 ಕೊನೆಯ ದಿನ ಆಗಿದೆ.
ಒಟ್ಟು ಖಾಲಿ ಹುದ್ದೆ:- ಈ ನೇಮಕಾತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ 56 ಮತ್ತು ಅಂಗನವಾಡಿ ಸಹಾಯಕಿಯಾಗಿ 150 ಹುದ್ದೆಗಳು ಒಟ್ಟು 206 ಹುದ್ದೆಗಳು.
ಎಜುಕೇಷನ್ ಕ್ವಾಲಿಫಿಕೇಷನ್ :-
- ಅಂಗನವಾಡಿ ಕಾರ್ಯಕರ್ತೆಯ ಹುದ್ದೆಗೆ ಅರ್ಜಿ ಸಲ್ಲಿಸಲು 12ನೇ ತರಗತಿ ಅಥವಾ ಇಸಿಸಿಇ ಡಿಪ್ಲೊಮಾ ಅಥವಾ ಅದಕ್ಕೆ ಸಮಾನವಾದ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
- ಅಂಗನವಾಡಿ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಲು 10ನೇ ತರಗತಿಯಲ್ಲಿ ಪಾಸ್ ಆಗಿರಬೇಕು ಎಂಬುದು ಕಡ್ಡಾಯ ನಿಯಮ.
ವಯಸ್ಸಿನ ಮಿತಿ:- ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಆದರೆ, ಅವರು 35 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಾಗಿರಬಾರದು.
ಸರಕಾರಿ ಮೀಸಲಾತಿ ನಿಯಮದ ಪ್ರಕಾರವಾಗಿ ಒಬಿಸಿ, ಎಸ್‌ಸಿ, ಎಸ್‌ಟಿ ಮತ್ತು ಪ್ರವರ್ಗ-1 ಕೆಲವು ವಿಶೇಷ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸ್ವಲ್ಪ ಸಡಿಲಿಕೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: EPFO ಸದಸ್ಯರೂ ಇನ್ಮುಂದೆ ಸುಲಭವಾಗಿ ಹಣವನ್ನು ವಿತ್ ಡ್ರಾ ಮಾಡಬಹುದು. ಹೇಗೆ ಎಂಬುದನ್ನು ತಿಳಿಯಿರಿ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳ ಪಟ್ಟಿ :-
- ಗುರುತಿನ ಪುರಾವೆ: ನಿಮ್ಮ ಜನ್ಮ ದಿನಾಂಕ ಮತ್ತು ಹೆಸರು ಇರುವ ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ ಮಾರ್ಕ್ಸ್ ಕಾರ್ಡ್ ನೀಡಬೇಕು.
- ವಿದ್ಯಾರ್ಹತೆ: ನೀವು ಓದಿರುವ ಶಾಲೆ/ಕಾಲೇಜಿನಿಂದ ಪಡೆದ ಎಲ್ಲಾ ವಿದ್ಯಾರ್ಹತೆಗಳ ಪ್ರಮಾಣ ಪತ್ರಗಳನ್ನು ದಾಖಲೆ ರೂಪದಲ್ಲಿ ನೀಡಬೇಕು.
- ವಯಸ್ಸಿನ ಪುರಾವೆ: ನಿಮ್ಮ ಜನ್ಮ ದಿನಾಂಕವನ್ನು ಸಾಬೀತುಪಡಿಸುವ ಯಾವುದೇ ದಾಖಲೆ (ಜನನ ಪ್ರಮಾಣ ಪತ್ರ) ನೀಡಬೇಕು.
- ಮೀಸಲಾತಿ: ನಿಮಗೆ ಮೀಸಲಾತಿ ಅನ್ವಯವಾಗುತ್ತಿದ್ದರೆ, ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು.
- ವಿಶೇಷ ಚೇತನರಿಗೆ : ವಿಕಲಚೇತನರು ವಿಕಲಚೇತನ ಪ್ರಮಾಣ ಪತ್ರ. ಹಾಗೂ ವಿಧವೆ ಆಗಿದ್ದರೆ ಸಂಬಂಧಿತ ಪ್ರಮಾಣ ಪತ್ರಗಳು ಹಾಗೂ ಯೋಜನಾ ನಿರಾಶ್ರಿತರು ತಮ್ಮ ಯೋಜನಾ ನಿರಾಶ್ರಿತರ ಸ್ಥಿತಿಯನ್ನು ಗುರುತಿಸುವ ಪ್ರಮಾಣ ಪತ್ರ ನೀಡಬೇಕು. ರೈತರ ಪತ್ನಿ ಆಗಿದ್ದು ಪತಿಯ ಮರಣ ಪ್ರಮಾಣ ಪತ್ರ ಮತ್ತು ಉಪವಿಭಾಗಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ ಸಲ್ಲಿಸಬೇಕು.
ಅರ್ಜಿ ಹಾಕುವ ವಿಧಾನ:
- ವೆಬ್‌ಸೈಟ್ ಭೇಟಿ: ಮೊದಲಿಗೆ, ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲಿ ಇಂಟರ್ನೆಟ್ ತೆರೆಯಿರಿ ಮತ್ತು “https://karnemakaone.kar.nic.in/abcd/ApplicationForm_JA_org.aspx” ಈ ವೆಬ್‌ಸೈಟ್‌ಗೆ ಭೇಟಿ ನೀಡಿ.
- ಜಿಲ್ಲೆ ಮತ್ತು ತಾಲ್ಲೂಕು ಆಯ್ಕೆ: ವೆಬ್‌ಸೈಟ್ ನಲ್ಲಿ ನೀವು ಅರ್ಜಿ ಹಾಕಲು ಬಯಸುವ ಜಿಲ್ಲೆ (ಗದಗ) ಮತ್ತು ತಾಲ್ಲೂಕನ್ನು ಆಯ್ಕೆ ಮಾಡಿ. ನಂತರ, ಯಾವ ಹುದ್ದೆಗೆ ಅರ್ಜಿ ಹಾಕುತ್ತೀರಿ ಎಂದು ಆಯ್ಕೆ ಮಾಡಬೇಕು.
- ಅಂಗನವಾಡಿ ಕೇಂದ್ರ ಆಯ್ಕೆ ಮಾಡಿ: ಯಾವ ಅಂಗನವಾಡಿ ಕೇಂದ್ರದಲ್ಲಿ ಕೆಲಸ ಮಾಡಲು ಬಯಸುತ್ತೀರಿ ಎಂದು ಆಯ್ಕೆ ಮಾಡಬೇಕು.
- ಅರ್ಜಿ ಭರ್ತಿ: ಅರ್ಜಿ ನಮೂನೆಯಲ್ಲಿ ಕೇಳಿರುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಬೇಕು.
- ದಾಖಲೆ ಅಪ್ಲೋಡ್: ಅರ್ಜಿ ನಮೂನೆಯಲ್ಲಿ ಕೇಳಿರುವ ಎಲ್ಲಾ ದಾಖಲೆಗಳನ್ನು ವೆಬ್ ಸೈಟ್ನಲ್ಲಿ ನಿರ್ದಿಷ್ಟವಾಗಿ ಕೇಳಿದಂತೆ ಅಪ್ಲೋಡ್ ಮಾಡಬೇಕು.
- ಸಲ್ಲಿಸಿ: ಎಲ್ಲಾ ಮಾಹಿತಿಯನ್ನು ಸರಿಯಾಗಿ ನಮೂದಿಸಿ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ, ‘ಸಲ್ಲಿಸು’ ಬಟನ್ ಕ್ಲಿಕ್ ಮಾಡಿ.
ಇದನ್ನೂ ಓದಿ: ರೈತರಿಗೆ ತಿಂಗಳಿಗೆ ಮೂರು ಸಾವಿರ ಪಿಂಚಣಿ ನೀಡುವ ಸರ್ಕಾರಿ ಯೋಜನೆಯ ಬಗ್ಗೆ ಮಾಹಿತಿ ಇಲ್ಲಿದೆ.