ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ನಗರಗಳಲ್ಲಿ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಮುಖ್ಯ ಮೂಲವಾಗಿ ಬೋರವೆಲ್ ಕಾರ್ಯನಿರ್ವಹಿಸುತ್ತದೆ. ಕೃಷಿ ಚಟುವಟಿಕೆಗೆ ಬೋರವೆಲ್ ಗಳನ್ನು ಬಳಸಲಾಗಿದೆ. ಇದು ವಿಶೇಷವಾಗಿ ಮಳೆಗಾಲದಲ್ಲಿ ಮಳೆಯಾಗದ ಪ್ರದೇಶಗಳಲ್ಲಿ ಬಹಳ ಸಹಾಯಕ ಆಗಿದೆ. ನೀವು ಬೋರವೆಲ್ ಕೊರೆಸುವ ಯೋಚನೆ ಹೊಂದಿದ್ದರೆ ನೀವು ಸಹ ಸಬ್ಸಿಡಿ ಪಡೆಯಬಹುದು. ಆದರೆ ನೀವು ಈ ಸಬ್ಸಿಡಿ ಪಡೆಯಲು ಇರುವ ಮಾನದಂಡಗಳು ಹಾಗೂ ಪ್ರಕ್ರಿಯೆಯ ಬಗ್ಗೆ ಮಾಹಿತಿ ಇಲ್ಲಿದೆ.
ಗಂಗಾ ಯೋಜನೆಯಡಿ ಬೋರ್ವೆಲ್ ನಿರ್ಮಾಣ :- ಗಂಗಾ ಕಲ್ಯಾಣ ಯೋಜನೆಯಡಿ ರೈತರಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ ಬೋರ್ವೆಲ್ ಕೊರೆಸಲು ಆರ್ಥಿಕ ನೆರವು ನೀಡಲಾಗುತ್ತಿದೆ. ಇದರೊಂದಿಗೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಲು ರೈತರಿಗೆ ಅವಕಾಶ ಸಿಗುತ್ತದೆ.
ಸಹಾಯಧನದ ಮೊತ್ತ ಎಷ್ಟು?
ಈ ಯೋಜನೆಯಲ್ಲಿ ಅರ್ಜಿ ಹಾಕಿದರೆ ಆಯ್ಕೆಯಾದವರಿಗೆ ಬೋರ್ವೆಲ್ ಮಾಡಲು ಸರ್ಕಾರ ಹಣ ಕೊಡುತ್ತೆ. ಬೆಂಗಳೂರು ಸುತ್ತಲಿನ ಜಿಲ್ಲೆಗಳಲ್ಲಿ ಬೋರ್ವೆಲ್ ಮಾಡಲು ಒಟ್ಟು 4,75,000 ರೂಪಾಯಿ ಖರ್ಚಾಗುತ್ತದೆ. ಇದರಲ್ಲಿ ಸರ್ಕಾರ 4,25, 00 ರೂಪಾಯಿ ಕೊಡುತ್ತೆ, ಉಳಿದ ಹಣವನ್ನು ಸಾಲದ ರೂಪದಲ್ಲಿ ನೀಡಲಾಗುತ್ತದೆ. ಇನ್ನುಳಿದ ಜಿಲ್ಲೆಗಳಲ್ಲಿ ಒಟ್ಟು ಖರ್ಚು 3,75,000 ರೂಪಾಯಿ ಆಗುತ್ತೆ. ಇದರಲ್ಲಿ ಸರ್ಕಾರ 3,25,000 ರೂಪಾಯಿ ಕೊಡುತ್ತೆ ಮತ್ತು ಉಳಿದ ಹಣವನ್ನು ಸಾಲದ ರೂಪದಲ್ಲಿ ನೀಡುತ್ತಾರೆ. ಜೊತೆಗೆ, ಬೋರ್ವೆಲ್ಗೆ ವಿದ್ಯುತ್ ಸಂಪರ್ಕ ಕೊಡಲು 75,000 ರೂಪಾಯಿಯನ್ನು ಸರ್ಕಾರವೇ ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಈ ಯೋಜನೆಗೆ ಅರ್ಜಿ ಹಾಕಲು ಯಾರು ಅರ್ಹರು?: ಆದಾಯ: ವರ್ಷಕ್ಕೆ 98,000 ರೂಪಾಯಿಗಿಂತ ಕಡಿಮೆ ಆದಾಯ ಇರುವವರು.
ವಯಸ್ಸು: 18 ವರ್ಷ ಮೇಲ್ಪಟ್ಟವರು.
ಜಮೀನು: ಕನಿಷ್ಠ 2 ಜಮೀನು ಇರಬೇಕು. (ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ 1 ಸಾಕು)
ನೀರಾವರಿ: ಇನ್ನೇನೂ ನೀರಾವರಿ ಸೌಲಭ್ಯ ಇರಬಾರದು.
ವರ್ಗ: ಕೆಲವು ನಿರ್ದಿಷ್ಟ ವರ್ಗಗಳಿಗೆ ಸೇರಿದವರು ಮಾತ್ರ (ಈ ವರ್ಗಗಳ ಬಗ್ಗೆ ಹೆಚ್ಚಿನ ಮಾಹಿತಿ ಅಗತ್ಯವಿದೆ)
ಇದನ್ನೂ ಓದಿ: ಕೇಂದ್ರ ಸರ್ಕಾರದ ಆವಾಸ್ ಯೋಜನೆ ಅಡಿಯಲ್ಲಿ ಉಚಿತ ಮನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಇದನ್ನೂ ಓದಿ: ಆಗಸ್ಟ್ ತಿಂಗಳ ಈ ವಾರದಲ್ಲಿ ಬರುತ್ತದೆ ಗೃಹಲಕ್ಷ್ಮಿ ಯೋಜನೆಯ ಒಟ್ಟಿಗೆ ಎರಡು ತಿಂಗಳ ಹಣ!
ಇಲ್ಲಿ ಅರ್ಜಿ ಸಲ್ಲಿಸಬಹುದು.
- ಉಪ್ಪಾರ ಅಭಿವೃದ್ಧಿ ನಿಗಮ
- ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
- ವಿಶ್ವಕರ್ಮ ಅಭಿವೃದ್ಧಿ ನಿಗಮ
- ಮರಾಠ ಅಭಿವೃದ್ಧಿ ನಿಗಮ
- ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ
- ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ
- ಸವಿತಾ ಸಮಾಜ ಅಭಿವೃದ್ಧಿ ನಿಗಮ
- ಅಲೆಮಾರಿ ಅರೆ-ಅಲೆಮಾರಿ ಅಭಿವೃದ್ಧಿ ನಿಗಮ
- ಒಕ್ಕಲಿಗ ಅಭಿವೃದ್ಧಿ ನಿಗಮ
31 ಆಗಸ್ಟ್ 2024ರೊಳಗೆ ಈ ಯೋಜನೆಗೆ ಅರ್ಜಿ ಸಲ್ಲಿಸಿ ಈ ಅನುಕೂಲವನ್ನು ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಎಜುಕೇಷನ್ ಲೋನ್ ಪಡೆಯುವ ಮುನ್ನ ಈ ಅಂಶಗಳ ಬಗ್ಗೆ ನೀವು ತಿಳಿಯಲೇ ಬೇಕು.