EPFO ಸದಸ್ಯರೂ ಇನ್ಮುಂದೆ ಸುಲಭವಾಗಿ ಹಣವನ್ನು ವಿತ್‌ ಡ್ರಾ ಮಾಡಬಹುದು. ಹೇಗೆ ಎಂಬುದನ್ನು ತಿಳಿಯಿರಿ.

ಭಾರತೀಯ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯೂ (EPFO) ತನ್ನ ಸದಸ್ಯರಿಗೆ ಈಗ ಒಂದು ದೊಡ್ಡ ಸಿಹಿ ಸುದ್ದಿಯನ್ನು ನೀಡಿದೆ. ಅದೇನೆಂದರೆ ಇನ್ನು ಮುಂದೆ EPFO ಸದಸ್ಯರು ತಮ್ಮ ಭವಿಷ್ಯ ನಿಧಿ ಪಡೆಯಲು ಅರ್ಜಿ ಸಲ್ಲಿಸಿದಾಗ ಅಥವಾ ಇತರ ಯಾವುದೇ ಸಮಸ್ಯೆಗಳನ್ನು ಎದುರಿಸಿದಾಗ ಹೆಚ್ಚು ಕಾಲ ಕಾಯಬೇಕಾಗಿಲ್ಲ ಎಂದು ಹೇಳಬಹುದು. ಯಾಕೆಂದರೆ ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು EPFO ನಲ್ಲಿ ಹೊಸ ವ್ಯವಸ್ಥೆ ಜಾರಿಗೆ ತರಲಿದೆ. ಈ ಯೋಜನೆ ಯಿಂದ ಹಲವು ಸಮಸ್ಯೆಗಳು ಶೀಘ್ರ ಬಗೆಹರೆಯಲಿವೆ.

WhatsApp Group Join Now
Telegram Group Join Now

ಸಮಸ್ಯೆಗೆ ಶೀಘ್ರ ಪರಿಹಾರ ನೀಡುವ ಯೋಜನೆ :- ಉದ್ಯೋಗಿಗಳು ತಮ್ಮ ಭವಿಷ್ಯ ನಿಧಿ ಹಣವನ್ನು ಪಡೆಯಲು ಅಥವಾ ಇತರ ಸಂಬಂಧಿತ ವಿಷಯಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣದಿಂದ ಇಲಾಖೆ ಐಟಿ ವ್ಯವಸ್ಥೆ ಜಾರಿಗೆ ತರುತ್ತಿದೆ.

ಮುಂದಿನ ಮೂರು ತಿಂಗಳ ಒಳಗೆ ಜಾರಿಯಾಗಲಿದೆ ಯೋಜನೆ :- ಕಾರ್ಮಿಕ ಕೇಂದ್ರ ಸಚಿವ ಮನ್ಸುಖ್ ಮಾಂಡವ್ಯ ಅವರು ಭವಿಷ್ಯ ನಿಧಿ ಸಂಸ್ಥೆಯಲ್ಲಿ ಹೊಸ ತಂತ್ರಜ್ಞಾನವನ್ನು ಪರಿಚಯಿಸುವ ಯೋಜನೆಯನ್ನು ಪ್ರಕಟಿಸಿದ್ದಾರೆ. ಮುಂದಿನ ಮೂರು ತಿಂಗಳಲ್ಲಿ ಭವಿಷ್ಯ ನಿಧಿ ಸಂಸ್ಥೆಯ ಕಾರ್ಯಾಚರಣೆಯಲ್ಲಿ ಗಮನಾರ್ಹ ಬದಲಾವಣೆ ಇದೆ. ಕೇಂದ್ರ ಕಾರ್ಮಿಕ ಸಚಿವರ ಪ್ರಕಾರ, ಹೊಸ ತಂತ್ರಜ್ಞಾನದ ಪರಿಚಯದೊಂದಿಗೆ ಉದ್ಯೋಗಿಗಳಿಗೆ ಹೆಚ್ಚು ಸುಲಭವಾಗಿ ಸೇವೆ ಸಿಗಲಿದೆ ಎಂಬ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: BSNL ನ 70 ದಿನಗಳ ಅಗ್ಗದ ರಿಚಾರ್ಜ್ ಪ್ಲಾನ್, ಅದರ ಬೆಲೆ 200 ರೂಪಾಯಿ ಗಿಂತ ಕಡಿಮೆ.

ಹೊಸ ವ್ಯವಸ್ಥೆಯ ಲಾಭಗಳು ಹೀಗಿವೆ:-

  • ಸುಲಭವಾಗಿ ಖಾತೆಯ ಸ್ಥಿತಿ ತಿಳಿಯಿರಿ:- ಹೊಸ ವ್ಯವಸ್ಥೆ ಎಲ್ಲಾ ಸ್ಥಳದಲ್ಲಿ ಇಡುವುದರಿಂದ, ಸದಸ್ಯರು ತಮ್ಮ ಖಾತೆಯ ಸ್ಥಿತಿಯನ್ನು ಸುಲಭವಾಗಿ ಪರಿಶೀಲಿಸಬಹುದು ಮತ್ತು ಯಾವುದೇ ಅನುಮಾನಗಳಿದ್ದರೆ ಸ್ಪಷ್ಟೀಕರಣವನ್ನು ಪಡೆಯಬಹುದು.
  • ಹೊಸ ಖಾತೆ ತೆರೆಯುವ ಅಗತ್ಯ ಇಲ್ಲ:- ಸಾಮಾನ್ಯವಾಗಿ, ಒಬ್ಬ ಕಂಪನಿ ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಕೆಲಸಕ್ಕೆ ಬದಲಾದಾಗ, ತನ್ನ ಭವಿಷ್ಯ ನಿಧಿ ಖಾತೆಯನ್ನು ಹೊಸ ಕಂಪನಿಗೆ ಸೇರಿಸಲು ಗುರುತಿನ ಚೀಟಿಯನ್ನು ವರ್ಗಾಯಿಸಬೇಕಾಗಿತ್ತು. ಇದು ಸಾಕಷ್ಟು ಸಮಯ ಮತ್ತು ಶ್ರಮವನ್ನು ತೆಗೆದುಕೊಳ್ಳುತ್ತದೆ. ಆದರೆ, ಹೊಸ ವ್ಯವಸ್ಥೆಯಲ್ಲಿ ಈ ಪ್ರಕ್ರಿಯೆ ಅಗತ್ಯವಿಲ್ಲ. ಅಂದರೆ, ನೀವು ಹೊಸ ಕಂಪನಿಗೆ ಸೇರಿದಾಗ, ನಿಮ್ಮ ಭವಿಷ್ಯ ನಿಧೀ ಖಾತೆಯನ್ನು ಹೊಸ ಕಂಪನಿಯೊಂದಿಗೆ ಸ್ವಯಂಚಾಲಿತವಾಗಿ ಸಂಯೋಜಿಸಲಾಗಿದೆ.
  • ಬಳಕೆದಾರ ಸ್ನೇಹಿತ: ವೆಬ್‌ಸೈಟ್ ಅನ್ನು ಯಾರು ಬೇಕಾದರೂ ಸುಲಭವಾಗಿ ಬಳಸಬಹುದು ಎಂದರ್ಥ. ಇದರಲ್ಲಿ ಸರಳವಾದ ಡಿಸೈನ್, ಸ್ಪಷ್ಟವಾದ ಭಾಷೆ ಮತ್ತು ಕಡಿಮೆ ತಾಂತ್ರಿಕ ಜ್ಞಾನದ ಅಗತ್ಯತೆ ಇರುತ್ತದೆ.

ಬಳಕೆದಾರರ ದೂರಿನ ಹಿನ್ನೆಲೆಯಲ್ಲಿ ಬದಲಾವಣೆ :- EPFO ಪೋರ್ಟಲ್‌ನಲ್ಲಿ ಸುಧಾರಿಸಲು ಮತ್ತು ಉದ್ಯೋಗಿಗಳ ಅನುಭವವನ್ನು ಉತ್ತಮಗೊಳಿಸಲು ಹೊಸ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಜೊತೆಗೆ ಉದ್ಯೋಗಿಗಳ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ಹೊಸ ವಿನ್ಯಾಸಗಳನ್ನು ರಚಿಸುವ ಮೂಲಕ EPFO ಪೋರ್ಟಲ್‌ನಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಪ್ರಯತ್ನಿಸಲಾಗಿದೆ ಎಂದು ಇಲಾಖೆ ಸ್ಪಷ್ಟವಾಗಿ ಮಾಹಿತಿ ತಿಳಿಸಿದೆ.

ಹಳೆ ವ್ಯವಸ್ಥೆಯ ತೊಂದರೆಗಳು : EPFO ಸದಸ್ಯರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಹಳೆಯ ಐಟಿ ವ್ಯವಸ್ಥೆಯು ಒತ್ತಡದಿಂದ ನಿರ್ವಹಣೆ ನಿಧಾನ ಆಗಿತ್ತು ಮತ್ತು ಆಗಾಗ ಕೆಲವು ತಾಂತ್ರಿಕ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಇದನ್ನು ನಿವಾರಿಸಲು ಹೊಸ ಐಟಿ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಇದು ಹಲವು ತಾಂತ್ರಿಕ ತೊಂದರಗಳನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡಲಿದೆ ಎಂದು ಇಲಾಖೆ ಮಾಹಿತಿ ತಿಳಿಸಿದೆ.

ಇದನ್ನೂ ಓದಿ: ಏಕೀಕೃತ ಪಿಂಚಣಿ ಯೋಜನಯಿಂದ ಕೇವಲ 10 ವರ್ಷಗಳ ಸರ್ಕಾರಿ ಸೇವೆಗೆ ಸಿಗಲಿದೆ ಪಿಂಚಣಿ ಹಣ!?

Sharing Is Caring:

Leave a Comment