ಪೋಸ್ಟ್ ಆಫೀಸ್ ಹಲವು ಉತ್ತಮ ಹೂಡಿಕೆ ಯೋಜನೆಗಳನ್ನು ನೀಡುತ್ತಿದೆ. ಸರ್ಕಾರದಿಂದ ಬೆಂಬಲಿತವಾದ ಯೋಜನೆಗಳು ಇವೆ ಬಹಳ ಸುರಕ್ಷಿತ. ಹೆಣ್ಣು ಮಕ್ಕಳ ಭವಿಷ್ಯಕ್ಕೆ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದರಲ್ಲಿ ಪ್ರಮುಖವಾಗಿ ಸುಕನ್ಯಾ ಸಮೃದ್ಧಿ ಯೋಜನೆ ಸಹ ಒಂದು. ಈ ಯೋಜನೆಯು ಹೆಣ್ಣು ಮಕ್ಕಳ ಭವಿಷ್ಯಕ್ಕೆ ಸಹಾಯ ಮಾಡುವ ಒಂದು ಯೋಜನೆ ಆಗಿದೆ. ಇದು ಹೆಣ್ಣು ಮಕ್ಕಳಿಗೆ ಉತ್ತಮ ಭವಿಷ್ಯವನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಬಹಳ ಉಪಯುಕ್ತವಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿ 71 ಲಕ್ಷ ರೂಪಾಯಿ ಗಳಿಸುವುದು ಹಾಗೆ ಎಂಬುದನ್ನು ತಿಳಿಯೋಣ.
ಸರಕಾರಿ ಯೋಜನೆಗಳು ಸುರಕ್ಷಿತ :- ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿ ಜನರು ಸಾಂಪ್ರದಾಯಿಕ ಹೂಡಿಕೆಗಳಿಂದ ಮಾರುಕಟ್ಟೆಯತ್ತ ಮುಖ ಮಾಡುತ್ತಿದ್ದಾರೆ. ಸರ್ಕಾರಿ ಯೋಜನೆಗಳು ತೆರಿಗೆ ಪ್ರಯೋಜನಗಳ ಜೊತೆಗೆ ಸ್ಥಿರ ಆದಾಯವನ್ನು ಒದಗಿಸುತ್ತವೆ. ಷೇರು ಮಾರುಕಟ್ಟೆಯ ಅಪಾಯಗಳಿಂದ ದೂರವಿರಲು ಬಯಸುವವರಿಗೆ ಸರ್ಕಾರಿ ಯೋಜನೆಗಳು ಸುರಕ್ಷಿತ ಆಯ್ಕೆಯಾಗಿದೆ.
ಸುಕನ್ಯಾ ಸಮೃದ್ಧಿ ಯೋಜನೆ ಬಗ್ಗೆ ಮಾಹಿತಿ :-
ಯಾವುದೇ ನಾಗರಿಕ ತನ್ನ 10 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಗಳಿಗೆ ಈ ಯೋಜನೆಯಲ್ಲಿ ಭಾರತದಲ್ಲಿ ಹೂಡಿಕೆ ಮಾಡಬಹುದು. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ವಾರ್ಷಿಕ ಕನಿಷ್ಠ 250 ರೂಪಾಯಿ ಮತ್ತು ಗರಿಷ್ಠ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ಈ ಯೋಜನೆಯನ್ನು ಅಂಚೆ ಕಚೇರಿಯಲ್ಲಿ ತೆರೆಯಬಹುದು ಮತ್ತು 15 ವರ್ಷಗಳ ಕಾಲ ಹೂಡಿಕೆ ಮಾಡಬೇಕು. 21 ವರ್ಷಗಳ ನಂತರ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪಡೆಯಲು ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸುವ ಕ್ರಮ ಏನು ಎಂಬುದನ್ನು ತಿಳಿಯಿರಿ.
ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿ :-
- ಸುಕನ್ಯಾ ಸಮೃದ್ಧಿ ಯೋಜನೆ ಬಡ್ಡಿ ದರವು ಸರ್ಕಾರದ ನಿರ್ಧಾರದ ಮೇಲೆ ಪ್ರತಿ ತ್ರೈಮಾಸಿಕಕ್ಕೆ ಬದಲಾಗುತ್ತದೆ. ಬಡ್ಡಿ ದರ ಹೆಚ್ಚಾದರೆ ನಿಮಗೆ ಹೆಚ್ಚು ಹಣ ಸಿಗುತ್ತದೆ ಮತ್ತು ಕಡಿಮೆಯಾದರೆ ಕಡಿಮೆ ಹಣ ಸಿಗುತ್ತದೆ.
- ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯಲ್ಲಿ ಹೂಡಿಕೆ ಮಾಡುವಾಗ, ಪ್ರತಿ ವರ್ಷ ಏಪ್ರಿಲ್ 5 ರ ನಂತರ ಹಣವನ್ನು ಜಮಾ ಮಾಡುವುದು ಮುಖ್ಯ. ಇದರಿಂದ ನಿಮ್ಮ ಮಗಳಿಗೆ ಗರಿಷ್ಠ ಬಡ್ಡಿ ದೊರೆಯುತ್ತದೆ. ಖಾತೆಯನ್ನು ತೆರೆಯುವಾಗ ನಿಮ್ಮ ಮಕ್ಕಳ ವಯಸ್ಸು ಎಷ್ಟಿದ್ದರೂ ಪರವಾಗಿಲ್ಲ, ಖಾತೆ 21 ವರ್ಷ ಕಳೆದಾಗ ಮಾತ್ರ ಹಣವನ್ನು ಪಡೆಯಬಹುದು.
71 ಲಕ್ಷ ರೂಪಾಯಿ ಪಡೆಯಿರಿ :- ನಿಮ್ಮ ಮಗಳ ಭವಿಷ್ಯವನ್ನು ಭದ್ರಪಡಿಸಲು ಸುಕನ್ಯಾ ಸಮೃದ್ಧಿ ಯೋಜನೆ ಅತ್ಯುತ್ತಮ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ 15 ವರ್ಷಗಳ ಕಾಲ ಪ್ರತಿ ವರ್ಷ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ಮೆಚ್ಯೂರಿಟಿಯಲ್ಲಿ ಸುಮಾರು 71 ಲಕ್ಷ ರೂಪಾಯಿ ಪಡೆಯಬಹುದು. ಈ ಹಣವನ್ನು ನಿಮ್ಮ ಮಕ್ಕಳ ಉನ್ನತ ಶಿಕ್ಷಣ ಅಥವಾ ಮದುವೆಗಾಗಿ ಬಳಸಬಹುದು.
ಯೋಜನೆಯ ಪ್ರಯೋಜನಗಳು:
- ಉತ್ತಮ ಬಡ್ಡಿ ದರ: ಸುಕನ್ಯಾ ಸಮೃದ್ಧಿ ಯೋಜನೆಯು ಇತರ ಹೂಡಿಕೆಗಳಿಗೆ ಉತ್ತಮ ಬಡ್ಡಿ ದರವನ್ನು ನೀಡಲಾಗುತ್ತದೆ.
- ತೆರಿಗೆ ಉಳಿತಾಯ: ಈ ಯೋಜನೆಯಲ್ಲಿ ಗಳಿಸಿದ ಬಡ್ಡಿಯ ಮೇಲೆ ಯಾವುದೇ ತೆರಿಗೆ ವಿಧಿಸುವುದಿಲ್ಲ.
- ಭವಿಷ್ಯಕ್ಕಾಗಿ ಹೂಡಿಕೆ: ಈ ಯೋಜನೆಯು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಹೂಡಿಕೆಯಾಗಿದೆ.
- ಸರ್ಕಾರಿ ಯೋಜನೆ: ಈ ಯೋಜನೆಯು ಸರ್ಕಾರದಿಂದ ಬೆಂಬಲಿತವಾಗಿದೆ ಮತ್ತು ಆದ್ದರಿಂದ ಸುರಕ್ಷಿತವಾಗಿದೆ.
ಇದನ್ನೂ ಓದಿ: RBIಯ ಹೊಸ ನಿಯಮದ ಪ್ರಕಾರ ಕ್ರೆಡಿಟ್ ಸ್ಕೋರ್ ಈಗ ಪ್ರತಿ 15 ದಿನಗಳಿಗೊಮ್ಮೆ ನವೀಕರಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು.