ಮನೆ ಬದಲಿಸಿದ ನಂತರವೂ ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲು ಬಯಸುವವರು ಡಿ-ಲಿಂಕ್ ಸೌಲಭ್ಯದ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

ಹೊಸ ಕೆಲಸಕ್ಕಾಗಿ ಬೇರೆ ನಗರ ಅಥವಾ ಜಿಲ್ಲೆಗೆ ಹೋಗಬೇಕಾದಾಗ ಮನೆ ಬದಲಾವಣೆ ಅನಿವಾರ್ಯವಾಗುತ್ತದೆ. ಆದರೆ ಈಗ ನೀವು ಇರುವ ಮನೆಯಲ್ಲಿ ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯುತ್ತಿದ್ದು ಮತ್ತೆ ಮನೆ ಬದಲಾವಣೆ ಮಾಡಿದರೆ ನಿಮಗೆ ಈ ಸೌಲಭ್ಯ ಸಿಗುತ್ತದೆಯೋ ಇಲ್ಲವೋ ಎಂದು ಯೋಚನೆ ಮಾಡುತ್ತಿದ್ದಾರೆ ನೀವು ಚಿಂತಿಸುವ ಅಗತ್ಯ ಇಲ್ಲ. ನೀವು ಮನೆ ಬದಲಾವಣೆ ಮಾಡಿದ ಬಳಿಕವೂ ನೀವು ಹೊಸ ಮನೆಗೆ ಗೃಹ ಜ್ಯೋತಿ ಯೋಜನೆ ಲಾಭವನ್ನು ಪಡೆಯಬಹುದಾಗಿದೆ. ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

WhatsApp Group Join Now
Telegram Group Join Now

8,239 ಕೋಟಿ ರೂಪಾಯಿ ಗೃಹ ಜ್ಯೋತಿ ಯೋಜನೆಗೆ ಮೀಸಲಿಟ್ಟ ಸರಕಾರ:- ರಾಜ್ಯದಲ್ಲಿ ಜಾರಿಯಲ್ಲಿರುವ ಗೃಹಜ್ಯೋತಿ ಯೋಜನೆ ಒಂದೂವರೆ ಕೋಟಿಗೂ ಹೆಚ್ಚು ಗ್ರಾಹಕರು ಉಚಿತ ವಿದ್ಯುತ್ ಸೌಲಭ್ಯವನ್ನು ಪಡೆಯುತ್ತಿದ್ದಾರೆ, ಸರ್ಕಾರವು ಈ ಯೋಜನೆಗೆ ವರ್ಷಕ್ಕೆ 8,239 ಕೋಟಿ ರೂಪಾಯಿಗಳನ್ನು ಸಬ್ಸಿಡಿ ರೂಪದಲ್ಲಿ ನೀಡುತ್ತಿದೆ.

ಮನೆ ಬದಲಾವಣೆ ಮಾಡಿದವರಿಗೆ ಗೃಹ ಜ್ಯೋತಿ ಲಾಭ ಪಡೆಯಲು ಮಾರ್ಗ ನೀಡಿದ ಬೆಸ್ಕಾಂ:- ಗೃಹಜ್ಯೋತಿ ಯೋಜನೆಯಡಿ ಲಾಭ ಪಡೆಯುವವರು ಮನೆ ಬದಲಾಯಿಸಿದರೆ ಈ ಯೋಜನೆಯ ಲಾಭವನ್ನು ಹೇಗೆ ಮುಂದುವರಿಸಬೇಕು ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಈಗ ಈ ಪ್ರಶ್ನೆಗೆ ಬೆಸ್ಕಾಂ ಉತ್ತರ ನೀಡಿದೆ. ಗೃಹಜ್ಯೋತಿ ಯೋಜನೆಯಡಿ ಲಾಭ ಪಡೆಯುತ್ತಿದ್ದವರು ಮನೆ ಬದಲಾಯಿಸಿದಾಗ ಹಳೆಯ ಮನೆ. ಆರ್. ಆರ್ ಸಂಖ್ಯೆಯನ್ನು ಡಿ-ಲಿಂಕ್ ಮಾಡುವ ಮೂಲಕ ಹೊಸ ಮನೆಯಲ್ಲಿಯೂ ಈ ಸೌಲಭ್ಯವನ್ನು ಪಡೆಯಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.

ಡಿ ಲಿಂಕ್ ಮಾಡುವ ವಿಧಾನ :-

ಗೃಹಜ್ಯೋತಿ ಯೋಜನೆಯಲ್ಲಿ ಡಿ-ಲಿಂಕ್ ಮಾಡಲಾಗಿದೆ https://sevasindhu.karnataka.gov.in/GruhaJyothi_Delink/GetAadhaarData.aspx ಈ ಲಿಂಕ್ ಬಳಸಿ. ವೆಬ್‌ಸೈಟ್ ತೆರೆಯದಿದ್ದರೆ, ನಿಮ್ಮ ಬ್ರೌಸರ್‌ನ cache ಮೆಮೊರಿ ಕ್ಲಿಯರ್ ಮಾಡಿ ಮತ್ತೆ ಪ್ರಯತ್ನಿಸಿ ನೀವು ಡಿ ಲಿಂಕ್ ಮಾಡಬಹುದು. ಮನೆ ಬದಲಾಯಿಸುವಾಗ, ನಿಮ್ಮ ಹಳೆಯ ಮನೆಯ ಆರ್. ಆರ್. ಸಂಖ್ಯೆಯನ್ನು ಆಧಾರ್‌ನಿಂದ ಬೇರ್ಪಡಿಸುವ ಪ್ರಕ್ರಿಯೆ (ಡಿ-ಲಿಂಕ್) ಅನ್ನು ಮಾಡಬೇಕು. ನಂತರ, ನಿಮ್ಮ ಹೊಸ ಮನೆಯ ಆರ್. ಆರ್. ಸಂಖ್ಯೆಯನ್ನು ಆಧಾರ್‌ಗೆ ಸೇರಿಸಬೇಕು. ಮೂಲಕ ನೀವು ಈ ಗೃಹಜ್ಯೋತಿ ಯೋಜನೆಯ ಲಾಭವನ್ನು ಹೊಸ ಮನೆಯಲ್ಲಿಯೂ ಪಡೆಯಬಹುದು. ಕೆಳಗೆ ವಿಡಿಯೋ ಇದೆ ಅದನ್ನು ನೋಡಿಕೊಂಡು D Link ಮಾಡಿ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ತಾಂತ್ರಿಕ ದೋಷ ನಿವಾರಣೆ ಆಗಿದೆ :- ಗೃಹಜ್ಯೋತಿ ಯೋಜನೆ ವೆಬ್‌ಸೈಟ್‌ನಲ್ಲಿ ಆಧಾರ್ ಡಿ-ಲಿಂಕ್ ಮಾಡಲು ಇದ್ದ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಗ್ರಾಹಕರಿಗೆ ಅನುಕೂಲಕ್ಕಾಗಿ ಈ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಮಹಾಂತೇಶ್ ಬೀಳಗಿ ಅವರು ಸ್ಪಷ್ಟನೆ ನೀಡಿದರು.

ಸಚಿವ ಕೆ.ಜೆ.ಜಾರ್ಜ್‌ ಅವರು ಗೃಹ ಜ್ಯೋತಿ ಯೋಜನೆಯ ಬೆಗ್ಗೆ ಹೇಳಿರುವ ಹೇಳಿಕೆ ಏನು?: ಗೃಹಜ್ಯೋತಿ ಯೋಜನೆಯು ರಾಜ್ಯದ 1.56 ಕೋಟಿ ಜನರ ಜೀವನದಲ್ಲಿ ಬೆಳಕು ತಂದಿದೆ. ವಿಶೇಷವಾಗಿ ಮಧ್ಯಮ ವರ್ಗದ ಜನರು ಈ ಯೋಜನೆಯಿಂದ ಹೆಚ್ಚಿನ ಪ್ರಯೋಜನ ಪಡೆದಿದ್ದಾರೆ. ವಿದ್ಯುತ್ ಬಿಲ್ ಕಡಿಮೆಯಾದ ಕಾರಣ, ಅವರು ಮಕ್ಕಳ ಶಿಕ್ಷಣ ಮತ್ತು ಹಿರಿಯರ ಆರೋಗ್ಯದತ್ತ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಜನರ ಅನುಕೂಲಕ್ಕಾಗಿ ಡಿ-ಲಿಂಕ್ ಸೌಲಭ್ಯವನ್ನು ಕೂಡ ಆರಂಭಿಸಲಾಗಿದೆ.ನಮ್ಮ ವಚನಕ್ಕೆ ಬದ್ಧರಾಗಿ ಕೆಲಸ ಮಾಡಿದ್ದೇವೆ ಎಂಬ ಖುಷಿ ನಮಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಅಟಲ್ ಪಿಂಚಣಿ ಯೋಜನೆಯಲ್ಲಿ ತಿಂಗಳಿಗೆ 5000 ರೂಪಾಯಿ ವರೆಗೆ ಪಿಂಚಣಿ ಪಡೆಯಬಹುದು.

ಇದನ್ನೂ ಓದಿ: ಕೇಂದ್ರದಿಂದ ಪಿಂಚಣಿದಾರರಿಗೆ ಗುಡ್ ನ್ಯೂಸ್! ಇಲ್ಲಿದೆ ಸಂಪೂರ್ಣ ಮಾಹಿತಿ

Sharing Is Caring:

Leave a Comment