ಗೃಹಲಕ್ಷ್ಮಿ ಯೋಜನೆಯ ಜೂನ್-ಜುಲೈ ತಿಂಗಳ ಹಣ ಬಿಡುಗಡೆ; ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಘೋಷಣೆ

ಕೆಲವು ತಾಂತ್ರಿಕ ಕಾರಣಗಳಿಂದ ಜೂನ್ ಮತ್ತು ಜುಲೈ ತಿಂಗಳ ಗೃಹಲಕ್ಷ್ಮಿ(Gruha Lakshmi Scheme) ಹಣ ಜಮಾ ಆಗಲು ವಿಳಂಬವಾಗಿತ್ತು. ಇದೀಗ ಸರ್ಕಾರವು ಎದುರಿಸುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿ, ಆಗಸ್ಟ್ ಮೊದಲ ವಾರದಲ್ಲಿ ಜೂನ್ ಮತ್ತು ಜುಲೈ ತಿಂಗಳ ಹಣವನ್ನು ಖಾತೆಗಳಿಗೆ ಜಮಾ ಮಾಡುವ ವ್ಯವಸ್ಥೆ ಮಾಡಲಾಗಿದೆ. ಇನ್ನು ಮುಂದೆ ಪ್ರತಿ ತಿಂಗಳ 15ರೊಳಗೆ ಗೃಹಲಕ್ಷ್ಮಿ ಹಣವನ್ನು ಜಮಾ ಮಾಡುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ.

WhatsApp Group Join Now
Telegram Group Join Now

ಜನಾಂದೋಲನ ಸಭೆಯಲ್ಲಿ ಭರವಸೆ :- ಕಾಂಗ್ರೆಸ್ ನಡೆಸಿದ ಜನಾಂದೋಲನ ಸಭೆಯಲ್ಲಿ ಮಂಡ್ಯದ ಜನರು ಗೃಹ ಲಕ್ಷ್ಮಿ ಹಣ ಬಂದಿಲ್ಲ ಎಂಬ ದೂರು ನೀಡಿದರು. ಇದರ ಬಗ್ಗೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇದೆ ವಾರದಲ್ಲಿ ನಿಮ್ಮ ಖಾತೆಗೆ ಹಣ ಬರಲಿದೆ ಎಂದು ಭರವಸೆ ನೀಡಿದರು.

ಎರಡು ಕಂತಿನ ಹಣ ಒಮ್ಮೆಲೇ ಬರುವ ಸಾಧ್ಯತೆ ಇದೆ :- ಗೃಹಲಕ್ಷ್ಮಿ ಯೋಜನೆ(Gruha Lakshmi Scheme) 11 ಮತ್ತು 12ನೇ ಕಂತುಗಳ ಹಣ, ಒಟ್ಟು 4000 ರೂಪಾಯಿಗಳು, ಮುಂದಿನ ಎರಡು ದಿನಗಳಲ್ಲಿ ನಿಮ್ಮ ಖಾತೆಗೆ ಜಮಾ ಆಗುವ ನಿರೀಕ್ಷೆಯಿದೆ. ನಿಮ್ಮ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಮೂಲಕ ನೀವು ಈ ಮಾಹಿತಿಯನ್ನು ಪರಿಶೀಲಿಸಬಹುದು. ಈ ಹಿಂದೆಯೂ ಒಂದು ಅಥವಾ ಎರಡು ಕಂತಿನ ಹಣ ಬಾರದೆ ಇರುವ ಜನರಿಗೆ ಒಮ್ಮೆಲೇ ಹಣ ವರ್ಗಾವಣೆ ಮಾಡಿದ್ದರು. ಅದೇ ರೀತಿ ಒಮ್ಮೆಲೇ ಎರಡು ತಿಂಗಳ ಹಣ ಬರುವ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಗೃಹಲಕ್ಷ್ಮಿ ಹಣದ ಸ್ಟೇಟಸ್ ನೋಡುವ ವಿಧಾನ :-

ಗೃಹಲಕ್ಷ್ಮಿ ಹಣ ಬಂದಿದೆಯೋ ಇಲ್ಲವೋ ಅಂತ ತಿಳಿಯಬೇಕು ಅಂದ್ರೆ, ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ತೆರೆದು ‘ಡಿಬಿಟಿ ಕರ್ನಾಟಕ’ ಆಪ್ ಡೌನ್ ಲೋಡ್ ಮಾಡಿ. ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ಹಾಕಿ. ಒಟಿಪಿ ಬಂದಮೇಲೆ ನೀವು ಗೃಹಲಕ್ಷ್ಮಿ ಹಣದ ಸ್ಟೇಟಸ್ ಅನ್ನು ಸುಲಭವಾಗಿ ನೋಡಬಹುದು. ಹಾಗಾದರೆ ನೀವು ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ಮೂಲಕ ನಿಮ್ಮ ಗೃಹ ಲಕ್ಷ್ಮಿ ಖಾತೆಯ ಸ್ಟೇಟಸ್ ನೋಡುವ ವಿಧಾನ ಹೀಗಿದೆ :-

  • ಮೊಬೈಲ್‌ನಲ್ಲಿ ಪ್ಲೇ ಸ್ಟೋರ್ ತೆರೆಯಿರಿ: ನಿಮ್ಮ ಮೊಬೈಲ್‌ನಲ್ಲಿರುವ ಪ್ಲೇ ಸ್ಟೋರ್ ಅಪ್ಲಿಕೇಶನ್ ಅನ್ನು ತೆರೆಯಿರಿ.
  • ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ: ಪ್ಲೇ ಸ್ಟೋರ್‌ನಲ್ಲಿ “ಡಿಬಿಟಿ ಕರ್ನಾಟಕ” ಎಂದು ಹುಡುಕಿ ಮತ್ತು ಹುಡುಕಾಟದ ಫಲಿತಾಂಶದಲ್ಲಿ ಬರುವ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.
  • ಅಪ್ಲಿಕೇಶನ್ ತೆರೆದು ನಮೂದಿಸಿ: ಅಪ್ಲಿಕೇಶನ್ ತೆರೆದ ನಂತರ, ನಿಮ್ಮ ಆಧಾರ್ ಕಾರ್ಡ್ ನಂಬರ್ ಮತ್ತು ಆಧಾರ್ ಲಿಂಕ್ ಆಗಿರುವ ಮೊಬೈಲ್ ನಂಬರ್ ಅನ್ನು ನಮೂದಿಸಿ.
  • ಒಟಿಪಿ ಪರಿಶೀಲನೆ: ನಿಮ್ಮ ಮೊಬೈಲ್‌ಗೆ ಬಂದ ಒಟಿಪಿಯನ್ನು ಅಪ್ಲಿಕೇಶನ್‌ನಲ್ಲಿ ನಮೂದಿಸಿ.
  • ಪಾಸ್ವರ್ಡ್ ಕ್ರಿಯೇಟ್ ಮಾಡಿ: ನಾಲ್ಕು ಪಾಸ್ವರ್ಡ್ ಕ್ರಿಯೇಟ್ ಮಾಡಿ ಮತ್ತು ಅದನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.
  • ಗೃಹಲಕ್ಷ್ಮಿ ಹಣದ ಸ್ಥಿತಿಯನ್ನು ಪರಿಶೀಲಿಸಲಾಗಿದೆ: ಈಗ ನೀವು ಅಪ್ಲಿಕೇಶನ್‌ನ ಮುಖ್ಯ ಪುಟದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣದ ಸ್ಥಿತಿಯನ್ನು ಸುಲಭವಾಗಿ ಪರಿಶೀಲಿಸಬಹುದು. ಜೊತೆಗೆ, ಅನ್ನಭಾಗ್ಯ ಯೋಜನೆಯ ಹಣದ ಸ್ಥಿತಿಯನ್ನು ಸಹ ನೀವು ಪರಿಶೀಲಿಸಬಹುದು.

ಇದನ್ನೂ ಓದಿ: ನಿಮ್ಮ FD ಮೇಲೆ ಅತಿ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್ ಗಳು!

ಇದನ್ನೂ ಓದಿ: ಕೇಂದ್ರದಿಂದ ಪಿಂಚಣಿದಾರರಿಗೆ ಗುಡ್ ನ್ಯೂಸ್! ಇಲ್ಲಿದೆ ಸಂಪೂರ್ಣ ಮಾಹಿತಿ

Sharing Is Caring:

Leave a Comment