ರಾಜ್ಯದಲ್ಲಿ ಒಂದು ವರ್ಷದಿಂದ ಪ್ರತಿ ಮನೆಯ ಮುಖ್ಯ ಸದಸ್ಯೆ ಆಗಿರುವ ಮಹಿಳೆಗೆ 2000 ರೂಪಾಯಿಗಳನ್ನು ಗೃಹ ಲಕ್ಷ್ಮಿ ಯೋಜನೆಯ ಅಡಿಯಲ್ಲಿ ನೀಡುತ್ತಿದೆ. ಈಗಾಗಲೇ ಜೂನ್ ತಿಂಗಳ ವರೆಗೆ ಪ್ರತಿ ತಿಂಗಳು ಗೃಹ ಲಕ್ಷ್ಮಿ ಯೋಜನೆ ಹಣ ನೀಡಲಾಗುತ್ತಿದೆ. ಆದರೆ ಈಗ ರಾಜ್ಯ ಸರಕಾರವು ಹೊಸ ನಿಯಮ ಜಾರಿಗೆ ತಂದಿದೆ ಅದರ ಪ್ರಕಾರ ಕೆಲವು ಮಹಿಳೆಯರಿಗೆ ಇನ್ನು ಮುಂದೆ ಗೃಹ ಲಕ್ಷ್ಮಿ ಯೋಜನೆಯ ಹಣವು ಬರುವುದಿಲ್ಲ. ಹಾಗಾದರೆ ನೀವು ಗೃಹ ಲಕ್ಷ್ಮಿ ಯೋಜನೆ ಹಣವನ್ನು ಪಡೆಯಲು ಅನರ್ಹತೆ ಇಲ್ಲವೇ ಎಂಬುದನ್ನು ನೋಡೋಣ.
ಅನರ್ಹ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ ಗೃಹಲಕ್ಷ್ಮಿ ಯೋಜನೆಯ ಹಣವು ಬರುವುದಿಲ್ಲ:- ಸರಕಾರದ ಯೋಜನೆಗಳ ಲಾಭವನ್ನು ಪಡೆಯಬೇಕು ಎಂದು ರಾಜ್ಯದಲ್ಲಿ ಬಹುಪಾಲು ಜನ ತಮಗೆ ಉತ್ತಮ ಅನುಕೂಲ ಸ್ಥಿತಿ ಇದ್ದರೂ ಸಹ ಸುಳ್ಳು ಮಾಹಿತಿಗಳನ್ನು ನೀಡಿ ಬಿಪಿಎಲ್ ಕಾರ್ಡ್ ತೆಗೆದುಕೊಂಡು ಸರಕಾರದ ಯೋಜನೆಗಳ ದುರುಪಯೋಗ ಪಡೆಯುತ್ತಾ ಇರುವುದು ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ಈಗ ಎಚ್ಚೆತ್ತುಕೊಂಡ ರಾಜ್ಯ ಸರಕಾರವು ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭಗಳು ಸಿಗಬೇಕು ಎಂದು ಯೋಚಿಸಿ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಇನ್ನುಮುಂದೆ ಗೃಹ ಲಕ್ಷ್ಮಿ ಯೋಜನೆಯ ಯಾವುದೇ ಹಣವು transfer ಆಗದಂತೆ ಎಚ್ಚರಿಕೆ ವಹಿಸಲು ಮುಂದಾಗಿದೆ. ಈಗಾಗಲೇ ಈ ಬಗ್ಗೆ ಅಧಿಕಾರಿಗಳಿಗೆ ಸಿಎಂ ತಿಳಿಸಿದ್ದಾರೆ.
ನಿಯಮ ಮೀರಿ ಬಿಪಿಎಲ್ ಕಾರ್ಡ್ ಇದ್ದರೆ ರದ್ದು ಮಾಡುವಂತೆ ಸಿಎಂ ಸೂಚನೆ :-
ಸರಕಾರದ ಕಣ್ಣಿಗೆ ಮಣ್ಣೆರಚಿ ಹಲವು ಜನರು ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡ ಪ್ರಕರಣ ಗಮನಕ್ಕೆ ಬಂದಿದೆ. ಆದ್ದರಿಂದ ಸರಕಾರಕ್ಕೆ ಹೆಚ್ಚಿನ ಹೊರೆ ಆಗುತ್ತಿದೆ. ಇದೆ ಕಾರಣಕ್ಕೆ ಈಗ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಬಿಪಿಎಲ್ ಕಾರ್ಡ್ ಗಳನ್ನೂ ಕೂಡಲೇ ರದ್ದು ಮಾಡಿ ಬಿಪಿಎಲ್ ಕಾರ್ಡ್ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಿ ಎಂದು ಹಿರಿಯ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಶೇಕಡಾ 80% ಜನರ ಬಳಿ ಬಿಪಿಎಲ್ ಕಾರ್ಡ್ ಇದೆ. :- ಬಿಪಿಎಲ್ ಕಾರ್ಡ್ ಅನ್ನು ಬಡತನ ರೇಖೆಗಿಂತ ಕಡಿಮೆ ಇದ್ದರೆ ಮಾತ್ರ ನೀಡುತ್ತಾರೆ. ಆದರೆ ಇಲಾಖೆಯು ನೀಡಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಬರೋಬರಿ ಶೇಕಡಾ 80% ಜನರ ಬಳಿ ಬಿಪಿಎಲ್ ಕಾರ್ಡ್ ಇದೆ. ಇದರಲ್ಲಿ ಅರ್ಧದಷ್ಟು ಜನರಿಗೆ ಬಿಪಿಎಲ್ ಕಾರ್ಡ್ ನೀಡುವ ಅಗತ್ಯ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಗೃಹಲಕ್ಷ್ಮಿ 12 ನೇ ಕಂತಿನ ಹಣ ಬಿಡುಗಡೆಯ ಮುನ್ನ ಬಿಗ್ ಅಪ್ಡೇಟ್ ನೀಡಿದೆ.
ಗೃಹಲಕ್ಷ್ಮಿ ಯೋಜನೆಯು ಬಂದ್ ಆಗಲಿದೆ :-
ಹೀಗೆ ಅಕ್ರಮವಾಗಿ ನೀವು ಸಹ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿದ್ದರೆ ನಿಮ್ಮ ಬಿಪಿಎಲ್ ಕಾರ್ಡ್ ಸಹ ರದ್ದಾಗುತ್ತದೆ.. ಪಡಿತರ ಚೀಟಿಯ ವಿವರಗಳು ಇರದೆಯೇ ನಿಮಗೆ ಯಾವುದೇ ಸರಕಾರದ ಯೋಜನೆಗಳು ಸಿಗುವುದಿಲ್ಲ. ಇದರಿಂದ ಹೆಣ್ಣು ಮಕ್ಕಳಿಗೆ ಗೃಹ ಲಕ್ಷ್ಮಿ ಯೋಜನೆಯ ಹಣವು ಬರುವುದಿಲ್ಲ.
ಸಧ್ಯದ ಮಾಹಿತಿಯ ಪ್ರಕಾರ ಕರ್ನಾಟಕ ದಲ್ಲಿ ಒಟ್ಟು 1.27 ಕೋಟಿ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳು ಇವೆ. ಇದರಲ್ಲಿ ಆದ್ಯತಾ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಮತ್ತು ಅನ್ನಪೂರ್ಣ ಕಾರ್ಡ್ ಗಳು ಸೇರಿ ಒಟ್ಟು 4.26 ಕೋಟಿ ಜನರು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದಾರೆ.
ಇದನ್ನೂ ಓದಿ: ಈ ಯೋಜನೆಯಲ್ಲಿ ಕೇವಲ 20 ರೂಪಾಯಿ ಪಾವತಿಸಿ 20 ಲಕ್ಷ ರೂಪಾಯಿ ಪ್ರೀಮಿಯಂ ಗಳಿಸಿ