ಪ್ರತಿ ಮನೆಯ ಹಿರಿಯ ಮಹಿಳಾ ಸದಸ್ಯರಿಗೆ ರಾಜ್ಯ ಸರಕಾರವು ತಿಂಗಳಿಗೆ 2000 ರೂಪಾಯಿಗಳನ್ನು ಜಮಾ ಮಾಡುತ್ತಿದೆ. ಗೃಹಲಕ್ಷ್ಮಿ ಯೋಜನೆ ಜಾರಿ ಬಂದಾಗಿನಿಂದ ತಿಂಗಳ ಮೊದಲ ವಾರದಿಂದ ಕೊನೆಯ ವಾರದ ಒಳಗೆ ಯಾವುದೇ ದಿನ ನಿಮಗೆ ಗೃಹ ಲಕ್ಷ್ಮಿ ಯೋಜನೆ ಹಣ ಜಮಾ ಆಗುತ್ತಿತ್ತು. ಆದರೆ ಇನ್ನೂ ಮುಂದೆ ನೀವು ಯಾವಾಗ ಹಣ ಜಮಾ ಆಗುತ್ತದೆ ಎಂದು ದಿನವೂ ಸ್ಟೇಟಸ್ ಚೆಕ್ ಮಾಡಬೇಕು ಅಥವಾ ಬ್ಯಾಂಕ್ ಗೆ ಹೋಗಿ ವಿಚಾರಿಸಬೇಕು ಎಂಬ ಯಾವುದೇ ತಲೆಬಿಸಿ ಇಲ್ಲ. ಯಾಕೆಂದರೆ ಸರ್ಕಾರವು ಇನ್ನು ಮುಂದೆ ನಿಗದಿತ ದಿನಾಂಕದಂದು ಗೃಹ ಲಕ್ಷ್ಮಿ ಯೋಜನೆಯ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಿದೆ. ಹಾಗಾದರೆ ನಿಮಗೆ ಇನ್ನು ಮುಂದೆ ಪ್ರತಿ ತಿಂಗಳು ಯಾವ ದಿನದಂದು ಗೃಹ ಲಕ್ಷ್ಮಿ ಹಣ ಬರುತ್ತದೆ ಎಂಬುದನ್ನು ತಿಳಿಯಿರಿ.
ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರ ಹೇಳಿಕೆ ಏನು?
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಹೊಸ ಅಪ್ಡೇಟ್ ಒಂದನ್ನು ತಿಳಿಸಿದ್ದಾರೆ. ಅದೇನೆಂದರೆ ಇಷ್ಟು ದಿನಗಳ ಕಾಲ ಒಬ್ಬರಿಗೆ ತಿಂಗಳ ಮೊದಲ ವಾರದಲ್ಲಿ ಗೃಹಲಕ್ಷ್ಮಿ ಯೋಜನ ಹಣ ಜಮಾ ಆಗದರೆ ಇನ್ನೊಬ್ಬರಿಗೆ ಕೊನೆಯ ವಾರದಲ್ಲಿ ಹಣ ಜಮಾ ಆಗುತ್ತಿತ್ತು. ಇದರಿಂದ ಈ ತಿಂಗಳು ನಮ್ಮ ಖಾತೆಗೆ ಹಣ ಬರುತ್ತದೆಯೇ ಇಲ್ಲವೇ ಎಂಬ ಅನುಮಾನ ಎಲ್ಲರಲ್ಲಿ ಕಾಡುತ್ತಿತ್ತು. ಜೊತೆಗೆ ಮಹಿಳೆಯರು ಪ್ರತಿ ತಿಂಗಳು ಬ್ಯಾಂಕ್ ಗೆ ಎರಡು ಮೂರು ಬಾರಿ ತೆರಳಿ ಗೃಹ ಲಕ್ಷ್ಮಿ ಯೋಜನೆಯ ಹಣ ಬಂದಿದೆಯೇ ಎಂಬುದನ್ನು ತಿಳಿಯುವುದು ಅವರಿಗೂ ಕಷ್ಟ ಆಗುತಿತ್ತು. ಅದಕ್ಕೆ ಈ ಸಮಸ್ಯೆಗೆ ಮುಕ್ತಿ ನೀಡಬೇಕು ಎಂದು ಈಗ ನಿಗದಿತ ದಿನಾಂಕವನ್ನು ನಿರ್ಧರಿಸಲಾಗಿದೆ. ಇನ್ನು ಮುಂದೆ ಗೃಹ ಲಕ್ಷ್ಮಿ ಯೋಜನೆಯ ಹಣ ಪ್ರತಿ ತಿಂಗಳು 21 ರಿಂದ 26 ನೇ ತಾರೀಖಿನ (date) ಒಳಗೆ ಗೃಹಲಕ್ಷ್ಮಿ ಯೋಜನೆಯ ಹಣ ಎಲ್ಲಾ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹೀಗೆ ಮಾಡಿದರೆ ನಿಗದಿತ ಸಮಯಕ್ಕೆ ಗೃಹಲಕ್ಷ್ಮಿ ಯೋಜನೆ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ.
ಸರಿಯಾದ ಸಮಯಕ್ಕೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುತ್ತಿಲ್ಲ ಎಂದಾದರೆ ನಿಮ್ಮ ಬ್ಯಾಂಕ್ ಗೆ ತೆರಳಿ ಬ್ಯಾಂಕ್ ಖಾತೆಗೆ EKYc ಮಾಡಿಸಬೇಕು. ಒಂದು ವೇಳೆ ನೀವು ನಿಮ್ಮ ಖಾತೆಗೆ KYC ಅಪ್ಡೇಟ್ ಮಾಡಿಸದೆ ಇದ್ದರೆ ನಿಮ್ಮ ಖಾತೆಗೆ ಹಣ ಸರಿಯಾದ ಸಮಯಕ್ಕೆ ಜಮಾ ಆಗುವುದಿಲ್ಲ. ಜೊತೆಗೆ ನಿಮ್ಮ ಖಾತೆಗೆ ಆಧಾರ್ ಲಿಂಕ್ ಮಾಡಿಸಿರಬೇಕು. ಹಾಗೂ ನೀವು ನಿಮ್ಮ ಗೃಹಲಕ್ಷ್ಮಿ ಅರ್ಜಿ ಗೆ ನೀಡಿರುವ ಹೆಸರು ಹಾಗೂ ನಿಮ್ಮ ಆಧಾರ್ ಮತ್ತು ಬ್ಯಾಂಕ್ ಖಾತೆಯಲ್ಲಿ ಇರುವ ಹೆಸರು ಎಲ್ಲವೂ ಒಂದೇ ರೀತಿ ಇರುವಂತೆ ನೋಡಿಕೊಳ್ಳೋ ಬೇಕು ಇಲ್ಲವಾದರೆ ನಿಮಗೆ ಗೃಹ ಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ. ಹಾಗೆಯೆ ಯಾವುದೇ ತಾಂತ್ರಿಕ ದೋಷಗಳಿಂದ ಒಂದು ಕಂತಿನ ಹಣ ಬಾರದೆ ಇದ್ದರೆ ಆ ಕಂತಿನ ಹಣವನ್ನು ಮುಂದಿನ ಕಂತಿನಲ್ಲಿ ಹಾಕುತ್ತಾರೆ ಎಂಬುದನ್ನು ಈ ಹಿಂದೆಯೇ ಸರಕಾರ ತಿಳಿಸಿದೆ. ಅದರಿಂದ ನೀವು ಒಂದು ಕಂತಿನ ಹಣ ಬಾರದೆ ಇದ್ದರೆ ಭಯ ಪಡುವ ಅಗತ್ಯ ಇರುವುದಿಲ್ಲ.
ಇದನ್ನೂ ಓದಿ: ಅನ್ನಭಾಗ್ಯ ಯೋಜನೆ ಅಕ್ಕಿ ಹಣ ಬಿಡುಗಡೆ ಬಗ್ಗೆ ಮಹತ್ವದ ಮಾಹಿತಿ; ಬಿಗ್ ಅಪ್ಡೇಟ್ ನೀಡಿದ ಸಚಿವ ಮುನಿಯಪ್ಪ
ಇದನ್ನೂ ಓದಿ: ತಿಂಗಳಿಗೆ 1,000 ರೂಪಾಯಿ ಹೂಡಿಕೆ ಮಾಡಿ 8,24,641 ರೂಪಾಯಿ ಗಳಿಸುವ ಪೋಸ್ಟ್ ಆಫೀಸ್ ಯೋಜನೆಯ ಬಗ್ಗೆ ತಿಳಿಯಿರಿ.