ರಾಜ್ಯದ ಪ್ರತಿಷ್ಠಿತ ಯೋಜನೆಗಳಲ್ಲಿ ಗೃಹ ಲಕ್ಷ್ಮಿ ಯೋಜನೆಯು(Gruhalakshmi Yojana) ಒಂದು. ಚುನಾವಣೆಗೂ ಮುನ್ನ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹ ಲಕ್ಷ್ಮಿ ಯೋಜನೆ ಜಾರಿಗೆ ತರುವುದಾಗಿ ಹೇಳಿತ್ತು. ನೀಡಿದ ಅಸ್ವಶನೆಯಂತೆಯೇ ಈಗ ರಾಜ್ಯದ ಪ್ರತಿ ಮನೆಯ ಹಿರಿಯ ಮಹಿಳೆಗೆ ಪ್ರತಿ ತಿಂಗಳು 2000 ರೂಪಾಯಿ ಜಮಾ ಮಾಡುತ್ತಿದೆ. ಜೂನ್ ತಿಂಗಳ ಗೃಹ ಲಕ್ಷ್ಮಿ ಹಣವು ಯಾವಾಗ ಬಿಡುಗಡೆ ಆಗುವುದು ಎಂಬುದನ್ನು ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಸಚಿವೆ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದಾರೆ.
ಗೃಹ ಲಕ್ಷ್ಮಿ ಯೋಜನೆ ನಿಲ್ಲುವುದಿಲ್ಲ :- ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಚುನಾವಣೆಯ ನಂತರ ಪಂಚ ಗ್ಯಾರೆಂಟಿ ಯೋಜನೆಗಳು ನಿಲ್ಲಲಿವೆ ಎಂಬ ಆರೋಪಗಳೂ ಕೇಳಿ ಬಂದಿದ್ದವು ಆದರೆ ಅವೆಲ್ಲವೂ ಸುಳ್ಳು ನಾವು ಅಧಿಕಾರದಲ್ಲಿ ಇರುವ ವರೆಗೂ ಈ ಎಲ್ಲಾ ಯೋಜನೆಗಳು ಇರಲಿವೆ. ಚುನಾವಣೆಗೂ ಮುನ್ನ ಅಂದರೆ ಮೇ 1 ರಂದು ಜಮಾ ಮಾಡಿದ್ದೆವು ಈಗ ಇದೆ ತಿಂಗಳು ಕೊನೆಯಲ್ಲಿ ಹಣ ಬಿಡುಗಡೆ ಆಗಲಿದೆ ಎಂಬ ಮಾತನ್ನು ಸ್ಪಷ್ಟವಾಗಿ ತಿಳಿಸಿದರು.
ಐದು ವರ್ಷ ಪೂರ್ಣ ಪ್ರಮಾಣದ ಸರ್ಕಾರ ನಡೆಸಲಿದ್ದವೆ :- ವಿರೋಧ ಪಕ್ಷಗಳು ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿವೆ. ಆದರೆ ನಾವು ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಅಧಿಕಾರ ನಡೆಸುತ್ತಾ ಇದ್ದೇವೆ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೂ ಪೆಟ್ರೋಲ್ ದರ ಬಹಳ ಏರಿಕೆ ಆಗಿತ್ತು. ಆದರೆ ಈಗ ಅವರೇ ನಮ್ಮ ಮೇಲೆ ಹರಿಹಾಯಿತ್ತ ಇದ್ದಾರೆ ಎಂದು ಬಿಜೆಪಿ ಯವರ ಆರೋಪಕ್ಕೆ ತಿರುಗೇಟು ನೀಡಿದರು. ಅದರಂತೆಯೇ ಐದು ವರ್ಷಗಳು ಸಹ ಮಹಿಳೆಯರ ಖಾತೆಗೆ ಗೃಹ ಲಕ್ಷ್ಮಿ ಹಣವು ಜಮಾ ಆಗಲಿದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್; ಇನ್ನುಂದೆ ಈ ದಿನಾಂಕದೊಂದು ನಿಮ್ಮ ಖಾತೆಗೆ ಜಮಾ ಆಗುತ್ತದೆ ಹಣ!
ಈಗಾಗಲೇ ಟ್ರೆಷರಿಗೆ ಹಾಕಿದ್ದೇವೆ ಎಂದ ಲಕ್ಷ್ಮಿ ಹೆಬ್ಬಾಳ್ಕರ್:-
ಜೂನ್ ತಿಂಗಳ ಗೃಹ ಲಕ್ಷ್ಮಿ(Gruhalakshmi Yojana) ಹಣವು ಇನ್ನು ಮಹಿಳೆಯರ ಖತೆಗೆ ಬಂದಿಲ್ಲ. ಬಡ ಕುಟುಂಬದ ಹೆಣ್ಣು ಮಕ್ಕಳು ಈ ಹಣವನ್ನು ನಂಬಿಕೊಂಡಿದ್ದಾರೆ. ಈ ತಿಂಗಳು ಹಣ ಬಾರದೆ ಇರುವುದರಿಂದ ಅನೇಕ ಮಹಿಳೆಯರು ಈಗಾಗಲೇ ದೂರು ನೀಡಿದ್ದಾರೆ. ಈಗಾಗಲೇ ಹಣವನ್ನು ಟ್ರೆಷರಿಗೆ ಹಾಕಿದ್ದೇವೆ. ಇಂದು ಅಥವಾ ನಾಳೆಯ ಹಾಗೆ ನಿಮ್ಮ ಖಾತೆಗಳಿಗೆ ಹಣ ಜಮಾ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಈಗಾಗಲೇ ಹಣ ಕೆಲವರಿಗೆ ಜಮಾ ಆಗಿದೆ ಇನ್ನು ಹಣ ಜಮಾ ಆಗದೆ ಇದ್ದವರಿಗೆ ಜೂನ್ 30 ರ ಒಳಗಾಗಿ ಖಾತೆಗೆ ಜಮಾ ಆಗಲಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಸರ್ಕಾರ ದರ ಏರಿಸಿತ್ತು :- ಪೆಟ್ರೋಲ್ ಬೆಲೆಯಲ್ಲಿ ಏರಿಕೆ ಕಂಡ ಹಿನ್ನೆಲೆಯಲ್ಲಿ ರಾಜ್ಯದ್ಯಂತ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ಆದರೆ ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಸಹ ಪೆಟ್ರೋಲ್ ದರ ಏರಿಕೆ ಆಗಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಒಂದು ಸಿಲೆಂಡರ್ ಬೆಲೆ ಕೇವಲ 400 ರೂಪಾಯಿ ಆಗಿತ್ತು ಆದರೆ ಬಿಜೆಪಿ ಆಡಳಿತಕ್ಕೆ ಬಂದಮೇಲೆ 1000 ರೂಪಾಯಿ ಆಗಿದೆ. ಇದರ ಬಗ್ಗೆ ಮಾತನಾಡುವುದಿಲ್ಲ. ಆದರೆ ಈಗ ನಾವು 2000 ರೂಪಾಯಿ ನೀಡಿ 4000 ರೂಪಾಯಿಗಳನ್ನು ದೋಚುತ್ತೇವೆ ಎಂದು ಆರೋಪಿಸುತ್ತಾರೆ. ಯಾಕೆ ಸಿಲೆಂಡರ್ ಬಗ್ಗೆನೂ ಪ್ರಶ್ನೆ ಮಾಡಲಿ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದರು.
ಇದನ್ನೂ ಓದಿ: ಈ ಟ್ರಿಕ್ಸ್ ಫಾಲೋ ಮಾಡಿದರೆ ನಿಮ್ಮ ಗ್ಯಾಸ್ ಬುಕಿಂಗ್ ಗೆ 80 ರೂಪಾಯಿ ಕ್ಯಾಶ್ ಬ್ಯಾಕ್ ಸಿಗಲಿದೆ.