ಗೃಹಲಕ್ಷ್ಮಿ ಯೋಜನೆಯ ಹೊಸ ನಿಯಮ; ಇನ್ಮೇಲೆ ಕೆಲವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ.

ಕಾಂಗ್ರೆಸ್ ಸರಕಾರದ ಉತ್ತಮ ಯೋಜನೆ ಅದು ಗೃಹಲಕ್ಷ್ಮಿ ಯೋಜನೆ. ಕರ್ನಾಟಕದ ಮನೆ ಮನೆಯ ಮಹಾಲಕ್ಷ್ಮಿಗೆ 2000 ರೂಪಾಯಿ ನೀಡುತ್ತಿದೆ. ಆದರೆ ಈಗ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೆಲವರಿಗೆ ನೀಡಬಾರದು ಕಡಿತಗೊಳಿಸಬೇಕು ಎಂದು ರಾಜ್ಯ ಸರಕಾರ ತೀರ್ಮಾನ ತೆಗೆದುಕೊಂಡಿದೆ. ಹಾಗಾದರೆ ಯಾರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಕಡಿತ ಆಗಲಿದೆ ಎಂಬುದನ್ನು ನೋಡೋಣ.

WhatsApp Group Join Now
Telegram Group Join Now

ಗೃಹಲಕ್ಷ್ಮಿ ಯೋಜನೆಯ ನಿಯಮ ಏನು?: ಗೃಹಲಕ್ಷ್ಮಿ ಯೋಜನೆಯು ಕರ್ನಾಟಕದ ರಾಜ್ಯದ ಮಹಿಳೆಯರಿಗೆ ಮಾತ್ರ ಲಭ್ಯ ಇದೆ. ಪ್ರತಿ ಮನೆಯ ಹಿರಿಯ ಮಹಿಳಾ ಸದಸ್ಯೆ ಅಂದರೆ ರೇಷನ್ ಕಾರ್ಡ್ ನಲ್ಲಿ ಯಜಮಾನಿಯ ಹೆಸರು ಯಾರದ್ದೂ ಇರುವುದೋ ಅವರ ಹೆಸರಿನಲ್ಲಿ ಗೃಹಲಕ್ಷ್ಮಿ ಹಣ ಬರಲಿದೆ. ಹಾಗೆಯೇ ಯೋಜನೆಗೆ ಕಂದಾಯ ಇಲಾಖೆಗೆ ಟಾಕ್ಸ ಪೇ ಮಾಡುವ ಮಹಿಳೆಗೆ ಯಾವುದೇ ರೀತಿಯ ಪ್ರಯೋಜನ ಸಿಗುವುದಿಲ್ಲ. ಹಾಗೆಯೇ ಆಕೆಯ ಗಂಡ ಏನಾದರೂ ಟಾಕ್ಸ ಪೇ ಮಾಡುತ್ತಾ ಇದ್ದರು ಸಹ ಯೋಜನೆಯ ಹಣ ಸಿಗುವುದಿಲ್ಲ. ಸುಳ್ಳು ಮಾಹಿತಿ ನೀಡಿದರೆ ನಿಮಗೆ ಈ ಯೋಜನೆಯ ಹಣ ಕಡಿತ ಆಗುತ್ತದೆ ಎಂಬುದು ಗೃಹಲಕ್ಷ್ಮಿ ಯೋಜನೆಯ ನಿಯಮ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ನಿಯಮ ಬದಲಾವಣೆ ಏಕೆ?

ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದು ಹತ್ತಿರ ಒಂದು ವರುಷ ಆಗುತ್ತಲಿದೆ. ಆದರೆ ಈಗ ಗೃಹಲಕ್ಷ್ಮಿ ಯೋಜನೆಯ ನಿಯಮಗಳಲ್ಲಿ ಸ್ವಲ್ಪ ಬದಲಾವಣೆ ಆಗಲಿದೆ. ಯಾಕೆ ಅಂದರೆ ಈಗಾಗ್ಲೇ ಗೃಹಲಕ್ಷ್ಮಿ ಯೋಜನೆಯ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಘಟನೆಗಳು ಸರಕಾರದ ಗಮನಕ್ಕೆ ಬಂದಿರುವ ಕಾರಣ ಈಗ ಯೋಜನೆಯನ್ನು ಇನ್ನಷ್ಟು ಕಠಿಣ ಗೊಳಿಸುವ ಕಾರ್ಯಕ್ಕೆ ಸರಕಾರ ಮುಂದಾಗಿದೆ. ಹಲವು ಮಹಿಳೆಯರು tax pay ಮಾಡುತ್ತಾ ಇದ್ದರು ಸಹ ಅದನ್ನು ಅರ್ಜಿಯಲ್ಲಿ ನಮೂದಿಸದೆ ಸುಳ್ಳು ಮಾಹಿತಿಯನ್ನು ನೀಡಿ ಯೋಜನೆಯ ಪ್ರಯೋಜನ ಪಡೆಯುತ್ತಾ ಇದ್ದರೆ. ಜೊತೆಗೆ ಬಿಪಿಎಲ್ ಕಾರ್ಡ್ ಗೆ ಸಹ ಸುಳ್ಳು ಮಾಹಿತಿ ನೀಡಿ ಉಚಿತ ಅನ್ನಭಾಗ್ಯದ ಹಣ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯುತ್ತಾ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇಂತಹ ಸುಳ್ಳು ಮಾಹಿತಿ ನೀಡಿ ಇಲ್ಲಿಯವರೆಗೆ ಹಣ ತೆಗೆದುಕೊಂಡ ಮಹಿಳೆಯರಿಗೆ ಈಗ ಸರ್ಕಾರವು ಅವರ ಮಾಹಿತಿಗಳನ್ನು ನಿಖರವಾಗಿ ಇನ್ನುಮ್ಮೆ ಪರಿಶೀಲನೆ ನಡೆಸಿ ಅರ್ಹರಲ್ಲದ ಫಲಾನುಭವಿಗಳಿಗೆ ಮುಂದೆ ಯೋಜನೆಯ ಹಣವನ್ನು ನೀಡಬಾರದು ಎಂಬ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ. ಸರಕಾರದ ಲೆಕ್ಕಾಚಾರದ ಪ್ರಕಾರ ಸುಳ್ಳು ಮಾಹಿತಿಯನ್ನು ನೀಡಿ 26 ಸಾವಿರಕ್ಕೂ ಹೆಚ್ಚಿನ ಮಹಿಯರು 11 ತಿಂಗಳ ಗೃಹ ಲಕ್ಷ್ಮಿ ಯೋಜನೆಯ ಲಾಭವನ್ನು ಪಡೆದು ಕೊಂಡಿದ್ದಾರೆ. ಇಷ್ಟು ಜನರಿಗೆ ಇನ್ನುಮುಂದೆ ಯೋಜನೆಗೆ ಹಣ ಬರುವುದಿಲ್ಲ.

ಅರ್ಹರಿಗೆ ಇದರಿಂದ ಮೋಸ ಆಗಲಿದೆ :- ನಿಜವಾಗಿಯೂ ಬಡತನದಲ್ಲಿರುವ ಮಹಿಳಾ ಫಲಾನುಭವಿಗಳಿಗೆ ಹಲವು ತಾಂತ್ರಿಕ ದೋಷಗಳಿಂದ ಹಣ ಬರಲಿಲ್ಲ. ಆದರೆ ಹಲವಾರು ಜನರು ಸರಕಾರಕ್ಕೆ ಸುಳ್ಳು ಮಾಹಿತಿ ನೀಡಿ ಸರ್ಕಾರದ ಹಣವನ್ನು ತೆಗೆದುಕೊಂಡಿರುವುದು ಅರ್ಹರಿಗೆ ಮೋಸ ಆಗಿದೆ. ಇದೆ ಕಾರಣಕ್ಕೆ ಈಗ ಎಲ್ಲ ಅರ್ಜಿಗಳನ್ನು ಮತ್ತೊಮ್ಮೆ ಪರಿಶೀಲನೆ ನಡೆಸಿ ಅರ್ಹರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುವಂತೆ ಮಾಡಬೇಕು ಎಂದು ಸರ್ಕಾರವು ತೀರ್ಮಾನಿಸಿದೆ. ಸರ್ಕಾರದ ಈ ನಿಯಮ ಮುಂದಿನ ತಿಂಗಳಿನಿಂದಲೇ ಜಾರಿಗೆ ಬರಲಿದೆ.

ಇದನ್ನೂ ಓದಿ: ಕೃಷಿ ಸಖಿ ಯೋಜನೆಯಲ್ಲಿ ಮಹಿಳೆಯರಿಗೆ ಸಿಗಲಿದೆ ಬರೋಬ್ಬರಿ 60,000 ರೂಪಾಯಿ ಆದಾಯ ಗಳಿಸುವ ಅವಕಾಶ

ಇದನ್ನೂ ಓದಿ: ಒಂದು ವರ್ಷದ ಅವಧಿಯ FD ಯೋಜನೆಗೆ ಹೆಚ್ಚು ಬಡ್ಡಿ ದರ ನೀಡುವ ಬ್ಯಾಂಕ್ ಗಳು ಇವು..

Sharing Is Caring:

Leave a Comment